ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಜುಲೈ ತಿಂಗಳಿನಲ್ಲಿ 5.14 ಲಕ್ಷ ಬೈಕ್ ಹಾಗೂ ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. 2019ರ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಜುಲೈ ತಿಂಗಳಿನಲ್ಲಿ ಕಂಪನಿಯು 95%ನಷ್ಟು ಮಾರಾಟವನ್ನು ದಾಖಲಿಸಿದೆ.

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಕಂಪನಿಯು ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಿಯ ಮಾರುಕಟ್ಟೆಯಲ್ಲಿ 5.07 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದರೆ, 2019ರ ಜುಲೈ ತಿಂಗಳಿನಲ್ಲಿ 5.11 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿತ್ತು. ರಫ್ತಿನ ಬಗ್ಗೆ ಹೇಳುವುದಾದರೆ, 2019ರ ಜುಲೈನಲ್ಲಿ 24,436 ವಾಹನಗಳು ರಫ್ತಾಗಿದ್ದರೆ, ಈ ವರ್ಷದ ಜುಲೈ ತಿಂಗಳಿನಲ್ಲಿ 7,563 ವಾಹನಗಳು ರಫ್ತಾಗಿವೆ. ಒಟ್ಟಾರೆಯಾಗಿ ಜುಲೈ ತಿಂಗಳಿನಲ್ಲಿ 4.78 ಲಕ್ಷ ಬೈಕ್ ಹಾಗೂ 35,843 ಸ್ಕೂಟರ್ ಗಳನ್ನು ಮಾರಾಟ ಮಾಡಲಾಗಿದೆ.

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ದೇಶಾದ್ಯಂತ 95%ನಷ್ಟು ಶೋ ರೂಂಗಳನ್ನು ತೆರೆಯಲಾಗಿದೆ ಎಂದು ಹೀರೋ ಮೋಟೊಕಾರ್ಪ್ ಹೇಳಿದೆ. ಕರೋನಾ ಸೋಂಕು ಹರಡುವುದನ್ನು ತಪ್ಪಿಸಲು ಎಲ್ಲಾ ಶೋ ರೂಂಗಳಲ್ಲಿ ಸಾಮಾಜಿಕ ಅಂತರ ಸೇರಿದಂತೆ ಹಲವಾರು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಕೆಲವು ದಿನಗಳ ಹಿಂದಷ್ಟೇ ಹೊಸ ಎಕ್ಸ್‌ಟ್ರೀಮ್ 160 ಆರ್ ಹಾಗೂ ಎಕ್ಸ್‌ಪಲ್ಸ್ 200 ಬಿಎಸ್ 6 ಬೈಕ್ ಗಳನ್ನು ಬಿಡುಗಡೆಗೊಳಿಸಿತ್ತು. ಕಂಪನಿಯು ಈ ಬೈಕುಗಳ ವಿತರಣೆಯನ್ನು ಸಹ ಆರಂಭಿಸಿದೆ. ಇದರ ಜೊತೆಗೆ ಕಂಪನಿಯು ಹೊಸ ಗ್ಲಾಮರ್ ಎಫ್‌ಐ 125 ಅನ್ನು ಸಹ ಪರಿಚಯಿಸಿದೆ.

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಈ ಬೈಕ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ. ಹೊಸ ಗ್ಲಾಮರ್ ಎಫ್‌ಐ ಬಿಎಸ್ 6 ಡ್ರಮ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.69,750ಗಳಾದರೆ, ಫ್ರಂಟ್ ಡಿಸ್ಕ್ ಮಾದರಿಯ ಬೆಲೆ ದೆಹಲಿಯ ಎಕ್ಸ್ ಶೋರೂಂ ದರದಂತೆ ರೂ.73,250ಗಳಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು ಇತ್ತೀಚೆಗೆ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಎಸ್ 6 ಎಕ್ಸ್‌ಪಿಎಸ್ 200 ಟಿ ಹಾಗೂ ಎಕ್ಸ್‌ಟ್ರೀಮ್ 200 ಎಸ್‌ ಬೈಕುಗಳ ಟೀಸರ್ ಬಿಡುಗಡೆಗೊಳಿಸಿದೆ. ಈ ಎರಡೂ ಬೈಕ್‌ಗಳು ಸಹ ಬಿಡುಗಡೆಗೆ ಸಿದ್ಧವಾಗಿವೆ.

ಜುಲೈ ತಿಂಗಳ ಮಾರಾಟ ವರದಿ ಬಿಡುಗಡೆಗೊಳಿಸಿದ ಹೀರೋ ಮೋಟೊಕಾರ್ಪ್

ಹೀರೋ ಮೋಟೊಕಾರ್ಪ್ ಕಂಪನಿಯು 2021ರ ವೇಳೆಗೆ ಹತ್ತು ಕೋಟಿ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಕಂಪನಿಯು ರೂ.14,096 ಕೋಟಿ ನಗದು ಸಂಗ್ರಹವನ್ನು ಹೊಂದಿದ್ದು, ಈ ಹಣವನ್ನು ದೇಶಿಯ ಮಾರುಕಟ್ಟೆಯಲ್ಲಿನ ಉತ್ಪಾದನೆಯನ್ನು ಹೆಚ್ಚಿಸಲು ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಬಳಸಲಾಗುವುದೆಂದು ಹೀರೋ ಮೋಟೊಕಾರ್ಪ್ ಹೇಳಿದೆ.

Most Read Articles

Kannada
English summary
Hero Motocorp releases sales report for the month of July 2020. Read in Kannada.
Story first published: Saturday, August 1, 2020, 19:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X