ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಅಮೆರಿಕ ಮೂಲದ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಇಂಡಿಯನ್ ಮೋಟಾರ್‍‍ಸೈಕಲ್ ತನ್ನ 2021ರ ಸರಣಿಯಲ್ಲಿರುವ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇದರಲ್ಲಿ ಬ್ರ್ಯಾಂಡ್ ಸ್ಕೌಟ್ ಬಾಬರ್ ಟ್ವೆಂಟಿ, ರೋಡ್ ಮಾಸ್ಟರ್ ಲಿಮಿಟೆಡ್ ಮತ್ತು ವಿಂಟೇಜ್ ಡಾರ್ಕ್ ಹಾರ್ಸ್ ಬೈಕುಗಳು ಸೇರಿವೆ.

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಇಂಡಿಯನ್ ಮೋಟಾರ್‍‍ಸೈಕಲ್ ಕಂಪನಿಯ ತಿಳಿಸಿದ ಮಾಹಿತಿ ಪ್ರಕಾರ, ಮುಂದಿನ ಹಂತದ ತಂತ್ರಜ್ಞಾನ ಮತ್ತು ಗ್ರಾಹಕರಿಗೆ ತಮ್ಮ ರೈಡ್ ಅನುಭವನ್ನು ಹೆಚ್ಚಿಸಲು ಹೊಸ ಅಕ್ಸೆಸರೀಸ್ ಗಳ ಆಯ್ಕೆಗಳನ್ನು ಹೊಂದಿರುತ್ತವೆ. ಇನ್ನು 2021ರ ಇಂಡಿಯನ್ ಮೋಟಾರ್‍‍ಸೈಕಲ್ ಕಂಪನಿಯ ಸರಣಿಯಲ್ಲಿನ ಸ್ಕೌಟ್ ಸೆಗ್ಮೆಂಟ್‌ನಲ್ಲಿ ಇಂಡಿಯನ್ ಸ್ಕೌಟ್, ಇಂಡಿಯನ್ ಸ್ಕೌಟ್ ಬಾಬರ್ ಮತ್ತು ಇಂಡಿಯನ್ ಸ್ಕೌಟ್ ಬಾಬರ್ ಟ್ವೆಂಟಿ ಎಂಬ ಮಾದರಿಗಳಿವೆ.

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಕ್ರೂಸರ್ ಸೆಗ್ಮೆಂಟ್‌ನಲ್ಲಿ ಇಂಡಿಯನ್ ಚೀಫ್ ವಿಂಟೇಜ್ ಮತ್ತು ಇಂಡಿಯನ್ ಚೀಫ್ ವಿಂಟೇಜ್ ಡಾರ್ಕ್ ಹಾರ್ಸ್ ಕಾಣಿಸಿಕೊಳ್ಳಲಿವೆ. ಅದೇ ರೀತಿ ಬ್ಯಾಗರ್ ಸೆಗ್ಮೆಂಟ್‌ನಲ್ಲಿ ಇಂಡಿಯನ್ ಸ್ಪ್ರಿಂಗ್ಫೀಲ್ಡ್, ಇಂಡಿಯನ್ ಸ್ಪ್ರಿಂಗ್ಫೀಲ್ಡ್ ಡಾರ್ಕ್ ಹಾರ್ಸ್, ಇಂಡಿಯನ್ ಚೀಫ್ ಲಿಮಿಟೆಡ್ ಮತ್ತು ಇಂಡಿಯನ್ ಚೀಫ್ ಡಾರ್ಕ್ ಹಾರ್ಸ್ ಸೇರಿವೆ.

MOST READ: ದುಬಾರಿಯಾಯ್ತು ಜನಪ್ರಿಯ ಬಜಾಜ್ ಪಲ್ಸರ್ ಎನ್ಎಸ್ ಬೈಕುಗಳು

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಟೂರಿಂಗ್ ಸೆಗ್ಮೆಂಟ್‌ನಲ್ಲಿ ಇಂಡಿಯನ್ ರೋಡ್ ಮಾಸ್ಟರ್, ಇಂಡಿಯನ್ ರೋಡ್ ಮಾಸ್ಟರ್ ಲಿಮಿಟೆಡ್ ಮತ್ತು ಇಂಡಿಯನ್ ರೋಡ್ ಮಾಸ್ಟರ್ ಡಾರ್ಕ್ ಹಾರ್ಸ್ ಮಾದರಿಗಳು ಒಳಗೊಂಡಿವೆ. ಚಾಲೆಂಜರ್ ಸರಣಿ ಮತ್ತು ಚಾಂಪಿಯನ್ ಎಫ್‌ಟಿಆರ್ 1200 ಎಸ್ ಸಹ ಈ ಸೇರಿಕೊಳ್ಳುವ ಸಾಧ್ಯತೆಗಳಿದೆ.

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

2021ರ ಸರಣಿಯಲ್ಲಿನ ಮಾದರಿಗಳು ನವೀಕರಣಗಳ ಜೊತೆಗೆ ಹೊಸ ಬಣ್ಣಗಳನ್ನು ಒಳಗೊಂಡಿರುತ್ತವೆ, ಈ ಹೊಸ ಬಣ್ಣಗಳಿಂದ ಮತ್ತು ನವೀಕರಣಗಳಿಂದ ಬೈಕುಗಳನ್ನು ಸಾಂಪ್ರದಾಯಿಕ ಶೈಲಿ ಮತ್ತು ಲೈನ್ ಗಳನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರಲ್ಲಿ ಸ್ಕೌಟ್ ಬಾಬರ್ ಟ್ವೆಂಟಿಯಲ್ಲಿ ಸ್ಟೆಲ್ತ್ ಗ್ರೇ ಮತ್ತು ಸ್ಕೌಟ್ ಬಾಬರ್‌ನಲ್ಲಿನ ಮರೂನ್ ಮೆಟಾಲಿಕ್ ಸ್ಮೋಕ್ ಮುಂತಾದ ಬಣ್ಣಗಳನ್ನು ಒಳಗೊಂಡಿರುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಅಮೇರಿಕಾ ಮೂಲದ ಇಂಡಿಯನ್ ಮೋಟಾರ್‍‍ಸೈಕಲ್ ಕಂಪನಿಯು ತನ್ನ ಸರಣಿಯಲ್ಲಿರುವ 7 ಇಂಚಿನ ರೈಡ್ ಕಮಾಂಡ್ ಸಿಸ್ಟಂ ಹೊಂದಿದ ಎಲ್ಲಾ ಬೈಕುಗಳಲ್ಲಿ ಆ್ಯಪಲ್ ಕಾರ್‌ಪ್ಲೇ ಫೀಚರ್ ಅನ್ನು ಅಳವಡಿಸಲಿದೆ. ಇಂಡಿಯನ್ ರೋಡ್ ಮಾಸ್ಟರ್ ಮತ್ತು ಇಂಡಿಯನ್ ಚಾಲೆಂಜರ್‌ನಂತಹ ಬೈಕುಗಳು ಈ ಫೀಚರು ಅನ್ನು ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಆ್ಯಪಲ್ ಕಾರ್‌ಪ್ಲೇ ರೈಡರ್‌ನ ಐಫೋನ್ ಅನ್ನು ಬೈಕ್‌ನ ಇನ್ಫೋಟೈನ್‌ಮೆಂಟ್ ಸಿಸ್ಟಮ್‌ನೊಂದಿಗೆ ಸಂಯೋಜಿಸುತ್ತದೆ. ಸಿರಿ ಮತ್ತು ಇತರ ಐಫೋನ್ ಅಪ್ಲಿಕೇಶನ್‌ಗಳನ್ನು ಬಳಸಲು ಕೂದ ಇದು ಅನುವು ಮಾಡಿಕೊಡುತ್ತದೆ. ಸಿಸ್ಟಂ ಐಫೋನ್‌ನೊಂದಿಗೆ ಕನೆಕ್ಟ್ ಆಗಿರುವಾಗ ಮಾತ್ರ ಈ ಫೀಚರುಗಳನ್ನು ಬಳಸಲು ಸಾಧ್ಯ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಪ್ರಪಂಚದಾದ್ಯಂತವಿರುವ ಇಂಡಿಯನ್ ಮೋಟಾರ್‍‍ಸೈಕಲ್ ಸರಣಿಯಲ್ಲಿರುವ 7 ಇಂಚಿನ ರೈಡ್ ಕಮಾಂಡ್ ಸಿಸ್ಟಂ ಹೊಂದಿದ ಎಲ್ಲಾ ಬೈಕುಗಳಲ್ಲಿ ಈ ಫೀಚರ್ ಲಭ್ಯವಿರಲಿದೆ. ಇದರಲ್ಲಿ ಸುಧಾರಿತ ನ್ಯಾವಿಗೇಷನ್, ಸುಧಾರಿತ ಬೂಟ್ ಟೈಮ್, ಆಡಿಯೋ ಮ್ಯೂಟಿಂಗ್ ಮತ್ತು ಹಲವು ಕಂಟ್ರೋಲಿಂಗ್ ಫೀಚರುಗಳನ್ನು ಹೊಂದಿರಲಿದೆ

ಬಿಡುಗಡೆಯಾಗಲಿವೆ 2021ರ ಇಂಡಿಯನ್ ಮೋಟಾರ್‍‍ಸೈಕಲ್ ಮಾದರಿಗಳು

ಇಂಡಿಯನ್ ಮೋಟಾರ್‌ಸೈಕಲ್ ತನ್ನ ನವೀಕರಿಸಿದ ಪ್ರೀಮಿಯಂ ಬೈಕುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಇಂಡಿಯನ್ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಕ್ರೂಸರ್, ಟೂರರ್ ಮತ್ತು ಅರ್ಬನ್ ವಿವಿಧ ಸೆಗ್ಮೆಂಟ್‌ನಲ್ಲಿರುವ ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
English summary
Indian Motorcycle Announces 2021 Model Line-up In India Details. Read In Kannada.
Story first published: Tuesday, October 27, 2020, 20:15 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X