200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಮೋಟಾರ್‍‍ಸೈಕಲ್ ಕಂಪನಿ ಭಾರತದಲ್ಲಿರುವ ಪ್ರಬಲ ಬೈಕ್ ತಯಾರಕ ಕಂಪನಿಗಳಲ್ಲಿ ಒಂದಾಗಿದೆ. ಹೋಂಡಾ ಕಂಪನಿಯ ಬೈಕ್‍‍ಗಳಲ್ಲಿರುವ ಎಂಜಿನ್‍‍ಗಳು ಹೆಚ್ಚು ಪರ್ಫಾಮೆನ್ಸ್ ನೀಡುವುದರ ಜೊತೆಗೆ ವೈಬ್ರೇಷನ್ ಇಲ್ಲದ ಚಾಲನಾ ಅನುಭವವನ್ನು ನೀಡುತ್ತವೆ.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಇದರಿಂದಾಗಿ ಹೋಂಡಾ ಬೈಕ್‍‍ಗಳು ಭಾರತೀಯ ಗ್ರಾಹಕರಲ್ಲಿ ಹೆಚ್ಚು ಜನಪ್ರಿಯವಾಗಿವೆ. ಭಾರತದಲ್ಲಿ ಹೋಂಡಾ ಕಂಪನಿಯು ಬಜೆಟ್ ಬೈಕ್, ಸ್ಕೂಟರ್, ಸ್ಪೋರ್ಟ್ಸ್ ಬೈಕ್ ಹಾಗೂ ಸೂಪರ್ ಬೈಕ್‍‍ಗಳನ್ನು ಮಾರಾಟ ಮಾಡುತ್ತದೆ.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಇದರ ಜೊತೆಗೆ ಹೋಂಡಾ ಕಂಪನಿಯು ತನ್ನ ವ್ಯವಹಾರವನ್ನು ವಿಸ್ತರಿಸುವ ಸಲುವಾಗಿ ಹೊಸ ಬೈಕ್ ಮಾದರಿಗಳನ್ನು ಬಿಡುಗಡೆಗೊಳಿಸಲು ಮುಂದಾಗಿದೆ. ಹೋಂಡಾ ಕಂಪನಿಯು ದೇಶಿಯ ಮಾರುಕಟ್ಟೆಗಾಗಿ ಹೊಸ 200 ಸಿಸಿ ಬೈಕ್ ಅನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದೆ.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಇದರ ಜೊತೆಗೆ ಹೋಂಡಾ ಕಂಪನಿಯು ಹೊಸ 160 ಸಿಸಿ ಹಾಗೂ 300 ಸಿಸಿ ಬೈಕ್‍‍ಗಳನ್ನೂ ಸಹ ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆಯನ್ನು ಹೊಂದಿದೆ. ಹೋಂಡಾ ಕಂಪನಿಯು ಭಾರತದಲ್ಲಿ ಬಿಡುಗಡೆಗೊಳಿಸಿದ್ದ ಹಾರ್ನೆಟ್ 160 ಆರ್ ಬೈಕ್ ಸಾಕಷ್ಟು ಜನಪ್ರಿಯವಾಗಿತ್ತು.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಹೋಂಡಾ ಕಂಪನಿಯು ಅಭಿವೃದ್ಧಿಪಡಿಸಲಿರುವ ಹೊಸ ಬೈಕಿನ ವಿನ್ಯಾಸವು ರಗಡ್ ಆಗಿರಲಿದ್ದು, ಯುವ ಜನರನ್ನು ಸೆಳೆಯುವುದರ ಜೊತೆಗೆ ಹೊಸ ಬೈಕ್ ಹೆಚ್ಚಿನ ಪರ್ಫಾಮೆನ್ಸ್ ನೀಡುವ ಸಾಧ್ಯತೆಗಳಿವೆ. ಹೋಂಡಾದ ಹೊಸ 200 ಸಿಸಿ ಬೈಕಿನಲ್ಲಿ ಸಿಂಗಲ್ ಸಿಲಿಂಡರ್ ಏರ್‍‍ಕೂಲ್ಡ್ ಸಿಸ್ಟಂ ಅಳವಡಿಸಲಾಗುವುದು.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ಈ ಎಂಜಿನ್ 20 ಬಿಹೆಚ್‍‍ಪಿಯಿಂದ 23 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸಲಿದೆ. ಹೋಂಡಾ ಕಂಪನಿಯ ಹೊಸ 200 ಸಿಸಿ ಬೈಕ್‍‍ಗಳು ಸ್ಟ್ರೀಟ್ ಫೈಟರ್ ಅಥವಾ ಸ್ಪೋರ್ಟ್ ಬೈಕ್ ಮಾದರಿಗಳಾಗಿರಲಿದ್ದು, ಫೇರಿಂಗ್ ಪ್ಯಾನೆಲ್‍‍ಗಳನ್ನು ಹೊಂದಿರಲಿವೆ.

200 ಸಿಸಿ ಬೈಕ್ ಬಿಡುಗಡೆಗೊಳಿಸಲಿದೆ ಹೋಂಡಾ

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಹೋಂಡಾದ ಹೊಸ 200ಸಿಸಿ ಬೈಕ್ ಟಿವಿಎಸ್ ಅಪಾಚೆ 200 ಹಾಗೂ ಪಲ್ಸರ್ 200 ಎನ್‍ಎಸ್ ಬೈಕ್‍‍ಗಳಿಗೆ ಪೈಪೋಟಿ ನೀಡಲಿದೆ.

ಸೂಚನೆ: ಈ ಲೇಖನದಲ್ಲಿ ಹೋಂಡಾ ಹಾರ್ನೆಟ್ ಬೈಕಿನ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Honda plans to launch new 200cc bike in India. Read in Kannada.
Story first published: Saturday, January 18, 2020, 10:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X