ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಇತ್ತೀಚಿಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಸಖತ್ ಸದ್ದು ಮಾಡುತ್ತಿರುವುದನ್ನು ಗಮನಿಸಬಹುದು. ಹಲವಾರು ಪ್ರಮುಖ ದ್ವಿಚಕ್ರ ವಾಹನ ಉತ್ಪಾದನಾ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚು ಗಮನಹರಿಸುತ್ತಿವೆ. ಇದೀಗ ಮಹೀಂದ್ರಾ ಕಂಪನಿಯು ಸಹ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆಯಲ್ಲಿ ನಿರತವಾಗಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಭಾರತದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮಹೀಂದ್ರಾ, 2020ರ ಆರಂಭದ ದಿನಗಳಲ್ಲಿ ತನ್ನ ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಅನಾವರಣಗೊಳಿಸಲು ಸಜ್ಜಾಗಿದೆ. ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಕಂಪನಿಯು ತನ್ನ ಸರಣಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪ್ರದರ್ಶಿಸುತ್ತದೆ ಎಂಬ ವದಂತಿಗಳಿವೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಆದರೆ ಆಟೋ ಎಕ್ಸ್‌ಪೋಗೆ ಮೊದಲೇ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸುವುದಾಗಿ ಮಹೀಂದ್ರಾ ಹೇಳಿದೆ. ಮಹೀಂದ್ರಾ ಕಂಪನಿಯು ದೇಶಾದ್ಯಂತ ಎರಡು, ಮೂರು ಮತ್ತು ನಾಲ್ಕು ಟಯರ್‍‍ಗಳನ್ನು ಹೊಂದಿರುವ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸುತ್ತಿರುವ ಏಕೈಕ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಲಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಕಂಪನಿಯು ತನ್ನ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಟೆಸ್ಟ್ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಸರಣಿಯಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್ ಗಸ್ಟೋ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದೆ. ಗಸ್ಟೋ ಆಧಾರಿತ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಟೆಸ್ಟಿಂಗ್ ಮಾಡಲಾಗುತ್ತಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಮುಂಬರುವ ಮಹೀಂದ್ರಾ ಎಲೆಕ್ಟ್ರಿಕ್ ಸ್ಕೂಟರ್ ಅದೇ 3ಕೆಡಬ್ಲೂ ಮೋಟಾರ್ ಅನ್ನು ಹೊಂದಿರಲಿದೆ. ಮಹೀಂದ್ರಾ ಜೆಂಝ್ ಮತ್ತು ಪಿಯುಗಿಯೊ ಇ-ಲುಡಿಕ್ಸ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳಲ್ಲಿ ಹೊಸ ಫೀಚರ್ಸ್‍ಗಳನ್ನು ಹೊಂದಿರಲಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಈ ಸ್ಕೂಟರ್‍‍ಗಳನ್ನು ಒಂದು ಬಾರಿ ಪೂರ್ತಿಯಾಗಿ ಚಾರ್ಜ್‍ ಮಾಡಿದರೆ ಸುಮಾರು 80 ಕಿಲೋಮೀಟರ್ ಚಲಿಸುತ್ತವೆ. ಈ ಸ್ಕೂಟರ್‍‍ಗಳು 55 ರಿಂದ 60 ಕಿ.ಮೀ ವೇಗವನ್ನು ಹೊಂದಿರಲಿವೆ. ಕಂಪನಿಯ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಈಗಾಗಲೇ ಎ‍ಆರ್‍ಎಐ ಪ್ರಮಾಣೀಕರಿಸಿದೆ ಎಂಬ ವದಂತಿಗಳಿವೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಫೇಮ್ ಮತ್ತು ರಾಜ್ಯ ಸರ್ಕಾರದ ಸಬ್ಸಿಡಿಗಳ ನಂತರ ಈ ಸ್ಕೂಟರ್‍‍ಗೆ ಅಂದಾಜು ರೂ.80,000 ಬೆಲೆಯನ್ನು ಹೊಂದಿರಬಹುದು. ಮಹೀಂದ್ರಾ ಪ್ರಸ್ತುತ ಎರಡೂ ಎಲೆಕ್ಟ್ರಿಕ್-ಸ್ಕೂಟರ್ ಉತ್ಪಾದನೆಯಲ್ಲಿ ನಿರತವಾಗಿದೆ.

MOST READ: ದುಬಾರಿ ಬೆಂಝ್ ಕಾರನ್ನು ಹೆಲಿಕಾಪ್ಟರ್ ಮೂಲಕ ಪುಡಿ ಮಾಡಿದ ಭೂಪ

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಅಮೇರಿಕಾದಲ್ಲಿ ಮಹೀಂದ್ರಾ ಜೆಂಝ್ ಮತ್ತು ಫ್ರಾನ್ಸ್ ನಲ್ಲಿ ಪಿಯುಗಿಯೊ ಇ-ಲುಡಿಕ್ಸ್ ಎಲೆಕ್ಟಿಕ್ ಸ್ಕೂಟರ್ ಅನ್ನು ಕಂಪನಿಯ ಪಿಥಾಂಪುರ್ ಘಟಕದಲ್ಲಿ ತಯಾರಿಸಲಾಗುತ್ತಿದೆ ಮತ್ತು ಇದನ್ನು ಯುರೋಪಿಗೆ ರಫ್ತು ಮಾಡಲಾಗುತ್ತದೆ.

MOST READ: ಕಳ್ಳತನವಾಗಿದ್ದ ಕಾರು ಫಾಸ್ಟ್‌ಟ್ಯಾಗ್‌‍‍ನಿಂದಾಗಿ ವಾಪಸ್ ಸಿಕ್ಕಿದ್ದೆ ಒಂದು ರೋಚಕ

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಕಳೆದೆರೆಡು ತಿಂಗಳುಗಳಿಂದ ಎಲೆಕ್ಟ್ರಿಕ್‌ ದ್ವಿಚಕ್ರ ವಾಹನಗಳು ಹೆಚ್ಚು ಸದ್ದು ಮಾಡುತ್ತಿರುವುದನ್ನು ಗಮನಿಸಿರಬಹುದು. ಅಥೆರ್‌ ಆಗಿರಬಹುದು ಅಥವಾ ಬಜಾಜ್‌ನ ಚೇತಕ್‌ ಸ್ಕೂಟರ್‌ ಆಗಿರಬಹುದು ವಾಹನ ಮಾರುಕಟ್ಟೆಯಲ್ಲಿ ತಮ್ಮದೇ ಆದಂತಹ ಛಾಪನ್ನು ಮೂಡಿಸಿವೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಇದರ ಬೆನ್ನಲ್ಲೇ ಇದೀಗ ಮತ್ತೆ ಮಹೀಂದ್ರಾ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿರುವ ಗಸ್ಟೋವನ್ನು ಆಧರಿಸಿರುವ ಎಲೆಕ್ಟ್ರಿಕ್‌ ಸ್ಕೂಟರೊಂದನ್ನು ಅನಾವರಣಗೊಳಿಸಲಿದೆ. ಮಹೀಂದ್ರಾ ಕಂಪನಿಯು ಕಾರು ಉತ್ಪಾದನೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣಗೊಳಿಸಲಿರುವ ಮಹೀಂದ್ರಾ

ಇದೀಗ ಮಹೀಂದ್ರಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಮಹೀಂದ್ರಾ ಕಂಪನಿಯ ಗಸ್ಟೋ, ಉತ್ತಮ ಮಾರಾಟವಾದ ಸ್ಕೂಟರ್‍‍ಗಳಲ್ಲಿ ಒಂದಾದೆ. ಆದರೆ ಮಹೀಂದ್ರಾ ಕಂಪನಿಯ ವಿನ್ಯಾಸ ತಂಡವು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಹೊಸ ವಿನ್ಯಾಸದಲ್ಲಿ ಅಭಿವೃದ್ಧಿಪಡಿಸಲಿದೆ.

Most Read Articles

Kannada
English summary
Mahindra To Unveil All Electric Scooter Before Delhi Auto Expo 2020 - Read in Kannada
Story first published: Tuesday, December 31, 2019, 12:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X