Just In
Don't Miss!
- News
ಪೊಲೀಸ್ ಠಾಣೆಯಲ್ಲಿ ಬಗೆಹರಿದ ಒಂದು ಕೋಣದ ವಿವಾದ!
- Movies
'ದೀಪ್ ಸಿಧು ಜೊತೆ ನನಗೆ ಯಾವುದೇ ಸಂಬಂಧವಿಲ್ಲ': ಸಂಸದ, ನಟ ಸನ್ನಿ ಡಿಯೋಲ್ ಸ್ಪಷ್ಟನೆ
- Finance
ಬಜೆಟ್ 2021: ಸ್ಟ್ಯಾಂಡರ್ಡ್ ಡಿಡಕ್ಷನ್ ರು. 1 ಲಕ್ಷಕ್ಕೆ ಹೆಚ್ಚಳ ನಿರೀಕ್ಷೆ
- Sports
ಬೈರ್ಸ್ಟೋವ್ಗೆ 2 ಪಂದ್ಯಗಳ ವಿಶ್ರಾಂತಿ ನೀಡಿರುವುದನ್ನು ಸಮರ್ಥಿಸಿದ ಇಂಗ್ಲೆಂಡ್ ಕೋಚ್
- Education
WCD Chitradurga Recruitment 2021: ಅಂಗನವಾಡಿಯಲ್ಲಿ 129 ಹುದ್ದೆಗಳಿಗೆ ಅರ್ಜಿ ಆಹ್ವಾನ
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೋಂಡಾ ಹೈನೆಸ್ ಸಿಬಿ350 ಬೈಕ್ ಖರೀದಿಯ ಕಾಯುವಿಕೆಯ ಅವಧಿಯಲ್ಲಿ ಹೆಚ್ಚಳ
ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿರುವ ಹೋಂಡಾ ಹೈನೆಸ್ ಸಿಬಿ350 ಬೈಕ್ ಮಾದರಿಯ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಹೊಸ ಬೈಕ್ ಖರೀದಿಗಾಗಿ ಗ್ರಾಹಕರ ಕಾಯುವಿಕೆ ಅವಧಿಯ ಮಾಹಿತಿಯನ್ನು ಬಹಿರಂಗಪಡಿಸಿದೆ.

ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಹೊಸ ಬೈಕ್ ಮಾರಾಟ ಆರಂಭಿಸಿದ ನಂತರ ಇದುವರೆಗೆ ಸುಮಾರು 4 ಸಾವಿರ ಯುನಿಟ್ ಮಾರಾಟ ಮಾಡಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಉತ್ಪಾದನಾ ಪ್ರಮಾಣವನ್ನು ಹೆಚ್ಚಿಸುತ್ತಿದೆ. ಹೈನೆಸ್ ಸಿಬಿ350 ಬೈಕ್ ಮಾದರಿಗಾಗಿ ವಿವಿಧ ನಗರಗಳಿಗೆ ಅನುಗುಣವಾಗಿ ಕಾಯುವಿಕೆ ಅವಧಿಯು 1 ತಿಂಗಳಿನಿಂದ 4 ತಿಂಗಳಿಗೆ ನಿಗದಿಯಾಗಿದ್ದು, ಹೊಸ ಬೈಕ್ ಮಾದರಿಯು ಬಿಗ್‌ವಿಂಗ್ ಮಾರಾಟ ಮಳಿಗೆಗಳಲ್ಲಿ ಮಾತ್ರ ಮಾರಾಟಗೊಳ್ಳುತ್ತಿದೆ.

ಹೊಸ ಬೈಕ್ ಬಿಡುಗಡೆಯ ಆರಂಭದಲ್ಲಿ ಹೆಚ್ಚಿನ ಮಟ್ಟದ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಹಿನ್ನಡೆ ಅನುಭವಿಸಿದರೂ ಕಳೆದ ತಿಂಗಳಿನಿಂದ ಹೊಸ ಬೈಕ್ ಬುಕ್ಕಿಂಗ್ ಪ್ರಮಾಣದಲ್ಲಿ ಸಾಕಷ್ಟು ಏರಿಕೆಯಾಗಿದ್ದು, ಕ್ಲಾಸಿಕ್ ಬೈಕ್ ಮಾರಾಟದಲ್ಲಿ ಹೊಸ ಸಂಚಲನ ಮೂಡಿಸುವ ಭರವಸೆ ಮೂಡಿಸಿದೆ.

ಹೊಸ ಬೈಕ್ ಅನ್ನು ಸಂಕ್ರಾಂತಿ ಹೊತ್ತಿಗೆ ಭರ್ಜರಿಯಾಗಿ ಮಾರಾಟ ಮಾಡುವ ಗುರಿಹೊಂದಿರುವ ಹೋಂಡಾ ಕಂಪನಿಯು ಹೊಸ ಬೈಕ್ ಖರೀದಿ ಮೇಲೆ ಹಲವಾರು ಆಕರ್ಷಕ ಆಫರ್‌ಗಳನ್ನು ಘೋಷಣೆ ಮಾಡಿದ್ದು, ಕ್ಲಾಸಿಕ್ ಬೈಕ್ ಖರೀದಿದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

ಹೊಸ ಬೈಕ್ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಡಿಲಕ್ಸ್ ಮತ್ತು ಡಿಲಕ್ಸ್ ಪ್ರೋ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 1.85 ಲಕ್ಷ ಮತ್ತು ಡಿಲಕ್ಸ್ ಪ್ರೋ ಮಾದರಿಯು ರೂ. 1.90 ಲಕ್ಷ ಬೆಲೆ ಹೊಂದಿದೆ. ಈ ಮೂಲಕ ಕ್ಲಾಸಿಕ್ ಬೈಕ್ ಮಾದರಿಗಳ ಮಾರಾಟದಲ್ಲಿ ಮುಂಚೂಣಿಯಲ್ಲಿರುವ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ ಮತ್ತು ಜಾವಾ ಮೋಟಾರ್‌ಸೈಕಲ್ ಬೈಕ್ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡುತ್ತಿದೆ.

ಹೈನೆಸ್ ಸಿಬಿ 350 ಬೈಕಿನ ವಿನ್ಯಾಸವು ಹಳೆಯ ಕ್ಲಾಸಿಕ್ ಸಿಬಿ ಬೈಕ್ ಸರಣಿಯನ್ನು ನೆನಪಿಸಲಿದ್ದು, ಈ ಬೈಕಿನ ಮುಂಭಾಗದಲ್ಲಿ ರೌಂಡ್ ಎಲ್ಇಡಿ ಹೆಡ್‌ಲ್ಯಾಂಪ್ ಕ್ರೋಮ್ ಫ್ರಂಟ್ ಫೆಂಡರ್ ಹಾಗೂ ಫೋರ್ಕ್‌ಗಳನ್ನು ಪಡೆದುಕೊಂಡಿದೆ. ಈ ಬೈಕಿನಲ್ಲಿ ದೊಡ್ಡದಾದ 15-ಲೀಟರಿನ ಫ್ಯೂಯಲ್ ಟ್ಯಾಂಕ್ ಜೋಡಿಸಲಾಗಿದ್ದು, ಈ ಬೈಕಿನ ಸೈಡ್ ಗಳಲ್ಲಿ ಹೊಂಡಾ ಬ್ಯಾಡ್ಜಿಂಗ್ ಅಳವಡಿಸಲಾಗಿದೆ.

ಎಂಜಿನ್ ಕವರ್, ಎಕ್ಸಾಸ್ಟ್ ಸೇರಿದಂತೆ ಈ ಬೈಕಿನ ಹಲವು ಭಾಗಗಳಲ್ಲಿ ಕ್ರೋಮ್ ಬಣ್ಣವನ್ನು ನೀಡಲಾಗಿದ್ದು, ಎಕ್ಸಾಸ್ಟ್ ಕ್ಲಾಸಿಕ್ ಲೋ-ಪಿಚ್ ಥಂಪಿ ನೋಟ್ ಹೊಂದಿದೆ. ಬೈಕ್ ವಿನ್ಯಾಸವನ್ನು ಸರಳಗೊಳಿಸಲು ಹಿಂಭಾಗವನ್ನು ಚಿಕ್ಕದು ಮಾಡಲಾಗಿದ್ದು, ಈ ಸೆಗ್ ಮೆಂಟಿನಲ್ಲಿ ಮೊದಲ ಬಾರಿಗೆ ಈ ಬೈಕಿನಲ್ಲಿ ರಿಂಗ್-ಟೈಪ್ ವಿಂಕರ್ ಗಳನ್ನು ನೀಡಲಾಗಿದೆ.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಹೋಂಡಾ ಹೈನೆಸ್ ಸಿಬಿ 350 ಬೈಕಿನಲ್ಲಿ ಅಸಿಸ್ಟ್ ಸ್ಲಿಪ್ಪರ್-ಕ್ಲಚ್, ಎಂಜಿನ್ ಸ್ಟಾರ್ಟ್/ಸ್ಟಾಪ್ ಸ್ವಿಚ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಪೋರ್ಟ್, ಹೋಂಡಾ ಸೆಲೆಕ್ಟಬಲ್ ಟಾರ್ಕ್ ಕಂಟ್ರೋಲ್ ಸಿಸ್ಟಂ ಸೇರಿದಂತೆ ಹಲವಾರು ಫೀಚರ್ ಗಳಿದ್ದು, ಬೇಸ್ ಮಾದರಿಯನ್ನು ಪ್ರೆಷಿಯಸ್ ರೆಡ್ ಮೆಟಾಲಿಕ್, ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ಹಾಗೂ ಪರ್ಲ್ ನೈಟ್ ಸ್ಟಾರ್ ಬ್ಲ್ಯಾಕ್ ಎಂಬ ಮೂರು ಸಿಂಗಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

ಟಾಪ್-ಎಂಡ್ ಡಿಎಲ್ಎಕ್ಸ್ ಪ್ರೊ ಮಾದರಿಯನ್ನು ಮ್ಯಾಟ್ ಗ್ರೇ ಮೆಟಾಲಿಕ್, ಮ್ಯಾಟ್ ಸ್ಟೀಲ್ ಬ್ಲ್ಯಾಕ್ ಮೆಟಾಲಿಕ್, ವರ್ಚುವಸ್ ವೈಟ್ ಅಥ್ಲೆಟಿಕ್ ಬ್ಲೂ ಮೆಟಾಲಿಕ್ ಹಾಗೂ ಸ್ಪಿಯರ್ ಸಿಲ್ವರ್ ಮೆಟಾಲಿಕ್ ಪರ್ಲ್ ನೈಟ್ ಸ್ಟಾರ್ ಮೆಟಾಲಿಕ್ ಎಂಬ ಮೂರು ಡ್ಯುಯಲ್-ಟೋನ್ ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಬೈಕ್ ಅನಲಾಗ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಹೋಂಡಾ ಸ್ಮಾರ್ಟ್‌ಫೋನ್ ವಾಯ್ಸ್ ಕಂಟ್ರೋಲ್ ಸಿಸ್ಟಂಗಳನ್ನು ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಪ್ರೇರಣೆಯ 348.36 ಸಿಸಿ ಏರ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ನೊಂದಿಗೆ 20.8-ಬಿಎಚ್‌ಪಿ ಮತ್ತು 30-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.