ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಎಲೆಕ್ಟ್ರಿಕ್ ಸ್ಕೂಟರ್ ತಯಾರಕ ಕಂಪನಿಯಾದ ಎಥರ್ ಎನರ್ಜಿ, ಎಥರ್ 450 ಸ್ಕೂಟರಿಗಾಗಿ ಹೊಸ ಒಟಿಎ ಅಪ್‌ಡೇಟ್ ಅನ್ನು ಬಿಡುಗಡೆಗೊಳಿಸಿದೆ. ಈ ಅಪ್‌ಡೇಟ್ ಡಾರ್ಕ್ ಥೀಮ್ ಹೊಂದಿದ್ದು ರೈಡಿಂಗ್ ಅನುಭವವನ್ನು ಹೆಚ್ಚಿಸಲಿದೆ. ಡಾರ್ಕ್ ಥೀಮ್ ಅಪ್‌ಡೇಟ್ ಹೊಂದಿರುವ ಈಥರ್ನ್ ಇನ್ಸ್‌ಟ್ರೂಮೆಂಟ್ ಕನ್ಸೋಲ್ ರಾತ್ರಿ ವೇಳೆಯ ಸಂಚಾರವನ್ನು ಸುಲಭಗೊಳಿಸಲಿದೆ.

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಸೆಟ್ಟಿಂಗ್‌ ಮೂಲಕ ಡಾರ್ಕ್ ಥೀಮ್‌ಗಳನ್ನು ಆಕ್ಟಿವೇಟ್ ಅಥವಾ ಡಿಆಕ್ಟಿವೇಟ್ ಮಾಡಬಹುದು. ಇನ್ಸ್‌ಟ್ರೂಮೆಂಟ್ ಕನ್ಸೋಲ್‌ನಲ್ಲಿರುವ ಟಚ್ ರೆಸ್ಪಾನ್ಸ್ ಅನ್ನು ಹೆಚ್ಚಿಸಲಾಗಿದ್ದು, ಮೊದಲಿಗಿಂತ ಸುಲಭವಾಗಿ ರೈಡಿಂಗ್ ಮೋಡ್ ಅನ್ನು ಬದಲಿಸಬಹುದು. ಗ್ರಾಹಕರು ಡಾರ್ಕ್ ಥೀಮ್‌ಗಳಿಗಾಗಿ ಒತ್ತಾಯಿಸುತ್ತಿದ್ದ ಕಾರಣ ಕಂಪನಿಯು ಈ ಬಾರಿಯ ಅಪ್‌ಡೇಟ್‌ನಲ್ಲಿ ಡಾರ್ಕ್ ಥೀಮ್‌ಗಳನ್ನು ಸೇರಿಸಿದೆ.

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಆಗಿ ಡಾರ್ಕ್ ಥೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮ್ಯಾನುವಲ್‌ ಮೋಡ್‌ನಲ್ಲಿ ಯಾವುದೇ ಸಮಯದಲ್ಲಿ ಡಾರ್ಕ್ ಮೋಡ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಆದರೆ ಆಟೋಮ್ಯಾಟಿಕ್ ಮೋಡ್‌ನಲ್ಲಿ ಸಂಜೆ 6ರಿಂದ ಬೆಳಿಗ್ಗೆ 6ರವರೆಗೆ ಮಾತ್ರ ಡಾರ್ಕ್ ಥೀಮ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಡಾರ್ಕ್ ಥೀಮ್, ಕತ್ತಲು ಹಾಗೂ ಕಡಿಮೆ ಬೆಳಕಿನಲ್ಲಿ ಕಣ್ಣುಗಳ ಮೇಲೆ ಯಾವುದೇ ಒತ್ತಡವನ್ನು ಬೀರುವುದಿಲ್ಲ. ಇದರಿಂದಾಗಿ ಸವಾರನು ಕಡಿಮೆ ಬೆಳಕಿನಲ್ಲಿಯೂ ಸ್ಕೂಟರ್ ಅನ್ನು ಸುಲಭವಾಗಿ ಚಾಲನೆ ಮಾಡಬಹುದೆಂದು ಕಂಪನಿಯು ಹೇಳಿದೆ.

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಎಥರ್ ಎನರ್ಜಿ ಕಂಪನಿಯು, ಎಥರ್ 450 ಎಲೆಕ್ಟ್ರಿಕ್ ಸ್ಕೂಟರ್ ಅನ್ನು 2017ರಲ್ಲಿ ಬಿಡುಗಡೆಗೊಳಿಸಿತು. ಇದರ ಹೊಸ ಮಾದರಿಯಾದ ಎಥರ್ 450 ಎಕ್ಸ್ ಅನ್ನು ಈ ವರ್ಷದ ಜನವರಿಯಲ್ಲಿ ಬಿಡುಗಡೆಗೊಳಿಸಲಾಗಿದೆ. ಕಂಪನಿಯು ಸದ್ಯಕ್ಕೆ ಬೆಂಗಳೂರು ಹಾಗೂ ಚೆನ್ನೈ ನಗರಗಳಲ್ಲಿ ಈ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಎಥರ್ ಎನರ್ಜಿ ಕಂಪನಿಯು, ಈ ವರ್ಷ ತನ್ನ ಸ್ಕೂಟರ್‌ಗಳನ್ನು ಮುಂಬೈ, ದೆಹಲಿ, ಪುಣೆ, ಹೈದರಾಬಾದ್, ಕೊಯಮತ್ತೂರು, ಕೊಚ್ಚಿ, ಅಹಮದಾಬಾದ್ ಹಾಗೂ ಕೋಲ್ಕತ್ತಾ ನಗರಗಳಲ್ಲಿ ಬಿಡುಗಡೆಗೊಳಿಸಲಿದೆ. ಲಾಕ್‌ಡೌನ್ ವಿನಾಯಿತಿ ಹಿನ್ನೆಲೆಯಲ್ಲಿ ಎಥರ್ ಕಂಪನಿಯು ತನ್ನ ಬೆಂಗಳೂರು ಹಾಗೂ ಚೆನ್ನೈ ಘಟಕಗಳಲ್ಲಿ ಉತ್ಪಾದನೆಯನ್ನು ಪುನರಾರಂಭಿಸಿದೆ.

ಕತ್ತಲ ಸಂಚಾರವನ್ನು ಸುಲಭಗೊಳಿಸಲಿದೆ ಎಥರ್‌ನ ಈ ಹೊಸ ಅಪ್‌ಡೇಟ್

ಜೊತೆಗೆ ಶೋರೂಂಗಳನ್ನು ತೆರೆದಿದ್ದು, ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದೆ. ಎಥರ್ ಕಂಪನಿಯು ತನ್ನ ಸ್ಕೂಟರ್‌ಗಳನ್ನು ಮಾಸಿಕ ಚಂದಾದಾರಿಕೆಯಡಿಯಲ್ಲಿ ಮಾರಾಟ ಮಾಡುತ್ತದೆ. ಎಥರ್ ಸ್ಕೂಟರ್‌ಗಳನ್ನು ಮಾಸಿಕ ರೂ.700ಗಳ ಚಂದಾದಾರಿಕೆ ಯೋಜನೆಯಡಿ ಖರೀದಿಸಬಹುದು.

Most Read Articles

Kannada
English summary
Ather 450 Electric Scooter gets new dark theme update. Read in Kannada.
Story first published: Friday, June 19, 2020, 14:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X