Just In
Don't Miss!
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- News
ಖಾತೆ ಹಂಚಿಕೆ ಕುರಿತಂತೆ ಡಾ. ಸುಧಾಕರ್ ವಿಚಾರದಲ್ಲಿ ಎಲ್ಲರೂ ತಟಸ್ಥ ನಿಲುವು ತಾಳಿದ್ಯಾಕೆ?
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ರತಿಭಟನೆಯ ನಡುವೆಯೂ ಹೀರೋ ಜೊತೆಗೂಡಿದ ಪ್ರಮುಖ ಹಾರ್ಲೆ ಡೇವಿಡ್ಸನ್ ಡೀಲರ್ಸ್
ಅಮೆರಿಕ ಜನಪ್ರಿಯ ಐಷಾರಾಮಿ ಬೈಕ್ ಉತ್ಪಾದನಾ ಕಂಪನಿಯಾದ ಹಾರ್ಲೆ ಡೇವಿಡ್ಸನ್ ಭಾರತದಲ್ಲಿನ ಸ್ವತಂತ್ರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಮೂಲಕ ಹೀರೋ ಮೋಟೊಕಾರ್ಪ್ ಜೊತೆಗೆ ಪಾಲುದಾರಿಕೆ ಘೋಷಿಸಿದ್ದು, ಹೊಸ ಯೋಜನೆ ಅಡಿ ಹೀರೋ ಕಂಪನಿಯು ಮುಂದಿನ ತಿಂಗಳಿನಿಂದ ಹೊಸ ಉದ್ಯಮ ವ್ಯವಹಾರಕ್ಕೆ ಅಧಿಕೃತವಾಗಿ ಚಾಲನೆ ನೀಡುತ್ತಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಯು ತನ್ನ ಮಾರಾಟ ಪಾಲುದಾರರ ವಿರೋಧ ನಡುವೆಯೂ ಹೀರೋ ಮೋಟೊಕಾರ್ಪ್ ಜೊತೆಗೂಡಿ ಭಾರತದಲ್ಲಿ ಬೈಕ್ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಹೀರೋ ಮೋಟೊಕಾರ್ಪ್ ಕಂನಪನಿಯು ಹೊಸ ಯೋಜನೆಯ ಭಾಗವಾಗಿ ಹಾರ್ಲೆ ಕಂಪನಿಯ ಬೈಕ್ ಉತ್ಪಾದನೆ ಮತ್ತು ಮಾರಾಟಕ್ಕಾಗಿ ಪ್ರತ್ಯೇಕ ಪ್ಲ್ಯಾಟ್ ಆರಂಭಿಸುತ್ತಿದೆ. ಆದರೆ ಹಾರ್ಲೆ ಮತ್ತು ಹೀರೋ ನಡುವಿನ ಪಾಲುದಾರಿಕೆಗೆ ಹಾರ್ಲೆ ಬೈಕ್ ಮಾರಾಟ ಪಾಲುದಾರರಿಂದ ಸಾಕಷ್ಟು ವಿರೋಧ ಕೇಳಿಬಂದಿದ್ದು, ಡೀಲರ್ಸ್ ಅಸೋಶಿಯೆಷನ್‌ನಲ್ಲೂ ಈ ಸಂಬಂಧ ವಿಚಾರಣೆ ನಡೆಯುತ್ತಿದೆ.

ಆದರೆ ವ್ಯಾಪಾರ ವಹಿವಾಟಿನ ಲಾಭದ ಆಧಾರ ಮೇಲೆ ಕಾನೂನಾತ್ಮಕವಾಗಿ ಸ್ವತಂತ್ರ ಬೈಕ್ ಮಾರಾಟಕ್ಕೆ ಪ್ರಕ್ರಿಯೆ ಸ್ಥಗಿತಗೊಳಿಸಿ ಹೀರೋ ಕಂಪನಿಗೆ ವಹಿಸಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಗ್ರಾಹಕರ ಸೇವೆಗಳಲ್ಲಿ ಯಾವುದೇ ಬದಲಾವಣೆಯಿರುವುದಿಲ್ಲ ಎಂಬ ಸ್ಪಷ್ಟನೆ ನೀಡಿದೆ.

ಆದರೂ ಹೀರೋ ಜೊತೆಗೂಡಿದ ವಿಚಾರವಾಗಿ ಹಾರ್ಲೆ ವಿತರಕ ಪಾಲುದಾರರು ಕಂಪನಿಯ ವಿರುದ್ಧ ಪ್ರತಿಭಟನೆ ಮುಂದುವರಿಸಿದ್ದು, ಪ್ರತಿಭಟನೆಯ ನಡುವೆ ಪ್ರಮುಖ ಹಾರ್ಲೆ ಡೇವಿಡ್ಸನ್ ವಿತರಕ ಪಾಲುದಾರರು ಹೀರೋ ಮೋಟೊಕಾರ್ಪ್ ಹೊಸ ಯೋಜನೆಗೆ ಒಪ್ಪಿಗೆ ಸೂಚಿಸಿದ್ದಾರೆ.

ದೇಶಾದ್ಯಂತ ಪ್ರಮುಖ ನಗರಗಳಲ್ಲಿ 33 ಹಾರ್ಲೆ ಡೇವಿಡ್ಸನ್ ವಿತರಕ ಪಾಲುದಾರರು ಕಾರ್ಯನಿರ್ವಹಿಸಿತ್ತಿದ್ದು, ಪ್ರತಿಭಟನೆಯ ನಡುವೆ ಇದೀಗ ಪ್ರಮುಖ 10 ಡೀಲರ್ಸ್ ಪಾಲುದಾರರು ಹೀರೋ ಕಂಪನಿಯೊಂದಿಗೆ ವಿಲೀನವಾಗಲು ಒಪ್ಪಿಗೆ ಸೂಚಿಸಿದ್ದಾರೆ. ಹೊಸ ಮಳಿಗೆಗಳ ಮೇಲೆ ಈಗಾಗಲೇ ಭಾರೀ ಹೂಡಿಕೆ ಮಾಡಿರುವ ಡೀಲರ್ಸ್‌ಗಳು ಅನಿವಾರ್ಯವಾಗಿ ಮುಂದಿನ ಯೋಜನೆಗಳಿಗೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ ಎದುರಾಗಿದೆ.

ಆದರೆ ಇನ್ನು ಕೆಲವು ಪ್ರಮುಖ ಹಾರ್ಲೆ ಡೇವಿಡ್ಸನ್ ಮಾರಾಟ ಪಾಲುದಾರರು ಕಂಪನಿಯಿಂದ ಸೂಕ್ತ ಪರಿಹಾರ ಒದಗಿಸುವ ತನಕ ಹೊಸ ಪಾಲುದಾರಿಕೆ ಕಂಪನಿಯೊಂದಿಗೆ ಸೇರ್ಪಡೆಯಾಗುವುದಿಲ್ಲವೆಂದು ಪಟ್ಟುಹಿಡಿದ್ದು, ಇತ್ತ ಡೀಲರ್ಸ್ ಪ್ರತಿಭಟನೆಗೆ ಹಾರ್ಲೆ ಕಂಪನಿಯು ಯಾವುದೇ ಪ್ರಕ್ರಿಯೆ ನೀಡುತ್ತಿಲ್ಲ.

ಹಾರ್ಲೆ ಕಂಪನಿಯು ಮಾರಾಟ ಪಾಲುದಾರರ ಮಳಿಗೆಗಳಿಗಾಗಿ ಈಗಾಗಲೇ ಪ್ರತಿ ಚದರ ಅಡಿಗೆ ಕೇವಲ ರೂ. 1,500 ಪರಿಹಾರ ಘೋಷಣೆ ಮಾಡಿದ್ದು, ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿಕೆ ಮಾಡಿರುವ ಡೀಲರ್ಸ್‌ಗಳಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಇನ್ನು ಹಾರ್ಲೆ ಡೇವಿಡ್ಸನ್ ಕಂಪನಿಯ ನಿರ್ಧಾರಗಳನ್ನು ಸ್ವಾಗತಿಸಿರುವ ಹೀರೋ ಮೋಟೋಕಾರ್ಪ್ ಕಂಪನಿಯು ಹಾರ್ಲೆ ಬೈಕ್ ಮಾರಾಟ ಪಾಲುದಾರಿಕೆ ಕಂಪನಿಗಳಿಗೆ ಸೂಕ್ತ ಮಾರಾಟ ಸೌಲಭ್ಯ ಒದಗಿಸುವ ಮತ್ತು ರೈಡರ್ಸ್‌ಗಳಿಗೆ ಈ ಹಿಂದಿನಂತೆಯೇ ಗುಣಮಟ್ಟದ ಸೇವೆಗಳಲ್ಲಿ ಯಾವುದೇ ತೊಂದರೆಯಾಗದಂತೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದೆ.

ಭಾರತದಲ್ಲಿ ಈ ಮೊದಲು ಸ್ವತಂತ್ರವಾಗಿ ತನ್ನ ಐಷಾರಾಮಿ ಬೈಕ್ ಮಾದರಿಗಳನ್ನು ಅಭಿವೃದ್ದಿಗೊಳಿಸಿ ಮಾರಾಟ ಮಾಡುತ್ತಿದ್ದ ಹಾರ್ಲೆ ಡೇವಿಡ್ಸನ್ ಕಂಪನಿಯು ನಿರ್ವಹಣಾ ವೆಚ್ಚಗಳನ್ನು ಗಣನೀಯವಾಗಿ ತಗ್ಗಿಸಲು ದೇಶದ ಜನಪ್ರಿಯ ಬೈಕ್ ಉತ್ಪಾದನಾ ಕಂಪನಿಯಾಗಿರುವ ಹೀರೋ ಮೋಟೊಕಾರ್ಪ್ ಜೊತೆಗೂಡಿದ್ದು, ಬೈಕ್ ಮಾರಾಟ ಮತ್ತು ಗ್ರಾಹಕರ ಸೇವೆಗಳಿಗೆ ಸಮರ್ಥವಾಗಿ ಪೂರೈಸಲು ಸಹಭಾಗೀತ್ವ ಕಂಪನಿಯ ಪ್ಲ್ಯಾಟ್‌ಫಾರ್ಮ್‌ಗಳನ್ನು ಬಳಕೆ ಮಾಡಿಕೊಳ್ಳಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಸ್ವತಂತ್ರ ಬೈಕ್ ಮಾರಾಟ ಮಳಿಗೆಗಳಿಂದಾಗುತ್ತಿರುವ ವೆಚ್ಚ ನಿರ್ವಹಣೆಗಾಗಿ ಈ ಕ್ರಮ ಕೈಗೊಂಡಿರುವ ಹಾರ್ಲೆ ಕಂಪನಿಯು ಆಯ್ದ ನಗರಗಳಲ್ಲಿನ ಪ್ರಮುಖ ಹೀರೋ ಮೋಟೊಕಾರ್ಪ್ ಡೀಲರ್ಸ್‌ಗಳಲ್ಲಿ ಪ್ರತ್ಯೇಕ ವ್ಯವಹಾರ ಸೌಲಭ್ಯಗಳನ್ನು ತೆರೆಯಲಿದೆ.

ಇದರಿಂದ ಡೀಲರ್ಸ್‌ಗಳ ನಿರ್ವಹಣೆಯು ಗಣನೀಯವಾಗಿ ಇಳಿಕೆಯಾಗಲಿದ್ದು, 2021ರ ಜನವರಿಯಿಂದಲೇ ಹಾರ್ಲೆ ಡೇವಿಡ್ಸನ್ ಕಂಪನಿಯು ಹೀರೋ ಮೋಟೊಕಾರ್ಪ್ ಜೊತೆಗೂಡಿ ಕಾರ್ಯನಿರ್ವಹಣೆ ಮಾಡುವುದಾಗಿ ಅಧಿಕೃತ ಮಾಹಿತಿ ಹಂಚಿಕೊಂಡಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಸತತ ಆರ್ಥಿಕ ಹಿನ್ನಡೆ ಮತ್ತು ಹೆಚ್ಚುತ್ತಿರುವ ಕಾರ್ಯಾಚರಣೆಯ ವೆಚ್ಚಗಳನ್ನು ತಗ್ಗಿಸುವ ಉದ್ದೇಶದಿಂದ ಸಹಭಾಗೀತ್ವ ಯೋಜನೆಯತ್ತ ಮುಖ ಮಾಡಿರುವ ಹಾರ್ಲೆ ಡೇವಿಡ್ಸನ್ ಕಂಪನಿಯು ಭಾರತದಲ್ಲೇ ಹೊಸ ಉತ್ಪನ್ನಗಳನ್ನು ಅಭಿವೃದ್ದಿಪಡಿಸುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕಳೆದ ವರ್ಷದಿಂದಲೇ ಸಹಭಾಗೀತ್ವ ಯೋಜನೆ ಕುರಿತು ಮಾತುಕತೆ ನಡೆಸಿದ್ದ ಹಾರ್ಲೆ ಮತ್ತು ಹೀರೋ ಕಂಪನಿಗಳು ಇದೀಗ ಅಂತಿಮವಾಗಿ ಹೊಸ ಯೋಜನೆಗೆ ಚಾಲನೆ ನೀಡಿವೆ.