450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಬೆಂಗಳೂರು ಮೂಲದ ಇವಿ ಸ್ಕೂಟರ್ ಉತ್ಪಾದನಾ ಕಂಪನಿಯಾದ ಎಥರ್ ಎನರ್ಜಿಯು ಶೀಘ್ರದಲ್ಲೇ ತನ್ನ ಹೊಸ ಇವಿ ಸ್ಕೂಟರ್ ಮಾದರಿಯಾದ 450ಎಕ್ಸ್ ವಿತರಣೆಯನ್ನು ಆರಂಭಿಸುವ ಸಿದ್ದತೆಯಲ್ಲಿದ್ದು, ಇದಕ್ಕೂ ಮುನ್ನ ಆಸಕ್ತ ಗ್ರಾಹಕರಿಗಾಗಿ ಟೆಸ್ಟ್ ರೈಡ್ ಆರಂಭಿಸುತ್ತಿದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸುವುದಕ್ಕೂ ಮುನ್ನವೇ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ್ದ ಎಥರ್ ಕಂಪನಿಯು ಲಾಕ್‌ಡೌನ್ ಅವಧಿ ವಿಸ್ತರಣೆಗೊಂಡ ಪರಿಣಾಮ ಸ್ಕೂಟರ್ ವಿತರಣೆಗೆ ಬ್ರೇಕ್ ಹಾಕಿತ್ತು. ನಂತರ ಮಾರುಕಟ್ಟೆ ಸುಧಾರಣೆಗೊಳ್ಳುವ ತನಕ ಹೊಸ ಸ್ಕೂಟರ್ ವಿತರಣೆ ಮಾಡದಿರಲು ನಿರ್ಧರಿಸಿದ್ದ ಎಥರ್ ಎನರ್ಜಿ ಕಂಪನಿಯು ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ಸ್ಕೂಟರ್ ವಿತರಣಗೆ ಸಿದ್ದವಾಗಿದ್ದು, ಇದಕ್ಕೂ ಮುನ್ನ ಸುರಕ್ಷಾ ಕ್ರಮಗಳೊಂದಿಗೆ ಟೆಸ್ಟ್ ರೈಡ್ ಆರಂಭಿಸುವ ಸಿದ್ದತೆ ನಡೆಸಿದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಸದ್ಯ ಬೆಂಗಳೂರು ಮತ್ತು ಚೆನ್ನೈನಲ್ಲಿ ಮಾತ್ರ ಮಾರಾಟ ಸೌಲಭ್ಯವನ್ನು ಹೊಂದಿರುವ ಎಥರ್ ಕಂಪನಿಯು ಇದೇ ವರ್ಷಾಂತ್ಯಕ್ಕೆ ಪ್ರಮುಖ 9 ನಗರಗಳಲ್ಲಿ ಹೊಸದಾಗಿ ಮಾರಾಟ ಮಳಿಗೆಗಳಿಗೆ ಚಾಲನೆ ನೀಡುತ್ತಿದ್ದು, 450ಎಕ್ಸ್ ಮಾದರಿಯೊಂದಿಗೆ ಭರ್ಜರಿ ಬೇಡಿಕೆ ಪಡೆದುಕೊಳ್ಳುವ ತವಕದಲ್ಲಿದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

450ಎಕ್ಸ್ ಮಾದರಿಯು ಸ್ಟ್ಯಾಂಡರ್ಡ್ ಮಾದರಿಯಾದ 450 ಎಲೆಕ್ಟ್ರಿಕ್ ಸ್ಕೂಟರ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಹೈ ಪರ್ಫಾಮೆನ್ಸ್ ಹೊಂದಿದ್ದು, ಗ್ರಾಹಕರ ಬೇಡಿಕೆಯೆಂತೆ ಪ್ಲಸ್ ಮತ್ತು ಪ್ರೊ ಎನ್ನುವ ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಪ್ಯಾನ್ ಇಂಡಿಯಾ ಪ್ರಕಾರ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.99 ಸಾವಿರ ಬೆಲೆ ಹೊಂದಿದ್ದು, ಜೊತೆಗೆ ಹೊಸ ಸ್ಕೂಟರ್ ಖರೀದಿಸುವ ಗ್ರಾಹಕರು ಮಾಸಿಕ ಚಂದಾದಾರಿಕೆ ಯೋಜನೆಯಡಿ ಮೂರು ವರ್ಷಗಳ ತನಕ ಬ್ಯಾಟರಿ ಸೌಲಭ್ಯಕ್ಕಾಗಿ 450ಎಕ್ಸ್ ಪ್ಲಸ್ ಮಾದರಿಗೆ ಪ್ರತಿ ತಿಂಗಳು(ರೂ. 1,699) ಮತ್ತು 450ಎಕ್ಸ್ ಪ್ರೊ ಮಾದರಿಗೆ ಪ್ರತಿ ತಿಂಗಳು(ರೂ.1,999) ಪಾವತಿಸಬೇಕು.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಮೈಲೇಜ್ ಮತ್ತು ಪರ್ಫಾಮೆನ್ಸ್

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಮತ್ತು 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಇದು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಪ್ರತಿ ಚಾರ್ಜ್ 10 ಕಿ.ಮೀ ಹೆಚ್ಚುವರಿ ಮೈಲೇಜ್ ಹಿಂದಿರುಗಿಸುವುದಲ್ಲದೇ ಸ್ಕೂಟರ್ ಟಾಪ್ ಸ್ಪೀಡ್ ಕೂಡಾ ಪೆಟ್ರೋಲ್ ಸ್ಕೂಟರ್‌ಗಿಂತಲೂ ಹೆಚ್ಚಿದೆ. ಕೇವಲ 3.3 ಸೇಕೆಂಡುಗಳಲ್ಲಿ ಸೊನ್ನೆಯಿಂದ 40ಕಿ.ಮೀ ವೇಗ ಪಡೆದುಕೊಳ್ಳುವ 450ಎಕ್ಸ್ ಮಾದರಿಯು ಪರ್ಫಾಮೆನ್ಸ್ ಪ್ರಿಯರನ್ನು ಸೆಳೆಯಲಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಹೆಚ್ಚು ಮೈಲೇಜ್ ನೀಡುವ ರೆಟ್ರೊ ಎಲೆಕ್ಟ್ರಿಕ್ ಬೈಕ್ ಬಿಡುಗಡೆ

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಹೆಚ್ಚಿಸಲು ಪೂರಕವಾದ ವಾತಾವರಣವಿದ್ದರೂ ಸಹ ಸಾರ್ವಜನಿಕ ಬಳಕೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳ ಕೊರತೆಯು ಹೊಸ ಎಲೆಕ್ಟ್ರಿಕ್ ವಾಹನಗಳ ಮಾರಾಟವು ತೀವ್ರಗೊಳ್ಳಲು ಹಿನ್ನಡೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಈಗಾಗಲೇ ವಿವಿಧ ಆಟೋ ಉತ್ಪಾದನಾ ಕಂಪನಿಗಳು ಭಾರೀ ಪ್ರಮಾಣದ ಹೂಡಿಕೆಯೊಂದಿಗೆ ಚಾರ್ಜಿಂಗ್ ನಿಲ್ದಾಣಗಳ ನಿರ್ಮಾಣ ಕಾರ್ಯವನ್ನು ಆರಂಭಿಸಿದ್ದು, ಎಥರ್ ಎನರ್ಜಿ ಕಂಪನಿಯು ಸಹ ಇದೇ ವರ್ಷಾಂತ್ಯಕ್ಕೆ ದೇಶದ ಪ್ರಮುಖ ನಗರಗಳಲ್ಲಿ 135ಕ್ಕೂ ಹೊಸ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯಲು ಸಿದ್ದವಾಗಿದೆ.

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಹಾಗೆಯೇ ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 6,500 ಫಾಸ್ಟ್ ಚಾರ್ಜಿಂಗ್ ನಿಲ್ದಾಣ ಹೊಂದುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಎಥರ್ ಕಂಪನಿಯು ವಿವಿಧ ನಗರಗಳಲ್ಲಿ ಆಯಕಟ್ಟಿನ ಸ್ಥಳಗಳನ್ನು ಗುರುತಿಸುತ್ತಿದೆ.

MOST READ: ಭಾರತದಲ್ಲಿಯೂ ಬಿಡುಗಡೆಯಾಗಲಿದೆ ದುಬಾರಿ ಬೆಲೆಯ ಫೋರ್ಜಾ ಮ್ಯಾಕ್ಸಿ ಸ್ಕೂಟರ್

450ಎಕ್ಸ್ ಇವಿ ಸ್ಕೂಟರ್ ವಿತರಣೆಗೂ ಮುನ್ನ ಟೆಸ್ಟ್ ರೈಡ್ ಶುರುಮಾಡಲಿದೆ ಎಥರ್

ಸದ್ಯ ಬೆಂಗಳೂರಿನಲ್ಲಿ 37 ಮತ್ತು ಚೆನ್ನೈ 13 ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ಹೊಂದಿರುವ ಎಥರ್ ಕಂಪನಿಯು ಡಿಸೆಂಬರ್ ಅಂತ್ಯಕ್ಕೆ ದೇಶದ ಪ್ರಮುಖ 9 ನಗರಗಳಲ್ಲಿ 135 ಚಾರ್ಜಿಂಗ್ ನಿಲ್ದಾಣಗಳಿಗೆ ಚಾಲನೆ ಸಿಗುತ್ತಿದೆ.

Most Read Articles

Kannada
English summary
Ather Planning To Start 450x Electric Scooter Test Rides. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X