ಲಾಕ್‌ಡೌನ್ ವಿನಾಯ್ತಿ ನಂತರ 10 ಹೊಸ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಲಾಕ್‌ಡೌನ್ ವಿನಾಯ್ತಿ ನಂತರ ಬಹುತೇಕ ಆಟೋ ಉತ್ಪಾದನಾ ಚಟುವಟಿಕೆ ಪುನಾರಂಭಗೊಂಡಿದ್ದು, ಬೆಂಗಳೂರು ಮೂಲದ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿ ಆಂಪಿಯರ್ ಕೂಡಾ ಸ್ಕೂಟರ್ ಮಾರಾಟಕ್ಕೆ ಮರುಚಾಲನೆ ನೀಡುವ ಮೂಲಕ 10 ಹೊಸ ಶೋರೂಂಗಳಿಗಳಿಗೂ ಗ್ರೀನ್ ಸಿಗ್ನಲ್ ನೀಡಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳು 2030ಕ್ಕೆ ಶೇ.100ರಷ್ಟು ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳನ್ನು ರಸ್ತೆಗಿಳಿಸುವ ಯೋಜನೆ ಹೊಂದಿದ್ದು, ಭವಿಷ್ಯದ ಗುರಿಗಾಗಿ ಈಗಿನಿಂದಲೇ ಹಲವಾರು ಕಠಿಣ ಕ್ರಮಗಳ ಮೂಲಕ ಹಂತ-ಹಂತವಾಗಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ತಗ್ಗಿಸಲಾಗುತ್ತಿದೆ. ಹೀಗಾಗಿ ಹೊಸ ಎಲೆಕ್ಟ್ರಿಕ್ ವಾಹನ ಬಿಡುಗಡೆ ಯೋಜನೆಗಳತ್ತ ಬಹುತೇಕ ಆಟೋ ಕಂಪನಿಗಳು ಭಾರೀ ಹೂಡಿಕೆ ಮಾಡುತ್ತಿದ್ದು, ಆಂಪಿಯೆರ್ ಕೂಡಾ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಫೇಮ್ 2 ಯೋಜನೆ ಅಡಿಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡುವ ಆಟೋ ಕಂಪನಿಗಳಿಗೆ ಮಾತ್ರವಲ್ಲದೇ ಎಲೆಕ್ಟ್ರಿಕ್ ವಾಹನ ಖರೀದಿಸುವ ಗ್ರಾಹಕರಿಗೂ ಕೂಡಾ ಆಕರ್ಷಕ ಸಬ್ಸಡಿ, ತೆರಿಗೆ ವಿನಾಯ್ತಿ, ಅತಿ ಕಡಿಮೆ ಜಿಎಸ್‌ಟಿ ಸೌಲಭ್ಯಗಳನ್ನು ನೀಡುತ್ತಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಮಾದರಿಯ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲು ಆಂಪಿಯರ್ ಕಂಪನಿಯು ಸಿದ್ದವಾಗಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಆಂಪಿಯರ್ ಕಂಪನಿಯು ಇದುವರೆಗೆ 60 ಸಾವಿರ ಇವಿ ಸ್ಕೂಟರ್ ಮಾರಾಟ ಮಾಡಿದ್ದು, 200ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ಮಾರಾಟ ಜಾಲವನ್ನು ಹೊಂದಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಆಂಪಿಯರ್ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವುದರಿಂದ ಅಧಿಕೃತ ಮಾರಾಟ ಮಳಿಗೆಗಳಿಗಾಗಿ ಸುಮಾರು 900 ಹೊಸ ಅರ್ಜಿಗಳು ಸಲ್ಲಿಕೆಯಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಳಿಗೆಗಳಿಗೆ ಚಾಲನೆ ನೀಡಲು ಯೋಜನೆ ರೂಪಿಸಲಾಗಿದೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಆಂಪಿಯರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ ರಿಯೋ, ವಿ48, ಜೀಲ್, ರಿಯೋ ಎಲೈಟ್, ಮಾಗ್ನಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಕಳೆದ ವಾರವಷ್ಟೇ ಹೊಸದಾಗಿ ಮಾಗ್ನಸ್ ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಬಿಡುಗಡೆ ಮಾಡಿದೆ.

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಹೊಸ ಆಂಪಿಯರ್ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.73,990 ಗಳಾಗಿದ್ದು, ಹೊಸ ಸ್ಕೂಟರ್ ಮಾದರಿಯು ಸದ್ಯಕ್ಕೆ ಬೆಂಗಳೂರಿನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

10 ಹೊಸ ಮಾರಾಟಮಳಿಗೆಗಳಿಗೆ ಚಾಲನೆ ನೀಡಿದ ಆಂಪಿಯರ್

ಹೊಸ ಮ್ಯಾಗ್ನಸ್ ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು 60ವಿ, 30ಎಹೆಚ್ ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್‌ನೊಂದಿಗೆ 1.2 ಕಿ.ವ್ಯಾಟ್ ಎಲೆಕ್ಟ್ರಿಕ್ ಮೋಟರ್‌ನೊಂದಿಗೆ ಜೋಡಿಸಲ್ಪಟ್ಟಿದ್ದು, ಈ ಹೊಸ ಎಲೆಕ್ಟ್ರಿಕ್ ಸ್ಕೂಟರಿನಲ್ಲಿರುವ ಬ್ಯಾಟರಿಯನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ 55 ಕಿ.ಮೀ ಟಾಪ್ ಸ್ಪೀಡ್‌ನೊಂದಿಗೆ ಗರಿಷ್ಠ 80ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

Most Read Articles

Kannada
English summary
Ampere Electric Opens 10 New Dealerships During Unlock 1.0. Read in Kannada.
Story first published: Saturday, June 20, 2020, 22:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X