ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಜನಪ್ರಿಯ ಬಜಾಜ್ ಪಲ್ಸರ್ ಮಾದರಿಯ 18ನೇ ಆನಿವರ್ಸರಿ ಪ್ರಯುಕ್ತ ಬಜಾಜ್ ಆಟೋ ಕಂಪನಿಯು 'ಪಲ್ಸರ್ ಸೆಲೆಬ್ರೇಟಿಂಗ್ 18 ಇಯರ್ಸ್ ಆಫ್ ಥ್ರಿಲ್' ಎಂಬ ಹೊಸ ಟಿಲಿವಿಷನ್ ಜಾಹೀರಾತನ್ನು ಬಿಡುಗಡೆ ಮಾಡಿದೆ. ಪಲ್ಸರ್ ಬೈಕ್ ಅನ್ನು ಸುಮಾರು ಎರಡು ದಶಕಗಳ ಹಿಂದೆ ಸುಮಾರು 2001ರ ನವೆಂಬರ್ 24ರಂದು ಪ್ರಾರಂಭಿಸಿದ್ದರು.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಹೊಸ ಟಿವಿಸಿ ವೀಡಿಯೋದಲ್ಲಿ ಬಜಾಜ್ ಪಲ್ಸರ್ ರೋಮಾಂಚನಕಾರಿಯಾಗಿ ಪಲ್ಸರ್ ಬೈಕ್ ಅನ್ನು ತೋರಿಸಲಾಗಿದೆ. ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಬಜಾಜ್ ಪಲ್ಸರ್ ಎನ್ಎಸ್ 200 ಬೈಕ್ ಬಿಎಸ್-6 ಮಾದರಿಯಾಗಿದೆ. ಪಲ್ಸರ್ ಸರಣಿಯಲ್ಲಿ ಬಿಎಸ್-6 ಎಂಜಿನ್ ಅನ್ನು ಹೊಂದಲಿರುವ ಮೊದಲ ಮಾದರಿಯಾಗಿದೆ.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

2014ರಲ್ಲಿ ಆರಂಭವಾದಾಗಿನಿಂದ ಬಜಾಜ್ ಎನ್ಎಸ್ 200 ಸಣ್ಣ ನವೀಕರಣಗಳನ್ನು ನಡೆಸುತ್ತಿದೆ. ಈ ವರ್ಷ ಅತಿದೊಡ್ಡ ನವೀಕರಣವು ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಿರುವುದಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ಕೆಲವು ನವೀಕರಣಗಳನ್ನು ಮಾಡಲಾಗಿದೆ.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಬಿಎಸ್-4 ಎಂಜಿನ್ ಬಜಾಜ್ ಪಲ್ಸರ್ ಎನ್‍ಎಸ್ 200 ಬೈಕ್ 199.5 ಲಿಕ್ವಿಡ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 23 ಬಿ‍‍ಹೆಚ್‍ಪಿ ಪವರ್ ಮತ್ತು 18.3 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಕಾರ್ಬ್ಯುರೇಟರ್‍‍ನಿಂದ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಪ್‍‍ಗ್ರೇಡ್ ಮಾಡುವುದರಿಂದ ಪವರ್ ಮತ್ತು ಟಾರ್ಕ್ ಅಂಕಿ ಅಂಶಗಳ ಇಳಿಕೆ ಕಂಡುಬರಬಹುದು.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಪ್ರಸ್ತುತ ತಲೆಮಾರಿನ ಬಜಾಜ್ ಪಲ್ಸರ್ ಎನ್‍ಎಸ್ 200 ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.1.14 ಲಕ್ಷಗಳಾಗಿದೆ. ಬಿಎಸ್-6 ಬಜಾಜ್ ಪಲ್ಸರ್ 200 ಬೈಕಿಗೆ ಸುಮಾರು 8 ಸಾವಿರದಿಂದ 10 ಸಾವಿರದವರೆಗೆ ಬೆಲೆಯು ಹೆಚ್ಚಿರಲಿದೆ.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಬಜಾಜ್ ಪಲ್ಸರ್ 150ಸಿಸಿ ಮತ್ತು 180ಸಿಸಿ ಅನ್ನು 2001ರ ನವೆಂಬರ್‍‍ನಲ್ಲಿ ಬಿಡುಗಡೆಗೊಳಿಸಿತ್ತು. ಈ ಮಾದರಿಗಳು ಕ್ರಮವಾಗಿ 12 ಬಿ‍‍ಹೆಚ್‍‍ಪಿ ಪವರ್ ಮತ್ತು 15 ಬಿಹೆಚ್‍‍ಪಿ ಪವರ್ ಅನ್ನು ಉತ್ಪಾದಿಸುತ್ತದೆ. 18 ಲೀಟರ್ ಪ್ಯೂಯಲ್ ಟ್ಯಾಂಕ್ ಅನ್ನು ಹೊಂದಿರುತ್ತದೆ.

ಈ ಪಲ್ಸರ್ ಮಾದರಿಗಳು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚು ಯಶ್ವಸಿಗಳಿಸಿದ ಬಳಿಕ ಬಜಾಜ್ ಆಟೋ ಸತತವಾಗಿ ಹೆಚ್ಚಿನ ಪಲ್ಸರ್ ಮಾದರಿಗಳನ್ನು ಬಿಡುಗಡೆಗೊಳಿಸಿದರು. ಪಲ್ಸರ್ ಸರಣಿಯಲ್ಲಿ 125 ಸಿಸಿ ಇಂದ 220 ಸಿಸಿ ನಡುವಿನ ಬೈಕ್‍‍ಗಳನ್ನು ಒಳಗೊಂಡಿದೆ. ಪಲ್ಸರ್ ಸರಣಿಯಲ್ಲಿ ಪ್ರಸ್ತುತ ಡಿಟಿಎಸ್-ಐ ಸೀರಿಸ್, ಎನ್‍ಎಸ್ ಸೀರಿಸ್ ಮತ್ತು ಆರ್‍ಎಸ್ ಸೀರಿಸ್ ಅಡಿಯಲ್ಲಿ ಲಭ್ಯವಿದೆ.

ಬಜಾಜ್ ಪಲ್ಸರ್ 18ನೇ ಆನಿವರ್ಸರಿಗೆ ಸ್ಪೆಷಲ್ ಎಡಿಷನ್ ಟಿವಿಸಿ ಬಿಡುಗಡೆ

ಬಜಾಜ್ ಆಟೋ ಅವರ ಹೊಸ ಟಿವಿ‍ಸಿ ವೀಡಿಯೋ ಅದ್ಬುತವಾಗಿದೆ. ಬಜಾಜ್ ಪಲ್ಸರ್ ಸರಣಿಯ ಬೈಕ್‍‍ಗಳ ಜನಪ್ರಿಯತೆ ಕಳೆದುಕೊಂಡಿಲ್ಲ. ಹೆಚ್ಚಿನ ಯುವಕರಿಗೆ ಇಂದಿಗೂ ಪಲ್ಸರ್ ಬೈಕ್‍‍ಗಳ ಕ್ರೇಜ್ ಇದೆ. ಹೊಸ ಬಿಎಸ್-6 ಪಲ್ಸರ್ ಎನ್‍ಎಸ್ 200 ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಕೆಟಿಎಂ ಡ್ಯೂಕ್ 200 ಮತ್ತು ಟಿವಿಎಸ್ ಅಪಾಚೆ ಆರ್‍‍ಟಿಆರ್ 200 ವಿ 4 ಬೈಕುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
Bajaj Pulsar NS200 BS6 Model Featured In ‘Pulsar Celebrating 18 Years Of Thrill’ TVC - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X