ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಬೆನೆಲ್ಲಿ ಕಂಪನಿಯು ಭಾರತದಲ್ಲಿ ಮಾರಾಟ ಮಳಿಗೆಗಳನ್ನು ವಿಸ್ತರಣಾ ಯೋಜನೆಗೆ ರೂಪಿಸಲಾಗಿದ್ದು, ದೇಶದ ಪ್ರಮುಖ ನಗರಗಳಲ್ಲಿ ಹಂತ-ಹಂತವಾಗಿ ಹೊಸ ಮಳಿಗೆಗಳಿಗೆ ಚಾಲನೆ ನೀಡಲಿದೆ. ದೇಶಾದ್ಯಂತ ಕೆಲವೇ ನಗರಗಳಲ್ಲಿ ಮಾರಾಟ ಮಳಿಗೆ ಹೊಂದಿರುವ ಬೆನೆಲ್ಲಿ ಕಂಪನಿಯು ಇದೀಗ 29ನೇ ಮಾರಾಟ ಮಳಿಗೆಗಳಿಗೆ ಶುರು ಮಾಡಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಉದಯಪುರ್‌ದ ಶೋಭಾಗ್‌ಪುರ್‌ದಲ್ಲಿ ತನ್ನ ಹೊಸ ಬೈಕ್ ಮಾರಾಟ ಮಳಿಗೆಯನ್ನು ತೆರೆದಿರುವ ಬೆನೆಲ್ಲಿ ಕಂಪನಿಯು ಒಂದೇ ಸೂರಿನಡಿ ಮಾರಾಟ ಮಳಿಗೆ ಮತ್ತು ಸರ್ವಿಸ್ ಸೆಂಟರ್ ಅನ್ನು ಆರಂಭಿಸಲಾಗಿದ್ದು, ಹೊಸ ಶೋರೂಂನಲ್ಲಿ ಟಿಆರ್‌ಕೆ 502, ಟಿಆರ್‌ಕೆ 505 ಎಕ್ಸ್, ಲಿಯೊನ್ಸಿನೊ 500, 302 ಎಸ್, 302 ಆರ್ ಮತ್ತು ಇತ್ತೀಚೆಗೆ ಬಿಡುಗಡೆಯಾದ ಇಂಪೀರಿಯರ್ 400 ಬಿಎಸ್-6 ಮಾದರಿಯು ಖರೀದಿಗೆ ಲಭ್ಯವಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಭಾರತದಲ್ಲಿ ಸದ್ಯ ಮಾಹಾವೀರ್ ಗ್ರೂಪ್ ಜೊತೆಗೂಡಿ ಕಾರ್ಯನಿರ್ವಹಿಸುತ್ತಿರುವ ಬೆನೆಲ್ಲಿ ಕಂಪನಿಯು ಮಧ್ಯಮ ಕ್ರಮಾಂಕದ ಸ್ಟ್ರೀಟ್ ಬೈಕ್ ಮಾದರಿಗಳೊಂದಿಗೆ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟಕ್ಕೂ ಹೆಚ್ಚಿನ ಒತ್ತು ನೀಡುತ್ತಿದ್ದು, ಇಂಪೀರಿಯಲ್ 400 ನಂತರ ನಂತರ ಮತ್ತಷ್ಟು ಹೊಸ ಬೈಕ್ ಮಾದರಿಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಎಪ್ರಿಲ್ 1ರಿಂದ ಜಾರಿಗೆ ಬಂದಿರುವ ಹೊಸ ಬಿಎಸ್-6 ಎಮಿಷನ್‌ ನಿಯಮಾವಳಿ ಪ್ರಕಾರ ತನ್ನ ಪ್ರಮುಖ ಬೈಕ್ ಮಾದರಿಗಳನ್ನು ಉನ್ನತೀಕರಿಸಿರುವ ಬೆನೆಲ್ಲಿ ಕಂಪನಿಯು ಇಂಪೀರಿಯರ್ 400 ಬೈಕ್ ಮಾದರಿಯ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಹೊಸ ಬೆನೆಲ್ಲಿ ಇಂಪೀರಿಯೇಲ್ 400 ಆರಂಭಿಕ ಬೆಲೆಯು ಭಾರತದಲ್ಲಿ ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.99 ಲಕ್ಷಗಳಾಗಿದ್ದು, ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಹೊಸ ಬೈಕ್ ಮಾದರಿಯು ಕ್ಲಾಸಿಕ್ ಬೈಕ್ ಪ್ರಿಯರನ್ನು ಸೆಳೆಯುತ್ತಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಬಿಎಸ್-6 ಬೆನೆಲ್ಲಿ ಇಂಪೀರಿಯಲ್ 400 ಬೈಕ್ ಮಾದರಿಯು 374-ಸಿಸಿ ಸಿಂಗಲ್-ಸಿಲಿಂಡರ್ ಏರ್-ಕೂಲ್ಡ್ ಎಂಜಿನ್‌‌ನೊಂದಿಗೆ ಅತ್ಯುತ್ತಮ ಪರ್ಫಾಮೆನ್ಸ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 20-ಬಿಎಚ್‌ಪಿ, 29-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

MOST READ: ಬಜಾಜ್ ಅವೆಂಜರ್‌ಗೆ ಪೈಪೋಟಿಯಾಗಿ ಟಿವಿಎಸ್ ರೊನಿನ್ ಬಿಡುಗಡೆಗೆ ಸಿದ್ದತೆ

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಬಿಎಸ್-4 ಮಾದರಿಗಿಂತಲೂ ಬೆಲೆಯಲ್ಲಿ ರೂ.20 ಸಾವಿರಕ್ಕೂ ಅಧಿಕ ಬೆಲೆ ಹೊಂದಿರುವ ಇಂಪೀರಿಯಲ್ 400 ಮಾದರಿಯು ತಾಂತ್ರಿಕವಾಗಿ ಮತ್ತಷ್ಟು ಬದಲಾವಣೆ ಪಡೆದುಕೊಂಡಿದ್ದು, ಹೊಸ ಬೈಕಿನ ಮುಂಭಾಗದಲ್ಲಿ 19 ಇಂಚಿನ ಹಾಗೂ ಹಿಂಭಾಗದಲ್ಲಿ 18 ಇಂಚಿನ ಟಯರ್‌ಗಳನ್ನು ಹೊಂದಿದೆ.

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಕ್ಲಾಸಿಕ್ ಲುಕ್ ನೀಡುವುದಕ್ಕಾಗಿ ವಿಶೇಷ ವಿನ್ಯಾಸವುಳ್ಳ ಹೆಡ್‌ಲ್ಯಾಂಪ್, ಟ್ವಿನ್ ಪಾಡ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌, ಬೈಕಿನ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್, ಹಿಂಭಾಗದಲ್ಲಿ ಡ್ಯುಯಲ್ ಶಾಕ್ ಅಬ್ಸಾರ್ಬರ್ ಅಳವಡಿಸಲಾಗಿದ್ದು, ಸುರಕ್ಷತೆಗಾಗಿ ಎಬಿಎಸ್, ಡ್ಯುಯಲ್ ಚಾನೆಲ್ ಡಿಸ್ಕ್ ಬ್ರೇಕ್‌ಗಳನ್ನು ನೀಡಲಾಗಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಅತ್ಯಾಧುನಿಕ ಸೌಲಭ್ಯವುಳ್ಳ ಬೆನೆಲ್ಲಿ ಬೈಕ್ ಶೋರೂಂ ಆರಂಭ

ಈ ಮೂಲಕ ಇಂಪೀರಿಯೆಲ್ 400 ಬೈಕ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಜಾವಾ ಮತ್ತು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಮಾದರಿಗಳಿಗೆ ನೇರ ಪೈಪೋಟಿಯನ್ನು ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಬೈಕ್ ಮಾದರಿಗಳು ಮಾರುಕಟ್ಟೆ ಪ್ರವೇಶಿಸಲು ಸಿದ್ದವಾಗಿವೆ.

Most Read Articles

Kannada
English summary
Benelli Launches State-Of-The-Art Dealership In Udaipur. Read in Kannada.
Story first published: Monday, August 17, 2020, 20:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X