ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಡುಕಾಟಿ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಎಂಬ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದೆ. ಈ ಬೈಕನ್ನು ಕೇವಲ ಇಟಲಿಯ ಸ್ಕುಡೆರಿಯಾ ಕ್ಲಬ್ ಸದಸ್ಯರಿಗಾಗಿ ತಯಾರಿಸಲಾಗಿದೆ.

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಸ್ಕುಡೆರಿಯಾ ಇಟಲಿ ದೇಶದ ರೇಸ್ ಕಾರು ಮಾಲೀಕರು ಮತ್ತು ಸ್ಪೋರ್ಟ್ಸ್ ಕಾರುಗಳ ಬಗ್ಗೆ ಹೆಚ್ಚು ಕ್ರೇಜ್ ಹೊಂದಿರುವ ಸದ್ಯಸರ ಕ್ಲಬ್ ಆಗಿದೆ. ಡುಕಾಟಿ ಕಂಪನಿಯು 1995ರಲ್ಲಿ ಕೂಡ ಇದೇ ರೀತಿ ಈ ಕ್ಲಬ್ ಗಾಗಿ ಲಿಮಿಟೆಡ್ ಎಡಿಷನ್ ಬೈಕನ್ನು ಬಿಡುಗಡೆಗೊಳಿಸಿದ್ದರು. ಹೊಸದಾಗಿ ಅನಾವರಣಗೊಳಿಸಿದ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಲಿಮಿಟೆಡ್ ಎಡಿಷನ್ ಬೈಕ್ ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಲಿಮಿಟೆಡ್ ಎಡಿಷನ್ ಬೈಕಿನಲ್ಲಿ ಇಟಲಿಯ ಸ್ಕುಡೆರಿಯಾ ಕ್ಲಬ್ ಲೋಗೊವನ್ನು ಅಳವಡಿಸಲಾಗಿದೆ. ಈ ಬೈಕಿನ ಟ್ಯಾಂಕ್ ಮೆಟಾಲಿಕ್ ಬ್ಲ್ಯೂ ಬಣ್ಣದಲ್ಲಿ ವಿನ್ಯಾಸಿಗೊಳಿಸಿದೆ. ಇನ್ನು ಈ ಟ್ಯಾಂಕಿನಲ್ಲಿ ಡುಕಾಟಿ ಕಂಪನಿಯ ಲೋಗೊವನ್ನು ಕೂಡ ಅಳವಡಿಸಲಾಗಿದೆ. ಹಿಂಭಾಗದ ಸಬ್‌ಫ್ರೇಮ್ ಟ್ಯಾಂಕ್ ಮೆಟಾಲಿಕ್ ಬ್ಲ್ಯೂ ಬಣ್ಣದ ಫಿನಿಶಿಂಗ್ ಅನ್ನು ಹೊಂದಿದೆ.

MOST READ: ಬಹಿರಂಗವಾಯ್ತು ಬಿಎಸ್-6 ಹೀರೋ ಎಕ್ಸ್‌ಪಲ್ಸ್ 200 ಬೈಕಿನ ಮಾಹಿತಿ

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಈ ಬೈಕಿನ ಮುಂಭಾಗ ಮತ್ತು ಹಿಂಭಾಗದಲ್ಲಿ ಫೆಂಡರ್‌ಗಳು, ಬ್ಲ್ಯಾಕ್ ರಿಮ್ಸ್ ಮತ್ತು ಸ್ಪೋಕ್ಡ್ ಟಯರುಗಳನ್ನು ಹೊಂದಿದೆ. ಈ ಬೈಕಿನಲ್ಲಿ ಎಲ್ಇಡಿ ಇಂಡಿಕೇಟರ್, ಬ್ರೇಕ್ ಮತ್ತು ಕ್ಲಚ್ ಲಿವರ್, ಬ್ರೇಕ್ ಮತ್ತು ಕ್ಲಚ್ ಫ್ಲೂಯಿಡ್ ರಿಸಿವಿಯರ್ ಕವರ್, ಫ್ರೇಮ್ ಪ್ಲಗ್ ಮತ್ತು ಫುಟ್‌ಪೆಗ್‌ಗಳನ್ನು ಅಲ್ಯೂಮಿನಿಯಂನಿಂದ ತಯಾರಿಸಲಾಗಿದೆ.

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಇನ್ನು ಬೈಕಿನಲ್ಲಿ ಹೆಡ್ ಲೈಟ್ ಮೆಶ್ ಗಾರ್ಡ್ ಮತ್ತು ಹಿಟೆಡ್ ಗ್ರಿಪ್ಸ್ ಅನ್ನು ನೀಡಲಾಗುತ್ತದೆ. ಡುಕಾಟಿ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಬೈಕಿನಲ್ಲಿ 1,079 ಸಿಸಿ, ಎಲ್-ಟ್ವಿನ್ ಡೆಸ್ಮೋಡ್ರೊಮಿಕ್ ವಾಲ್ವ್ ಟೈಮಿಂಗ್ ಎಂಜಿನ್ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಈ ಎಂಜಿನ್ 7,250 ಆರ್‌ಪಿಎಂನಲ್ಲಿ 86 ಬಿಹೆಚ್‌ಪಿ ಪವರ್ ಮತ್ತು 4,750 ಆರ್‌ಪಿಎಂನಲ್ಲಿ 90 ಎನ್ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ.

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಇನ್ನು ಡುಕಾಟಿ ಕಂಪನಿಯು ತನ್ನ 2020ರ ಮಲ್ಟಿಸ್ಟ್ರಾಡಾ 950 ಅಡ್ವೆಂಚರ್-ಟೂರರ್ ಮಾದರಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದು ಖಚಿತವಾಗಿದೆ. ಈ ವರ್ಷದ ಕೊನೆಯಲ್ಲಿ ಈ ಡುಕಾಟಿ ಮಲ್ಟಿಸ್ಟ್ರಾಡಾ 950 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

MOST READ: ಹೊಸ ಬಿಎಂಡಬ್ಲ್ಯೂ ಆರ್ 18 ಕ್ರೂಸರ್ ಬೈಕ್ ಖರೀದಿಗೆ ಬುಕ್ಕಿಂಗ್ ಆರಂಭ

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಡುಕಾಟಿ ಇಂಡಿಯಾ ಮಲ್ಟಿಸ್ಟ್ರಾಡಾ 950 ಮತ್ತು 950 ಎಸ್ ಎಂಬ ಎರಡು ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೂಳಿಸಬಹುದು. 2020ರ ಈ ಅಡ್ವೆಂಚರ್-ಟೂರರ್ ಹಲವಾರು ಹೊಸ ಫೀಚರ್ಸ್ ಮತ್ತು ಎಲೆಕ್ಟ್ರಾನಿಕ್ ಸಿಸ್ಟಂಗಳೊಂದಿಗೆ ಬಿಡುಗಡೆಯಾಗಲಿದೆ.

ಹೊಸ ಲಿಮಿಟೆಡ್ ಎಡಿಷನ್ ಬೈಕನ್ನು ಅನಾವರಣಗೊಳಿಸಿದ ಡುಕಾಟಿ

ಡುಕಾಟಿ ಸ್ಕ್ರ್ಯಾಂಬ್ಲರ್ 1100 ಸ್ಪೋರ್ಟ್ ಪ್ರೊ ಲಿಮಿಟೆಡ್ ಎಡಿಷನ್ ಅನ್ನು ಇಟಲಿಯ ಕ್ಲಬ್ ಸದಸ್ಯರಿಗಾಗಿ ವಿಶೇಷವಾಗಿ ತಯಾರಿಸಿದ್ದಾರೆ. ಈ ಲಿಮಿಟೆಡ್ ಎಡಿಷನ್ ಬೈಕ್ ಅಗ್ರೇಸಿವ್ ಲುಕ್ ಮತ್ತು ವಿಭಿನ್ನವಾದ ವಿನ್ಯಾಸದೊಂದಿಗೆ ಆಕರ್ಷಕವಾಗಿದೆ.

Most Read Articles

Kannada
Read more on ಡುಕಾಟಿ ducati
English summary
Ducati Unveils The Limited Edition Scrambler 1100 Sport Pro. Read In Kannada.
Story first published: Tuesday, June 23, 2020, 14:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X