TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಸದ್ದಿಲ್ಲದೆ ತಮ್ಮ ಬೈಕ್‍ಗಳ ಬೆಲೆಯನ್ನು ಹೆಚ್ಚಿಸಿದ ರಾಯಲ್ ಎನ್‍ಫೀಲ್ಡ್..!!
ಚೆನ್ನೈ ಮೂಲದ ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾದ ರಾಯಲ್ ಎನ್‍ಫೀಲ್ಡ್ ಸದ್ದಿಲ್ಲದೆ ತಮ್ಮ ಬೈಕ್‍ಗಳ ಮೇಲಿನ ಬೆಲೆಯನ್ನು ಅಧಿಕಗೊಳಿಸಿದೆ. ಸಂಸ್ಥೆಯು ತಮ್ಮ 300 ರಿಂದ 500ಸಿಸಿ ಸಾಮರ್ಥ್ಯದ ಬೈಕ್‍ಗಳ ಮೇಲೆ ಸುಮಾರು ರೂ.1500 ಅನ್ನು ಹೆಚ್ಚಳ ಮಾಡಲಾಗಿದೆ ಎನ್ನಲಾಗಿದೆ. ಈ ಕುರಿತಾಗಿ ಸಂಸ್ಥೆಯು ಇನ್ನು ಅಧಿಕೃತ ಮಾಹಿತಿ ನೀಡಲಿಲ್ಲವಾದರೂ, ಡೀಲರ್‍ಗಳು ಈಗಾಗಲೆ ಈ ತಿಂಗಳ ಪ್ರಾರಂಭದಿಂದ ಬೆಲೆಯನ್ನು ಹೆಚ್ಚಾಗಿ ಪಡೆಯುತ್ತಿದ್ದಾರೆ.
ಆಟೋ ಎನ್‍ಡಿಟಿವಿ ವರದಿಯ ಪ್ರಕಾರ ಬೆಲೆ ಏರಿಕೆಯ ಪ್ರಕ್ರಿಯೆಯು ರಾಯಲ್ ಎನ್‍ಫೀಲ್ಡ್ ಬುಲೆಟ್ 350 ಮತ್ತು ಬುಲೆಟ್ 500, ಕ್ಲಾಸಿಕ್ 350 ಮತ್ತು 500 ಹಾಗು ಹಿಮಾಲಯನ್ ಬೈಕ್‍ಗಳ ಮೇಲೆ ಹೆಚ್ಚಳವಾಗಿದ್ದು, ಇನ್ನು ಸಂಸ್ಥೆಯು ಕೆಲದಿನಗಳ ಹಿಂದಷ್ಟೆ ಬಿಡುಗಡೆಗೊಳಿಸಿದ ಕಾಂಟಿನೆಂಟಲ್ ಜಿಟಿ 650 ಮತ್ತು ಇಂಟರ್‍ಸೆಪ್ಟರ್ 650 ಬೈಕ್‍ಗಳ ಬೆಲೆಯನ್ನು ಯಾವುದೇ ಬದಲಾವಣೆಯನ್ನು ಮಾಡಲಿಲ್ಲ ಎನ್ನಲಾಗಿದೆ.
ಹೊಸ ಬೆಲೆಗಳ ಆಧಾರದ ಮೇಲೆ ರಾಯಲ್ ಎನ್‍ಫೀಲ್ಡ್ ಬುಲೆಟ್ 350 ರೂ. 1.34 ಲಕ್ಷ, ಕ್ಲಾಸಿಕ್ 350 ಎಬಿಎಸ್ ರೂ. 1.53 ಲಕ್ಷ, ರಾಯಲ್ ಎನ್‍ಫೀಲ್ಡ್ 350 ಎಬಿಎಸ್ ಸಿಗ್ನಲ್ಸ್ ಎಡಿಷನ್ ರೂ. 1.63 ಲಕ್ಷ, ರಾಯಲ್ ಎನ್‍ಫೀಲ್ಡ್ ಹಿಮಾಲಯನ್ ಎಬಿಎಸ್ ರೂ. 1.80 ಲಕ್ಷ ಮತ್ತು ಇನಿತರೆ ಬೈಕ್‍ಗಳಾದ 650 ಟ್ವಿನ್ ಬೈಕ್‍ಗಳು ರೂ. 2.49 ಲಕ್ಷ ಹಾಗು ರೂ. 2.64 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.
ರಾಯಲ್ ಎನ್‍ಫ್ಹೀಲ್ಡ್ ಸಂಸ್ಥೆಯು ಬೆಲೆ ಏರಿಕೆಗೆ ಕಾರಣವನ್ನು ಘೋಷಿಸದಿದ್ದರೂ, ಉತ್ಪಾದನಾ ವೆಚ್ಚಗಳ ಹೆಚ್ಚಳವು ಒಂದೇ ಕಾರಣಕ್ಕೆ ಕಾರಣವಾಗಿದೆ. ಕಂಪನಿಯು ಕಳೆದ ವರ್ಷ ಆಗಸ್ಟ್ ನಿಂದ ಡ್ಯುಯಲ್-ಚಾನಲ್ ಎಬಿಎಸ್ ಅನ್ನು ಪರಿಚಯಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಬುಲೆಟ್ 350 ರನ್ನು ಹೊರತುಪಡಿಸಿ, ಅದರ ಎಲ್ಲಾ ಮಾದರಿಗಳು ಈಗ ಸುರಕ್ಷತಾ ವೈಶಿಷ್ಟ್ಯವನ್ನು ಹೊಂದಿವೆ.
ಇದರ ಜೊತೆಗೆ ರಾಯಲ್ ಎನ್‍ಫೀಲ್ಡ್ ಈ ವರ್ಷದ ಸ್ವಲ್ಪ ಸಮಯದ ನಂತರ ಹೊಸ ವಿಶೇಷ ಆವೃತ್ತಿ ಮೋಟಾರ್‍ಸೈಕಲ್ ಪರಚಯಿಸುವ ವದಂತಿಗಳಿವೆ. ಟ್ರಯಲ್ಸ್ ಆವೃತ್ತಿಯಂತೆ ಬ್ಯಾಡ್ಜ್ ಮಾಡಲು ಸಾಧ್ಯವಾದರೆ, ಬುಲೆಟ್ 350 ಮತ್ತು 500 ರ ಆಧಾರದ ಮೇಲೆ ವಿಶೇಷ ಆವೃತ್ತಿ ಮೋಟಾರ್‍ಸೈಕಲ್ ಪರೀಕ್ಷೆ ಗುರುತಿಸಲ್ಪಟ್ಟಿತ್ತು ಮತ್ತು ರೆಟ್ರೊ ಬೈಕ್ನ ಸ್ಕ್ರ್ಯಾಂಬ್ಲರ್ ಶೈಲಿಯ ಆವೃತ್ತಿಯು ಕೂಡಾ ಅದರಲ್ಲಿ ಒಂದು ಎನ್ನಲಾಗಿದೆ.