Just In
Don't Miss!
- News
ಹುಣಸೋಡು ಜಿಲೆಟಿನ್ ಸ್ಪೋಟ: ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
- Sports
ಯುವರಾಜ್ ಸಿಂಗ್ ಕೋಚಿಂಗ್ ಬಹಳ ಉಪಯೋಗಕ್ಕೆ ಬಂತು: ಗಿಲ್
- Lifestyle
ಕೊಲೆಸ್ಟ್ರಾಲ್ ಹೆಚ್ಚಾಗಿದೆಯೇ? ಈ ಆಹಾರ ಸೇವಿಸಿ
- Education
RITES Limited Recruitment 2021: ವಿವಿಧ 9 ಹುದ್ದೆಗಳಿಗೆ ಅರ್ಜಿ ಆಹ್ವಾನ
- Movies
ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?
- Finance
ಬಜೆಟ್ 2021: ಜ. 23ರಂದು ಹಲ್ವಾ ಕಾರ್ಯಕ್ರಮ- ಇದೇನು, ಎತ್ತ?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಮೋಟೋ ಗುಜಿ ವಿ7 ಬೈಕ್
ಇಟಾಲಿಯನ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಮೋಟೋ ಗುಜಿ ತನ್ನ ಹೊಸ ವಿ7 ಬೈಕನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಅನಾವರಣಗೊಳಿಸಿದೆ. ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಮೋಟೋ ಗುಜಿ ವಿ7 ಹಲವಾರು ಅಪ್ದೇಟ್ ಗಳನ್ನು ಪಡೆದುಕೊಂಡಿದೆ.

ಮೋಟೋ ಗುಜಿ ತನ್ನ ವಿ7 ಅನ್ನು ಮೊದಲ ಬಾರಿಗೆ ಐವತ್ತು ವರ್ಷಗಳ ಹಿಂದೆ ಬಿಡುಗಡೆ ಮಾಡಿದ್ದರು. ಈ ಮೋಟೋ ಗುಜಿ ವಿ7 ಬೈಕ್ ಹಲವು ಬಾರಿ ನವೀಕರಣಗಳಿಗೆ ಒಳಗಾಗಿದೆ. ಈ ವಿ7 ಮಾದರಿಯು ರೋಮನ್ ಸಂಖ್ಯೆಯನ್ನು ಹೊಂದಿತ್ತು. ಆದರೆ 2021ರ ಮೋಟೋ ಗುಜಿ ವಿ7 ಮಾದರಿಯಲ್ಲಿ ರೋಮನ್ ಅಂಕಿಗಳನ್ನು ತೆಗೆದುಹಾಕಿದ್ದಾರೆ.

2021ರ ಮೋಟೋ ಗುಜಿ ವಿ7 ಬೈಕ್ ವಿ7 ಸ್ಟೋನ್ ಮತ್ತು ವಿ7 ಸ್ಪೆಷಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ವಿ7 ಸ್ಟೋನ್ ರೂಪಾಂತರವು ಹೆಚ್ಚು ಮಾರ್ಡನ್ ವಿನ್ಯಾಸವನ್ನು ಹೊಂದಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

2021ರ ಮೋಟೋ ಗುಜಿ ವಿ7 ಬೈಕ್ ವಿ7 ಸ್ಟೋನ್ ಮತ್ತು ವಿ7 ಸ್ಪೆಷಲ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ವಿ7 ಸ್ಟೋನ್ ರೂಪಾಂತರವು ಹೆಚ್ಚು ಮಾರ್ಡನ್ ವಿನ್ಯಾಸವನ್ನು ಹೊಂದಿದೆ.

ಮತ್ತೊಂದೆಡೆ ಮೋಟೋ ಗುಜಿ ವಿ7 ಬೈಕಿನ ವಿ7 ಸ್ಪೆಷಲ್ ರೂಪಾಂತರವು ಸ್ಪೋಕ್ ವ್ಹೀಲ್ಸ್, ಡಬಲ್-ಪಾಡ್ ಅನಲಾಗ್ ಕ್ಲಸ್ಟರ್ ಮತ್ತು ಕ್ರೋಮ್-ಫಿನಿಶ್ಡ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ; ಇನ್ನು ಈ ರ್ರೂಪಾಂತರವು ಬ್ಲೂ ಫಾರ್ಮಲ್ ಮತ್ತು ಗ್ರಿಜಿಯೊ ಕ್ಯಾಶುಯಲ್ ಎಂಬ ಎರಡು ಡ್ಯುಯಲ್-ಟೋನ್ ಬಣ್ಣ ಆಯ್ಕೆಗಳಲ್ಲಿ ಲಭ್ಯವಿರಲಿದೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

2021ರ ಮೋಟೋ ಗುಜಿ ವಿ7 ಬೈಕ್ ಹೊಸ ಎಂಜಿನ್ ಅನ್ನು ಪಡೆದುಕೊಂಡಿದೆ. ಇದು ಬ್ರಾಂಡ್ನ ಸಾಲಿನಲ್ಲಿರುವ ವಿ 85 ಟಿಟಿ ಅಡ್ವೆಂಚರ್-ಟೂರಿಂಗ್ ಬೈಕುಗಳ ಎಂಜಿನ್ ಆಗಿದೆ. ಇನ್ನು ಮೋಟೋ ಗುಜಿ ವಿ7 ಬೈಕ್ ಶಾಫ್ಟ್-ಡ್ರೈವಿನ್ ಫೈನಲ್ ಡ್ರೈವ್ ತಂತ್ರಜ್ಞಾನವನ್ನು ಸಹ ಹೊಂದಿದೆ.

ಇನ್ನು 2021ರ ಮೋಟೋ ಗುಜಿ ವಿ7 ಬೈಕಿನಲ್ಲಿ 850 ಸಿಸಿ ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 6800 ಆರ್‌ಪಿಎಂನಲ್ಲಿ 65 ಬಿಹೆಚ್‍ಪಿ ಪವರ್ ಮತ್ತು 5000 ಆರ್‌ಪಿಎಂನಲ್ಲಿ 73 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಹಿಂದಿನ ಮಾದರಿಗೆ ಹೋಲಿಸಿದರೆ ಹೊಸ ಎಂಜಿನ್ 13 ಬಿಹೆಚ್‍ಪಿ ಪವರ್ ಮತ್ತು 13 ಎನ್ಎಂ ಟಾರ್ಕ್ ಕಡಿಮೆ ಉತ್ಪಾದಿಸುತ್ತದೆ. 2021ರ ಮೋಟೋ ಗುಜಿ ವಿ7 ಬೈಕ್ ಹಿಂದಿನ ಮಾದರಿಗಿಂತ ಶೇಕಡಾ 25 ರಷ್ಟು ಹೆಚ್ಚು ಪವರ್ ಫುಲ್ ಆಗಿದೆ.

2021ರ ಮೋಟೋ ಗುಜಿ ವಿ7 ಬೈಕಿನ ವಿನ್ಯಾಸದ ಬಗ್ಗೆ ಹೇಳುವುದಾದರೆ, ದುಂಡಗಿನ ಆಕಾರದ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಹೊಂದಿದ್ದು, ಇದು ಮಾರ್ಡನ್-ರೆಟ್ರೋ ಸ್ಟೈಲ್ ಲುಕ್ ಅನ್ನು ನೀಡುತ್ತದೆ. ಇದರೊಂದಿಗೆ ಆಕಾರದ ಟೈಲ್‌ಲ್ಯಾಂಪ್ ಅನ್ನು ಹೊಂದಿದೆ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಇನ್ನು ಹೊಸ ಮೋಟೋ ಗುಜಿ ವಿ7 ಬೈಕಿನಲ್ಲಿ ಡ್ಯುಯಲ್ ಎಕ್ಸಾಸ್ಟ್ ಸೆಟಪ್, ಸಿಂಗಲ್-ಪೀಸ್ ವೈಡ್ ಹ್ಯಾಂಡಲ್‌ಬಾರ್, ಸಿಂಗಲ್-ಪೀಸ್ ರಿಬ್ಬಡ್ ಸೀಟ್ ಮತ್ತು ಫಾರ್ವರ್ಡ್-ಸೆಟ್ ಫುಟ್‌ಪೆಗ್‌ಗಳು ಹೊಂದಿದೆ. ಇನ್ನು ಈ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್ ಸಿಸ್ಟಂ ಅನ್ನು ಹೊಂದಿದೆ.

2021ರ ಮೋಟೋ ಗುಜಿ ವಿ7 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಕಯಾಬಾದ ಲಾಗ್-ಟ್ರ್ಯಾವೆಲ್ ಟೆಲಿಸ್ಕೋಪಿಕ್-ಫೋರ್ಕ್ ಮತ್ತು ಕಯಾಬಾದಿಂದ ಪಡೆದ ಟ್ವಿನ್ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಹೊಂದಿದೆ.

ಹೊಸ ಮೋಟೋ ಗುಜಿ ವಿ7 ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಕಡೆಗಳಲ್ಲಿ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದ್ದು, ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಕೂಡ ನೀಡಲಾಗಿದೆ,

ಹಿಂದಿನ ಮಾದರಿಗೆ 2021ರ ಮೋಟೋ ಗುಜಿ ವಿ7 ಬೈಕಿನ ಸಾಕಷ್ಟು ನವೀಕರಣಗಳನ್ನು ಹೊಂದಿದೆ. ಈ ಹೊಸ ಮೋಟೋ ಗುಜಿ ವಿ7 ಬಿಡುಗಡೆಯಾದ ಬಳಿಕ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕವಾಸಕಿ ಡಬ್ಲ್ಯು 800, ಟ್ರಯಂಫ್ ಬೊನೆವೆಲ್ಲಿ ಮತ್ತು ಯಮಹಾ ಎಕ್ಸ್‌ಎಸ್‌ಆರ್ 900 ಬೈಕುಗಳಿಗೆ ಪೈಪೋಟಿ ನೀಡುತ್ತದೆ.