ಹೋಂಡಾ ಬಹುನೀರಿಕ್ಷಿತ 6ಜಿ ಸ್ಕೂಟರ್ ಬಿಡುಗಡೆ ಮಾಹಿತಿ ಬಹಿರಂಗ
ಹೋಂಡಾ ಮೋಟಾರ್‌ಸೈಕಲ್ ಸಂಸ್ಥೆಯು ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮ ಅನುಸಾರ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬೈಕ್ ಮತ್ತು ಸ್ಕೂಟರ್ ಮಾದರಿಗಳನ್ನು ಉನ್ನತೀಕರಿಸುತ್ತಿದ್ದು, ಆಕ್ಟಿವಾ 125 ಮತ್ತು ಎಸ್‌ಪಿ ಶೈನ್ ಬಿಡುಗಡೆಯ ನಂತರ ಇದೀಗ ಆಕ್ಟಿವಾ 5ಜಿ ಮುಂದುವರಿದ ಆವೃತ್ತಿಯಾದ ಆಕ್ಟಿವಾ 6ಜಿ ಬಿಡುಗಡೆಗಾಗಿ ಸಿದ್ದತೆ ನಡೆಸಿದೆ.

ಬಹುನೀರಿಕ್ಷಿತ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಕ್ಟಿವಾ 5ಜಿ ಮಾದರಿಯಲ್ಲೇ ಅಭಿವೃದ್ದಿಗೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಕೆಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಜೊತೆಗೆ ಬಿಎಸ್-6 ಎಂಜಿನ್ ಜೋಡಣೆಯಿಂದಾಗಿ ಹೊಸ ಸ್ಕೂಟರ್ ಇಂಧನ ದಕ್ಷತೆ ಮತ್ತು ಪರ್ಫಾಮೆನ್ಸ್ ಹೆಚ್ಚಳಗೊಂಡಿದ್ದು, ಬೆಲೆ ಕೂಡಾ ತುಸು ದುಬಾರಿಯಾಗಿರಲಿದೆ.

ಮಾಹಿತಿಗಳ ಪ್ರಕಾರ, ಹೊಸ ಆಕ್ಟಿವಾ 6ಜಿ ಸ್ಕೂಟರ್ ಮಾದರಿಯು ಇದೇ ತಿಂಗಳು 15ಕ್ಕೆ ಬಿಡುಗಡೆಯಾಗಲಿದ್ದು, ಆಯ್ದ ಹೋಂಡಾ ಬೈಕ್ ಡೀಲರ್ಸ್‌ಗಳು ಆಸಕ್ತ ಗ್ರಾಹಕರಿಂಗ ಬುಕ್ಕಿಂಗ್ ಕೂಡಾ ಸ್ವಿಕರಿಸುತ್ತಿದ್ದಾರೆ.

ಇನ್ನು ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಈ ಬಾರಿ ಹೊಸ ಪ್ರೀಮಿಯಂ ಫೀಚರ್ಸ್‌ಗಳಾದ ಫ್ರಂಟ್ ಡಿಸ್ಕ್, ಹೊರಭಾಗದಲ್ಲಿ ಫ್ಯೂಲ್ ಕ್ಯಾಪ್, 12-ಇಂಚಿನ ಅಲಾಯ್ ವೀಲ್ಹ್, ಮರುವಿನ್ಯಾಸಗೊಳಿಸಲಾದ ಎಲ್ಇಡಿ ಹೆಡ್‌ಲ್ಯಾಂಪ್, ಎಲ್ಇಡಿ ಟರ್ನ್ ಸಿಗ್ನಲ್ ನೀಡಲಾಗಿದೆ.

ಜೊತೆಗೆ ಟರ್ನ್ ಬೈ ಟರ್ನ್ ನ್ಯಾವಿಗೆಷನ್, ಕಾಲ್ ಅಲರ್ಟ್ ಸೌಲಭ್ಯಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್‌ನಲ್ಲಿ ಡ್ರೈವ್ ಹ್ಯಾಂಡ್ಲಿಂಗ್ ಸುಧಾರಣೆಗಾಗಿ ಚಾರ್ಸಿ ಕೂಡಾ ಬದಲಾವಣೆ ಮಾಡಿರುವ ಪ್ರಮುಖ ಆಕರ್ಷಣೆಯಾಗಿದೆ. ಆಕ್ಟಿವಾ 6ಜಿ ಸ್ಕೂಟರ್‌ನಲ್ಲಿ ಬಿಎಸ್-6 ಪ್ರೇರಿತ 110ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಬಳಕೆ ಮಾಡಲಾಗಿದ್ದು, ಫ್ಯೂಲ್ ಇಂಜೆಕ್ಷನ್ ಸಿಸ್ಟಂ ಜೋಡಣೆಯಿಂದಾಗಿ ಇಂಧನ ದಕ್ಷತೆ ಹೆಚ್ಚಿರುವುದಲ್ಲದೇ ಮಾಲಿನ್ಯ ಹೊರಸೂಸುವಿಕೆಯಲ್ಲಿ ಸಾಕಷ್ಟು ಸುಧಾರಣೆ ಪಡೆದಿದೆ.

ಆದರೆ ಹೊಸ ಎಂಜಿನ್ ಪರ್ಫಾಮೆನ್ಸ್ ಕುರಿತಾಗಿ ಯಾವುದೇ ನಿಖರ ಮಾಹಿತಿ ಇಲ್ಲವಾದರೂ ಆಕ್ಟಿವಾ 5ಜಿ ಮಾದರಿ ಉತ್ಪಾದನೆ ಮಾಡುವ 8-ಬಿಎಚ್‌ಪಿ ಮತ್ತು 9-ಎನ್ಎಂ ಟಾರ್ಕ್‌ಗಿಂತಲೂ ಉತ್ತಮವಾಗಿರಲಿದೆ.

ಬೆಲೆ ಏರಿಕೆ ಬಿಸಿ..!
ಹೌದು, ಬಿಎಸ್-4 ವಾಹನಗಳಿಂತಲೂ ಎಂಜಿನ್ ವಿಭಾಗದಲ್ಲಿ ಸಾಕಷ್ಟು ಸುಧಾರಣೆ ಕಂಡಿರುವ ಬಿಎಸ್-6 ವಾಹನಗಳು ದುಬಾರಿ ಬೆಲೆ ಪಡೆದುಕೊಳ್ಳುತ್ತಿದ್ದು, ಆಕ್ಟಿವಾ 6ಜಿ ಮಾದರಿಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಆಕ್ಟಿವಾ 5ಜಿ ಸ್ಕೂಟರ್‌ಗಿಂತಲೂ ರೂ.5 ಸಾವಿರದಿಂದ ರೂ.6 ಸಾವಿರ ಹೆಚ್ಚುವರಿ ಬೆಲೆಯೊಂದಿಗೆ ಮಾರಾಟವಾಗಲಿದೆ.
MOST READ: ಆಟೋದಲ್ಲೇ ಐಷಾರಾಮಿ ಮನೆ ಕಟ್ಟಿದ ಭೂಪ..!

ಸದ್ಯ ಮಾರುಕಟ್ಟೆಯಲ್ಲಿ ಆಕ್ಟಿವಾ 5ಜಿ ಸ್ಕೂಟರ್ ಮಾದರಿಯು ಸ್ಟ್ಯಾಂಡರ್ಡ್, ಸ್ಟ್ಯಾಂಡರ್ಡ್ ಲಿಮಿಟೆಡ್, ಡಿಲಕ್ಸ್ ಮತ್ತು ಡಿಲಕ್ಸ್ ಲಿಮಿಟೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.71,800 ದಿಂದ ರೂ.74,392ಕ್ಕೆ ಮಾರಾಟವಾಗುತ್ತಿದೆ.
MOST READ: ಮಾಲಿನ್ಯ ತಗ್ಗಿಸಲು ಬೆಂಗಳೂರು ದಂಪತಿಯ ಕಾರ್ಯವನ್ನು ಮೆಚ್ಚಲೇಬೇಕು..!

ಆಕ್ಟಿವಾ 6ಜಿ ಮಾದರಿಯ ಸಹ ಸ್ಟ್ಯಾಂಡರ್ಡ್ ಮತ್ತು ಡಿಲಕ್ಸ್ ವೆರಿಯೆಂಟ್‌ಗಳನ್ನು ಹೊಂದಿರಲಿದ್ದು, ಹೊಸ ಸ್ಕೂಟರ್ ಬೆಲೆಯು ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ.75 ಸಾವಿರದಿಂದ ರೂ.81 ಸಾವಿರ ಬೆಲೆ ಪಡೆದುಕೊಳ್ಳಲಿದೆ.
MOST READ: ರಿವೋಲ್ಟ್ ಬೈಕಿಗೆ ಪೈಪೋಟಿಯಾಗಿ ಬಿಡುಗಡೆಯಾಗಲಿದೆ ಒಕಿ100 ಎಲೆಕ್ಟ್ರಿಕ್ ಬೈಕ್

ಇದಲ್ಲದೇ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಮಾವಳಿಗೆ ಹೊಸ ಆಕ್ಟಿವಾ 125 ಸ್ಕೂಟರ್ ಮಾದರಿಯು ಹಲವು ಸುಧಾರಿತ ತಂತ್ರಜ್ಞಾನ ಪ್ರೇರಿತ ಫೀಚರ್ಸ್‌ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸಿದ್ದು, 40 ಸಾವಿರಕ್ಕೂ ಹೆಚ್ಚು ಯುನಿಟ್ ಮಾರಾಟಗೊಂಡಿವೆ.

ಬಿಎಸ್-4 ವೈಶಿಷ್ಟ್ಯತೆಯ ಎಂಜಿನ್‌ಗಿಂತಲೂ ಸಾಕಷ್ಟು ಸುಧಾರಣೆ ಹೊಂದಿರುವ ಬಿಎಸ್-6 ಎಂಜಿನ್ ಪ್ರೇರಿತ ಆಕ್ಟಿವಾ 125 ಮಾದರಿಯು ಫ್ಯೂಲ್ ಇಂಜೆಕ್ಷಡ್ ಯುನಿಟ್ ಹೊಂದಿದ್ದು, ಹೊಸ ಸ್ಕೂಟರ್ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 67,490ಕ್ಕೆ ನಿಗದಿಪಡಿಸಲಾಗಿದೆ.

ಹೊಸ ಆಕ್ಟಿವಾ 125 ಸ್ಕೂಟರ್ ವಿನ್ಯಾಸದಲ್ಲಿ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಹೊಸ ಡಿಸೈನ್ ಪ್ರೇರಿತ ಫ್ರಂಟ್ ಅಪಾರ್ನ್, ಎಲ್ಇಡಿ ಡಿಆರ್‌ಎಲ್ಎಸ್ ಜೊತೆ ಟರ್ನ್ ಇಂಡಿಕೇಟರ್ ನೀಡಲಾಗಿದೆ. ಹಾಗೆಯೇ ಕ್ರೋಮ್ ಡಿಸೈನ್‌ನಿಂದಾಗಿ ಹೊಸ ಸ್ಕೂಟರಿಗೆ ಮತ್ತಷ್ಟು ಪ್ರೀಮಿಯಂ ವಿನ್ಯಾಸವನ್ನು ಒದಗಿಸಿದ್ದು, ಇದು ಸ್ಕೂಟರ್ ಖರೀದಿದಾರರ ಪ್ರಮುಖ ಆಕರ್ಷಣೆಯಾಗಿದೆ.


Click it and Unblock the Notifications








