Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಂಡಾ ಡಿಯೋ ಮಾರಾಟದಲ್ಲಿ ಹೊಸ ದಾಖಲೆ
ಹೋಂಡಾ ಮೋಟಾರ್‍ಸೈಕಲ್ಸ್ & ಸ್ಕೂಟರ್ಸ್ ಇಂಡಿಯಾ ಸಂಸ್ಥೆಯು ತಮ್ಮ 30 ಲಕ್ಷಕ್ಕು ಹೆಚ್ಚಿನ ಡಿಯೋ ಸ್ಕೂಟರ್ ಅನ್ನು ಮಾರಾಟ ಮಾಡಿ ಹೊಸ ಮೈಲಿಗಲ್ಲು ತಲುಪಿದೆ, ಬಿಡುಗಡೆಗೊಂಡಾಗಿನಿಂದಲೂ ಯುವ ಸಮುದಾಯವನ್ನು ತನ್ನತ್ತ ಸೆಳೆಯುವಲ್ಲಿ ಹಲವಾರು ಬಾರಿ ಹೊಸ ಬದಲಾವಣೆಗಳನ್ನು ಪಡೆದುಕೊಳ್ಳುತ್ತ ಇಂದಿಗೂ ಗ್ರಾಹಕರ ನೆಚ್ಚಿನ ಸ್ಕೂಟರ್ ಇದಾಗಿದೆ ಎಂದರೆ ತಪ್ಪಾಗುವುದಿಲ್ಲ.

ಹೋಂಡಾ ಡಿಯೋ ಸ್ಕೂಟರ್‍ಗಳು ಮೊದಲ ಬಾರಿಗೆ 2002ರಲ್ಲಿ ಬಿಡುಗಡೆಗೊಂಡಿದ್ದು, ಸುಮಾರು 17 ವರ್ಷದಲ್ಲಿ 30 ಲಕ್ಷಕ್ಕು ಹೆಚ್ಚಿನ ಡಿಯೋ ಸ್ಕೂಟರ್‍ಗಳು ಮಾರಾಟವಾಗ್ದೆ. ಮೊದಲ 14 ವರ್ಷಗಳಲ್ಲಿ 15 ಲಕ್ಷದ ಸ್ಕೂಟರ್‍ಗಳನ್ನು ಮಾರಾಟ ಮಾಡಿ, ಇನ್ನು ಕೇವಲ 3 ವರ್ಷದಲ್ಲಿ 15 ಲಕ್ಷದ ಸ್ಕೂಟರ್‍ಗಳು ಮಾರಾಟವಾಗಿದೆ. ಹೋಂಡಾ ಡಿಯೋ ಸ್ಕೂಟರ್‍ಗಳು 11 ದೇಶಗಳನ್ನು ಸೇರಿದಂತೆ ಭಾರತದಲ್ಲಿ ಅತಿ ಹೆಚ್ಚು ಮಾರಾಟಗೊಂಡ ಸ್ಕೂಟರ್‍ಗಳಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ.

ಸಧ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಹೊಸ ಹೋಂಡಾ ಡಿಯೋ ಸ್ಕೂಟರ್‍ಗಳು ಡಿಯೋ, ಡಿಯೋ ಎಸ್‍ಟಿಡಿ ಮತ್ತು ಡಿಯೋ ಡಿಎಲ್ಎಕ್ಸ್ ಎಂಬ ಮೂರು ವೇರಿಯಂಟ್‍ಗಳಲ್ಲಿ ಬಿಡುಗಡೆಗೊಂಡಿದ್ದು, ದೆಹಲಯ ಎಕ್ಸ್ ಶೋರಂ ಪ್ರಾಕರ ರೂ 50.26 ಸಾವಿರದಿಂದ ಪ್ರಾರಂಭಿಕ ಬೆಲೆಯಲ್ಲಿ ಮಾರಾಟಗೊಳ್ಳುತ್ತಿದೆ.

2018ರ ಡಿಯೋ ಸ್ಕೂಟರ್ 109ಸಿಸಿ ಎಂಜಿನ್ ಸಹಾಯದಿಂದ 8ಬಿಹೆಚ್‍ಪಿ ಮತ್ತು 8.91ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ವಿ-ಮೇಟ್ ಟ್ರ್ಯಾನ್ಸ್ ಮಿಶನ್‍ನೊಂದಿಗೆ ಜೋಡಿಸಲಾಗಿದೆ. ಹಾಗೆಯೆ ಪ್ರತೀ ಲೀಟರ್‍ಗೆ 83 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ.

ಹೆಡ್‍ಲ್ಯಾಂಪ್
2018ರ ಹೋಂಡಾ ಡಿಯೋ ಸ್ಕೂಟರ್‍ನಲ್ಲಿ ಹೊಸದಾಗಿ ಸಂಸ್ಥೆಯ ವಿಶೇಶವಾದ ಎಲ್ಇಡಿ ಹೆಡ್‍ಲ್ಯಾಂಪ್ ಅನ್ನು ಅಳವಡಿಸಲಾಗಿದ್ದು, ಹಳೆಯ ಮಾದರಿಗಿಂತಲೂ ಆಕರ್ಷಕವಾಗಿದೆ.

ಇನ್ಸ್ಟ್ರೂಮೆಂಟ್ ಕ್ಲಸ್ಟರ್
ಹೊಸ ಡಿಯೋ ಸ್ಕೂಟರ್‍ನಲ್ಲಿ ವಿನೂತನವಾಗಿ ಸಂಪೂರ್ಣ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನು ಅಳವಡಿಸಲಾಗಿದೆ. ಇದು ವಾಹನ ಸವಾರಿಯ ವೇಳೆ ಸಹಾಯಕವಾಗುವ ಹಾಗೆ ಕಾರ್ಯನಿರ್ವಹಿಸುತಿದ್ದು, ಮೂರು ಹಂತದ ಇಕೊ ಎಂಡಿಕೇಟರ್ ಅನ್ನು ಪಡೆದುಕೊಂಡಿದೆ.

ಟೈರ್‍ಗಳು
2018ರ ಹೊಸ ಡಿಯೋ ಡೀಲಕ್ಸ್ ಸ್ಕೂಟರ್‍ಗಳು 10 ಇಂಚಿನ ಗೋಲ್ಡ್ ರಿಮ್ಸ್ ಅನ್ನು ಮುಂಭಾದಲ್ಲಿ ಮತ್ತು ಹಿಂಭಾಗದಲ್ಲಿ ಅಳವಡಿಸಲಾಗಿದ್ದು, ಎರಡು ಕಡೆ ಸಿಬಿಎಸ್ ಹೊಂದಿರುವ 90/100-10 ಟ್ಯೂಬ್‍ಲೆಸ್ ಟೈರ್‍ಗಳನ್ನು ಪಡೆದುಕೊಂಡಿವೆ.

ಬಣ್ಣಗಳು
ಬಿಡುಗಡೆಗೊಂಡ ಹೊಸ ಡಿಯೋ ಸ್ಕೂಟರ್‍ಗಳು ಡ್ಯಾಜೆಲ್ ಮೆಟಾಲಿಕ್, ಮೇಟ್ ಮಾರ್ಶಲ್ ಗ್ರೀನ್ ಮೆಟಾಲಿಕ್, ಪರ್ಲ್ ಇಗ್‍ನೌಸ್ ಬ್ಲಾಕ್ ಮತ್ತು ಮೇಟ್ ಆಕ್ಸಿಸ್ ಗ್ರೇ ಮೆಟಲಿಕ್ ಎಂಬ ನಾಲ್ಕು ಬಣ್ಣಗಳ್ಳಲ್ಲಿ ಖರೀದಿಗೆ ಲಭ್ಯವಿದೆ.

ಗ್ರಾಫಿಕ್ಸ್
2018ರ ಹೊಸ ಡಿಯೋ ಸ್ಕೂಟರ್‍ಗಳು ಆಕ್ರಮಣಕಾರಿ ಸ್ಪೋರ್ಟಿ ಗ್ರಾಫಿಕ್ಸ್ ಅನ್ನು ಪಡೆದಿದ್ದು, ಮೋಟೋ ಸ್ಕೂಟರ್‍ನ ಡ್ಯುಯಲ್ ಟೋನ್ ಪೇಯಿಂಟ್ ಸ್ಕೀಮ್ ಅನ್ನು ಕೂಡ ಪಡೆದುಕೊಂಡಿದೆ.

ಮೇಲೆ ಹೇಳಿರುವ ಹಾಗೆಯೆ ಈ ಬಾರಿಯು ಕೂಡ ಸಂಸ್ಥೆಯು ಯುವ ಸಮುದಾಯವನ್ನು ಸೆಳೆಯಲು ಹೊಸ ಡಿಯೋ ಸ್ಕೂಟರ್ ಅನ್ನು ಬಿಡುಗಡೆಗೊಳಿಸಿದ್ದು, ಈಗಾಗಲೆ ಮಾರುಕಟ್ಟೆಯಲ್ಲಿ ಯಮಹಾ ಸೈನಸ್ ರೇ ಜೆಡ್‍ಎಂ, ಟಿವಿಎಸ್ ಎನ್‍ಟಾರ್ಕ್ 125 ಮತ್ತು ಹೊ ಡ್ಯುಯೆಟ್ ಸ್ಕೂಟರ್‍ಗಳಿಗೆ ಪೈಪೋಟಿಯನ್ನು ನೀಡುತ್ತಿವೆ.