Just In
- 20 min ago
ಐಷಾರಾಮಿ ಕಾರು ಚಾಲಕನ ನಿರ್ಲಕ್ಷ್ಯಕ್ಕೆ ಪ್ರಾಣ ತೆತ್ತ ಪೊಲೀಸ್ ಕಾನ್ಸ್ಟೆಬಲ್ಗಳು
- 1 hr ago
ಭಾರತದಲ್ಲಿ 3 ಸೀರಿಸ್ ಗ್ರ್ಯಾನ್ ಲಿಮೊಸಿನ್ ಬಿಡುಗಡೆ ಮಾಡಿದ ಬಿಎಂಡಬ್ಲ್ಯು
- 2 hrs ago
2020ರ ಡಿಸೆಂಬರ್ ತಿಂಗಳಿನಲ್ಲಿ ಭರ್ಜರಿಯಾಗಿ ಮಾರಾಟವಾದ ಟಾಟಾ ಹ್ಯಾರಿಯರ್
- 3 hrs ago
ಭಾರತದಲ್ಲಿ ಬಿಡುಗಡೆಯಾದ ಐದು ವರ್ಷಗಳಲ್ಲಿ ಹೊಸ ದಾಖಲೆಗೆ ಕಾರಣವಾದ ಹ್ಯುಂಡೈ ಕ್ರೆಟಾ
Don't Miss!
- News
ಗಡಿಯಲ್ಲಿ ಮತ್ತೆ ಶಿವಸೇನೆ ಪುಂಡಾಟ; ಕರ್ನಾಟಕ ಪ್ರವೇಶ ಯತ್ನ ವಿಫಲ
- Movies
ಫೆಬ್ರವರಿ ಟು ಮೇ: ಸ್ಟಾರ್ಸ್ ಚಿತ್ರಗಳ ರಿಲೀಸ್ ದಿನಾಂಕ ಫಿಕ್ಸ್, ಡೇಟ್ ಈಗಲೇ ಲಾಕ್ ಮಾಡ್ಕೊಳ್ಳಿ!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈಯ್ನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪ್ಯಾರಾಲಲ್ ಟ್ವಿನ್ ಎಂಜಿನ್ ಹೊಂದಿರುವ ವಿಶ್ವದ ಏಕೈಕ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿದು
ಹಿಮಾಲಯನ್, ರಾಯಲ್ ಎನ್‌ಫೀಲ್ಡ್ ಕಂಪನಿಯ ಅತ್ಯುತ್ತಮ ಅಡ್ವೆಂಚರ್ -ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ. ಈ ಬೈಕ್ ದೇಶಿಯ ಮಾರುಕಟ್ಟೆಯಲ್ಲಿರುವ ಕಡಿಮೆ ಬೆಲೆಯ ಅಡ್ವೆಂಚರ್ -ಟೂರರ್ ಬೈಕ್‌ಗಳಲ್ಲಿ ಒಂದಾಗಿದೆ.

ಈ ಬೈಕಿನ ಬೆಲೆಯ ಬಗ್ಗೆ ಹೇಳುವುದಾದರೆ, ಈ ಬೈಕ್ ಆಫ್-ರೋಡಿಂಗ್ ಬೈಕ್ ಆಗಿ ನೀಡುವ ಬೆಲೆಗೆ ತಕ್ಕ ಮೌಲ್ಯವನ್ನು ನೀಡುತ್ತದೆ. ಈ ಬೈಕ್ ತನ್ನ ಪ್ರತಿಸ್ಪರ್ಧಿ ಬೈಕ್'ಗಳಿಗಿಂತ ಕಡಿಮೆ ಪವರ್ ಹಾಗೂ ಟಾರ್ಕ್ ಅನ್ನು ಹೊಂದಿರುವುದರಿಂದ ಹಿಮಾಲಯನ್ ಬೈಕ್ ಅನ್ನು ಹೆಚ್ಚಾಗಿ ಆನ್-ರೋಡ್ ಬೈಕ್ ಆಗಿ ಬಳಸಲಾಗುತ್ತದೆ. ಈ ಕಾರಣಕ್ಕೆ ಟ್ವಿನ್ ಸಿಲಿಂಡರ್ ಹೊಂದಿರುವ ಈ ಬೈಕ್ ಬೇಡಿಕೆಯನ್ನು ಹೊಂದಿದೆ.

ರಾಯಲ್ ಎನ್‌ಫೀಲ್ಡ್ ಕಂಪನಿಯು ಮುಂಬರುವ ದಿನಗಳಲ್ಲಿ ಈ ಬೈಕಿಗಾಗಿ ಹಲವು ಯೋಜನೆಗಳನ್ನು ಹೊಂದಿದೆ. ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕಿಗೆ ಸಂಬಂಧಿಸಿದ ವೀಡಿಯೊವೊಂದು ಹೊರ ಬಂದಿದೆ.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ವೀಡಿಯೊದಲ್ಲಿರುವ ಹಿಮಾಲಯನ್ ಬೈಕಿನಲ್ಲಿ ಪ್ಯಾರಾಲಲ್ ಟ್ವಿನ್ ಎಂಜಿನ್ ಬಳಸಲಾಗಿದೆ. ಈ ವೀಡಿಯೊವನ್ನು ಅಭಿನವ್ ಭಟ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಈ ಬೈಕನ್ನು ಮನ್‌ಪ್ರೀತ್ ಸಿಂಗ್ ಎಂಬ ವ್ಯಕ್ತಿ ಲಾಕ್‌ಡೌನ್ ಅವಧಿಯಲ್ಲಿ ಮಾಡಿಫೈಗೊಳಿಸಿದ್ದಾನೆ. ಮಾಡಿಫ್ಜಗೊಂಡಿರುವ ಈ ಬೈಕ್ ಪ್ಯಾರಾಲಲ್ ಟ್ವಿನ್ ಎಂಜಿನ್ ಹೊಂದಿರುವ ವಿಶ್ವದ ಏಕೈಕ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬೈಕ್ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಈ ಮಾಡಿಫಿಕೇಶನ್'ಗಾಗಿ ಅವರು ತಮ್ಮ ಬಳಿಯಿದ್ದ 1990ರ ಮಾದರಿಯ ಸುಜುಕಿ ಜಿಎಸ್ 400 ಇ ಬೈಕಿನಲ್ಲಿದ್ದ 400 ಸಿಸಿ ಡಿಒಹೆಚ್‌ಸಿ ಪ್ಯಾರಾಲಲ್ ಟ್ವಿನ್ ಎಂಜಿನ್ ಬಳಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಈ ಎಂಜಿನ್ ಗರಿಷ್ಠ 38.4 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ.

ಅಂದರೆ ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಸ್ಟಾಂಡರ್ಡ್ ಮಾದರಿಗಿಂತ ಸುಮಾರು 14.7 ಹೆಚ್ಚು ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಆದರೆ ಟಾರ್ಕ್ ಉತ್ಪಾದನೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಈ ಹಿಮಾಲಯನ್ ಬೈಕಿನಲ್ಲಿರುವ ಎಂಜಿನ್ 28 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ರಾಯಲ್ ಎನ್‌ಫೀಲ್ಡ್ ಹಿಮಾಲಯನ್‌ನ ಸ್ಟ್ಯಾಂಡರ್ಡ್ ಮಾದರಿಯು 5-ಸ್ಪೀಡಿನ ಗೇರ್‌ಬಾಕ್ಸ್ ಹೊಂದಿದ್ದರೆ, ಈ ಎಂಜಿನ್ 6-ಸ್ಪೀಡಿನ ಗೇರ್‌ಬಾಕ್ಸ್ ಹೊಂದಿದೆ.
ಈ ಹಿಮಾಲಯನ್ ಚಾಸಿಸ್'ನೊಂದಿಗೆ ಸುಜುಕಿ ಜಿಎಸ್ 400 ಇ ಎಂಜಿನ್ ಅನ್ನು ಜಾಗರೂಕತೆಯಿಂದ ಅಳವಡಿಸಲಾಗಿದೆ. ಮಾಡಿಫೈಗೊಂಡ ಈ ಹಿಮಾಲಯನ್ ಬೈಕಿನಲ್ಲಿ ಎರಡು 36 ಎಂಎಂ ಮಿನಿ ಕಾರ್ಬ್ಯುರೇಟರ್‌ಗಳನ್ನು ಬಳಸಲಾಗಿದೆ. ಜೊತೆಗೆ ಇತರ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಬೈಕ್‌ನ ಮಾಲೀಕರ ಪ್ರಕಾರ, ಈ ಬೈಕ್ ಸ್ವಚ್ವವಾಗಿದ್ದು, ನೇರ ಶಕ್ತಿಯನ್ನು ನೀಡುತ್ತದೆ. ಇನ್ನು ಟ್ವಿನ್-ಸಿಲಿಂಡರ್ ಎಂಜಿನ್ ತುಂಬಾ ಮೃದುವಾಗಿದ್ದು, ಯಾವುದೇ ರೀತಿಯ ವೈಬ್ರೇಷನ್ ಅನ್ನು ಉಂಟುಮಾಡುವುದಿಲ್ಲ. ಈ ಬೈಕಿನ ಟಾಪ್ ಸ್ಪೀಡ್ 140 ಕಿ.ಮೀಗಳಾಗಿದೆ. ಈ ಚಿತ್ರಗಳನ್ನು ಅಭಿನವ್ ಭಟ್ ಯೂಟ್ಯೂಬ್ ಚಾನೆಲ್'ನಿಂದ ಪಡೆಯಲಾಗಿದೆ.