ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜೀಪ್ ಇದೇ ಮೊದಲ ಬಾರಿಗೆ ದ್ವಿಚಕ್ರ ವಾಹನ ಸೆಗ್‍‍ಮೆಂಟಿಗೆ ಕಾಲಿಟ್ಟಿದ್ದು, ಪೆಡಲ್ ಪವರ್ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಇದಕ್ಕೂ ಮುಂಚೆ ಜೀಪ್ ಕಂಪನಿಯು ಗ್ರೌನ್‍‍ಟಾಕ್ ಡೇ ಸಮಾರಂಭಕ್ಕಾಗಿ ಜಾಹೀರಾತನ್ನು ಬಿಡುಗಡೆಗೊಳಿಸಿತ್ತು.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಸಮಾರಂಭವನ್ನು ಮಾರ್ಚ್ 1ರಂದು ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿಯೇ ಪೆಡಲ್ ಪವರ್‍‍ನ ಇ-ಬೈಕ್ ಅನ್ನು ಬಿಡುಗಡೆಗೊಳಿಸಲಾಯಿತು. ಈ ಎಲೆಕ್ಟ್ರಿಕ್ ಬೈಕ್ ಅನ್ನು ಭಾರತದಲ್ಲಿ ಬಿಡುಗಡೆಗೊಳಿಸಿಲ್ಲ. ಸದ್ಯಕ್ಕೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಜೀಪ್ ಕಂಪನಿಯ ಈ ಎಲೆಕ್ಟ್ರಿಕ್ ಬೈಕಿನ ಬೆಲೆ 5,899 ಅಮೇರಿಕನ್ ಡಾಲರ್ ಅಂದರೆ ರೂ.4.30 ಲಕ್ಷಗಳಾಗಿದೆ. ಇದು ಎಕ್ಸ್ ಶೋರೂಂ ದರವಾಗಿದ್ದು, ಈ ಬೈಕಿನ ಆನ್‍‍ರೋಡ್ ಬೆಲೆ ರೂ.5 ಲಕ್ಷಗಳಿಗಿಂತ ಹೆಚ್ಚಾಗುವ ಸಾಧ್ಯತೆಗಳಿವೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಬೆಲೆಗೆ ಯಾವುದಾದರೂ ಹ್ಯಾಚ್‍‍ಬ್ಯಾಕ್ ಕಾರ್ ಅನ್ನು ಖರೀದಿಸಬಹುದು. ಆದರೆ ಈ ಎಲೆಕ್ಟ್ರಿಕ್ ಬೈಕಿನಲ್ಲಿರುವ ಫೀಚರ್‍‍ಗಳನ್ನು ಕೇಳಿದರೆ ಈ ಬೈಕಿಗೆ ಇಷ್ಟು ಹಣವನ್ನು ನೀಡಬಹುದೆಂದು ಹೇಳಬಹುದು. ಈ ಪೆಡಲ್ ಎಲೆಕ್ಟ್ರಿಕ್ ಬೈಕ್ ಹಲವಾರು ಫೀಚರ್‍‍ಗಳನ್ನು ಹೊಂದಿದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಜೀಪ್ ಕಂಪನಿಯು ಈ ಎಲೆಕ್ಟ್ರಿಕ್ ಬೈಕಿನಲ್ಲಿರುವ ಫೀಚರ್‍‍ಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಜೀಪ್ ಕಂಪನಿಯು ಈ ಎಲೆಕ್ಟ್ರಿಕ್ ಬೈಕ್ ಅನ್ನು ಅಮೆರಿಕಾದ ಕೊಲರಾಡೊದಲ್ಲಿರುವ ಕ್ವೈಟ್‍‍ಗೇಟ್ ಕಂಪನಿಯ ಸಹಭಾಗಿತ್ವದಲ್ಲಿ ತಯಾರಿಸಿದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಎಲೆಕ್ಟ್ರಿಕ್ ಬೈಕಿನಲ್ಲಿ 750 ವ್ಯಾ ಎಲೆಕ್ಟ್ರಿಕ್ ಮೋಟರ್ ಅನ್ನು ಅಳವಡಿಸಲಾಗಿದೆ. ಆಫ್ ರೋಡ್ ಪ್ರಯಾಣಕ್ಕಾಗಿ ಈ ಎಲೆಕ್ಟ್ರಿಕ್ ಬೈಕಿನಲ್ಲಿ 4.8 ಇಂಚಿನ ಬುಲೆಟ್ ಟಯರ್‍‍ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಆನ್ ರೋಡ್ ಹಾಗೂ ಆಫ್ ರೋಡ್‍‍‍ನಲ್ಲಿ ಆರಾಮವಾಗಿ ಪ್ರಯಾಣಿಸಬಹುದು.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಐಷಾರಾಮಿ ಪ್ರಯಾಣದ ಅನುಭವಕ್ಕಾಗಿ ಈ ಬೈಕಿನಲ್ಲಿ ಫೈರ್ ಲಿಂಕ್ ಸಸ್ಪೆಂಷನ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಇದರ ಜೊತೆಗೆ 10 ಸ್ಪೀಡ್‍ನ ಡ್ರೈವ್‍‍ಟ್ರೇನ್ ಸಿಸ್ಟಂ ನೀಡಲಾಗಿದೆ. ಒರಟು ರಸ್ತೆಯಲ್ಲಿ ಹಾಗೂ ಟ್ರೆಕ್ಕಿಂಗ್ ರಸ್ತೆಯಲ್ಲಿ ಚಲಿಸುವಂತಹ ಫೀಚರ್‍‍ಗಳನ್ನು ನೀಡಲಾಗಿದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಜೀಪ್ ಕಂಪನಿಯು ಈ ಎಲೆಕ್ಟ್ರಿಕ್ ಸೈಕಲ್ ಅನ್ನು ಮಧ್ಯಮ ಗಾತ್ರದ 17 ಇಂಚು ಹಾಗೂ ದೊಡ್ಡ ಗಾತ್ರದ 19 ಇಂಚಿನ ಎರಡು ವಿವಿಧ ಗಾತ್ರಗಳಲ್ಲಿ ಮಾರಾಟ ಮಾಡಲಿದೆ. ಎಲ್ಲಾ ರಸ್ತೆಗಳಲ್ಲಿಯೂ ಬ್ಯಾಲೆನ್ಸ್ ಮಾಡಲು ಅನುಕೂಲವಾಗುವಂತೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ವಿನ್ಯಾಸಗೊಳಿಸಲಾಗಿದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಬೈಕಿನಲ್ಲಿ ಇನ್ವರ್ಟೆಡ್ ಫೋರ್ಕ್‍‍ಗಳನ್ನು ಅಳವಡಿಸಲಾಗಿದೆ. ಮುಂಭಾಗದಲ್ಲಿ 150 ಎಂಎಂ ಹಾಗೂ ಹಿಂಭಾಗದಲ್ಲಿ 120 ಎಂಎಂ ಫೋರ್ಕ್‍‍ಗಳನ್ನು ನೀಡಲಾಗಿದೆ. ಈ ಎಲೆಕ್ಟ್ರಿಕ್ ಬೈಕ್ ಹಲವಾರು ಪ್ರೀಮಿಯಂ ಫೀಚರ್‍‍ಗಳನ್ನು ಹೊಂದಿದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಎಲೆಕ್ಟ್ರಿಕ್ ಬೈಕ್ ಲೋ ಸ್ಪೀಡ್ ಎಲೆಕ್ಟ್ರಿಕ್ ಬೈಕ್‍‍ಗಳಿಗೆ ಸಮನಾಗಿ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಲೆಕ್ಟ್ರಿಕ್ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 320 ಕಿ.ಮೀಗಳಾಗಿದೆ. ಬ್ಯಾಟರಿಯನ್ನು ಪೂರ್ತಿಯಾಗಿ ಚಾರ್ಜ್ ಮಾಡಿದ ನಂತರ ಈ ಬೈಕ್ 64 ಕಿ.ಮೀಗಳವರೆಗೆ ಚಲಿಸುತ್ತದೆ.

ಇ ಬೈಕ್ ಬಿಡುಗಡೆಗೊಳಿಸಿದ ಜೀಪ್

ಈ ಎಲೆಕ್ಟ್ರಿಕ್ ಬೈಕ್ ಅನ್ನು ಈ ವರ್ಷದಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಈ ಎಲೆಕ್ಟ್ರಿಕ್ ಬೈಕ್ ಅನ್ನು ಎಫ್‍‍ಸಿ‍ಎ ಕಂಪನಿಯ ಹೆಸರಿನಡಿಯಲ್ಲಿ ಮಾರಾಟ ಮಾಡಲಾಗುವುದು. ಈ ಕಂಪನಿಯು ಭಾರತದಲ್ಲಿ ಜೀಪ್‍‍ನ ಹಲವು ವಾಹನಗಳನ್ನು ಮಾರಾಟ ಮಾಡುತ್ತಿದೆ.

ಸೂಚನೆ: ಕಾರಿನ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
Read more on ಜೀಪ್ jeep
English summary
Jeep launches e bike. Read in Kannada.
Story first published: Thursday, March 5, 2020, 16:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X