ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ರಿವೋಲ್ಟ್ ಮೋಟಾರ್ಸ್, ದೆಹಲಿಯಲ್ಲಿ ತನ್ನ ಮೊದಲ ಬ್ಯಾಚ್‍‍ನ ಎಲೆಕ್ಟ್ರಿಕ್ ಬೈಕುಗಳನ್ನು ವಿತರಿಸಿರುವುದಾಗಿ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದೆ. ಧಂತೇರಸ್ ಹಿನ್ನೆಲೆಯಲ್ಲಿ ರಿವೋಲ್ಟ್ ಕಂಪನಿಯು ಆರ್‌ವಿ 300, ಆರ್‌ವಿ 400 ಹಾಗೂ ಆರ್‌ವಿ 400 ಪ್ರೀಮಿಯಂ ಬೈಕುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿತರಿಸಿದೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ದೆಹಲಿಯಲ್ಲಿ ರಿವೋಲ್ಟ್ ಕಂಪನಿಯ ಮೊದಲ ಬ್ಯಾಚ್‍‍ನ ಎಲೆಕ್ಟ್ರಿಕ್ ಬೈಕುಗಳನ್ನು ವಿತರಿಸಲಾಗಿದೆ. ರಿವೋಲ್ಟ್ ಕಂಪನಿಯು ಮುಂದಿನ ತಿಂಗಳು ಪುಣೆಯಲ್ಲಿ ಬೈಕುಗಳನ್ನು ವಿತರಿಸುವುದಾಗಿ ತಿಳಿಸಿದೆ. ಸದ್ಯಕ್ಕೆ ರಿವೋಲ್ಟ್ ಕಂಪನಿಯ ಈ ಮೂರು ಮಾದರಿಯ ಬೈಕುಗಳನ್ನು ಪುಣೆ ಹಾಗೂ ದೆಹಲಿಯಲ್ಲಿ ಮಾತ್ರ ಮಾರಾಟ ಮಾಡಲಾಗುತ್ತಿದೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ರಿವೋಲ್ಟ್ ಕಂಪನಿಯು ಈ ಎಲೆಕ್ಟ್ರಿಕ್ ಬೈಕುಗಳಿಗಾಗಿ ಹೆಚ್ಚಿನ ಪ್ರಮಾಣದ ಬೇಡಿಕೆಯನ್ನು ಹೊಂದಿದೆ. ಈ ಎಲ್ಲಾ ಮೂರು ಮಾದರಿಯ ಎಲೆಕ್ಟ್ರಿಕ್ ಬೈಕುಗಳನ್ನು 2019ರ ವರ್ಷಕ್ಕೆ ಮಾರಾಟ ಮಾಡಲಾಗಿದೆ ಎಂದು ರಿವೋಲ್ಟ್ ಇತ್ತೀಚೆಗಷ್ಟೇ ಘೋಷಿಸಿತ್ತು.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಈಗ ಮುಂದಿನ ವರ್ಷಕ್ಕಾಗಿ ಬುಕ್ಕಿಂಗ್‍‍ಗಳನ್ನು ಶುರುಮಾಡಲಾಗಿದೆ. ರಿವೋಲ್ಟ್ ಎಲೆಕ್ಟ್ರಿಕ್ ಬೈಕುಗಳನ್ನು ಇ‍ಎಂ‍ಐ ವಿಧಾನದಲ್ಲಿ ಮಾರಾಟ ಮಾಡಲಾಗುತ್ತದೆ. ಇತ್ತೀಚಿಗೆ ಒಂದೇ ಬಾರಿ ಪಾವತಿ ಮಾಡಿ ಬೈಕ್ ಅನ್ನು ಖರೀಸುವ ವಿಧಾನವನ್ನು ಸಹ ಬಿಡುಗಡೆಗೊಳಿಸಲಾಗಿದೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಎಂಟ್ರಿ ಲೆವೆಲ್‍‍ನ ಆರ್‌ವಿ 300 ಬೈಕುಗಳಿಗೆ ತಿಂಗಳಿಗೆ ರೂ.2,999, ಆರ್‌ವಿ 400 ಬೇಸ್‌ ಬೈಕುಗಳಿಗೆ ತಿಂಗಳಿಗೆ ರೂ.3,499, ಹಾಗೂ ಟಾಪ್ ಮಾದರಿಯಾದ ಆರ್‌ವಿ 400 ಬೈಕುಗಳಿಗೆ ಪ್ರತಿ ತಿಂಗಳು ರೂ.3,999 ಪಾವತಿಸಬೇಕಾಗುತ್ತದೆ. ಈ ಇ‍ಎಂ‍ಐ ಅವಧಿಯು 37 ತಿಂಗಳಾಗಿದೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಆರ್‌ವಿ 300 ಹಾಗೂ ಆರ್‌ವಿ 400 ಪ್ರೀಮಿಯಂ ಮಾದರಿಗಳನ್ನು ಒಂದೇ ಬಾರಿ ಹಣ ಪಾವತಿ ಮಾಡಿ ಪಡೆಯಬಹುದು. ಆರ್‌ವಿ 300 ಎಲೆಕ್ಟ್ರಿಕ್ ಬೈಕಿನ ಬೆಲೆ ರೂ.84,000ಗಳಾದರೆ, ಟಾಪ್ ಎಂಡ್ ಮಾದರಿಯಾದ ಆರ್‌ವಿ 400 ಪ್ರೀಮಿಯಂ ಬೈಕಿನ ಬೆಲೆ ರೂ.99,000ಗಳಾಗಿದೆ. ಈ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ದರಗಳಾಗಿವೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಈ ಎಲ್ಲಾ ಮೂರು ಎಲೆಕ್ಟ್ರಿಕ್ ಬೈಕುಗಳು ಹಲವಾರು ಫೀಚರ್‍‍ಗಳನ್ನು ಹೊಂದಿವೆ. ಇವುಗಳಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್‌, ಎಲ್‌ಇಡಿ ಟೇಲ್ ಲೈಟ್‌, ಬ್ಲೂಟೂತ್ ಕನೆಕ್ಟಿವಿಟಿ ಹೊಂದಿರುವ ಪೂರ್ಣ ಪ್ರಮಾಣದ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹಾಗೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಟೆಕ್ನಾಲಜಿಗಳಿವೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಒಟಿಎ ಸಾಫ್ಟ್‌ವೇರ್ ಅಪ್‍‍ಡೇಟ್, ಲೈವ್ ವೆಹಿಕಲ್ ಟ್ರ್ಯಾಕಿಂಗ್, ವೆಹಿಕಲ್ ಡಯಾಗ್ನೋಸ್ಟಿಕ್ಸ್, ಜಿಪಿಎಸ್ ನ್ಯಾವಿಗೇಷನ್‍‍ಗಳಿಗಾಗಿ 4 ಜಿ ಇ-ಸಿಮ್‌ ಹೊಂದಿದೆ. ಪವರ್‌ಟ್ರೇನ್‌ ಬಗ್ಗೆ ಹೇಳುವುದಾದರೆ, ರಿವೋಲ್ಟ್ ಆರ್‌ವಿ 400 ಬೈಕಿನಲ್ಲಿ 3.24 ಕಿ.ವ್ಯಾ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಹೊಂದಿರುವ 3 ಕಿ.ವ್ಯಾ ಎಲೆಕ್ಟ್ರಿಕ್ ಮೋಟರ್‌ ಅಳವಡಿಸಲಾಗಿದೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಆರ್‌ವಿ 400 ಎಲೆಕ್ಟ್ರಿಕ್ ಬೈಕ್ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ ಗರಿಷ್ಠ 150 ಕಿ.ಮೀವರೆಗೂ ಚಲಿಸುತ್ತದೆ. ಈ ಮೂರೂ ಎಲೆಕ್ಟ್ರಿಕ್ ಬೈಕುಗಳು 3 ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಈ ಮೋಡ್‍‍ಗಳು ವ್ಯಾಪ್ತಿ ಹಾಗೂ ವೇಗವನ್ನು ಮಾದರಿಗಳಿಗೆ ತಕ್ಕಂತೆ ಬದಲಾಗುತ್ತವೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಚಾರ್ಜಿಂಗ್ ಬಗ್ಗೆ ಹೇಳುವುದಾದರೆ, ರಿವೋಲ್ಟ್ ಹಲವು ಚಾರ್ಜಿಂಗ್ ಆಯ್ಕೆಗಳನ್ನು ನೀಡುತ್ತದೆ. ಇದರಲ್ಲಿ ಪ್ಲಗ್ ಇನ್ ಚಾರ್ಜಿಂಗ್ ಪೋರ್ಟ್, ಸ್ವ್ಯಾಪ್ ಮಾಡಬಹುದಾದ ಬ್ಯಾಟರಿ, ಬ್ಯಾಟರಿ ಸ್ವಾಪಿಂಗ್ ಪಾಯಿಂಟ್ ಹಾಗೂ ಬ್ಯಾಟರಿಗಳನ್ನು ಹೋಂ ಡೆಲಿವರಿ ಮಾಡಬಹುದಾದ ಆಯ್ಕೆಗಳು ಸೇರಿವೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಧಂತೇರಸ್ ಹಿನ್ನೆಲಿಯಲ್ಲಿ ರಿವೋಲ್ಟ್ ತನ್ನ ಮೊದಲ ಬ್ಯಾಚ್‍‍ನ ಎಲೆಕ್ಟ್ರಿಕ್ ಬೈಕುಗಳನ್ನು ದೆಹಲಿಯಲ್ಲಿ ವಿತರಣೆ ಮಾಡಿದೆ. ಆರ್‌ವಿ 300 ಹಾಗೂ ಆರ್‌ವಿ 400 ದೇಶದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಹೊಂದಿರುವ ಎಲೆಕ್ಟ್ರಿಕ್ ಬೈಕುಗಳಾಗಿವೆ.

ಧಂತೇರಸ್ ಹಿನ್ನೆಲೆಯಲ್ಲಿ ಬೈಕುಗಳನ್ನು ವಿತರಿಸಿದ ರಿವೋಲ್ಟ್

ರಿವೋಲ್ಟ್ ಬೈಕುಗಳು ಈ ಸೆಗ್‍‍ಮೆಂಟಿನಲ್ಲಿ ಯಾವುದೇ ಪ್ರತಿಸ್ಪರ್ಧಿಗಳನ್ನು ಹೊಂದಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಬೆಂಗಳೂರು ಮೂಲದ ಸ್ಟಾರ್ಟ್ ಅಪ್‌ ಕಂಪನಿಯಾದ ಅಲ್ಟ್ರಾ ವಯೊಲೆಟ್ ಆಟೋಮೋಟಿವ್‍ ಬಿಡುಗಡೆಗೊಳಿಸಲಿರುವ ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕಿನಿಂದ ಪೈಪೋಟಿಯನ್ನು ಎದುರಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Revolt Electric Motorcycle Deliveries Begin: First Batch Delivered In Delhi On Dhanteras. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X