ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ವಾಹನ ಉದ್ಯಮದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ವಾಹನ ತಯಾರಕ ಸಂಸ್ಥೆಗಳು ಸಹ ಮಾರುಕಟ್ಟೆಯಲ್ಲಿ ತಮ್ಮ ವಿವಿಧ ಎಲೆಕ್ಟ್ರಿಕ್ ವಾಹನ ಮಾದರಿಗಳನ್ನು ಬಿಡುಗಡೆಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆ ಕೂಡಾ ಎಲೆಕ್ಟ್ರಿಕ್ ಸ್ಕೂಟರ್ ಒಂದನ್ನು ಪರಿಚಯಿಸಲು ಸಜ್ಜಾಗುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಮಹಿಂದ್ರಾ ಆ್ಯಂಡ್ ಮಹಿಂದ್ರಾ ಸಂಸ್ಥೆಯಿಂದ ತಯಾರಿಸಲ್ಪಟ್ಟ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ರಸ್ಥೆಯಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಈ ಸ್ಕೂಟರ್ ಈಗಾಗಲೇ ಅಮೇರಿಕಾದ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತಿದೆ. ಇದೀಗ ನಾಶಿಕ್‍ನಲ್ಲಿ ಮತ್ತೊಮ್ಮೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಕಾಣಲು ಜಮನಾದ ಲುನಾ ಸ್ಕೂಟರ್‍‍ಗಳಂತೆಯೆ ಕಾಣುತ್ತಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಹೊಸ ಮಹಿಂದ್ರಾ ಜೆನ್‍ಜಿ ವಿನೂತನವಾಗಿ ಅಲ್ಯೂಮಿನಿಯಂ ಮೋನೊಕೌಕ್ ಫ್ರೇಮ್ ಅನ್ನು ಪಡೆದಿದ್ದು ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಸರಣಿಯಲ್ಲಿ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಅಲ್ಲದೇ ಈ ಎಲೆಕ್ಟ್ರಿಕ್ ಸ್ಕೂಟರ್ ಜಿಪಿಎಸ್ ಟ್ರ್ಯಾಕಿಂಗ್, ಕಲರ್ ಸ್ಕ್ರೀನ್ ಮತ್ತು ರೈಡಿಂಗ್ ಮೋಡ್‍‍ಗಳಂತಹ ಸ್ಮಾರ್ಟ್ ಕನೆಕ್ಟಿವಿಟಿ ಆಯ್ಕೆಗಳನ್ನು ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಅಗಲವಾದ ಫ್ರಂಟ್ ವೀಲ್, ಎತ್ತರವಿರುವ ಹ್ಯಾಂಡಲ್‍‍ಬಾರ್ ಹಾಗು ಅಗಲವಾದ ಸೀಟ್‍ಗಳನ್ನು ಪಡೆದಿರಲಿದೆ. ಇದಲ್ಲದೇ ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್‍‍ಗಳನ್ನು ಪಡೆದಿದ್ದು, ಚಾಲಕರು ಆರಾಮಾಗಿ ಚಾಲನೆ ಮಾಡಬಹುದಂತೆ ಸಜ್ಜುಗೊಂಡಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ನಾಶಿಕ್ ಹೆದ್ದಾರಿಯ ರಸ್ತೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಅಮೆರಿಕಾದ ಮಾರುಕಟ್ಟೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಮೃದುವಾದ ಫ್ಯಾಬ್ರಿಕ್‍‍ನೊಂದಿಗೆ ಹಾರ್ಡ್ ಕೇಸ್ ಅನ್ನು ಪಡೆದಿದೆ. ವಿವಿಧ ಕಸ್ಟಮೈಸ್ ಆಯ್ಕೆಗಳನ್ನು ಸಹ ಪಡೆದುಕೊಂಡಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ 2 ಕಿಲೋವ್ಯಾಟ್ಸ್ ಲಿಥಿಯಂ ಐಯಾನ್ ಬ್ಯಾಟರಿ ಹಾಗೂ 48 ವೋಲ್ಟ್ ಎಲೆಕ್ಟ್ರಿಕ್ ಸಿಸ್ಟಂ ಸಹಾಯದಿಂದ 2ಬಿಹೆಚ್‍ಪಿ ಹಾಗು 100ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಇನ್ನು ಪ್ರತಿ ಚಾರ್ಜ್‍‍ಗೆ 50 ಕಿಲೋಮೀಟರ್ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿದ್ದು, ರೈಡ‍‍ರ್‍‍ನ ತೂಕ, ಸ್ಪೀಡ್ ಹಾಗೂ ಪ್ರದೇಶದ ಆಧಾರದ ಮೇಲೆ ಮೈಲೇಜ್ ಅನ್ನು ನೀಡಲಿದೆ. ಯುಎಸ್ಎ ಮಾರುಕಟ್ಟೆಯಲ್ಲಿರುವ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್ ಪ್ರತಿ ಚಾರ್ಜ್‍ಗೆ 48 ಕಿಲೋ ಮೀಟರ್ ಮಾತ್ರ ಚಲಾಯಿಸಬಲ್ಲ ಸಾಮರ್ಥ್ಯವನ್ನು ಪಡೆದಿವೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ಭಾರತದಲ್ಲಿ ಬಿಡುಗಡೆಯಾಗಿರುವ ಮಹಿಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಡೆಲಿವರಿಯಂತಹ ವಾಣಿಜ್ಯ ಕೆಲಸಗಳಿಗಾಗಿ ಬಹು ಉಪಯುಕ್ತವಾಗಿದ್ದು, ದೇಶಿಯ ಗ್ರಾಹಕರಿಗೆ ಅನುಕೂಲವಾಗುವಂತೆ ತಯಾರಿಸಲ್ಪಟ್ತಿದೆ. ಯುಎಸ್ಎ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಮಾದರಿಗಿಂತ ಹೆಚ್ಚು ಸ್ಪೀಡ್ ಅನ್ನು ಪಡೆದುಕೊಳ್ಳುಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಮಹೀಂದ್ರಾ ಜೆನ್‍ಜಿ ಎಲೆಕ್ಟ್ರಿಕ್ ಸ್ಕೂಟರ್

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹಿಂದ್ರಾ ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿ ಯಶಸ್ವಿಯಾಗಿದ್ದು, ಇದೀಗ ಎಲೆಕ್ಟ್ರಿಕ್ ಸ್ಕೂಟರ್‍‍ಗಳ ಸರಣಿಯಲ್ಲಿ ಸದ್ದು ಮಾಡಲು ತಯಾರಾಗಿದೆ.

Source: India Auto Blog

Most Read Articles

Kannada
English summary
Mahindra GenZe electric scooter caught testing in India. Read In Kannada
Story first published: Friday, January 25, 2019, 18:11 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X