ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಅತ್ಯಂತ ವೇಗದ ಎಲೆಕ್ಟ್ರಿಕ್‌ ಸ್ಕೂಟರ್‌ ನಿರ್ಮಾಣದಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಜಪಾನ್ ಮೂಲದ ಒಕಿನಾವ ಸಂಸ್ಥೆಯು ತನ್ನ ಬಹುನೀರಿಕ್ಷಿತ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿತ್ತು. ಇದೀಗ ಇದೇ ಒಕಿನಾವ ಸಂಸ್ಥೆಯು ತಮ್ಮ ಸಿ-ಪ್ರೈಸ್ ಎಲೆಕ್ಟ್ರೀಕ್ ಸ್ಕೂಟರ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಸರಳಗೊಳಿಸಲು ಹಲವು ಹೊಸ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ 2019ರಿಂದ ಬಹುತೇಕ ವಾಹನ ಸಂಸ್ಥೆಗಳು ತಮ್ಮ ಬಹುನೀರಿಕ್ಷಿತ ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುತ್ತಿದ್ದು, ಇದರಲ್ಲಿ ಒಕಿನವಾ ಸ್ಕೂಟರ್‌ಗಳು ಕೂಡಾ ಪ್ರಮುಖವಾಗಿವೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಹೊಸ ಸ್ಕೂಟರ್ ಬೆಲೆ

ಒಕಿನಾವ ಸಂಸ್ಥೆಯು ಬಿಡುಗಡೆಗೊಳಿಸಿರುವ ಐ-ಪ್ರೈಸ್ ಸ್ಕೂಟರ್ ಎಕ್ಸ್ ಶೋರುಂ ಪ್ರಕಾರ ರೂ. 1.15 ಲಕ್ಷದ ಬೆಲೆಯನ್ನು ಪಡೆದುಕೊಂಡಿದ್ದು, ಇದು ಒಂದು ಇಂಟೆಲಿಜೆಂಟ್ ಸ್ಕೂಟರ್ ಎಂಬ ಗುರುತನ್ನು ಕೂಡಾ ಪಡೆದುಕೊಂಡಿದೆ. ಇಷ್ಟೆ ಅಲ್ಲದೇ ಅಥೆರ್ ಎನರ್ಜಿ ಸಂಸ್ಥೆಯ 450 ಸ್ಕೂಟರ್ ಬೆಲೆಗಳಿಗೆ ಹೋಲಿಸಿದರೆ ಇದು ಕಡಿಮೆ ಬೆಲೆಯಲ್ಲಿ ದೊರೆಯುತ್ತಿದೆ ಎನ್ನಬಹುದು.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಒಕಿನಾವ ಸಂಸ್ಥೆಯು ಈಗಾಗಲೇ ಭಾರತದಲ್ಲಿ ಪ್ರೈಸ್ ಮತ್ತು ರಿಡ್ಜ್ ಪ್ಲಸ್ ಎನ್ನುವ ಎರಡು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಿ ಉತ್ತಮ ಬೇಡಿಕೆ ಪಡೆದುಕೊಂಡಿದ್ದು, ಇದೀಗ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಐ-ಪ್ರೈಸ್ ಎನ್ನುವ ಸ್ಕೂಟರ್ ಮಾದರಿಯನ್ನು ಪರಿಚಯಿಸಿದೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಬುಕ್ಕಿಂಗ್ ಕೂಡಾ ಶುರು

ಒಕಿನವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಖರೀದಿಗಾಗಿ ಬುಕ್ಕಿಂಗ್ ಅನ್ನು ಕೂಡಾ ಶುರು ಮಾಡಲಾಗಿದ್ದು, ಈ ಹಿನ್ನೆಲೆ ಆಸಕ್ತ ಗ್ರಾಹಕರಿಂದ ರೂ.5 ಸಾವಿರ ಮುಂಗಡದೊಂದಿಗೆ ಹೊಸ ಸ್ಕೂಟರ್ ಖರೀದಿಗಾಗಿ ಬುಕ್ಕಿಂಗ್ ಪಡೆದುಕೊಳ್ಳಲಾಗುತ್ತಿದೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಒಕಿನಾವ ಸಂಸ್ಥೆಯು ಐ-ಪ್ರೈಸ್ ಸ್ಕೂಟರ್ ಬಿಡುಗಡೆಗೊಳಿಸಿದ ನಂತರ ಮೊದಲ ಹಂತವಾಗಿ 500 ಸ್ಕೂಟರ್‌ಗಳನ್ನು ಮಾತ್ರ ಹೊರತರುತ್ತಿದ್ದು, ಹೀಗಾಗಿ ಮೊದಲು ಬುಕ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ವಿತರಣೆಗೆ ಆದ್ಯತೆ ನೀಡಲಾಗುತ್ತೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಬ್ಯಾಟರಿ ಸಾಮರ್ಥ್ಯ

ತೆಗೆದು ಹಾಕಬಹುದಾದ ಲೀಥಿಯಂ ಅಯಾನ್ ಬ್ಯಾಟರಿ ಹೊಂದಿರುವ ಐ-ಪ್ರೈಸ್ ಸ್ಕೂಟರ್‌ಗಳು ಕೇವಲ ಎರಡರಿಂದ ಎರಡೂವರೆ ಗಂಟೆಗಳಲ್ಲಿ ಪೂರ್ಣಪ್ರಮಾಣದ ಚಾರ್ಚಿಂಗ್ ಪಡೆದುಕೊಳ್ಳಲಿದ್ದು, ಇದು ಲಿಡ್ ಆ್ಯಸಿಡ್ ಬ್ಯಾಟರಿಗಳಿಂತ ಶೇ.40ರಷ್ಟು ಕಡಿಮೆ ತೂಕ ಹೊಂದಿರಲಿವೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಐ-ಪ್ರೈಸ್ ಮೈಲೇಜ್

ಮೇಲೆ ಹೇಳಿದ ಹಾಗೆ ಮೈಲೇಜ್ ವಿಚಾರದಲ್ಲಿ ಸದ್ಯ ಗಮನಸೆಳೆಯುತ್ತಿರುವ ಲೀಥಿಯಂ ಬ್ಯಾಟರಿ ಸೌಲಭ್ಯವು ಐ-ಪ್ರೈಸ್ ಸ್ಕೂಟರ್‌ನಲ್ಲಿ ಜೋಡಣೆ ಮಾಡಲಾಗಿದ್ದು, ಇದು ಒಂದು ಪೂರ್ಣ ಪ್ರಮಾಣದಲ್ಲಿ ಬ್ಯಾಟರಿ ಚಾರ್ಚ್ ಮಾಡಿದ್ದಲ್ಲಿ 160 ರಿಂದ 180 ಕಿ.ಮಿ ಮೈಲೇಜ್ ಹಿಂದಿರುಗಿಸಬಲ್ಲವು.

MOST READ: ಶೀಘ್ರವೇ ಬ್ಯಾನ್ ಆಗಲಿವೆ ಈ ಆರು ಜನಪ್ರಿಯ ಕಾರುಗಳು..!

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಇದು ಮಾರುಕಟ್ಟೆಯಲ್ಲಿರುವ ಇತರೆ ಸ್ಕೂಟರ್‌ಗಳಿಂತಲೂ ತುಸು ದುಬಾರಿ ಎನ್ನಿಸಿದರೂ ಸಹ ಕೊಟ್ಟ ಬೆಲೆಗೆ ತಕ್ಕಂತೆ ಉತ್ತಮ ಮೈಲೇಜ್ ಹೊಂದಿದ್ದು, ಇದರಿಂದಾಗಿ ಪ್ರಯಾಣದ ವೆಚ್ಚವು ತಗ್ಗುವುದರಿಂದ ಇದು ಖರೀದಿಗೆ ಯೋಗ್ಯ ಎನ್ನಿಸಲಿವೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲೇ ವಿಶೇಷ ಎನ್ನಿಸಲಿರುವ ಒಕಿನಾವ ಐ-ಪ್ರೈಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರತಿ ಗಂಟೆಗೆ ಗರಿಷ್ಠ 75 ಕೀ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವನ್ನು ಹೊಂದಿದ್ದು, ಕಡಿಮೆ ಚಾಲನಾ ವೆಚ್ಚ, ಕಡಿಮೆ ನಿರ್ವಹಣೆ ವೆಚ್ಚ ಮತ್ತು ಶೂನ್ಯ ಮಾಲಿನ್ಯನೊಂದಿಗೆ ಪರಿಸರ ಸ್ನೇಹಿ ಸ್ಕೂಟರ್‌ ಮಾದರಿಯಾಗಿದೆ.

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಚಾಲನಾ ವಿಧಗಳು:

ಎಕಾನಮಿ (35 ಕಿ.ಮಿ ಪ್ರತಿ ಗಂಟೆಗೆ)

ಸ್ಫೋರ್ಟಿ (65 ಕಿ.ಮಿ ಪ್ರತಿ ಗಂಟೆಗೆ)

ಟರ್ಬೊ (75 ಕಿ.ಮಿ ಪ್ರತಿ ಗಂಟೆಗೆ)

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಒಕಿನಾವ ಸ್ಕೂಟರ್ ವಿಶೇಷತೆಗಳು:

ಹತ್ತು ಹಲವು ವೈಶಿಷ್ಟ್ಯತೆಗಳಿಂದ ಕೂಡಿರುವ ಒಕಿನಾವ ಸ್ಕೂಟರ್‌ಗಳು ಹೈ ಸ್ಪೀಡ್, ಡಿಜಿಟಲ್ ಸ್ಪೀಡೋಮೀಟರ್, ಆ್ಯಪ್ ಸಂಯೋಜಿತ ಫ್ಯೂಚರ್, ತ್ವರಿತ ಚಾರ್ಜಿಂಗ್, ಗರಿಷ್ಠ ಮೈಲೇಜ್, ರಿಯರ್ ಸಸ್ಪೆನ್ಷನ್, ಸ್ಟೈಲಿಷ್ ಹೆಡ್‌ಲ್ಯಾಂಪ್ಸ್, ಎಲ್‌ಇಡಿ ಲೈಟ್ಸ್ ಪಡೆದುಕೊಂಡಿರಲಿವೆ.

MOST READ: ಜಾವಾ, ಯಜ್ಡಿ, ಯಮಹಾ ಆರ್‌ಎಕ್ಸ್100 ಬೈಕ್‍ ಹೊಂದಿರುವ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!

ಅಥೆರ್ ಸ್ಕೂಟರ್‍‍ಗಳಿಗಿಂತಲೂ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಒಕಿನಾವ ಐ-ಪ್ರೈಸ್

ಹಾಗೆಯೇ ಸ್ಕೂಟರ್‌ಗಳಲ್ಲಿ ಸುರಕ್ಷಿತ ಸೌಲಭ್ಯಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 12 ಇಂಚುಗಳ ಚಕ್ರಗಳು, ಟೆಲಿಸ್ಕೊಪಿಕ್ ಫ್ರಂಟ್ ಸಸ್ಪೆನ್ಷನ್, ಡ್ಯುಯಲ್ ಫ್ರಂಟ್ ಡಿಸ್ಕ್, ಸಿಂಗಲ್ ರಿಯರ್ ಡಿಸ್ಕ್ ಬ್ರೇಕ್, ಎಲೆಕ್ಟ್ರಾನಿಕ್ ಅಸಿಸ್ಟನ್ ಬ್ರೇಕಿಂಗ್ ಸಿಸ್ಟಂ (E-ABS), ಸೈಡ್ ಸ್ಟ್ಯಾಂಡ್ ಸೇಫ್ಟಿ ಸೆನ್ಸಾರ್ ಸಹ ಇದರಲ್ಲಿದೆ.

Most Read Articles

Kannada
English summary
Okinawa i-Praise Launched In India At Rs 1.15 Lakh. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X