Just In
- 20 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
2021ರ ಡಕಾರ್ ರ‍್ಯಾಲಿ: ಹೀರೋ ಮೋಟೊಸ್ಪೋರ್ಟ್ ತಂಡ ಪ್ರಕಟ
ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ರ‍್ಯಾಲಿಗಳಲ್ಲಿ ಒಂದಾಗಿರುವ ಡಕಾರ್ ರ‍್ಯಾಲಿಯ 2021ರ ಆವೃತ್ತಿಯು ಮುಂದಿನ ತಿಂಗಳು ಜನವರಿ 3ರಿಂದ 15ರ ವರೆಗೆ ನಡೆಲಿದ್ದು, 43ನೇ ಮೋಟಾರ್‌ಸ್ಪೋರ್ಟ್ ರ‍್ಯಾಲಿಯಲ್ಲಿ ಹೀರೋ ಮೋಟೊಸ್ಪೋರ್ಟ್ ತಂಡವು ಕೂಡಾ ಅತ್ಯುತ್ತಮ ಪ್ರದರ್ಶನದ ತವಕದಲ್ಲಿದೆ.

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭಗೊಳ್ಳಲಿರುವ 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದ್ದು, ಜಿದ್ದಾದಿಂದ ಆರಂಭವಾಗಿ ಕೊನೆಗೆ ಜಿದ್ದಾದದಲ್ಲೇ ಕೊನೆಗೊಳ್ಳಲಿದೆ. ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ಸಾವಿರಾರು ಸ್ಪರ್ಧಿಗಳು ಭಾಗಿಯಾಗಲಿದ್ದು, ಭಾರತದಿಂದ ಹೀರೋ ಮೋಟೊಸ್ಪೋರ್ಟ್ ತಂಡವು ಕೂಡಾ ಕಳೆದ ಐದು ವರ್ಷಗಳಿಂದ ಅತ್ಯತ್ತಮ ಪ್ರದರ್ಶನ ನೀಡುತ್ತಿದೆ.

2021ರ ಡಕಾರ್ ರ‍್ಯಾಲಿಯಲ್ಲೂ ಉತ್ತಮ ಪ್ರದರ್ಶನದ ನೀರಿಕ್ಷೆಯಲ್ಲಿರುವ ಹೀರೋ ಮೋಟೊಸ್ಪೋರ್ಟ್ ತಂಡವು ಮೂರು ಸದಸ್ಯರನ್ನು ಒಳಗೊಂಡ ತಂಡವನ್ನು ಪ್ರಕಟಿಸಿದ್ದು, ಹೊಸ ತಂಡದಲ್ಲಿ ಕನ್ನಡಿಗ ಸಿ.ಎಸ್ ಸಂತೋಷ್ ಸೇರಿದಂತೆ ಸ್ಟೆಬಾಸ್ಟಿನ್ ಬ್ರುಲೆರ್, ಜೊಕ್ವಿಮ್ ರೋಡ್ರಿಗೊಸ್ ಆಯ್ಕೆ ಮಾಡಲಾಗಿದೆ.

ಸ್ಟೆಬಾಸ್ಟಿನ್ ಬ್ರುಲೆರ್ ಈ ಹಿಂದೆ 2020ರ ಎಫ್ಎಂಐ ಕ್ರಾಸ್ ಕಂಟ್ರಿ ಬಾಜಾ ವರ್ಲ್ಡ್ ಕಪ್ ವಿಜೇತರಾಗಿದ್ದು, ಮತ್ತೊಬ್ಬ ರೈಡರ್ ಜೊಕ್ವಿಮ್ ರೋಡ್ರಿಗೊಸ್ ಈ ಹಿಂದೆ 2019ರ ಪಾನ್ ಆಫ್ರಿಕಾ ರ‍್ಯಾಲಿಯಲ್ಲಿ ವಿಜೇತರಾಗಿದ್ದರು.

ಎಂದಿನಂತೆ ಹೀರೋ ಮೋಟೊಸ್ಪೋರ್ಟ್ ತಂಡವನ್ನು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಪ್ರತಿನಿಧಿಸುತ್ತಿರುವ ಸಿ.ಎಸ್. ಸಂತೋಷ್ ಅವರು ಡಕಾರ್ ರ‍್ಯಾಲಿಯಲ್ಲಿ ಈಗಾಗಲೇ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಇದೀಗ ಹೊಸ ಆವೃತ್ತಿಗಾಗಿ ಸಿದ್ದಗೊಂಡಿದ್ದು, ಹೀರೋ ಮೋಟೋಸ್ಪೋಟ್ ರ‍್ಯಾಲಿ ತಂಡದ ವೂಲ್ಫ್ಂಗ್ ಫಿಷರ್ ತಂಡದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಕರೋನಾ ವೈರಸ್ ನಡುವೆಯೂ 2021ರ ಡಕಾರ್ ರ‍್ಯಾಲಿಯನ್ನು ವ್ಯವಸ್ಥಿತವಾಗಿ ಆಯೋಜಿಸುತ್ತಿರುವ ಡರಾಕ್ ರ‍್ಯಾಲಿ ತಂಡವು ಗರಿಷ್ಠ ಸುರಕ್ಷತೆ ಕೈಗೊಂಡಿದ್ದು, ಜನವರಿ 3ಕ್ಕೆ ಮೊದಲ ಹಂತದ ಸ್ಪರ್ಧೆಗೆ ಅಧಿಕೃತವಾಗಿ ಚಾಲನೆ ನೀಡಲಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

2021ರ ಡಕಾರ್ ರ‍್ಯಾಲಿಯಲ್ಲಿ ರೇಸ್ ಎಡಿಷನ್‌ನಲ್ಲಿರುವ 108 ವಿವಿಧ ಮಾದರಿಯ ಬೈಕ್ ಮಾದರಿಗಳು, 21 ಕ್ವಾಡ್ರಿಸೈಕಲ್, 124 ಕಾರುಗಳು ಮತ್ತು 42 ಟ್ರಕ್‌ಗಳು ಭಾಗಿಯಾಗಲಿದ್ದು, ಒಟ್ಟು 7,646 ಕಿ.ಮೀ ಅಂತರದಲ್ಲಿ 4,767 ಕಿ.ಮೀ ಪ್ರಯಾಣವು ವಿಶೇಷ ವಿಭಾಗವಾಗಿರುತ್ತದೆ.

2020ರ ಡಕಾರ್ ರ‍್ಯಾಲಿ ಆವೃತ್ತಿಗಿಂತ 2021ರ ಡಕಾರ್ ರ‍್ಯಾಲಿ ಆವೃತ್ತಿಯು ಪ್ರಯಾಣದ ದೂರವನ್ನು 300 ಕಿ.ಮೀ ಕಡಿತ ಮಾಡಲಾಗಿದ್ದು, ನಾಲ್ಕನೇ ಸುತ್ತು 2021ರ ಡಕಾರ್ ರ‍್ಯಾಲಿಯಲ್ಲಿ ಅತಿ ಉದ್ದದ ಮಾರ್ಗವಾಗಿದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ನಾಲ್ಕನೇ ಸುತ್ತಿನಲ್ಲಿನ ಸ್ಪರ್ಧೆಗಾಗಿ 813 ಕಿ.ಮೀ ಪ್ರಯಾಣ ಮಾಡಬೇಕಿದ್ದು, 2021ರ ಡಕಾರ್ ರ‍್ಯಾಲಿ ಆವೃತ್ತಿಯಲ್ಲಿ ಈ ಬಾರಿ 26 ರೇಸ್ ವಾಹನಗಳನ್ನು ಡಕಾರ್ ಕ್ಲಾಸಿಕ್ ವಿಭಾಗದಲ್ಲಿ ಸೇರ್ಪಡೆಗೊಳಿಸಲಾಗಿದೆ. ಇನ್ನು ಹೀರೋ ಮೋಟೊಸ್ಪೋರ್ಟ್ ತಂಡವು 450ಸಿಸಿ ಸಾಮರ್ಥ್ಯದ ಲೆವೆರಿ ರೇಸ್ ಎಡಿಷನ್ ಬೈಕ್ ಬಳಕೆ ಮಾಡಿದ್ದು, ಹೊಸ ಬೈಕ್ ಮಾದರಿಯು ಕಳೆದ ಆವೃತ್ತಿಯಲ್ಲಿನ ಬೈಕ್ ಮಾದರಿಗಿಂತಲೂ ಹೆಚ್ಚು ವೇಗ, ಕಾರ್ಯಕ್ಷಮತೆ ಮತ್ತು ದೀರ್ಘಕಾಲಿಕ ರೈಡಿಂಗ್‌ಗೆ ಪೂರಕವಾಗಿ ಅಭಿವೃದ್ದಿಗೊಳಿಸಲಾಗಿದೆ.