10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಯಮಹಾ ಮೋಟಾರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್., 10 ಮಿಲಿಯನ್ ವಾಹನಗಳ ಉತ್ಪಾದನೆ ಮಾಡಿರುವುದಾಗಿ ಘೋಷಿಸಿದೆ. ಯಮಹಾ ಇಂಡಿಯಾ 1985ರಲ್ಲಿ ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಈ ಮೈಲಿಗಲ್ಲನ್ನು ಸಾಧಿಸಿದೆ. ಭಾರತದಲ್ಲಿರುವ - ಸೂರಜ್‍‍ಪುರ್, ಫರೀದಾಬಾದ್ ಮತ್ತು ಚೆನ್ನೈ ಘಟಕಗಳಿಂದ ಈ ಸಾಧನೆಯನ್ನು ಮಾಡಲಾಗಿದೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಯಮಹಾದ ಅತಿ ಹೆಚ್ಚು ಮಾರಾಟವಾಗುವ ಎಫ್‍‍ಝಡ್ ಎಸ್ ಎಫ್‍ಐ 3.0 ಮಾದರಿಯ ವಾಹನವು, ಯಮಹಾ ಕಂಪನಿಯಿಂದ ಉತ್ಪಾದನೆಯಾದ 10ನೇ ಮಿಲಿಯನ್ ವಾಹನವಾಗಿದೆ. ಈ ಸಂದರ್ಭದಲ್ಲಿ ಜಪಾನಿನ ಯಮಹಾ ಮೋಟಾರ್ ಕಂಪನಿ ಲಿಮಿಟೆಡ್‍‍ನ ಮ್ಯಾನೇಜ್‍‍ಮೆಂಟ್‍‍ನ ಹಿರಿಯ ಸದಸ್ಯರು, ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್, ಮಿಟ್ಸೂಯಿ ಅಂಡ್ ಕಂಪನಿ ಲಿಮಿಟೆಡ್, ವೆಂಡರ್ ಪಾರ್ಕ್ ಕಂಪನೀಸ್, ಉದ್ಯೋಗಿಗಳು ಮತ್ತು ಉದ್ಯೋಗಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಈ 10 ಮಿಲಿಯನ್‍‍ನಲ್ಲಿ 80% ಯೂನಿಟ್‍‍ಗಳನ್ನು ಸೂರಜ್‍‍ಪುರ್ ಮತ್ತು ಫರೀದಾಬಾದ್ ಘಟಕಗಳಲ್ಲಿ ಉತ್ಪಾದಿಸಲಾಗಿದೆ. ಉಳಿದ 20% ಯೂನಿಟ್‍‍ಗಳನ್ನು ಕಂಪನಿಯ ಚೆನ್ನೈ ಘಟಕದಲ್ಲಿ ಉತ್ಪಾದಿಸಲಾಗಿದೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನೀಸ್‍‍ನ ಅಧ್ಯಕ್ಷ ಮೋಟೊಫುಮಿ ಶಿಟಾರಾ ರವರು ಮಾತನಾಡಿ, ಯಮಹಾದ ಭಾರತದಲ್ಲಿನ ಪಯಣವು ಇಷ್ಟು ವರ್ಷಗಳಲ್ಲಿ ಸಂಭ್ರಮದಿಂದ ಕೂಡಿತ್ತು. ನಾವು ಗ್ರಾಹಕರಿಂದ ಅಭೂತಪೂರ್ವವಾದ ಪ್ರತಿಕ್ರಿಯೆಯನ್ನು ಪಡೆದಿದ್ದೇವೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಈ ಮೈಲಿಗಲ್ಲು ನಮ್ಮ ಬೆಳೆಯುತ್ತಿರುವ ಜನಪ್ರಿಯ ದ್ಯೋತಕವಾಗಿದೆ, ನಾವು ಮಾರುಕಟ್ಟೆಯಲ್ಲಿ ಇನ್ನೂ ಜನಪ್ರಿಯತೆಯನ್ನು ಉಳಿಸಿಕೊಂಡಿದ್ದೇವೆ. ನಮ್ಮ ಉತ್ಪನ್ನಗಳು ಸ್ಟೈಲಿಶ್ ಆಗಿ, ಸ್ಪೋರ್ಟಿಯಾಗಿವೆ ಎಂದು ತಿಳಿಸಿದರು. ಈ ಸಾಧನೆಯು ನಮ್ಮ ಉದ್ಯೋಗಿಗಳ, ಡೀಲರ್‍‍ಗಳ, ಸಪ್ಲೈಯರ್‍‍ಗಳ ಮತ್ತು ವೆಂಡರ್‍‍ಗಳ ಬೆಂಬಲವಿಲ್ಲದೇ ಸಾಧ್ಯವಾಗುತ್ತಿರಲಿಲ್ಲ. ಅವರು ನಮ್ಮ ಕಂಪನಿಯ ಬೆಂಬಲಕ್ಕೆ ನಿಂತು ನಮ್ಮ ಕಂಪನಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಭವಿಷ್ಯದಲ್ಲಿಯೂ ಸಹ ನಾವು, ವಿಶ್ವ ದರ್ಜೆಯ ಸೇವೆಯನ್ನು ನೀಡುವ ಮೂಲಕ, ನಮ್ಮ ಗ್ರಾಹಕರ ಸಂಭ್ರಮವನ್ನು ಹೆಚ್ಚಿಸುವ ಕೆಲಸವನ್ನು ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

1985 ರಿಂದ 2019ರವರೆಗಿನ 34 ವರ್ಷಗಳ ಪಯಣದಲ್ಲಿ ಯಮಹಾ ಕಂಪನಿಯು ಅನೇಕ ಮಹತ್ವದ ಘಟನೆಗಳಿಗೆ ಸಾಕ್ಷಿಯಾಗಿದೆ. 1999ರಲ್ಲಿ ಸೂರಜ್‍‍ಪುರ್ ಘಟಕದಲ್ಲಿ 1 ಮಿಲಿಯನ್ ಉತ್ಪಾದನೆಯನ್ನು ಮಾಡಲಾಯಿತು. 13 ವರ್ಷಗಳ ನಂತರ ಅಂದರೆ 2012ರಲ್ಲಿ 5 ಮಿಲಿಯನ್ ಉತ್ಪಾದನೆಯನ್ನು ಮಾಡಲಾಯಿತು.

MOST READ: ಭಾರತದಲ್ಲಿ ಬಿಡುಗಡೆಗೊಂಡ ಬಿಎಂಡಬ್ಲ್ಯು ಅಡ್ವೆಂಚರ್ ಬೈಕ್

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

2016ರಲ್ಲಿ ಯಮಹಾ ಇಂಡಿಯಾ, ಭಾರತದಲ್ಲಿ 1 ಮಿಲಿಯನ್ ವಾಹನಗಳನ್ನು ತನ್ನ ಸ್ಕೂಟರ್‍‍ಗಳಿಗಾಗಿ ಉತ್ಪಾದಿಸಿತು. ಈಗ 7 ವರ್ಷಗಳ ನಂತರ ಕಂಪನಿಯು ಯಶಸ್ವಿಯಾಗಿ 10 ಮಿಲಿಯನ್ ವಾಹನಗಳ ಉತ್ಪಾದನೆಯ ಮೈಲಿಗಲ್ಲನ್ನು ಸಾಧಿಸಿದೆ. ಯಮಹಾದ ಚೆನ್ನೈ ಘಟಕವು ಉತ್ಪಾದನೆಯಲ್ಲಿ ಬಹು ಮಹತ್ವದ ಪಾತ್ರವನ್ನು ವಹಿಸಿದೆ. 2015ರಲ್ಲಿ 4.5 ಲಕ್ಷಗಳಷ್ಟಿದ್ದ ಉತ್ಪಾದನೆಯು, 2019ರಲ್ಲಿ 9 ಲಕ್ಷಗಳಿಗೇರಿದೆ. ಭಾರತದಲ್ಲಿರುವ ಮೂರು ಘಟಕಗಳ ಪೈಕಿ ಚೆನ್ನೈ ಘಟಕವು ದೊಡ್ಡ ಉತ್ಪಾದನಾ ಘಟಕವಾಗಿದೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಯಮಹಾ ಕಂಪನಿಯ ಮೂಲಗಳ ಪ್ರಕಾರ, ಯಮಹಾ ಕಂಪನಿಯು 2012 ಮತ್ತು 2019ರ ನಡುವೆ, ಸುಮಾರು 5 ಮಿಲಿಯನ್ ವಾಹನಗಳನ್ನು ಉತ್ಪಾದಿಸಿ, ಭಾರತದಲ್ಲಿನ ಒಟ್ಟಾರೆ ಸ್ಕೂಟರ್ ಉತ್ಪಾದನೆಗೆ 44% ಕೊಡುಗೆ ನೀಡಿದೆ.

10 ಮಿಲಿಯನ್ ವಾಹನ ಉತ್ಪಾದಿಸಿದ ಯಮಹಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಯಮಹಾ ಪ್ರಪಂಚದಲ್ಲಿ ದ್ವಿಚಕ್ರವಾಹನಗಳ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ, ಈ ಸಾಧನೆ ಮಾಡಲು ಭಾರತದ ಕೊಡುಗೆಯು ದೊಡ್ಡದಿದೆ. ಭಾರತದಲ್ಲಿರುವ ಗ್ರಾಹಕರ ಬೇಡಿಕೆಗೆ ತಕ್ಕಂತೆ ಯಮಹಾ ಕಂಪನಿಯು ಸ್ಪಂದಿಸುತ್ತಲೇ ಬಂದಿದೆ. ಬೆಸ ಸಂಖ್ಯೆಗಳಾದ 1985, 34, 13, ಮತ್ತು 7 ಯಮಹಾ ಕಂಪನಿಗೆ ಅದೃಷ್ಟದ ಸಂಖ್ಯೆಗಳಾಗಿವೆ. ಆದರೆ 46ರ ಒಂದೇ ಒಂದು ಸಮ ಸಂಖ್ಯೆ ಮಾತ್ರ ಯಮಹಾಗೆ ಅದೃಷ್ಟ ತಂದಿದೆ.

Most Read Articles

Kannada
Read more on ಯಮಹಾ yamaha
English summary
India Yamaha Motor Reaches 10 Million Units Produced Milestone - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X