ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ನೋಯ್ಡಾ ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಜಿಮೊಪೈ ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಮೂರು ವರ್ಷದ ಸರ್ವಿಸ್ ವಾರಂಟಿಯನ್ನು ಘೋಷಿಸಿದೆ. 'ಜಿಮೋಪೈ ಸೆಕ್ಯೂರ್' ಎಂಬ ಹೆಸರಿನಲ್ಲಿ ಹೊಸ ಸರ್ವಿಸ್ ವಾರಂಟಿಯನ್ನು ಕಂಪನಿಯು ಘೋಷಿಸಿದೆ.

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಜಿಮೊಪೈ ಕಂಪನಿಯು ನೀಡುವ ಮೂರು ವರ್ಷಗಳ ಸರ್ವಿಸ್ ವಾರಂಟಿಯಲ್ಲಿ 12 ಉಚಿತ ಸರ್ವಿಸ್ ಗಳು ಲಭ್ಯವಿರುತ್ತದೆ. ಹೊಸ ಯೋಜನೆಯು ಜೆಮೋಪೈ ಸ್ಕೂಟರ್‌ಗಳ ಮಾಲೀಕತ್ವದ ವೆಚ್ಚವನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಈ ಯೋಜನೆಯಲ್ಲಿ ಮಿಸೊ, ಆಸ್ಟ್ರಿಡ್ ಲೈಟ್ ಮತ್ತು ರೈಡರ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಒಳಗೊಂಡಿದೆ. ಜಿಮೊಪೈ ಕಂಪನಿಯು ಮೂರು ವರ್ಷಗಳ ಸರ್ವಿಸ್ ವಾರಂಟಿ ನೀಡಿರುವುದರಿಂದ ಹೆಚ್ಚಿನ ಗ್ರಾಹಕರನ್ನು ಸೆಳೆಯಬಹುದು.

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಜೆಮೊಪೈ ಎಲೆಕ್ಟ್ರಿಕ್ ಸಹ-ಸಂಸ್ಥಾಪಕ ಅಮಿತ್ ರಾಜ್ ಸಿಂಗ್ ಅವರು ಮಾತನಾಡಿ, ಇತ್ತೀಚೆಗೆ ಗ್ರಾಹಕರು ಹೆಚ್ಚಾಗಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಕಡೆಗೆ ಒಲವು ತೋರಿಸುತ್ತಿದ್ದಾರೆ. ಇಂತಹವರಿಗೆ ಜಿಮೊಪೈ ಒಂದು ಉತ್ತಮ ಆಯ್ಕೆಯಾಗಿದೆ ಎಂದು ಹೇಳಿದರು.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಸರ್ವಿಸ್ ವಾರಂಟಿ ಜೊತೆಗೆ ಕಂಪನಿಯು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ನಗದು ರಿಯಾಯಿತಿಯನ್ನು ಘೋಷಿಸಿದೆ. ಜುಲೈ 25ರ ಒಳಗೆ ಜಿಮೊಪೈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬುಕ್ಕಿಂಗ್ ಮಾಡುವ ಎಲ್ಲಾ ಗ್ರಾಹಕರಿಗೆ ರೂ.2,000 ಗಳವರೆಗೆ ನಗದು ರಿಯಾಯಿತಿ ದೊರೆಯಲಿದೆ.

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಇನ್ನು ಜಿಮೊಪೈ ಎಲೆಕ್ಟ್ರಿಕ್ ಕಂಪನಿಯು ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತ್ತು. ಈ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಬೆಲೆಯು ರೂ.44,000 ಗಳಾಗಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಒಂದು ಬಾರಿ ಪೂರ್ಣ ಪ್ರಮಾಣದ ಚಾರ್ಚ್ ಮಾಡಿದರೆ 75 ಕಿ,ಮೀ ಮೈಲೇಜ್ ಅನ್ನು ನೀಡುತ್ತದೆ. ಎರಡು ಗಂಟೆಗಳಲ್ಲಿ ಈ ಸ್ಕೂಟರ್ 90 ರಷ್ಟು ಜಾರ್ಜ್ ಆಗುತ್ತದೆ.

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 48ವಿ, 1 ಕಿವ್ಯಾಟ್ ಬ್ಯಾಟರಿಯನ್ನು ಅಳವಡಿಸಲಾಗಿದೆ. ಈ ಮಿನಿ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಹೆಕ್ಸಾ ಹೆಡ್‌ಲೈಟ್ ಮತ್ತು ಎಲ್‌ಇಡಿ ಬ್ಯಾಟರಿ ಎಂಡಿಕೇಟರ್ ಅನ್ನು ಅಳವಡಿಸಲಾಗಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿ‍ಎಸ್-6 ಬಜಾಜ್ ಪಲ್ಸರ್ ಎನ್ಎಸ್200 ಬೈಕ್

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಈ ಜಿಮೊಪೈ ಮಿಸೊ ಮಿನಿ ಎಲೆಕ್ಟ್ರಿಕ್ ಸ್ಕೂಟರ್ 120 ಕೆಜಿ ಗಳಷ್ಟು ಪೇಲೋಡ್ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಕೂಟರ್ ಅನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಅಗತ್ಯವಿಲ್ಲ. ಏಕೆಂದರೆ ಈ ಮಿನಿ ಸ್ಕೂಟರ್ ಟಾಪ್ ಸ್ಪೀಡ್ 25 ಕಿ.ಮೀ ಆಗಿದೆ.

ತನ್ನೆಲ್ಲಾ ಸ್ಕೂಟರ್‌ಗಳಿಗೆ ಸರ್ವಿಸ್ ವಾರಂಟಿ ಘೋಷಿಸಿದ ಜಿಮೊಪೈ

ಕರೋನಾ ಭೀತಿಯ ನಡುವೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮವಾಗಿ ಮಾರಾಟವಾಗುತ್ತಿವೆ. ಇದರಿಂದ ಜಿಮೊಪೈ ಕಂಪನಿಯು ಮಾರಾಟವನ್ನು ಹೆಚ್ಚಿಸಲು ತನ್ನ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಮೂರು ವರ್ಷಗಳ ಸರ್ವಿಸ್ ವಾರಂಟಿಯನ್ನು ಘೋಷಿಸಿದೆ.

Most Read Articles

Kannada
English summary
Gemopai Announces Three-Year Service Warranty For All Electric Scooters. Read In Kannada.
Story first published: Thursday, July 16, 2020, 19:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X