ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ಕರೋನಾ ವೈರಸ್ ಅಟ್ಟಹಾಸವು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಭಾರತದಲ್ಲೂ ಕೂಡಾ ಈಗಾಗಗಲೇ ಸಾವಿರಾರು ಜನ ವೈರಸ್ ದಾಳಿಗೆ ಬಲಿಯಾಗಿದ್ದಾರೆ. ಇದಕ್ಕಾಗಿ ಲಾಕ್‌ಡೌನ್ ವಿಧಿಸಿರುವ ಕೇಂದ್ರ ಸರ್ಕಾರವು ವೈರಸ್ ಭೀತಿಯ ನಡುವೆಯೂ ವಾಣಿಜ್ಯ ವ್ಯವಹಾರಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ಮಾಹಾಮಾರಿ ಕರೋನಾ ವೈರಸ್ ಅಟ್ಟಹಾಸ ತಗ್ಗಿಸಲು ಎಲ್ಲಾ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿವೆ. ಆಟೋ ಉದ್ಯಮದಕ್ಕೂ ಕೂಡಾ ಭಾರೀ ಪ್ರಮಾಣದ ನಷ್ಟ ಉಂಟಾಗಿದ್ದು, ಸದ್ಯ ವೈರಸ್ ಹೊಡೆದೊಡಿಸಲು ವಿಧಿಸಲಾಗಿರುವ ಲಾಕ್‌‌ಡೌನ್ ಅನ್ನು ಪರಿಸ್ಥಿತಿಗೆ ಅನುಗುಣವಾಗಿ ಕೆಲವು ವಿನಾಯ್ತಿಗಳನ್ನು ನೀಡಲಾಗುತ್ತಿದೆ.

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ವೈರಸ್ ಹೆಚ್ಚಿರುವ ಕೆಂಪು ವಲಯಗಳನ್ನು ಹೊರತುಪಡಿಸಿ ಹಸಿರು ಮತ್ತು ಕಿತ್ತಳೆ ವಲಯದಲ್ಲಿನ ವಾಣಿಜ್ಯ ಚಟುವಟಿಕೆಗಳಿಗೆ ಷರತ್ತುಬದ್ದ ಅವಕಾಶ ನೀಡಲಾಗಿದ್ದು, ಆಟೋ ಕಂಪನಿಗಳು ವಾಹನ ಉತ್ಪಾದನೆ ಜೊತೆಗೆ ವಾಹನ ಮಾರಾಟ ಪ್ರಕ್ರಿಯೆಯನ್ನು ಸಹ ಪುನಾರಂಭಿಸಿವೆ.

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ಹೋಂಡಾ ಮೋಟಾರ್‌ಸೈಕಲ್ ಸಹ ದೇಶಾದ್ಯಂತ ಹರಡಿಕೊಂಡಿರುವ ಸಾವಿರಾರು ವಾಹನ ಮಾರಾಟ ಮಳಿಗೆಗಳಲ್ಲಿ ವಾಹನ ಮಾರಾಟಕ್ಕೆ ಮರುಚಾಲನೆ ನೀಡಲಾಗಿದ್ದು, ನೇರ ವಾಹನ ಮಾರಾಟದ ಬದಲಾಗಿ ಆನ್‌ಲೈನ್ ವ್ಯವಹಾರಗಳ ಮೂಲಕ ಗ್ರಾಹಕರ ಮನೆ ಬಾಗಿಲಿಗೆ ಬೈಕ್ ಉತ್ಪನ್ನಗಳನ್ನು ವಿತರಣೆ ಮಾಡುತ್ತಿದೆ.

MOST READ: ಲಾಕ್ ಡೌನ್ ಎಫೆಕ್ಟ್- ಮಾರ್ಗ ಮಧ್ಯದಲ್ಲೇ ಉಳಿದ ಸಾವಿರಾರು ಕೋಟಿ ಮೌಲ್ಯದ ಹೊಸ ವಾಹನಗಳು

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ವೈರಸ್ ಭೀತಿಯಿಂದಾಗಿ ಕೇಂದ್ರ ಸರ್ಕಾರ ಮಾರ್ಗಸೂಚಿಯೆಂತೆ ವಾಹನ ಮಾರಾಟ ಮತ್ತು ಉತ್ಪಾದನೆ ಕೈಗೊಂಡಿರುವ ಆಟೋ ಕಂಪನಿಗಳು ಗರಿಷ್ಠ ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದು, ಆನ್‌ಲೈನ್ ವಾಹನ ಮಾರಾಟವು ಸದ್ಯಕ್ಕೆ ವರದಾನವಾಗಿದೆ.

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ಇನ್ನು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿರುವ ಹೋಂಡಾ ಕಂಪನಿಯು ವಿವಿಧ ಮಾದರಿಯ ವೈದ್ಯಕೀಯ ಉಪಕರಣಗಳನ್ನು ಅಗತ್ಯವಿರುವ ರಾಜ್ಯ ಸರ್ಕಾರಗಳಿಗೆ ಒದಗಿಸಿದ್ದು, ಸುಧಾರಿತ ತಂತ್ರಜ್ಞಾನ ಪ್ರೇರಿತ 800 ಯುನಿಟ್ ಹೈ ಪ್ರೆಷರ್ ಬ್ಯಾಕ್‌ಪ್ಯಾಕ್ ಸ್ಪ್ರೇ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿದೆ.

MOST READ: ಕರೋನಾ ಸಂಕಷ್ಟ: ಟ್ಯಾಕ್ಸಿ ಮತ್ತು ಆಟೋ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ

ಲಾಕ್‌ಡೌನ್ ಸಡಿಲಿಕೆ: ಬೈಕ್ ಮಾರಾಟಕ್ಕೆ ಚಾಲನೆ ನೀಡಿದ ಹೋಂಡಾ

ಹರಿಯಾಣ, ರಾಜಸ್ತಾನ, ಕರ್ನಾಟಕ ಮತ್ತು ಗುಜರಾತ ಸರ್ಕಾರಗಳಿಗೆ 800 ಯುನಿಟ್ ಹೈ ಪ್ರೆಷರ್ ಬ್ಯಾಕ್‌ಪ್ಯಾಕ್ ಸ್ಪ್ರೇ ಕಿಟ್‌ಗಳನ್ನು ದೇಣಿಗೆಯಾಗಿ ನೀಡಿರುವ ಹೋಂಡಾ ಕಂಪನಿಯು ಕರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ತನ್ನದೆ ಆದ ನಿರ್ವಹಿಸಿದ್ದು, ಹೈ ಪ್ರೆಷರ್ ಬ್ಯಾಕ್‌ಪ್ಯಾಕ್ ಸ್ಪ್ರೇ ಕಿಟ್‌ಗಳು ರೋಗ ಹರಡುವಿಕೆಯನ್ನು ತಡೆಯುವಲ್ಲಿ ಇದು ಪ್ರಮುಖ ಪಾತ್ರವಹಿಸುತ್ತಿವೆ.

Most Read Articles

Kannada
English summary
Honda Motorcycle dealers restart operations. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X