ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಟಿವಿ‍ಎಸ್ ಮೋಟಾರ್ ಕಂಪನಿಯು ನವೀಕೃತ ಆವೃತ್ತಿಯ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಹೊಸ ಟಿವಿ‍ಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್ ಸ್ಮಾರ್ಟ್ ಫೋನ್ ಕನೆಕ್ಟಿವಿಟಿ ಹೊಂದಿದೆ. ಈ ಸ್ಕೂಟರಿನ ಬೆಲೆಯು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.59,990ಗಳಾಗಿದೆ.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಹೊಸ ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್, ಸ್ಟ್ಯಾಂಡರ್ಡ್ ಮಾದರಿಯ ಸ್ಕೂಟರಿಗಿಂತ ರೂ.6,900 ಹೆಚ್ಚು ಬೆಲೆಯನ್ನು ಹೊಂದಿದೆ. ಸ್ಮಾರ್ಟ್‌ಎಕ್ಸ್ ಕನೆಕ್ಟ್ ಟೆಕ್ನಾಲಜಿ ಎಂಬ ಹೊಸ ಫೀಚರ್ ಅನ್ನು ಹೊಸ ಸ್ಕೂಟರಿನಲ್ಲಿ ಅಳವಡಿಸಲಾಗಿದೆ. ಈ ಫೀಚರ್ ಅನ್ನು 125 ಸಿಸಿ ಸೆಗ್‍‍ಮೆಂಟಿನಲ್ಲಿರುವ ಎನ್‌ಟಾರ್ಕ್ 125 ಸ್ಕೂಟರಿನಿಂದ ಪಡೆಯಲಾಗಿದೆ.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಹೊಸ ಸ್ಮಾರ್ಟ್‌ಎಕ್ಸ್ ಕನೆಕ್ಟ್ ಫೀಚರ್ ಅನ್ನು ಸವಾರನ ಬಳಿಯಿರುವ ಐಒಎಸ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳೊಂದಿಗೆ ಸಿಂಕ್ ಮಾಡಬಹುದಾಗಿದೆ. ಈ ಫೀಚರ್ ಹೆಚ್ಚುವರಿ ಫಂಕ್ಷನ್‍‍ಗಳನ್ನು ನೀಡುತ್ತದೆ. ಇದರಲ್ಲಿ ಕಾಲ್, ಎಸ್‍ಎಂ‍ಎಸ್, ಓವರ್ ಸ್ಪೀಡ್ ಅಲರ್ಟ್ ಹಾಗೂ ಪ್ರಯಾಣದ ವಿವರಗಳನ್ನು ಪಡೆಯಬಹುದು.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಡಿಜಿಟಲ್-ಅನಲಾಗ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಟ್ರಿಪ್ ಮೀಟರ್, ಓಡೋಮೀಟರ್ ರೀಡಿಂಗ್, ಫ್ಯೂಯಲ್ ಲೆವೆಲ್ ಹಾಗೂ ಟೆಲ್‍‍ಟೇಲ್ ಲೈಟುಗಳನ್ನು ಹೊಂದಿದೆ. ಕ್ರೋಮ್ ಬೆಜೆಲ್‌ಗಳನ್ನು ಹೊಂದಿರುವ ಎಲ್ಇಡಿ ಹೆಡ್‌ಲ್ಯಾಂಪ್‌ ಹಾಗೂ ಈ ಸೆಗ್‍‍ಮೆಂಟಿನಲ್ಲಿ ಮೊದಲ ಬಾರಿಗೆ ಅಳವಡಿಸಿರುವ ಡ್ಯೂಯಲ್ ಕಲರ್ 3ಡಿ ಲೊಗೊ ಹೊಸ ಟಿವಿಎಸ್ ಜುಪಿಟರ್ ಗ್ರಾಂಡ್‍‍ನಲ್ಲಿರುವ ಇತರ ಫೀಚರ್‍‍ಗಳಾಗಿವೆ.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಹೊಸ ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು ಈಗ ವಿಶೇಷವಾದ ಟೆಕ್ ಬ್ಲೂ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಬಾಡಿ ಪ್ಯಾನೆಲ್‌ಗಳ ಮೇಲೆ ಕ್ರೋಮ್ ಗಾರ್ನಿಶ್ ಹಾಗೂ ರೇರ್ ವೀವ್ ಮಿರರ್‍‍ಗಳಿರಲಿವೆ. ಜೊತೆಗೆ ಮೆರೂನ್ ಬಣ್ಣದ ಕ್ರಾಸ್ ಸ್ಟಿಚ್ಡ್ ಸೀಟುಗಳು, ಬೇಜ್ ಇನ್ ಸೈಡ್ ಹಾಗೂ ಮಷೀನ್‍‍ನ ಡ್ಯುಯಲ್ ಟೋನ್ ಅಲಾಯ್ ವ್ಹೀಲ್‍‍ಗಳಿವೆ.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಹೊಸ ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು ಸದ್ಯಕ್ಕೆ ಒಂದು ಮಾದರಿಯಲ್ಲಿ ಮಾತ್ರ ಮಾರಾಟ ಮಾಡಲಾಗುವುದು. ಈ ಸ್ಕೂಟರಿನ ಮುಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್‍‍ಗಳಿವೆ. ಮೆಕ್ಯಾನಿಕಲ್‌ ಅಂಶಗಳ ಬಗ್ಗೆ ಹೇಳುವುದಾದರೆ, ಹೊಸ ಜೂಪಿಟರ್ ಗ್ರಾಂಡ್ ಸ್ಕೂಟರ್ 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್‌ ಹೊಂದಿದೆ.

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಈ ಎಂಜಿನ್ 8 ಬಿ‍‍ಹೆಚ್‍‍ಪಿ ಹಾಗೂ 8.4 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಸ್ಕೂಟರಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆಂಷನ್ ಹಾಗೂ ಹಿಂಭಾಗದಲ್ಲಿ ಪ್ರಿ ಲೋಡ್ ಅಡ್ಜಸ್ಟಬಲ್ ಶಾಕ್ ಅಬ್ಸರ್ವರ್‍‍ಗಳಿವೆ. ಬ್ರೇಕಿಂಗ್‍‍ಗಳಿಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಇವುಗಳ ಅನುಕೂಲಕ್ಕಾಗಿ ಸಿಬಿಎಸ್ (ಕಾಂಬಿ ಬ್ರೇಕಿಂಗ್ ಸಿಸ್ಟಂ) ಅಳವಡಿಸಲಾಗಿದೆ. ಹೊಸ ಸ್ಕೂಟರಿನಲ್ಲಿ 12 ಇಂಚಿನ ಟ್ಯೂಬ್‌ಲೆಸ್ ಟಯರ್‌ಗಳಿದ್ದು, 90/90 ಪ್ರೊಫೈಲ್‌ ಎರಡೂ ಬದಿಗಳಲ್ಲಿವೆ. ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್ ಅನ್ನು, ಗ್ರಾಂಡ್ ಟ್ರಿಮ್ ಹೊರತುಪಡಿಸಿ - ಸ್ಟ್ಯಾಂಡರ್ಡ್, ಝಡ್ಎಕ್ಸ್, ಝಡ್ಎಕ್ಸ್ ಡಿಸ್ಕ್ ಹಾಗೂ ಕ್ಲಾಸಿಕ್ ಎಂಬ ನಾಲ್ಕು ವಿಭಿನ್ನ ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಟಿವಿಎಸ್ ಜೂಪಿಟರ್ ಸ್ಕೂಟರ್‍‍ಗಳ ಸರಣಿಯಲ್ಲಿನ ಕಡಿಮೆ ಮಾದರಿಗಳ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.52,945 ರೂಗಳಿಂದ ಆರಂಭವಾಗುತ್ತವೆ. ಗ್ರಾಂಡ್ ಟಾಪ್ ಎಂಡ್ ಮಾದರಿಯಾಗಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆಗೊಂಡ ಜೂಪಿಟರ್ ಗ್ರಾಂಡ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಜೂಪಿಟರ್ ಗ್ರಾಂಡ್ ಸ್ಕೂಟರ್‌ಗಳ ಸರಣಿಯ ಟಾಪ್ ಎಂಡ್ ಮಾದರಿಯಾಗಿದೆ. ಈ ಮೊದಲು ಈ ಸ್ಕೂಟರ್ ಅನ್ನು ಸ್ಥಗಿತಗೊಳಿಸಲಾಗುವುದು ಎಂದು ಹೇಳಲಾಗಿತ್ತು. ಈಗ ನವೀಕರಿಸಿದ ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳೊಂದಿಗೆ ಮಾರಾಟ ಮಾಡಲಾಗುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಹೊಸ ಟಿವಿಎಸ್ ಜೂಪಿಟರ್ ಗ್ರಾಂಡ್, ಹೋಂಡಾ ಆಕ್ಟಿವಾ 5 ಜಿ, ಹೀರೋ ಪ್ಲೆಷರ್ 110 ಹಾಗೂ ಯಮಹಾ ಫ್ಯಾಸಿನೊ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
English summary
New TVS Jupiter Grande Launched In India: Priced At Rs 59,990 - Read in kannada
Story first published: Thursday, September 12, 2019, 16:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X