Just In
Don't Miss!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- News
ಸಂಸತ್ ಕಟ್ಟಡದ ಮಹಾತ್ಮ ಗಾಂಧಿ ಪ್ರತಿಮೆ ತರಾತುರಿಯಲ್ಲಿ ಸ್ಥಳಾಂತರ
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Movies
ಬಂದೇ ಬರ್ತಾರೆ ರಶ್ಮಿಕಾ ಮಂದಣ್ಣ: ನಂದ ಕಿಶೋರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೀರೋ ಜೊತೆಗೂಡಿದ ಹಾರ್ಲೆ ವಿರುದ್ದ ಮಾಲೀಕರು ಮತ್ತು ಮಾರಾಟಗಾರರಿಂದ ಡಾರ್ಕ್ ರ‍್ಯಾಲಿ
ಅಮೆರಿಕ ಜನಪ್ರಿಯ ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ಸ್ವತಂತ್ರ ಕಾರ್ಯಾಚಾರಣೆಯನ್ನು ಸ್ಥಗಿತಗೊಳಿಸಿದ್ದು, ಪಾಲುದಾರಿಕೆ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿ ಉದ್ಯಮ ವ್ಯವಹಾರಗಳನ್ನು ಮುಂದುವರಿಸಲು ನಿರ್ಧರಿಸಿದೆ.

ವ್ಯಾಪಾರ ವಹಿವಾಟು ಆಧಾರದ ಮೇಲೆ ಹಾರ್ಲೆ ಡೇವಿಡ್ಸನ್ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗಿನ ಪಾಲುದಾರಿಕೆ ಯೋಜನೆಯು ಲಾಭದಾಯಕವಾಗಿದ್ದರೂ ಬ್ರಾಂಡ್ ಮೌಲ್ಯಕ್ಕೆ ಧಕ್ಕೆ ಉಂಟಾಗಬಹುದೆಂಬ ಅಳಲು ಗ್ರಾಹಕರು ಮತ್ತು ಮಾರಾಟ ಪಾಲುದಾರರಲ್ಲಿ ಕಾಡತೊಡಗಿದೆ. ಇದೇ ಕಾರಣಕ್ಕೆ ಹಾರ್ಲೆ ಡೇವಿಡ್ಸನ್ ನಿರ್ಧಾರವನ್ನು ವಿರೋಧಿಸಿ ಹಾರ್ಲೆ ರೈಡರ್ಸ್ ಮತ್ತು ಮಾರಾಟಗಾರರ ಗುಂಪುಗಳು ಪ್ರತಿಭಟನೆ ನಡೆಸುತ್ತಿದ್ದು, ಪ್ರತಿಭಟನೆಯ ಭಾಗಿ ದೇಶದ ಪ್ರಮುಖ ಕಡೆಗಳಲ್ಲಿ ಡಾರ್ಕ್ ರ‍್ಯಾಲಿ ನಡೆಸುತ್ತಿವೆ.

ಭಾರತದಲ್ಲಿ ಸ್ವತಂತ್ರ ಉದ್ಯಮ ಕಾರ್ಯಾಚರಣೆಗೆ ಗುಡ್‌ಬೈ ಹೇಳಿರುವ ಹಾರ್ಲೆ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗೂಡಿರುವುದಕ್ಕೆ ಅಸಮಾಧಾನ ಹೊರಹಾಕಿರುವ ರೈಡರ್ಸ್ ಮತ್ತು ಮಾರಾಟ ಪಾಲುದಾರಿಕೆ ಕಂಪನಿಗಳು ನಿರ್ಧಾರವನ್ನು ಹಿಂಪಡೆಯವಂತೆ ಒತ್ತಾಯಿಸಿವೆ.

ಆದರೆ ಕಾನೂನಾತ್ಮಕವಾಗಿ ಭಾರತದಲ್ಲಿ ಸ್ವತಂತ್ರ ಉದ್ಯಮ ವ್ಯವಹಾರಗಳನ್ನು ಸ್ಥಗಿತಗೊಳಿಸಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಮುಂದಿನ ವ್ಯವಹಾರಗಳಿಗೆ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ರೈಡರ್ಸ್ ಮತ್ತು ಮಾರಾಟ ಪಾಲುದಾರರ ಕಂಪನಿಗಳ ಪ್ರತಿಭಟನೆಗೆ ಹೀರೋ ಮೋಟೊಕಾರ್ಪ್ ಪ್ರಕ್ರಿಯೆಸಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯ ನಿರ್ಧಾರಗಳನ್ನು ಸ್ವಾಗತಿಸಿರುವ ಹೀರೋ ಮೋಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟ ಪಾಲುದಾರಿಕೆ ಕಂಪನಿಗಳಿಗೆ ಸೂಕ್ತ ಮಾರಾಟ ಸೌಲಭ್ಯ ಒದಗಿಸುವ ಮತ್ತು ರೈಡರ್ಸ್‌ಗಳಿಗೆ ಈ ಹಿಂದಿನಂತೆಯೇ ಗುಣಮಟ್ಟದ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದೆ.

ಇದರ ಜೊತೆಗೆ ಹಾರ್ಲೆ ಕಂಪನಿಯು ಬೈಕ್ ಮಾರಾಟ ಪಾಲುದಾರಿಕೆ ಕಂಪನಿಗಳಿಗೆ ಸರಿಯಾದ ಪರಿಹಾರ ನೀಡಿಲ್ಲ ಎಂಬ ದೂರುಗಳು ಸಹ ಕೇಳಿಬಂದಿದ್ದು, ಮಾರಾಟ ಮಳಿಗೆಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಪಾಲುದಾರಿಕೆ ಕಂಪನಿಗಳಿಗೆ ಪ್ರತಿ ಚದರ ಅಡಿಗೆ ಕೇವಲ ರೂ. 1,500 ಪರಿಹಾರ ನೀಡಿದೆ.

ಆದರೆ ಐಷಾರಾಮಿ ಬೈಕ್ ಮಾರಾಟ ಮಳಿಗೆಗಳ ಮೇಲೆ ಭಾರೀ ಪ್ರಮಾಣದ ಹೂಡಿಕೆ ಮಾಡಿರುವ ಪಾಲುದಾರಿಕೆ ಕಂಪನಿಗಳಿಗೆ ಇದು ಭಾರೀ ನಷ್ಟ ಅನುಭವಿಸುವಂತೆ ಮಾಡುತ್ತಿದ್ದು, ಸಹಭಾಗಿತ್ವ ಯೋಜನೆ ಅಡಿ ಇನ್ಮುಂದೆ ಹೀರೋ ಕಂಪನಿಯೇ ಹಾರ್ಲೆ ಬೈಕ್ ಮಾರಾಟ ಮತ್ತು ಸೇವೆಗಳಿಗೆ ಪ್ರತ್ಯೇಕ ಸೌಲಭ್ಯ ತೆರೆಯಲಿದೆ.

ಭಾರತದಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗೀತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.

ಸ್ವತಂತ್ರ ಬೈಕ್ ಮಾರಾಟ ಮಳಿಗಗಳಿಂದಾಗುತ್ತಿರುವ ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಂಡಿರುವ ಹಾರ್ಲೆ ಕಂಪನಿಯು ಆಯ್ದ ನಗರಗಳಲ್ಲಿನ ಪ್ರಮುಖ ಹೀರೋ ಮೋಟೊಕಾರ್ಪ್ ಡೀಲರ್ಸ್‌ಗಳಲ್ಲಿ ಪ್ರತ್ಯೇಕ ವ್ಯವಹಾರ ಸೌಲಭ್ಯಗಳನ್ನು ತೆರೆಯಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಇದರಿಂದ ಡೀಲರ್ಸ್‌ಗಳ ನಿರ್ವಹಣೆಯು ಗಣನೀಯವಾಗಿ ಇಳಿಕೆಯಾಗಲಿದ್ದು, 2021ರ ಜನವರಿಯಿಂದಲೇ ಹಾರ್ಲೆ ಡೇವಿಡ್ಸನ್ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಣೆ ಮಾಡುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.

ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗೀತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಳೆದ ವರ್ಷವೇ ಹೀರೋ ಮೋಟೊಕಾರ್ಪ್ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ಕರೋನಾ ವೈರಸ್ ಪರಿಣಾಮ ಹೊಸ ಯೋಜನೆಯನ್ನು ತಟಸ್ಥವಾಗಿಟ್ಟಿತ್ತು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಉದ್ಯಮ ವ್ಯವಹಾರಗಳು ತಿಳಿಗೊಂಡಿರುವ ಹಿನ್ನಲೆ ಸಹಭಾಗೀತ್ವ ಯೋಜನೆಗೆ ಅಧಿಕೃತವಾಗಿ ಒಪ್ಪಿಗೆ ಸೂಚಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯು ಹಾರ್ಲೆ ಬೈಕ್‌ಗಳ ಅಭಿವೃದ್ದಿ ಮತ್ತು ಮಾರಾಟ ಕಾರ್ಯಾಚರಣೆಗೆ ಪ್ರತ್ಯೇಕ ಸೌಲಭ್ಯಗಳೊಂದಿಗೆ ಪರಸ್ಪರ ಸಹಕರಿಸಲಿದೆ.