ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ದೇಶಿಯ ಮಾರುಕಟ್ಟೆಯಲ್ಲಿ ಎಂವಿ ಅಗಸ್ಟಾ ಟೂರಿಸ್ಮೊ ವೆಲೊಚೆ 800 ಬೈಕ್ ಅನ್ನು ಬಿಡುಗಡೆಗೂಳಿಸಿದೆ . ಎಂವಿ ಅಗಸ್ಟಾ ಮೊದಲ ಬಾರಿ ಅಡ್ವೆಂಚರ್ ಟೂರರ್ ವಿಭಾಗದ ಬೈಕನ್ನು ಬಿಡುಗಡೆಗೊಳಿಸಿದೆ. ಭಾರತದ ಎಕ್ಸ್ ಶೋ ರೂಂ ದರದಂತೆ ಆರಂಭಿಕ ಬೆಲೆಯು ರೂ.18.99 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಟೂರಿಸ್ಮೊ ವೆಲೊಚೆ 800 ಬೈಕನ್ನು ಭಾರತದ್ಯಾಂತ ಇರುವ ಮೋಟೋರಾಯಲ್ ಶೋ ರೂಂನಲ್ಲಿ ಮಾರಾಟ ಮಾಡಲಾಗುವುದು. ಹೊಸ ಬೈಕ್ ಬಿಡುಗಡೆ ಮಾಡುವ ವೇಳೆ ನವಿ ಮುಂಬೈನಲ್ಲಿ ಹೊಸ ಡೀಲರ್‍‍ಗಳ ಸೇರ್ಪಡೆಯಾಗಿರುವುದನ್ನು ತಿಳಿಸಿದ್ದಾರೆ. ಟುರಿಸ್ಮೊ ವೆಲೋಚೆ 800, ಟೂರಿಸ್ಮೊ ವೆಲೊಚೆ 800 ಲುಸ್ಸೋ, ಟೂರಿಸ್ಮೊ ವೆಲೊಚೆ 800 ಲುಸ್ಸೋ ಎಸ್ಸಿಎಸ್ ಮತ್ತು ಟುರಿಸ್ಮೊ 800 ಆರ್‍‍ಸಿ ಎಸ್‍‍ಸಿಎಸ್ ಎಂಬ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದೆ.

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ದೇಶಿಯ ಮಾರುಕಟ್ಟೆಯಲ್ಲಿ ಸ್ಟ್ಯಾಂಡರ್ಡ್ ರೂಪಾಂತರವನ್ನು ಮಾತ್ರ ಬಿಡುಗಡೆಗೊಳಿಸಿದ್ದು, ಉಳಿದ ರೂಪಾಂತರಗಳನ್ನು ನಂತರದ ಹಂತದಲ್ಲಿ ಬಿಡುಗಡೆಗೊಳಿಸಲಾಗುವುದು. ಎಂವಿ ಅಗಸ್ಟಾ ಇಟಲಿ ಮೂಲದ ಶೈಲಿಯಿಂದ ಆಕರ್ಷಕ ಲುಕ್‍‍ನಿಂದ ಕೊಡಿದೆ.

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಬೈಕಿನ ವಿನ್ಯಾಸದಲ್ಲಿ ಪ್ರಮುಖವಾಗಿ ಕಾಣುವಂತಹದು ಪ್ಲೋಟಿಂಗ್ ರೇರ್ ಸೀಟ್ ವಿನ್ಯಾಸ, ಟರ್ನ್ ಸಿಗ್ನಲ್‌, ಇಂಟಿಗ್ರೇಟೆಡ್ (ಡಿಆರ್‌ಎಲ್) ಡೇ ಟೈಮ್ ರನ್ನಿಂಗ್ ಲೈಟ್ಸ್‌ನೊಂದಿಗೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌ಗಳು, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಸಂಪೂರ್ಣ ಡಿಜಿಟಲ್ ಇನ್ಸೂಟ್ರೂಮೆಂಟ್ ಕ್ಲಸ್ಟರ್ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಟುರಿಸ್ಮೊ ವೆಲೊಚೆ 798ಸಿಸಿ 3 ಸಿಲಿಂಡರ್ ಎಂಜಿನ್ ಹೊಂದಿದ್ದು, 110ಬಿಎಚ್‍‍ಪಿ ಪವರ್, 7,100ಆರ್‍‍ಪಿಎಂ ಮತ್ತು 80ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. 6 ಸ್ಪೀಡ್ ಗೇರ್ ಮತ್ತು ಸ್ಲಿಪರ್ ಕ್ಲಚ್ ಅಸಿಸ್ಟ್ ಹೊಂದಿದ್ದು, ಅಪ್-ಅಂಡ್-ಡೌನ್ ಗೇರ್ ಶಿಫ್ಟ್ ಮಾಡಲು ಸರಳವಾಗಿಸಲು ಕ್ವಿಕ್-ಶಿಫ್ಟರ್ ಅನ್ನು ಕೂಡ ಅಳವಡಿಸಿದ್ದಾರೆ.

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಬಲಿಷ್ಠವಾದ ಬಾಡಿಯನ್ನು ಹೊಂದಿದ್ದು, ಮುಂಭಾಗದಲ್ಲಿ ಅಪ್‍‍ಸೈಡ್-ಡೌನ್ ಫೋರ್ಕ್ ಗಳನ್ನು ಮತ್ತು ಮೋನೋ-ಶಾಕ್ ಅನ್ನು ಒಳಗೊಂಡಿದೆ. 320ಎಂಎಂ ರೇರ್ ಡಿಸ್ಕ್ ಬ್ರೇಕ್ ಜೊತೆಗೆ ಬಾಷ್ ನಿರ್ಮಾಣದ ಡ್ಯುಯಲ್ ಚಾನೆಲ್ ಎ‍‍‍ಬಿ‍ಎಸ್ ಹೊಂದಿದೆ. ಎಬಿಎಸ್ ಬ್ರೇಕಿಂಗ್ ಭಾಗವು ಅದ್ಭುವಾಗಿ ಕಾರ್ಯನಿರ್ವಹಿಸುತ್ತದೆ.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಬೈಕಿನ ಮುಂಭಾಗದಲ್ಲಿ ಮತ್ತು ಹಿಂಭಾಗದ ಎರಡು 17 ಇಂಚಿನ ಟೈರ್ ಹೊಂದಿದ್ದು, 8 ಲೆವಲ್ ಟ್ರಾಕ್ಷನ್ ಕಂಟ್ರೋಲ್ ಸಿಸ್ಟಮ್, ಸ್ಲಿ‍ಪರ್ ಕ್ಲಚ್, ಪ್ಲಸ್ ಆ್ಯಂಟಿ-ಲಾಕ್ ಬ್ರೇಕ್ ಸಿಸ್ಟಮ್ ಹೊಂದಿದ್ದು, ಎಲೆಕ್ಟ್ರಾನಿಕ್ ಅಪ್ ಡೌನ್ ಗೇರ್ ಬಾಕ್ಸ್ ಹೊಂದಿದೆ

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ಬಿಡುಗಡೆಯಾಯ್ತು ಅಗಸ್ಟಾ ಟೂರಿಸ್ಮೊ ವೆಲೊಚೆ 800

ಎಂವಿ ಅಗಸ್ಟಾ ಡಾರ್ಕ್ ಬೂದು, ನೀಲಿ ಮತ್ತು ಕೆಂಪು ಈ ಮೂರು ಬಣ್ಣಗಳಲ್ಲಿ ಲಭ್ಯವಿದೆ. ಎಂವಿ ಅಗಸ್ಟಾ ಮೊದಲ ಬಾರಿ ಅಡ್ವೆಂಚರ್-ಟೂರರ್ ವಿಭಾಗದ ಬೈಕನ್ನು ಬಿಡುಗಡೆಗೊಳಿಸುತ್ತಿರುವುದರಿಂದ ಬೈಕ್ ಪ್ರಿಯರು ಹೆಚ್ಚಿನ ನಿರೀಕ್ಷೆಯನ್ನು ಹೊಂದಿದ್ದಾರೆ. ಅಗಸ್ಟಾ ಟೂರಿಸ್ಮೊ ವೆಲೊಚೆ 800ಬೈಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದ್ದು, ಡುಕಾಟಿ ಮಲ್ಟಿ ಸ್ಟ್ರಾಡಾ 950, ಮತ್ತು ಟ್ರಯಂಫ್ ಟೈಗರ್ 800 ಎಕ್ಸ್ಆರ್‍ಎಕ್ಸ್ ಬೈಕಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
MV Agusta Turismo Veloce 800 Launched In India: Priced At Rs 18.99 Lakh- Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X