ಬೈಕ್ - ಸ್ಕೂಟರ್ ಖರೀದಿ ಮೇಲೆ ಹೋಂಡಾ ನೀಡುತ್ತಿದೆ ಭರ್ಜರಿ ಆಫರ್
ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಕಂಪನಿಗಳಲ್ಲಿ ಒಂದಾದ ಹೋಂಡಾ ಮೋಟಾರ್‍ಸೈಕಲ್ ತನ್ನ ಸರಣಿಯಲ್ಲಿರುವ ವಾಹನಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಕಂಪನಿಯು ರೂ.9,500ದವರೆಗೆ ಕೊಡುಗೆಗಳನ್ನು ನೀಡುತ್ತಿದೆ.

ಗ್ರಾಹಕರನ್ನು ಸೆಳೆಯಲು ಕಂಪನಿಯು ರೂ.1,100ಗಳ ಡೌನ್‍ಪೇಮೆಂಟ್ ಅನ್ನು ಘೋಷಿಸಿದೆ. ಹೋಂಡಾ ಕಂಪನಿಯು ಹೊಸ ವಾಹನಗಳ ಖರೀದಿಯ ಮೇಲೆ ಯಾವುದೇ ರೀತಿಯ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸುತ್ತಿಲ್ಲ.

ಗ್ರಾಹಕರು ಹೋಂಡಾ ಸಿಬಿಆರ್ 250 ಆರ್, ಸಿಬಿ ಶೈನ್, ಲಿವೊ, ಸಿಬಿ ಹಾರ್ನೆಟ್ 160 ಆರ್ ಹಾಗೂ ಸಿಬಿ ಯುನಿಕಾರ್ನ್ ಬೈಕ್‍ಗಳ ಮೇಲೆ ಈ ಆಫರ್‍ಗಳನ್ನು ಪಡೆಯಲಿದ್ದಾರೆ. ಸ್ಕೂಟರ್‌ಗಳಿಗೆ ಸಂಬಂಧ ಪಟ್ಟಂತೆ, ಗ್ರಾಹಕರು ಇತ್ತೀಚೆಗೆ ಬಿಡುಗಡೆಯಾದ ಆಕ್ಟಿವಾ 125 ಫೈ, ಆಕ್ಟಿವಾ 5 ಜಿ, ಡಿಯೋ, ಗ್ರಾಜಿಯಾ , ಕ್ಲಿಕ್ ಹಾಗೂ ನವಿ ಸ್ಕೂಟರ್‍ಗಳ ಮೇಲೆ ಈ ಕೊಡುಗೆಗಳನ್ನು ಪಡೆಯಲಿದ್ದಾರೆ.

ಗ್ರಾಹಕರು ಪೇಟಿಎಂ ಮುಖಾಂತರ ಈ ವಾಹನಗಳನ್ನು ಖರೀದಿಸಿದರೆ ರೂ.7000ಗಳ ಕ್ಯಾಶ್‌ಬ್ಯಾಕ್ ಪಡೆಯಲಿದ್ದಾರೆ. ಈ ಆಫರ್ 2020ರ ಜನವರಿ 15ರವರೆಗೆ ದೇಶಾದ್ಯಂತವಿರುವ ಅಧಿಕೃತ ಹೋಂಡಾ ಡೀಲರ್‍ಗಳ ಬಳಿ ಲಭ್ಯವಿರುವುದಾಗಿ ಹೋಂಡಾ ಕಂಪನಿಯು ತಿಳಿಸಿದೆ.

ಆಕ್ಟಿವಾ ಹೋಂಡಾ ಕಂಪನಿಯ ಜನಪ್ರಿಯ ಸ್ಕೂಟರ್ ಆಗಿದೆ. ಪ್ರತಿ ತಿಂಗಳು ಈ ಸ್ಕೂಟರಿನ 2 ಲಕ್ಷ ಯುನಿಟ್‍ಗಳು ಮಾರಾಟವಾಗುತ್ತವೆ. ಮಾರಾಟದಲ್ಲಿ ಸಿಬಿ ಶೈನ್ ಎರಡನೇ ಸ್ಥಾನದಲ್ಲಿದೆ. ಹೋಂಡಾ ಕಂಪನಿಯು ಈ ಆಫರ್‍ನ ನಂತರ ಮಾರಾಟವು ಮತ್ತಷ್ಟು ಹೆಚ್ಚಾಗಲಿದೆ ಎಂಬ ನಿರೀಕ್ಷೆಯಲ್ಲಿದೆ.

ಹೋಂಡಾ ಕಂಪನಿಯು ಇತ್ತೀಚಿಗೆ ಲಿಮಿಟೆಡ್ ಎಡಿಷನ್‍ನ ಶೈನ್ ಬೈಕ್ ಅನ್ನು ಬಿಡುಗಡೆಗೊಳಿಸಿತ್ತು. ಇದಕ್ಕೂ ಮೊದಲು ಆಕ್ಟಿವಾ 5 ಜಿ ಸ್ಕೂಟರ್ ಅನ್ನು ಲಿಮಿಟೆಡ್ ಎಡಿಷನ್‍ನಲ್ಲಿ ಬಿಡುಗಡೆಗೊಳಿಸಿತ್ತು. ಈ ಲಿಮಿಟೆಡ್ ಎಡಿಷನ್ ವಾಹನಗಳಲ್ಲಿ ಯಾವುದೇ ಮೆಕಾನಿಕಲ್ ಅಂಶಗಳ ಬದಲಾವಣೆಯಾಗಿಲ್ಲ.

ಆದರೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಆಕ್ಟಿವಾ 5 ಜಿ ಲಿಮಿಟೆಡ್ ಎಡಿಷನ್ ಸ್ಕೂಟರ್‍ನಲ್ಲಿ 109.2 ಸಿಸಿಯ ಸಿಂಗಲ್ ಸಿಲಿಂಡರ್ ಏರ್‍ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 8 ಬಿಹೆಚ್‍ಪಿ ಪವರ್ ಹಾಗೂ 9 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.
MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸಿಬಿ ಶೈನ್ ಲಿಮಿಟೆಡ್ ಎಡಿಷನ್ ಬೈಕಿನ ಗ್ರಾಫಿಕ್ಸ್ ಹಾಗೂ ವಿನ್ಯಾಸದಲ್ಲಿ ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಹೊರತುಪಡಿಸಿ ಬೇರೆ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಬೈಕಿನಲ್ಲಿ 124.6 ಸಿಸಿಯ ಏರ್ ಕೂಲಿಂಗ್ ಸಿಸ್ಟಂ ಎಂಜಿನ್ ಅಳವಡಿಸಲಾಗಿದೆ.
MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

ಈ ಎಂಜಿನ್ 10.1 ಬಿಹೆಚ್‍ಪಿ ಪವರ್ ಹಾಗೂ 10.3 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕಿನಲ್ಲಿ 4 ಸ್ಪೀಡಿನ ಗೇರ್‍ಬಾಕ್ಸ್ ಅಳವಡಿಸಲಾಗಿದೆ. ಹೋಂಡಾ ಕಂಪನಿಯು ತನ್ನ ಮೊದಲ ಬಿಎಸ್ 6 ಎಂಜಿನ್ ಹೊಂದಿರುವ ವಾಹನವಾದ ಆಕ್ಟಿವಾ 125 ಸ್ಕೂಟರ್ ಅನ್ನು ಕೆಲ ದಿನಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಈ ಸ್ಕೂಟರ್ ಅನ್ನು ಸ್ಟಾಂಡರ್ಡ್, ಅಲಾಯ್ ಹಾಗೂ ಡೀಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಬಿಎಸ್ 6 ಎಂಜಿನ್ ಹೊಂದಿರುವ ಹೋಂಡಾ ಆಕ್ಟಿವಾ 125 ಸ್ಕೂಟರಿನ ಬೆಲೆಯು ರೂ.67,490ಗಳಾಗಿದೆ.


Click it and Unblock the Notifications








