ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಕಂಪನಿಯು ತನ್ನ ಪಲ್ಸರ್‌ ಬೈಕಿನ ಎಲ್ಲಾ ಮಾದರಿಗಳ ಬೆಲೆಯನ್ನು ರೂ.1000ಗಳಿಂದ ರೂ.1500ಗಳವರೆಗೆ ಹೆಚ್ಚಿಸಿದೆ. ಇತ್ತೀಚೆಗೆ ಬಿಡುಗಡೆಯಾದ ಪಲ್ಸರ್ 125 ಸ್ಪ್ಲಿಟ್ ಸೀಟ್ ಡ್ರಮ್ ಮಾದರಿಯ ಬೆಲೆಯನ್ನೂ ಸಹ ಹೆಚ್ಚಿಸಲಾಗಿದೆ.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬೆಲೆ ಹೆಚ್ಚಳದ ನಂತರ ಪಲ್ಸರ್ 125 ಬೈಕಿನ ವಿವಿಧ ಮಾದರಿಗಳ ಬೆಲೆ ರೂ.72,122ಗಳಿಂದ ರೂ.80,218ಗಳಾಗಿದೆ. ಪಲ್ಸರ್ 150 ಟ್ವಿನ್ ಡಿಸ್ಕ್ ಮಾದರಿಯ ಬೆಲೆ ರೂ.1 ಲಕ್ಷಗಳಾಗಿದೆ. ಪಲ್ಸರ್ 150 ನಿಯಾನ್ ಬೆಲೆ ರೂ.92,627ಗಳಾದರೆ, ಪಲ್ಸರ್ 180 ಎಫ್ ಬೈಕಿನ ಬೆಲೆ ರೂ.1.13 ಲಕ್ಷ ಹಾಗೂ ಪಲ್ಸರ್ 220 ಎಫ್‌ ಬೈಕಿನ ಬೆಲೆ ರೂ.1.23 ಲಕ್ಷಗಳಾಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ದರಗಳಾಗಿವೆ.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಇನ್ನು ಬೆಲೆ ಹೆಚ್ಚಳದ ನಂತರ ಪಲ್ಸರ್ ಎನ್ಎಸ್ 160 ಬೈಕಿನ ಬೆಲೆ ರೂ.1.08 ಲಕ್ಷಗಳಾದರೆ, ಪಲ್ಸರ್ ಎನ್ಎಸ್ 200 ಬೈಕಿನ ಬೆಲೆ ರೂ.1.31 ಲಕ್ಷ ಹಾಗೂ ಪಲ್ಸರ್ ಆರ್ ಎಸ್ 200 ಬೈಕಿನ ಬೆಲೆ ರೂ.1.52 ಲಕ್ಷಗಳಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬೆಲೆ ಹೆಚ್ಚಳದ ನಂತರವೂ ಬಜಾಜ್ ಪಲ್ಸರ್ ಬೈಕಿನ ಬೆಲೆಗಳು ಇತರ ಕಂಪನಿಯ 150-220 ಸಿಸಿ ಬೈಕ್‌ಗಳಿಗಿಂತ ಕಡಿಮೆಯಾಗಿವೆ. ಇದಕ್ಕೆ ಕಾರಣವೆಂದರೆ ಪಲ್ಸರ್ ಬೈಕುಗಳಲ್ಲಿ ಯಾವುದೇ ದೊಡ್ಡ ಮಟ್ಟದ ಬದಲಾವಣೆಯಾಗದೇ ಇರುವುದು.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಕಂಪನಿಯು ಪಲ್ಸರ್ 150, 180 ಹಾಗೂ 220 ಸಿಸಿ ಬೈಕ್‌ಗಳನ್ನು ಸುಮಾರು 20 ವರ್ಷಗಳಿಂದ ಮಾರಾಟ ಮಾಡುತ್ತಿದ್ದು, ಕಾಲ ಕಾಲಕ್ಕೆ ಈ ಬೈಕುಗಳ ವಿನ್ಯಾಸ ಹಾಗೂ ಫೀಚರ್ ಗಳಲ್ಲಿ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡುತ್ತಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಬಜಾಜ್ ಕಂಪನಿಯು ಕೆಲವು ಹೊಸ ಫೀಚರ್ ಗಳೊಂದಿಗೆ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ಹೊಸ ಫೀಚರ್ ಗಳನ್ನು ಹೊಂದಿರುವ ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಮಾದರಿಯ ಬೆಲೆ ಎಕ್ಸ್ ಶೋರೂಂ ದರದಂತೆ ರೂ.51,667ಗಳಾಗಿದೆ.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಈ ಬೈಕ್ ಅನ್ನು ಕಾಕ್ ಟೇಲ್ ವೈನ್ ರೆಡ್ ಹಾಗೂ ಎಬೊನಿ ಬ್ಲ್ಯಾಕ್ ವಿತ್ ಸಿಲ್ವರ್ ಡೆಕಾಲ್ ಎಂಬ ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹೊಸ ಅಪ್ ಡೇಟ್ ಮೂಲಕ ಈ ಬೈಕ್ ಅನ್ನು ಹೆಚ್ಚು ಆಕರ್ಷಕ ಹಾಗೂ ಆರಾಮದಾಯಕವಾಗಿಸಲು ಪ್ರಯತ್ನಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಹೊಸ ಪ್ಲ್ಯಾಟಿನಾ 100 ಕಿಕ್ ಸ್ಟಾರ್ಟ್‌ ಬೈಕಿನಲ್ಲಿ ಸ್ಪ್ರಿಂಗ್ ಆನ್ ಸ್ಪ್ರಿಂಗ್ ನೈಟ್ರಾಕ್ಸ್ ಸಸ್ಪೆಂಷನ್ ನೀಡಲಾಗುತ್ತದೆ. ಈ ಹೊಸ ಸಸ್ಪೆಂಷನ್ ನೊಂದಿಗೆ ಬೈಕ್ ಸವಾರಿಯು 15%ನಷ್ಟು ಹೆಚ್ಚು ಆರಾಮದಾಯಕವಾಗಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಈ ಸಸ್ಪೆಂಷನ್ ರಸ್ತೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದು, ಹಳೆಯ ಸಸ್ಪೆಂಷನ್ ಗಿಂತ ಬೈಕಿಗೆ ಹೆಚ್ಚಿನ ಬ್ಯಾಲೆನ್ಸ್ ಅನ್ನು ನೀಡುತ್ತದೆ. ಈ ಬೈಕಿನಲ್ಲಿರುವ ಸಸ್ಪೆಂಷನ್ ಗಾತ್ರವನ್ನು 20%ನಷ್ಟು ಹೆಚ್ಚಿಸಲಾಗಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಇದರಿಂದಾಗಿ ಹದಗೆಟ್ಟ ರಸ್ತೆಗಳಲ್ಲಿ ಈ ಬೈಕ್ ಅನ್ನು ಸವಾರಿ ಮಾಡುವಾಗ ಕಡಿಮೆ ವೈಬ್ರೇಷನ್ ಉಂಟಾಗುತ್ತದೆ. ಪಂಕ್ಚರ್ ಆಗುವುದನ್ನು ತಪ್ಪಿಸಲು, ಈ ಬೈಕ್‌ನಲ್ಲಿ ಟ್ಯೂಬ್‌ಲೆಸ್ ಟಯರ್‌ಗಳನ್ನು ನೀಡಲಾಗಿದೆ.

ಪಲ್ಸರ್ ಬೈಕುಗಳ ಬೆಲೆ ಏರಿಕೆ ಮಾಡಿದ ಬಜಾಜ್

ಪ್ಲಾಟಿನಾ 100 ಕಿಕ್ ಸ್ಟಾರ್ಟ್ ಹೊಸ ಮಾದರಿಯ ಸೀಟ್ ಅನ್ನು ಹೊಂದಿದೆ. ಈ ಸೀಟ್ ಹೆಚ್ಚಿನ ಗ್ರಿಪ್ ಅನ್ನು ಹೊಂದಿದೆ. ಬಜಾಜ್ ಕಂಪನಿಯು ಈ ಬೈಕಿನಲ್ಲಿ ಎಲ್‌ಇಡಿ ಹೆಡ್‌ಲೈಟ್ ಅನ್ನು ಅಳವಡಿಸಿದೆ. ಜೊತೆಗೆ ಎಲ್ಇಡಿ ಡಿಆರ್ ಎಲ್ ಲೈಟ್ ಸಹ ನೀಡಲಾಗಿದೆ.

Most Read Articles

Kannada
English summary
Bajaj increases price of pulsar range bikes. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X