ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಬೈಕ್ ಚೈನ್ ನಲ್ಲಿ ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆಯನ್ನು ನಿವಾರಿಸಲು ಮುಂದಾಗಿದೆ. ಬಿಎಂಡಬ್ಲ್ಯು ಕಂಪನಿಯ ಎಂ ಎಂಡ್ಯೂರೆನ್ಸ್ ಚೈನ್ ನಲ್ಲಿ ಮೊದಲೇ ಲೂಬ್ರಿಕಂಟ್ ಆರ್ಮರ್ ಅಳವಡಿಸಿರುವ ಕಾರಣ ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ತಪ್ಪಲಿದೆ.

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಈ ಲೂಬ್ರಿಕಂಟ್ ದೀರ್ಘಕಾಲದವರೆಗೆ ಇರಲಿದ್ದು, ತುಕ್ಕು ಹಿಡಿಯದಂತೆ ಹೊಸ ತಂತ್ರಜ್ಞಾನದಿಂದ ಇದನ್ನು ತಯಾರಿಸಲಾಗಿದೆ. ಈ ಲೂಬ್ರಿಕಂಟ್ ಅನ್ನು ಬಿಎಂಡಬ್ಲ್ಯು ಎಸ್ 1000 ಆರ್ ಆರ್ ಹಾಗೂ ಎಸ್ 1000 ಎಕ್ಸ್ ಆರ್ ಬೈಕ್‌ಗಳಿಗಾಗಿ ಬಿಡುಗಡೆಗೊಳಿಸಲಾಗಿದೆ. ಈಗಾಗಲೇ ಬಿಎಂಡಬ್ಲ್ಯು ಬೈಕುಗಳನ್ನು ಹೊಂದಿರುವವರಿಗೆ ಈ ಲೂಬ್ರಿಕಂಟ್ ಅನ್ನು ಆಯ್ಕೆಯಾಗಿ ನೀಡಲಾಗುವುದು. ಭವಿಷ್ಯದಲ್ಲಿ ಇತರ ಬೈಕ್‌ಗಳಿಗೂ ಸಹ ಎಂ ಎಂಡ್ಯೂರೆನ್ಸ್ ಬಿಡುಗಡೆಗೊಳಿಸಲಾಗುವುದು ಎಂದು ಬಿಎಂಡಬ್ಲ್ಯು ಹೇಳಿದೆ.

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಬಿಎಂಡಬ್ಲ್ಯುನ ಎಂ ಎಂಡ್ಯೂರೆನ್ಸ್ ಸರಣಿಯು ರೋಲರ್‌ ಹಾಗೂ ಎಕ್ಸ್-ರಿಂಗ್ ಗಳಿಂದ ಜೋಡಿಸಲಾದ ಪಿನ್‌ಗಳ ನಡುವೆ ಶಾಶ್ವತವಾದ ಲೂಬ್ರಿಕಂಟ್ ಅನ್ನು ಹೊಂದಿರುತ್ತದೆ. ಕಂಪನಿಯು ಈ ಚೈನ್ ನ ರೋಲರ್ ಹಾಗೂ ಬುಷ್‌ನಲ್ಲಿ ವಜ್ರದ ಲೇಪನವನ್ನು ನೀಡಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ವಜ್ರದ ಲೇಪನವು ಬಿಡಿ ಭಾಗಗಳ ನಡುವಿನ ಘರ್ಷಣೆಯನ್ನು ಕಡಿಮೆಗೊಳಿಸಲು ಹೆಸರುವಾಸಿಯಾಗಿದೆ. ಈ ವಜ್ರವು ಶುದ್ಧವಾಗಿದ್ದು, ಎಂಜಿನ್ ಒಳಗೆ ಬಳಸಲಾಗುತ್ತದೆ. ಈ ವಜ್ರದ ಪದರವು ಘರ್ಷಣೆಯನ್ನು ಕಡಿಮೆಗೊಳಿಸುತ್ತದೆ. ಇದರಿಂದ ಬಿಡಿ ಭಾಗಗಳಿಗೆ ತುಕ್ಕು ಹಿಡಿಯುವುದಿಲ್ಲ.

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಈ ಚೈನ್ ಘರ್ಷಣೆಯನ್ನು ಕಡಿಮೆಗೊಳಿಸುತ್ತದೆ. ಯಾವುದೇ ಅಡ್ಜಸ್ಟ್ ಮೆಂಟ್ ನ ಅಗತ್ಯವಿರುವುದಿಲ್ಲ. ಚೈನ್ ಅನ್ನು ಜೋಡಿಸಿದ ನಂತರ ಸಡಿಲಗೊಳಿಸುವ ಸಮಸ್ಯೆಯಿಂದಲೂ ಹೊರಬರುತ್ತದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಈ ಚೈನ್ ಅನ್ನು ಸ್ವಚ್ವವಾಗಿಡುವುದು ಅವಶ್ಯಕವೆಂದು ಕಂಪನಿ ಹೇಳಿದೆ. ಬೈಕ್ ಮಣ್ಣಾದಾಗ ಅಥವಾ ಬೈಕನ್ನು ತೊಳೆದಾಗ ಚೈನ್ ಅನ್ನು ನಿಯಮಿತವಾಗಿ ಸ್ವಚ್ವಗೊಳಿಸುವುದು ಅವಶ್ಯಕ. ಈ ಸರಪಳಿಯು ಪರಿಸರಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಬಿಎಂಡಬ್ಲ್ಯು ಮೋಟೊರಾಡ್ ಕಂಪನಿಯು ಹೊಸ ಜಿ 310 ಆರ್ ಹಾಗೂ ಜಿ 310 ಜಿಎಸ್ ಬೈಕುಗಳಿಗಾಗಿ ಪ್ರಿ-ಬುಕ್ಕಿಂಗ್ ಗಳನ್ನು ಆರಂಭಿಸಿದೆ. ಈ ಹೊಸ ಬಿಎಂಡಬ್ಲ್ಯು ಬೈಕುಗಳನ್ನು ಖರೀದಿಸಲು ಬಯಸುವ ಗ್ರಾಹಕರು ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪದೇ ಪದೇ ಲೂಬ್ರಿಕಂಟ್ ಅಳವಡಿಸುವ ಸಮಸ್ಯೆ ನಿವಾರಿಸಲಿದೆ ಈ ಹೊಸ ಚೈನ್

ಬಿಎಂಡಬ್ಲ್ಯು ಜಿ310 ಆರ್ ಹಾಗೂ ಜಿ310 ಜಿಎಸ್ ಬಿಎಸ್-6 ಬೈಕುಗಳು ದೇಶಿಯ ಮಾರುಕಟ್ಟೆಯಲ್ಲಿ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಗಳಿವೆ. ಈ ಹೊಸ ಬೈಕುಗಳ ವಿತರಣೆಯನ್ನು 2020ರ ಅಕ್ಟೋಬರ್‌ ತಿಂಗಳಲ್ಲಿ ಆರಂಭಿಸುವ ಸಾಧ್ಯತೆಗಳಿವೆ.

Most Read Articles

Kannada
English summary
BMW Motorrad launches maintenance free bike chain. Read in Kannada.
Story first published: Wednesday, September 2, 2020, 12:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X