ಭಾರತವನ್ನು ತೊರೆದರೂ ಬೈಕುಗಳನ್ನು ಮಾರಾಟ ಮಾಡಲಿದೆ ಹಾರ್ಲೆ ಡೇವಿಡ್ಸನ್
ಇತ್ತೀಚಿಗೆ ಹಾರ್ಲೆ-ಡೇವಿಡ್ಸನ್ ಕಂಪನಿಯು ಭಾರತದಲ್ಲಿನ ತನ್ನ ವಹಿವಾಟನ್ನು ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಹೆಚ್ಚಿನ ತೆರಿಗೆ ಸೇರಿದಂತೆ ಇನ್ನಿತರ ಕಾರಣಗಳಿಂದಾಗಿ ಮಾರಾಟ ಗುರಿಯನ್ನು ತಲುಪದ ಕಾರಣ ದೇಶಿಯ ದ್ವಿಚಕ್ರ ವಾಹನ ಮಾರುಕಟ್ಟೆಯಿಂದ ಹೊರಹೋಗುತ್ತಿರುವುದಾಗಿ ತಿಳಿಸಿತ್ತು.

ಹಾರ್ಲೆ-ಡೇವಿಡ್ಸನ್ ಭಾರತದಲ್ಲಿನ ತನ್ನ ಎಲ್ಲಾ ಉತ್ಪಾದನಾ ಘಟಕಗಳನ್ನು ಹಾಗೂ ಉತ್ಪಾದನಾ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದೆ. ಇದರಿಂದಾಗಿ ಹಾರ್ಲೆ-ಡೇವಿಡ್ಸನ್‌ನ ಉತ್ಪಾದನಾ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಫಾಡಾ ವರದಿಗಳ ಪ್ರಕಾರ, ಕಂಪನಿಯು 2,000ಕ್ಕೂ ಹೆಚ್ಚು ಜನರನ್ನು ನೇಮಿಸಿಕೊಂಡಿತ್ತು.

ಇವರೆಲ್ಲಾ ಈಗ ನಿರುದ್ಯೋಗಿಗಳಾಗಿದ್ದಾರೆ. ಕರೋನಾ ವೈರಸ್ ಕಾರಣದಿಂದಾಗಿ ಈಗಾಗಲೇ ಲಕ್ಷಾಂತರ ಜನ ನಿರುದ್ಯೋಗಿಗಳಾಗಿದ್ದಾರೆ. ಇವರ ಸಾಲಿಗೆ ಹಾರ್ಲೆ-ಡೇವಿಡ್ಸನ್ ಕಂಪನಿಯ ಉದ್ಯೋಗಿಗಳು ಸೇರ್ಪಡೆಯಾಗಿದ್ದಾರೆ.
MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಈಗ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೀರೋ ಮೋಟೊಕಾರ್ಪ್ ನ ನೆರವನ್ನು ಕೋರಿದೆ. ಹಾರ್ಲೆ-ಡೇವಿಡ್ಸನ್ ಕಂಪನಿಯು ತನ್ನ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಲು ಹೀರೋ ಕಂಪನಿಯ ಜೊತೆಗೆ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.

ಹಾರ್ಲೆ-ಡೇವಿಡ್ಸನ್ ಕಂಪನಿಯ ವಾಹನಗಳು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದೇ ಇದ್ದರೂ, ಹಾರ್ಲೆ ಕಂಪನಿಯು ಭಾರತದಲ್ಲಿ ಹಲವಾರು ಅಭಿಮಾನಿಗಳನ್ನು ಹೊಂದಿದೆ. ಭಾರತಕ್ಕೆ ತನ್ನ ವಾಹನಗಳನ್ನು ಆಮದು ಮಾಡಿ ಹೀರೋ ಕಂಪನಿಯ ಮೂಲಕ ಮಾರಾಟ ಮಾಡಲು ಯೋಜಿಸಿದೆ.
MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಆದರೆ ಈ ಬಗ್ಗೆ ಹಾರ್ಲೆ ಕಂಪನಿಯು ಯಾವುದೇ ಅಧಿಕೃತ ಘೋಷಣೆಯನ್ನು ಮಾಡಿಲ್ಲ. ಹೀರೋ ಮೊಟೊಕಾರ್ಪ್ ಸಹ ಯಾವುದೇ ಮಾಹಿತಿಯನ್ನು ನೀಡಿಲ್ಲ. ಶೀಘ್ರದಲ್ಲೇ ಎರಡೂ ಕಂಪನಿಗಳು ಈ ಬಗ್ಗೆ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಗಳಿವೆ.

ಹೀರೋ ಮೊಟೊಕಾರ್ಪ್ ಅತಿದೊಡ್ಡ ದ್ವಿಚಕ್ರ ವಾಹನ ಉತ್ಪಾದನಾ ಘಟಕವನ್ನು ಹೊಂದಿದ್ದು, ಹಾರ್ಲೆ ಡೇವಿಡ್ಸನ್ ಕಂಪನಿಯ ಜನಪ್ರಿಯ ವಾಹನಗಳನ್ನು ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದಿಸಿ ಮಾರಾಟ ಮಾಡುವ ನಿರೀಕ್ಷೆಗಳಿವೆ.
MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತವನ್ನು ತೊರೆಯುವ ಸಂದರ್ಭದಲ್ಲಿ ಈ ವರ್ಷದ ಡಿಸೆಂಬರ್ ನಂತರ ನಮ್ಮ ವಾಹನಗಳು ಭಾರತದಲ್ಲಿ ಮತ್ತೆ ಲಭ್ಯವಾಗುವಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿತ್ತು.

ಈ ಹಿನ್ನೆಲೆಯಲ್ಲಿ ಎರಡೂ ಕಂಪನಿಗಳ ವಿಲೀನದ ಬಗ್ಗೆ ಮಾತುಕತೆಯಾಗುತ್ತಿದೆ. ಇದರ ಬಗೆಗಿನ ವಿವರಗಳು ಇನ್ನೂ ಅಧಿಕೃತವಾಗಿ ಬಿಡುಗಡೆಯಾಗಿಲ್ಲವಾದರೂ, ಎರಡು ಕಂಪನಿಗಳು ಜಂಟಿಯಾಗಿ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಾರ್ಲೆ-ಡೇವಿಡ್ಸನ್ ಮಳಿಗೆಗಳನ್ನು ಸ್ಥಳಾಂತರಿಸುತ್ತಿವೆ ಎಂದು ವರದಿಯಾಗಿದೆ.
MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಈ ಕಾರ್ಯಗಳು 10 ಅಥವಾ 15 ದಿನಗಳಲ್ಲಿ ಪೂರ್ಣಗೊಳ್ಳಲಿವೆ ಎಂದು ಹೇಳಲಾಗಿದೆ. ಈ ಮೂಲಕ ಹಾರ್ಲೆ ಡೇವಿಡ್ಸನ್ ಬೈಕುಗಳು ಭಾರತದಲ್ಲಿ ಮತ್ತೆ ಮಾರಾಟವಾಗುವ ನಿರೀಕ್ಷೆಗಳಿವೆ.

ಹಾರ್ಲೆ-ಡೇವಿಡ್ಸನ್ ಕಂಪನಿಯು ಭಾರತವನ್ನು ತೊರೆಯುತ್ತಿರುವುದು ಇದೇ ಮೊದಲಲ್ಲ. ಕಂಪನಿಯು ಈ ಹಿಂದೆಯೂ ಭಾರತವನ್ನು ತೊರೆದಿಟ್ಟು. ಕೆಲ ವರ್ಷಗಳ ನಂತರ ಹೊಸ ವಾಹನಗಳೊಂದಿಗೆ ಮತ್ತೆ ಭಾರತಕ್ಕೆ ಕಾಲಿಟ್ಟಿತು.


Click it and Unblock the Notifications








