ಜಾವಾ, ಯಜ್ಡಿ, ಯಮಹಾ ಆರ್‌ಎಕ್ಸ್100 ಬೈಕ್‍ ಹೊಂದಿರುವ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!

ಕಳೆದ ಎರಡು ವರ್ಷಗಳಿಂದ 2-ಸ್ಟ್ರೋಕ್ ಎಂಜಿನ್‍ಗಳ ಬಗ್ಗೆ ಹಲವಾರು ಚರ್ಚೆಗಳು ನಡೆಯುತ್ತಿದೆ ಆದ್ರೆ ಇಲ್ಲಿಯವರೆಗೂ ದೇಶದಲ್ಲಿ ಎಷ್ಟು 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳು ಸಂಚರಿಸುತ್ತಿದೆ ಎಂದು ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಮಹತ್ವದ ನಿರ್ಧಾರಕ್ಕೆ ಬರುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು ಮಾಲಿನ್ಯ ಉತ್ಪಾದನೆಯಲ್ಲಿ ಹೆಚ್ಚಿನ ಪಾಲು ಹೊಂದಿರುವ 2-ಸ್ಟ್ರೋಕ್ ಎಂಜಿನ್ ವಾಹನಗಳ ಬಳಕೆ ಮೇಲೆ ಹೊಸ ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ನಮ್ಮ ಬೆಂಗಳೂರು ನಗರದಲ್ಲಿ ಸದ್ಯ 60 ಸಾವಿರ 2 ಸ್ಟ್ರೋಕ್ ಎಂಜಿನ್ ಆಧಾರಿತ ಆಟೋ ರಿಕ್ಷಾಗಳು ಸಂಚರಿಸುತ್ತಿದೆ ಎಂಬ ಮಾಹಿತಿ ದೊರೆತಿದ್ದು, 2 ಸ್ಟ್ರೋಕ್ ಎಂಜಿನ್ ಆಧಾರಿತ ದ್ವಿಚಕ್ರ ವಾಹನಗಳ ಸಂಖ್ಯೆಯ ಪೈಕಿ ನಿಖರವಾದ ಸಂಖೆಯು ಹೊರ ಬಂದಿಲ್ಲ. 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳ ಚಾಲನೆಯಿಂದಾಗಿ ವಾಯು ಮಾಲಿನ್ಯವು ಅಧಿಕಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿಯೆ ಇವೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಸ್ವಿಜರ್‍‍ಲ್ಯಾಂಡ್ ಮೂಲದ ಪಾಲ್ ಸ್ಕ್ಹೆರರ್ ಇನ್ಸ್ಟಿಟ್ಯೂಟ್ ಸಲ್ಲಿಸಿದ ವರದಿಯ ಪ್ರಕಾರ, 2 ಸ್ಟ್ರೋಕ್ ಚಾಲಿತ ವಾಹನಗಳು ಕಡಿಮೆ ಶಕ್ತಿಶಾಲಿಯಾಗಿದ್ದರೂ, ಬಹಳಷ್ಟು ಹಾನಿಕಾರಕ ಅನಿಲಗಳನ್ನು ಹೊರಸೂಸುತ್ತವೆ. ಇವುಗಳು ಗಾತ್ರದಲ್ಲಿ ಬಹಳ ಚಿಕ್ಕದಾಗಿದ್ದರೂ ಸಹ, ಅಪಾಯಕಾರಿ ಕಾರ್ಬನ್‌ಗಳ ಹೊರಸೂಸುವಿಕೆ ಮಟ್ಟವು ಟ್ರಕ್‌ಗಳು ಅಥವಾ ಕಾರುಗಳು ಹೊರಸೂಸುವಕ್ಕಿಂತಲೂ ಹೆಚ್ಚಾಗಿದೆಯಂತೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಭಾರತವನ್ನು ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಬಹುತೇಕ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳ ಬಳಕೆಯನ್ನು ನಿಷೇಧಿಸಲಾಗಿದೆ. ನಮ್ಮ ದೇಶವು ವಿಶ್ವದ 2 ಸ್ಟ್ರೋಕ್ ವಾಹನಗಳ ಅತಿ ಹೆಚ್ಚು ಸಂಖ್ಯೆಯನ್ನು ಹೊಂದಿದೆ. ಹೀಗಾಗಿ ಭಾರತವು 2 ಸ್ಟ್ರೋಕ್ ಮೋಟಾರ್‍‍ಸೈಕಲ್, ಸ್ಕೂಟರ್, ಮೊಪೆಡ್ ಮತ್ತು ರಿಕ್ಷಾಗಳ ಜನಸಂಖ್ಯೆಯನ್ನು ಇನ್ನೂ ಹೊಂದಲು ಕಾರಣವೇನು?

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಹಲವಾರು ವರ್ಷಗಳ ಹಿಂದಿನಿಂದ ಇವುಗಳ ಪರಿಹಾರಗಳ ಕಾರಣದಿಂದಾಗಿ ಇನ್ನು ಇವುಗಳನ್ನು ನಾವು ಕಾಣುತಿದ್ದೇವೆ. ಸುಮಾರು ಮೂರು ವರ್ಷಗಳಿಂದ 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳ ನಿಷೇಧದ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಇನ್ನೂ ಇವುಗಳಿಗೆ ಬ್ರೇಕ್ ಹಾಕುವ ಸರಿಯಾದ ಪರಿಹಾರ ಕಂಡುಬಂದಿಲ್ಲ ಎನ್ನಲಾಗಿದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

2 ಸ್ಟ್ರೋಕ್ ಎಂಜಿನ್ ಆಧಾರಿತ ಆಟೋ ರಿಕ್ಷಾಗಳ ಬಳಕೆಯನ್ನು ನಿಷೇಧಿಸುವುದು ಅಷ್ಟು ಸುಲಭದ ಕೆಲಸವಲ್ಲ. ಆದರೆ, ಮಾರುಕಟ್ಟೆಯಲ್ಲಿರುವ ಯಮಹಾ ಆರ್‍ಎಕ್ಸ್100, ಆರ್‍ಎಕ್ಸ್ 135, ಆರ್‍ಎಕ್ಸ್-ಜೆಡ್, ಕೈನೆಟಿಕ್ ಹೋಂಡಾ, ಕೈನೆಟಿಕ್ ಬಜಾಜ್ ಎಂಡ್ಯೂರೊ, ಬಜಾಜ್ ಚೇತಕ್, ಸುಜುಕಿ ಶೋಗನ್/ಶಾವೊಲಿನ್, ಸುಜುಕಿ ಮ್ಯಾಕ್ಸ್ 100ಆರ್, ಯೆಜ್ಡಿ ರೋಡ್‍ಕಿಂಗ್ 250/350 ಇತ್ಯಾದಿ ವಾಹನಗಳನ್ನು 2019ರ ಏಪ್ರಿಲ್ 1ರಿಂದ ನಿಷೇಧಗೊಳ್ಳುವ ಸಾಧ್ಯತೆಗಳಿವೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಇದರ ಕುರಿತಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಯೊಬ್ಬರು, 2 ಸ್ಟ್ರೋಕ್ ಎಂಜಿನ್ ಆಧಾರಿತ ವಾಹನಗಳನ್ನು ನಿಷೇಧಿಸಲಾಗುತ್ತಿದೆಯೊ ಅಥವಾ ಇಲ್ಲವೇ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತವಾದ ದೃಢಿಕರಣವಿಲ್ಲ. ನೀಡಲಾಗಿರುವ ವಾಹಗಗಳ ಪಟ್ಟಿಗಳಲ್ಲಿ ಕೂಡಾ ಮತ್ತಷ್ಟು ವಾಹನಗಳನ್ನು ಸೇರಿಸಲಾಗಬಹುದು ಎಂದು ಹೇಳಿಕೊಂಡಿದ್ದಾರೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

2 ಸ್ಟ್ರೋಕ್ ಎಂಜಿನ್ ಆಧಾರಿತ ರಿಕ್ಷಾಗಳ ಬಗ್ಗೆ ಹೇಳುವುದಾದರೆ, 2-ಸ್ಟ್ರೋಕ್ ಆಟೋ ರಿಕ್ಷಾಗಳ ಮೇಲೆ ಹೊದಿಕೆ ನಿಷೇಧವು ಇಂಗಾಲದ ಡೈಆಕ್ಸೈಡ್ ಅನ್ನು ಮಿತಿಗೊಳಿಸಲು ಸಾಕಾಗುವುದಿಲ್ಲ, ಮತ್ತು ಮ್ಯಾಟರ್ ಲೋಪಗಳನ್ನು ಕಡಿಮೆ ಮಾಡುತ್ತದೆ ಎಂದು ಸೂಚಿಸಲಾಗಿದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ನೈಟ್ರಸ್ ಆಕ್ಸೈಡ್ ಮಾಲಿನ್ಯಕಾರಕಗಳು ಗಮನಾರ್ಹವಾಗಿ ಕಡಿಮೆಯಾಗುವುದಿಲ್ಲ. ಮಾಲಿನ್ಯ ಮಟ್ಟದಲ್ಲಿ ಯಾವುದೇ ಕಡಿತವನ್ನು ನಿರೀಕ್ಷಿಸುವುದಕ್ಕಾಗಿ, 2-ಸ್ಟ್ರೋಕ್ ಎಂಜಿನ್ನಿಂದ ದೂರವಿರುವಾಗ, ಸಾಕಷ್ಟು ಸಂಖ್ಯೆಯ 4-ಸ್ಟ್ರೋಕ್ ಆಟೋಗಳನ್ನು ವಿದ್ಯುತ್ ರಿಕ್ಷಾಗಳಿಗೆ ಪರಿವರ್ತಿಸುವ ಅಗತ್ಯವಿರುತ್ತದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

2 ಸ್ಟ್ರೋಕ್ ಎಂಜಿನ್ ಆಧಾರಿತ ಆಟೋಗಳನ್ನು ನೀಡಿ 4 ಸ್ಟ್ರೋಕ್ ಆಟೋರಿಕ್ಷಾವನ್ನು ಖರೀದಿಸಲು ರೂ 30,000 ಸಬ್ಸಿಡಿಯನ್ನು ಆರಂಭಿಕ ಪರಿಹಾರ ಪ್ಯಾಕೇಜ್ ಅನ್ನು ಸರ್ಕಾರವೇ ಸರಕಾರವೇ ಘೋಷಿಸಿದೆ. ಎರಡು-ಸ್ಟ್ರೋಕ್ ಆಟೋಗಳನ್ನು 2005 ರಲ್ಲಿ ನಿಲ್ಲಿಸಿದಾಗ, ಹಳೆಯ ಆಟೋಗಳು ಕಾರ್ಯನಿರ್ವಹಿಸುವುದನ್ನು ಮುಂದುವರೆಸುತ್ತವೆ.

MOST READ: ಹೊಸ ಕಾಯ್ದೆ ಶುರು - ಟ್ಯಾಕ್ಸಿ ಚಾಲಕರಿಗೆ ಪೊಲೀಸರಿಂದ ನೋಟಿಸ್..!

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

2017-18 ಬಜೆಟ್ನಲ್ಲಿ ರೂ.30 ಕೋಟಿಯನ್ನು ನಾಲ್ಕು ಸ್ಟ್ರೋಕ್ ಎಲ್ಪಿಜಿ ಆಟೋ / ಎಲೆಕ್ಟ್ರಿಕ್ ರಿಕ್ಷಾ ಖರೀದಿಸಲು 2 ಸ್ಟ್ರೋಕ್ ಆಟೋ ಮಾಲೀಕರಿಗೆ ಸಬ್ಸಿಡಿಯನ್ನು ನೀಡಲಾಗಿದೆ. ಇನ್ನಿತರೆ ಆಟೋ ಚಾಲಕರು ಸಬ್ಸಿಡಿಯನ್ನು ಪಡೆಯಲು ಚಾಲಕರು ಒಂದು ಆರ್ಸಿ ರದ್ದು ಪತ್ರವನ್ನು ಮತ್ತು ಸರ್ಕಾರದ ಅಧಿಕೃತ ಸ್ಕ್ರ್ಯಾಪ್ ಕೇಂದ್ರಕ್ಕೆ ತಮ್ಮ ಎರಡು-ಸ್ಟ್ರೋಕ್ ಸ್ವಯಂ ಸಲ್ಲಿಸಬೇಕಾಗಿರುತ್ತದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಸ್ಕ್ರ್ಯಾಪ್ ಪ್ರಮಾಣಪತ್ರವನ್ನು ಒಮ್ಮೆ ಬಹಿರಂಗಗೊಂಡಲ್ಲಿ ಹೊಸ 4-ಸ್ಟ್ರೋಕ್ ಆಟೋ ರಿಕ್ಷಾ ಅಥವಾ ವಿದ್ಯುತ್ ವಾಹನವನ್ನು ಖರೀದಿಸಲು ಸಬ್ಸಿಡಿ ಮೊತ್ತದ ರೂ. 30,000 ಅನ್ನು ಚಾಲಕ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಆದಾಗ್ಯೂ, ಹೊಸ ವಾಹನವು 1.75 ಲಕ್ಷ ರೂಪಾಯಿಗಳಷ್ಟು ವೆಚ್ಚವಾಗುವುದರಿಂದ ಆಟೋ ಚಾಲಕರು ಈ ಪರಿಹಾರವನ್ನು ಸೂಕ್ತವಾಗಿ ಪರಿಗಣಿಸುವುದಿಲ್ಲ. 2-ಸ್ಟ್ರೋಕ್ ಆಟೋ ರಿಕ್ಷಾಗಳ ಮೇಲಿನ ನಿಷೇಧವು ಅಡ್ಡ ಗೋಡೆಯ ಮೇಳೆ ಇಟ್ಟಿರುವ ದೀಪದ ಹಾಗೆ ಎಂದು ತೋರುತ್ತದೆ.

Source: Rushlane

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಇಷ್ಟು ಮಾತರವಲ್ಲದೇ ಸರ್ಕಾರವು ಆಟೋ ರಿಕ್ಷಾ ಚಾಲಕರಿಗೆ ಮತ್ತೊಂದು ಶಾಕಿಂಗ್ ವಿಚಾರವನ್ನು ನೀಡಿದೆ. ಅದೇನು ಎಂದು ತಿಳಿಯಲ್ಲು ಮುಂದಕ್ಕೆ ಓದಿರಿ...

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ದೇಶದಲ್ಲಿ ದಿನಂಪ್ರತಿ ಹತ್ತಾರು ಭೀಕರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಬಹುತೇಕ ವಾಹನಗಳಲ್ಲಿ ಸುರಕ್ಷಾ ಸೌಲಭ್ಯಗಳು ಇಲ್ಲದ ಹಿನ್ನೆಲೆಯಲ್ಲಿ ಅಪಘಾತದ ತೀವ್ರತೆ ಹೆಚ್ಚುತ್ತಿದ್ದು, ವಾಹನ ಚಾಲನೆ ವೇಳೆ ಮಾಡುವ ಸಣ್ಣಪುಟ್ಟ ಚಾಲನಾ ದೋಷಗಳೇ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿವೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

2019ರ ಅಕ್ಟೋಬರ್ ತಿಂಗಳ ಪ್ರಾರಂಭದಿಂದ ದೇಶದಲ್ಲಿರುವ ಎಲ್ಲಾ ಆಟೋ ರಿಕ್ಷಾಗಳು ಕೆಲವು ಕಡ್ಡಾಯ ಸುರಕ್ಷಾ ಸಾಧನಗಳನ್ನು ಹೊಂದಿರಬೇಕಾಗಿದ್ದು, ಈ ನಿಟ್ಟಿನಲ್ಲಿ ಆಟೋ ರಿಕ್ಷಾ ತಯಾರಕ ಸಂಸ್ಥಗಳು ತಾವು ಉತ್ಪಾದಿಸುವ ಆಟೋ ರಿಕ್ಷಾಗಳಲ್ಲಿ ಸರ್ಕಾರದ ಆದೇಶದಂತೆ ಹೊಸ ಸುರಕ್ಷಾ ಉಪಕರಣಗಳನ್ನು ಅಳವಡಿಸಬೇಕಾಗಿದೆ.

MOST READ: ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ರಸ್ತೆ ಸಾರಿಗೆ ಇಲಾಖೆಯ ಪ್ರಕಾರ 2019ರ ಅಕ್ಟೊಬರ್ ತಿಂಗಳಿನಿಂದ ರಸ್ತೆಯಲ್ಲಿ ಸಂಚರಿಸುವ ಪ್ರತಿ ಆಟೋ ಮಾದರಿಗಳು ಬಾಗಿಲುಗಳು ಅಥವಾ ಪ್ರಯಾಣಿಕರು ನಿಯಂತ್ರಣ ತಪ್ಪಿ ಕೆಳಗೆ ಬೀಳದಿರುವ ಹಾಗೆ ಸಲಕರಣೆಗಳನ್ನು ಪಡೆದುಕೊಂಡಿರಬೇಕಿದ್ದು, ಅಟೋ ರಿಕ್ಷಾ ಚಾಲಕರು ಸೀಟ್‍ಬೆಲ್ಟ್ ಅನ್ನು ಸಹ ಧರಿಸಬೇಕಾಗಿರುತ್ತದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಸೀಟ್ ಬೆಲ್ಡ್ ಕಡ್ದಾಯವಲ್ಲದೇ ಡ್ರೈವರ್ ಸೀಟ್ ಮತ್ತು ಪ್ರಯಾಣಿಕರ ಸೀಟ್ ಉದ್ದಳತೆಯನ್ನು ಮತ್ತಷ್ಟು ಹೆಚ್ಚಿಸಬೇಕಿದೆ. ಇದಕ್ಕೆ ಕಾರಣ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಟ್ಯಾಕ್ಸಿಗಳು ಬಂದರೂ ಬಹುತೇಕರು ಆಟೋ ರಿಕ್ಷಾಗಳನ್ನು ಆಯ್ಕೆ ಮಾಡುತ್ತಿರುವುದರಿಂದ ಸುರಕ್ಷೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ಯಮಹಾ ಯಜ್ಡಿ, ಯಮಹಾ ಆರ್‍‍ಎಕ್ಸ್100 ಬೈಕ್‍ಗಳ ಬಳಕೆ ನಿಷೇಧ.?

ಹೊಸ ಆಟೋ ರಿಕ್ಷಾಗಳು ಚಾಲಕ ಮತ್ತು ಪ್ರಯಾಣಿಕರು ಕೂರವ ಜಾಗದಲ್ಲಿ ವಿಶಾಲವಾದ ಲೆಗ್‍ರೂಂ'ಗೆ ಸರಿಹೊಂದುವ ಜಾಗವನ್ನು ನೀಡಬೇಕಾಗಿದೆ. ಇದರ ಜೊತೆಗೆ ವಿಶೇಷವಾದ ಹೆಡ್‍ಲ್ಯಾಂಪ್‍ಗಳನ್ನು ಸಹ ನೀಡಬೇಕಿದ್ದು, ಪ್ರಸ್ತುತ ಸಿಂಗಲ್ ಯೂನಿಟ್ ಅನ್ನು ಬಳಸುತ್ತಿರುವ ಜಾಗದಲ್ಲಿ ಎರಡು ಹೆಡ್‍ಲ್ಯಾಂಪ್‍ಗಳನ್ನು ಅಳವಡಿಸಬೇಕಿದೆ.

Most Read Articles

Kannada
English summary
Using Yamaha Yezdi RX100 Bikes 2stroke Auto Rikshaw Banned From April 1,2019. Read In Kannada

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more