ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಮಹಾಮಾರಿ ಕರೋನಾ ವೈರಸ್ ತಡೆಗಾಗಿ ಕೇಂದ್ರ ಸರ್ಕಾರವು ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿರುವುದರಿಂದ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣವಾಗಿ ಬಂದ್ ಆಗಿದ್ದು, ಆಟೋ ಉತ್ಪಾದನಾ ವಲಯವು ಲಾಕ್ ಡೌನ್‌ನಿಂದಾಗಿ ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದೆ.

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಹೊಸ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಸಂಪೂರ್ಣ ಬಂದ್ ಮಾಡಿರುವುದರಿಂದ ಉತ್ಪಾದನಾ ಕಂಪನಿಗಳಿಂತ ಮಾರಾಟಗಾರರು ಭಾರೀ ಪ್ರಮಾಣದ ನಷ್ಟ ಅನುಭವಿಸುತ್ತಿದ್ದು, ಸಂಕಷ್ಟದ ಸಮಯದಲ್ಲೂ ವಾಹನ ಕಂಪನಿಗಳು ಮಾರಾಟಗಾರರ ಕೈ ಹಿಡಿದಿವೆ. ಹೌದು, ವಾಹನ ಮಾರಾಟ ಪ್ರಕ್ರಿಯೆ ಬಂದ್ ಆಗಿದ್ದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಮಾರಾಟಗಾರರಿಗೆ ಹಣಕಾಸು ನೆರವು ಮಾಡಿರುವ ವಿವಿಧ ಆಟೋ ಕಂಪನಿಗಳು ರೂ.1800 ಕೋಟಿ ಪರಿಹಾರ ಘೋಷಣೆ ಮಾಡಿವೆ.

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಪರಿಹಾರದ ಹಣದಲ್ಲಿ ಮಾರಾಟ ಮಳಿಗೆಗಳ ನಿರ್ವಹಣಾ ವೆಚ್ಚ ಮತ್ತು ಸಿಬ್ಬಂದಿ ವೇತನದ ಖರ್ಚು ಬಗೆಹರಿಯಲಿದ್ದು, ಮಾರಾಟವಾಗದೆ ಉಳಿದಿರುವ ಬಿಎಸ್-4 ಸ್ಟಾಕ್ ಸಾಗಾಣಿಕೆಯ ವೆಚ್ಚವನ್ನು ಸಹ ಆಟೋ ಕಂಪನಿಗಳೇ ಭರಿಸಲಿವೆ.

MOST READ: ವಿವಾಹ ವಾರ್ಷಿಕೋತ್ಸವದ ಸಂಭ್ರಮಕ್ಕಾಗಿ ದುಬಾರಿ ಬೆಲೆಯ ಸರ್ಪ್ರೈಸ್ ಗಿಫ್ಟ್

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಹೋಂಡಾ ಮೋಟಾರ್‌ಸೈಕಲ್ ಕಂಪನಿಯು ಡೀಲರ್ಸ್‌ಗೆ ನೀಡಲಾಗಿರುವ ಪರಿಹಾರದ ಕ್ರಮುಗಳನ್ನು ಪರಿಸ್ಥಿತಿ ತಿಳಿಯಾಗುವ ತನಕವು ಮುಂದುವರಿಸುವುದಾಗಿ ಘೋಷಣೆ ಮಾಡಿದ್ದು, ಡೀಲರ್ಸ್‌ಗಳ ಆರ್ಥಿಕ ನಷ್ಟವನ್ನು ಸರಿದೂಗಿಸಲು ಪರಿಹಾರ ಕ್ರಮಗಳು ಅಗತ್ಯವಾಗಿವೆ.

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಇನ್ನು ಬಿಎಸ್-4 ವಾಹನಗಳು ಆಟೋ ಕಂಪನಿಗಳು ಭಾರೀ ಪ್ರಮಾಣದ ನಷ್ಟ ಉಂಟು ಮಾಡಲಿದ್ದು, ಏಪ್ರಿಲ್ 1ರಿಂದ ಬಿಎಸ್-6 ವಾಹನಗಳ ಮಾರಾಟವು ಕಡ್ಡಾಯವಾಗಿ ಜಾರಿ ಮಾಡಿರುವುದು ವಾಹನ ಉತ್ಪಾದನಾ ಕಂಪನಿಗಳಿಗೆ ಹಳೆಯ ಸ್ಟಾಕ್ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಬಿಎಸ್-4 ವಾಹನಗಳನ್ನು ಬ್ಯಾನ್ ಮಾಡಲಾಗಿದ್ದರೂ ಕೂಡಾ ಪರಿಸ್ಥಿತಿಗೆ ಅನುಗುಣವಾಗಿ ಸದ್ಯಕ್ಕೆ ಕೆಲವು ವಿನಾಯ್ತಿಗಳನ್ನು ನೀಡಿರುವ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿದೆ.

MOST READ: ನಟ ವಿಕ್ರಮ್ ಗಾಗಿ ತಯಾರಾಯ್ತು ವಿಶೇಷ ಕಾರವಾನ್

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

2018ರಲ್ಲೇ 2020ರ ಏಪ್ರಿಲ್ 1ರಿಂದ ಬಿಎಸ್-4 ವಾಹನಗಳ ಮಾರಾಟ ಮತ್ತು ನೋಂದಣಿ ಪ್ರಕ್ರಿಯೆಯನ್ನು ಬ್ಯಾನ್ ಮಾಡಿದ್ದ ಸುಪ್ರೀಂಕೋರ್ಟ್ ಕೊನೆಯ ಕ್ಷಣದಲ್ಲಿ ಬ್ಯಾನ್ ಅಸ್ತ್ರವನ್ನು ಸಡಿಲಿಸಿದ್ದು, ಕರೋನಾ ವೈರಸ್ ತಡೆ ಉದ್ದೇಶದಿಂದ ದೇಶಾದ್ಯಂತ ಜಾರಿಗೊಳಿಸಿರುವ ಲಾಕ್‌ಡೌನ್ ಹಿನ್ನಲೆಯಲ್ಲಿ ಆಟೋ ಕಂಪನಿಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದೆ.

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಬಿಎಸ್-6 ಜಾರಿಗೆ ಮುನ್ನ ಕರೋನಾ ವೈರಸ್ ಭೀತಿ ಹೆಚ್ಚಿದ್ದರಿಂದ ಎಲ್ಲಾ ಮಾದರಿಯ ವಾಣಿಜ್ಯ ಚಟುವಟಿಕೆಗಳನ್ನು ಬಂದ್ ಮಾಡಿ ಲಾಕ್ ಡೌನ್ ಹೇರಲಾಗಿತ್ತು. ಕೊನೆಯ ಗಳಿಗೆಯಲ್ಲಿ ಮಾರಾಟವಾಗಬೇಕಿದ್ದ ಲಕ್ಷಾಂತರ ಬಿಎಸ್-4 ವಾಹನಗಳು ಮಾರಾಟವಾಗದೆ ಹಾಗೆಯೇ ಉಳಿದಿವೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕಾಗಿ ರೂ.100 ಕೋಟಿ ದೇಣಿಗೆ ನೀಡಿದ ಬಜಾಜ್ ಗ್ರೂಪ್

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಇದರಿಂದ ಆಟೋ ಕಂಪನಿಗಳಿಗೆ ವಿನಾಯ್ತಿಯೊಂದಿಗೆ ಕೆಲವು ಷರತ್ತುಗಳನ್ನು ವಿಧಿಸಿ ಮಾರಾಟಕ್ಕೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್, ಬ್ಯಾನ್‍ನಿಂದಾಗುವ ನಷ್ಟ ತಡೆಗೆ ಸಹಕರಿಸಿದೆ.

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಕರೋನಾ ವೈರಸ್ ಹಿನ್ನಲೆಯಲ್ಲಿ ಲಾಕ್ ಡೌನ್ ಮಾಡಿರುವ ವಿಚಾರವನ್ನು ಮುಂದಿಟ್ಟುಕೊಂಡು ವಿನಾಯ್ತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಇಂಡಿಯನ್ ಆಟೋ ಡೀಲರ್ಸ್ ಅಸೋಶಿಯೇಷನ್ ಸಂಸ್ಥೆಗೆ ಸುಪ್ರೀಂಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಮಾರಾಟ ಅವಧಿಯನ್ನು ವಿಸ್ತರಣೆ ಮಾಡಿದೆ.

MOST READ: ಕರೋನಾ ವೈರಸ್ ವಿರುದ್ದದ ಹೋರಾಟಕ್ಕೆ ಭಾರೀ ಪ್ರಮಾಣದ ದೇಣಿಗೆ ನೀಡಿದ ಟಿವಿಎಸ್ ಮೋಟಾರ್

ಕರೋನಾ ಎಫೆಕ್ಟ್- ಡೀಲರ್ಸ್‌ಗೆ ನೀಡಲಾದ ಪರಿಹಾರ ಕ್ರಮಗಳನ್ನು ಮುಂದುವರಿಸಲಿದೆ ಹೋಂಡಾ

ಏಪ್ರಿಲ್ 1ರಿಂದಲೇ ನಿಷೇಧಗೊಳ್ಳಬೇಕಿದ್ದ ಬಿಎಸ್-4 ವಾಹನಗಳ ಮಾರಾಟ ಪ್ರಕ್ರಿಯೆಯನ್ನು ಏಪ್ರಿಲ್ 24ರ ತನಕ ವಿಸ್ತರಣೆ ಮಾಡಲಾಗಿದ್ದು, ಪ್ರತಿ ಆಟೋ ಕಂಪನಿಗಳು ಸ್ಟಾಕ್ ಇರುವ ಶೇ.10 ರಷ್ಟು ಪ್ರಮಾಣದ ಬಿಎಸ್-4 ವಾಹನಗಳನ್ನು ಮಾತ್ರವೇ ಮಾರಾಟ ಮಾಡಬೇಕು ಎಂದಿದೆ.

Most Read Articles

Kannada
English summary
Honda Two-Wheelers Announce Extended Relief Measures To Dealer-Partners Across India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X