ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್‌ಆರ್ ಬೈಕ್

ಹೋಂಡಾ ಕಂಪನಿಯು ಹೊಸ ಸಿಬಿಆರ್ 250 ಆರ್ ಆರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಲಾಗಿದೆ. ಈ ಹೊಸ ಹೋಂಡಾ ಬೈಕ್ ಹಿಂದಿನ ಮಾದರಿಗಿಂತ ಹೆಚ್ಚು ಪವರ್‌ಫುಲ್ ಆಗಿರಲಿದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಕರೋನಾ ವೈರಸ್ ಭೀತಿಯ ನಡುವೆ ಹೋಂಡಾ ಕಂಪನಿಯು ಹೊಸ ಸಿಬಿಆರ್ 250 ಆರ್ ಆರ್ ಬೈಕನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. ಇದರ ಜೊತೆಯಲ್ಲಿ ಹೋಂಡಾ ಕಂಪನಿಯು ತನ್ನ ಸರಣಿಯಲ್ಲಿರುವ ಇತರ ಸಿಟಿ 125 ಹಂಟರ್ ಕಬ್ ಮತ್ತು ಸಿಬಿಆರ್ 1000 ಆರ್ಆರ್-ಆರ್ ಫೈರ್‌ಬ್ಲೇಡ್ ವರ್ಚುವಲ್ ಮೋಟಾರ್‌ಸೈಕಲ್ ಶೋ' ಕಾರ್ಯಕ್ರಮದಲ್ಲಿ ಪ್ರದರ್ಶಿಸಿತು. ಹೊಸ ಸಿಬಿಆರ್ 250 ಆರ್ಆರ್ ಬೈಕಿನಲ್ಲಿ ಪವರ್‌ಫುಲ್ ಎಂಜಿನ್ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿಬಿಆರ್ 250 ಆರ್ ಆರ್ ಬೈಕ್ 249 ಸಿಸಿ ಪ್ಯಾರೆಲಲ್-ಟ್ವಿನ್, 8-ವಾಲ್ವ್, ಡಿಒಸಿಹೆಚ್, ಲಿಕ್ವಿಡ್ ಕೂಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 12,500 ಆರ್‌ಪಿಎಂನಲ್ಲಿ 38 ಬಿಹೆಚ್‌ಪಿ ಪವರ್ ಹಾಗೂ 11,000 ಆರ್‌ಪಿಎಂನಲ್ಲಿ 23 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

249 ಸಿಸಿ ಎಂಜಿನ್‌ ಹೊಂದಿರುವ 2020ರ ಸಿಬಿಆರ್ 250 ಆರ್ ಆರ್ ಬೈಕಿನಲ್ಲಿ ಹೊಸ ವಿನ್ಯಾಸದ ಪಿಸ್ಟನ್ ಅಳವಡಿಸಲಾಗಿದೆ. ಈ ಬೈಕ್ ಅನ್ನು ಭಾರತದಲ್ಲಿ ಜುಲೈ ತಿಂಗಳಿನಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಎಂಜಿನ್ ಪವರ್ ಉತ್ಪಾದನೆಯು 38 ಬಿಹೆಚ್‌ಪಿಯಿಂದ 41 ಬಿಹೆಚ್‌ಪಿಗೆ ಏರಿದೆ. ಹೋಂಡಾ ಕಂಪನಿಯ ಈ ಹೊಸ ಬೈಕ್ ಕವಾಸಕಿ ಕಂಪನಿಯ ಝಡ್‌ಎಕ್ಸ್ 25 ಆರ್ ಬೈಕಿಗೆ ಪೈಪೋಟಿ ನೀಡಲಿದೆ. ಕವಾಸಕಿ ಝಡ್‌ಎಕ್ಸ್ 25 ಬೈಕಿನಲ್ಲಿರುವ ಎಂಜಿನ್ 41 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಕವಾಸಕಿಯ ಈ ಬೈಕಿನಲ್ಲಿ 250 ಸಿಸಿ ಸ್ಟ್ಯಾಂಡರ್ಡ್ ಇನ್-ಲೈನ್ 4-ಸಿಲಿಂಡರ್ ಹೈ-ರಿವೈವಿಂಗ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 45 ಬಿಹೆಚ್‌ಪಿ ಪವರ್ ಉತ್ಪಾದಿಸುತ್ತದೆ. ಕವಾಸಕಿ ಕಂಪನಿಯು ಈ ಹೊಸ ಬೈಕ್ ಅನ್ನು ಮುಂದಿನ ತಿಂಗಳು ಇಂಡೋನೇಷ್ಯಾದಲ್ಲಿ ಬಿಡುಗಡೆಗೊಳಿಸಲಿದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಹೊಸ ಹೋಂಡಾ ಸಿಬಿಆರ್ 250 ಆರ್ಆರ್ ಬೈಕ್ ಸ್ಲಿಪ್ಪರ್ ಕ್ಲಚ್ ಹಾಗೂ 3 ಬಿಹೆಚ್‌ಪಿ ಪವರ್ ಉತ್ಪಾದಿಸುವ ಬೈ-ಡೈರೆಕ್ಷನಲ್ ಕ್ವಿಕ್ ಶಿಫ್ಟರ್ ಗಳನ್ನು ಹೊಂದಿರಲಿದೆ. ಹೋಂಡಾದ ಈ ಹೊಸ ಕ್ವಾರ್ಟ್-ಲೀಟರ್ ಬೈಕ್ ಸ್ಮಾರ್ಟ್ ಕೀ ಸಿಸ್ಟಂ ಅನ್ನು ನೀಡುತ್ತದೆ. ಈ ಸಿಸ್ಟಂ ಕೀ ಲೆಸ್ ಇಗ್ನಿಷನ್ ಒದಗಿಸುತ್ತದೆ.

ಅನಾವರಣಗೊಂಡ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಬೈಕ್

ಕೀ ಫ್ಯಾಬ್‌ನಲ್ಲಿರುವ ಲಾಕ್ ಬಟನ್ ಮೂಲಕ ಬೈಕ್ ಮಾಲೀಕರು ಹ್ಯಾಂಡಲ್‌ಬಾರ್‌ಗಳನ್ನು ಲಾಕ್ ಹಾಗೂ ಅನ್ಲಾಕ್ ಮಾಡಬಹುದು. ಹೋಂಡಾ ಸಿಬಿಆರ್ 250 ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯ ಬೈಕುಗಳಲ್ಲಿ ಒಂದಾಗಿದೆ. ಆದರೆ ತನ್ನ ಪ್ರತಿಸ್ಪರ್ಧಿ ಬೈಕುಗಳಿಗೆ ಹೋಲಿಸಿದರೆ ಕಾರ್ಯಕ್ಷಮತೆ ಕಡಿಮೆಯಾಗಿತ್ತು. ಆದರೆ ಹೊಸ ಹೋಂಡಾ ಸಿಬಿಆರ್ 250 ಆರ್ ಆರ್ ಹೆಚ್ಚಿನ ಕಾರ್ಯಕ್ಷಮತೆ ಮತ್ತು ಹೊಸ ತಂತ್ರಜ್ಞಾನವನ್ನು ಹೊಂದಿದೆ.

Most Read Articles

Kannada
English summary
Honda CBR250RR (2020) Unveiled Globally. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X