ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

ವಾಹನಗಳ ಬೆಲೆ ಏರಿಕೆಯ ನಡುವೆಯು ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಬೈಕ್ ಮಾರಾಟದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದ್ದು, ಫೆಬ್ರುವರಿ ಅವಧಿಯಲ್ಲಿ ಹೀರೋ ಸಂಸ್ಥೆಯು ಮತ್ತೆ ಮುನ್ನಡೆ ಕಾಯ್ದುಕೊಂಡಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

ಬೈಕ್ ಮಾರಾಟ ವಿಭಾಗದಲ್ಲಿ ಸದ್ಯ ಹೋಂಡಾ ಮತ್ತು ಹೀರೋ ನಡುವೆ ಭಾರೀ ಪೈಪೋಟಿ ಇದ್ದು, ಫೆಬ್ರುವರಿ ತಿಂಗಳ ಟಾಪ್ 10ರ ಪಟ್ಟಿಯಲ್ಲಿ 3 ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ಹೀರೋ ಸಂಸ್ಥೆಯು ವರ್ಷದ ಆರಂಭದಲ್ಲೇ ಗರಿಷ್ಠ ಪ್ರಮಾಣದ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಹಾಗಾದ್ರೆ ಟಾಪ್ 10ರ ಪಟ್ಟಿಯಲ್ಲಿರುವ ಪ್ರಮುಖ ಬೈಕ್ ಮಾರಾಟ ಪ್ರಮಾಣ ಎಷ್ಟು ಎಂದು ತಿಳಿಯಲು ಮುಂದೆ ಓದಿ.

01. ಹೀರೋ ಸ್ಪ್ಲೆಂಡರ್

ಕಳೆದ 1 ವರ್ಷದಿಂದ ಒಂದೇ ಪ್ರಮಾಣದ ಬೇಡಿಕೆಯನ್ನು ಕಾಯ್ದುಕೊಂಡಿರುವ ಸ್ಪ್ಲೆಂಡರ್ ಬೈಕ್ ಮಾರಾಟದಲ್ಲಿ ಯಾವುದೇ ಬದಲಾವಣೆ ಇಲ್ಲವಾದ್ರೂ ಫೆಬ್ರುವರಿ ಅವಧಿಯಲ್ಲಿ 2,44,241 ಬೈಕ್‌ಗಳು ಮಾರಾಟಗೊಳ್ಳುವ ಮೂಲಕ ಮೊದಲ ಸ್ಥಾನ ತನ್ನದಾಗಿಸಿಕೊಂಡಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

02. ಹೋಂಡಾ ಆಕ್ಟಿವಾ

ದ್ವಿಚಕ್ರ ವಾಹನ ಮಾರಾಟದಲ್ಲಿ ಕಳೆದ 2 ವರ್ಷಗಳಿಂದ ಹೀರೋ ಜೊತೆ ತೀವ್ರ ಪೈಪೋಟಿ ನಡೆಸುತ್ತಿರುವ ಹೋಂಡಾ ಆಕ್ಟಿವಾ ಮಾದರಿಯು ತಿಂಗಳ ಮಾರಾಟದಲ್ಲಿ ನಂ. 1 ಇಲ್ಲವೇ 2ನೇ ಸ್ಥಾನದಲ್ಲಿ ಭದ್ರವಾಗಿದ್ದು, ಫೆಬ್ರುವರಿ ಅವಧಿಯಲ್ಲಿ ಒಟ್ಟು 2,05,239 ಆಕ್ಟಿವಾ ಮಾದರಿಗಳು ಮಾರಾಟವಾಗಿವೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

03. ಹೀರೋ ಹೆಚ್ಎಫ್ ಡಿಲಕ್ಸ್

ಹೀರೋ ಮೋಟೊಕಾರ್ಪ್ ಸಂಸ್ಥೆಯ ಜನಪ್ರಿಯ ಬೈಕ್ ಎಂದೇ ಕರೆಯಲ್ಪಡುವ ಎಚ್ಎಫ್ ಡಿಲಕ್ಸ್ ಮಾದರಿಯು ಫೆಬ್ರುವರಿ ಅವಧಿಯಲ್ಲಿ ಬರೋಬ್ಬರಿ 1,84,396 ಬೈಕ್‌ಗಳು ಮಾರಾಟವಾಗುವ ಮೂಲಕ ಟಾಪ್ 3ನೇ ಸ್ಥಾನಕ್ಕೆರಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

04. ಹೋಂಡಾ ಸಿಬಿ ಶೈನ್

ಭಾರತದಲ್ಲಿ ಅಷ್ಟೇ ಅಲ್ಲದೆ ವಿಶ್ವದಾದ್ಯಂತ ತನ್ನ ಮಾರಾಟದಲ್ಲಿ ದಾಖಲೆ ಬರೆದಿರುವ 125 ಸಿಸಿ ಸಿಬಿ ಶೈನ್ ಬೈಕ್‌ಗಳು ಫೆಬ್ರುವರಿ ಅವಧಿಯಲ್ಲಿ 86,355 ಬೈಕ್‌ಗಳನ್ನು ಮಾರಾಟ ಮಾಡಿದ್ದು, ಇದು 125ಸಿಸಿ ವಿಭಾಗದಲ್ಲಿ ಮಾರಾಟವಾದ ಗರಿಷ್ಠ ಬೈಕ್ ಮಾದರಿಯಾಗಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

05. ಬಜಾಜ್ ಪಲ್ಸರ್

ಯುವ ಸಮುದಾಯ ಹಾಟ್ ಫೆವರಿಟ್ ಎಂದೇ ಜನಪ್ರಿಯವಾಗಿರುವ ಬಜಾಜ್ ಪಲ್ಸರ್ ಸರಣಿ ಬೈಕ್‌ಗಳು ಭಾರತದಲ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದು, ಇದರಲ್ಲಿ ಪಲ್ಸರ್ 150 ಬೈಕ್‌ಗಳಿಗೆ ಭಾರೀ ಬೇಡಿಕೆಯಿದೆ. ಹೀಗಾಗಿಯೇ ಕಳೆದ ಫೆಬ್ರುವರಿ ಅವಧಿಯಲ್ಲಿ ಬಜಾಜ್ ಸಂಸ್ಥೆಯು 84,151 ಪಲ್ಸರ್ ಬೈಕ್‌ಗಳನ್ನು ಮಾರಾಟ ಮಾಡಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

06. ಟಿವಿಎಸ್ ಎಕ್ಸ್ಎಲ್ ಸೂಪರ್

ಟಿವಿಎಸ್ ಜನಪ್ರಿಯ ಬೈಕ್ ಮಾದರಿಗಳಲ್ಲಿ ಒಂದಾಗಿರುವ ಎಕ್ಸ್‌ಎಲ್ ಸೂಪರ್ ಮಾದರಿಯು ಗ್ರಾಮೀಣ ಭಾಗದಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿದ್ದು, ಫೆಬ್ರುವರಿ ಅವಧಿಯಲ್ಲಿ 75,001 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಪ್ರಮುಖ ಬೈಕ್‌ಗಳನ್ನೇ ಹಿಂದಿಕ್ಕಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

07. ಹೀರೋ ಪ್ಯಾಷನ್

ಫೆಬ್ರುವರಿ ಅವಧಿಯಲ್ಲಿ ಹೀರೊ ಮೊಟೊಕಾರ್ಪ್ ಸಂಸ್ಥೆಯು 67,374 ಪ್ಯಾಷನ್ ಬೈಕ್‌ಗಳನ್ನ ಮಾರಾಟ ಮಾಡಿದ್ದು, ಹೀರೋ ಪ್ಯಾಷನ್ ಬೈಕ್‌ಗಳು 97ಸಿಸಿ ಎಂಜಿನ್‌ನೊಂದಿಗೆ ಪ್ರೊ, ಪ್ರೋ110 ಮತ್ತು 109ಸಿಸಿ ಎಂಜಿನ್ ಸಾಮರ್ಥ್ಯದ ಎಕ್ಸ್ ಪ್ರೊ ಎಂಬ ಮೂರು ಬಗೆಗಳಲ್ಲಿ ಖರೀದಿಗೆ ಲಭ್ಯವಿವೆ.

MOST READ: ಮಾಡಿಫೈ ಬೈಕ್ ಸವಾರರಿಗೆ ಭಿಕ್ಷುಕರ ವೇಷದಲ್ಲಿ ಬಂದು ಶಾಕ್ ಕೊಟ್ಟ ಪೊಲೀಸರು.. !

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

08. ಬಜಾಜ್ ಪ್ಲಾಟಿನಾ

ಪ್ರತಿ ಲೀಟರ್‌ಗೆ 80 ಕೀ.ಮೀ. ಮೈಲೇಜ್ ನೀಡಬಲ್ಲ ಸಾಮರ್ಥ್ಯ ಹೊಂದಿರುವ ಬಜಾಜ್ ಪ್ಲಾಟಿನಾ ಬೈಕ್ ಈ ಬಾರಿ ಗ್ರಾಹಕರ ಆಕರ್ಷಣೆಯಾಗಿದ್ದು, ಫೆಬ್ರುವರಿ ಅವಧಿಯಲ್ಲಿ 53,044 ಯುನಿಟ್ ಮಾರಾಟದೊಂದಿಗೆ 8ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

09. ಟಿವಿಎಸ್ ಜೂಪಿಟರ್

ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಬಹುತೇಕ ದ್ವಿಚಕ್ರ ವಾಹನಗಳ ಖರೀದಿದಾರರು ಬೈಕ್ ಮಾದರಿಗಳಿಂತ ಹೆಚ್ಚು ಸ್ಕೂಟರ್ ಆಯ್ಕೆ ಹೆಚ್ಚು ಒಲವು ತೊರುತ್ತಿದ್ದು, ಇದೇ ಕಾರಣಕ್ಕೆ ಆಕ್ಟಿವಾಗೆ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿದೆ. ತದನಂತರ ಸ್ಕೂಟರ್ ಮಾದರಿಗಳಲ್ಲಿ ಅತಿ ಹೆಚ್ಚು ಪಡೆದಿರುವ ಜೂಪಿಟರ್ ಮಾದರಿಯು ಫೆಬ್ರುವರಿಯಲ್ಲಿ 48,688 ಯುನಿಟ್‌ಗಳು ಮಾರಾಟವಾಗಿವೆ.

MOST READ: ಬೆಂಕಿಯಲ್ಲಿ ಸುಟ್ಟು ಕರಕಲಾದವು ಸಾವಿರಾರು ಕೋಟಿ ಮೌಲ್ಯದ 2 ಸಾವಿರ ಐಷಾರಾಮಿ ಕಾರುಗಳು!

ಫೆಬ್ರುವರಿ ತಿಂಗಳ ಟಾಪ್ 10 ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಹೀರೋ ಮತ್ತೆ ಮೇಲುಗೈ

10. ಸುಜುಕಿ ಆಕ್ಸೆಸ್

ಸುಜುಕಿ ನಿರ್ಮಾಣದ ಜನಪ್ರಿಯ ಸ್ಕೂಟರ್ ಮಾದರಿಗಳಲ್ಲಿ ಒಂದಾಗಿರುವ ಆಕ್ಸೆಸ್ ಆವೃತ್ತಿಯು ಹೆಚ್ಚು ಮೈಲೇಜ್‌ನೊಂದಿಗೆ ಉತ್ತಮ ಬೇಡಿಕೆ ಕಾಯ್ದುಕೊಂಡಿದ್ದು, ಫೆಬ್ರವರಿ ಅವಧಿಯಲ್ಲಿ 48,265 ಯುನಿಟ್‌ಗಳು ಮಾರಾಟವಾಗಿವೆ.

Most Read Articles

Kannada
English summary
Top 10 selling two-wheelers in February. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X