ಸಂದರ್ಶನ: ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಕಳೆದ 5 ವರ್ಷಗಳ ಅವಧಿಯಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರಾಟ ಪ್ರಮಾಣವು ಸಾಕಷ್ಟು ಬೆಳವಣಿಗೆ ಕಂಡಿದ್ದು, ಭವಿಷ್ಯದ ದೃಷ್ಠಿಯಿಂದ ಭಾರತದಲ್ಲಿ ಮಾತ್ರವಲ್ಲ ವಿಶ್ವಾದ್ಯಂತ ಹಲವು ಬಹುತೇಕ ರಾಷ್ಟ್ರಗಳು ಎಲೆಕ್ಟ್ರಿಕ್ ವಾಹನ ಬಳಕೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಮಹತ್ವದ ಬದಲಾವಣೆಗೆ ಕಾರಣವಾಗಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸಿ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಹಲವು ಆಟೋ ಕಂಪನಿಗಳು ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಹೊಸ ಬದಲಾವಣೆಗೆ ಕಾರಣವಾಗಿದ್ದು, ಒಕಿನಾವ ಕಂಪನಿಯು ಕೂಡಾ ವಿವಿಧ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡುವ ಮೂಲಕ ಹಲವಾರು ಹೊಸ ದಾಖಲೆಗಳನ್ನು ತನ್ನದಾಗಿಸಿಕೊಂಡಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಇವಿ ವಾಹನ ಉತ್ಪನ್ನಗಳ ಹೊರತುಪಡಿಸಿ ಮತ್ತಷ್ಟು ಹೊಸ ಇವಿ ವಾಹನ ಮಾರಾಟಕ್ಕಾಗಿ ಸಿದ್ದಗೊಂಡಿದ್ದು, ಭವಿಷ್ಯ ಯೋಜನೆಗಳ ಬಗೆಗೆ ಡ್ರೈವ್‌ಸ್ಪಾರ್ಕ್ ತಂಡದ ಜೊತೆಗೆ ಹಲವಾರು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಸದ್ಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವಲ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯಾದ ಲಿಡ್ ಆ್ಯಸಿಡ್ ಬ್ಯಾಟರಿ ಪ್ರೇರಣೆಯ ರಿಡ್ಜ್ 30 ಜೊತೆಗೆ ಹೈ ಎಂಡ್ ಮಾದರಿಯಾಗಿ ಲೀಥಿಯಂ-ಅಯಾನ್ ಬ್ಯಾಟರಿ ಪ್ರೇರಿತ ಐ-ಪ್ರೈಸ್ ಪ್ಲಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ಮಾರಾಟ ಮಾಡುತ್ತಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಮುಂಬರುವ ದಿನಗಳಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಮಾದರಿಯೊಂದನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಹೊಸ ಬೈಕ್ ಬಿಡುಗಡೆಯ ಮಾಹಿತಿಯ ಜೊತೆಗೆ ವಿವಿಧ ಭವಿಷ್ಯ ಯೋಜನೆಗಳ ಬಗೆಗೆ ಒಕಿನಾವ ಆಟೊಟೆಕ್ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಜೀತೆಂದರ್ ಶರ್ಮಾ ಅವರು ಡ್ರೈವ್‌ಸ್ಪಾರ್ಕ್ ತಂಡದೊಂದಿಗೆ ಹಲವಾರು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಒಕಿನಾವ ಕಂಪನಿಯು 2015ರಿಂದಲೇ ಭಾರತೀಯ ಆಟೋ ಉದ್ಯಮಕ್ಕೆ ಕಾಲಿಟ್ಟಿದ್ದು, ದೇಶದ ಮಹತ್ವಾಕಾಂಕ್ಷೆಯ 'ಮೇಕ್ ಇನ್ ಇಂಡಿಯಾ' ಅಭಿಯಾನಕ್ಕೆ ಪೂರಕವಾಗಿ ದೇಶದಲ್ಲೇ ಲಭ್ಯವಿರುವ ಶೇ.92 ಬಿಡಿಭಾಗಗಳೊಂದಿಗೆ ಹೊಸ ವಾಹನ ಉತ್ಪನ್ನಗಳನ್ನು ಸಿದ್ದಪಡಿಸುತ್ತಿರುವುದಾಗಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಬಜೆಟ್ ಬೆಲೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿರುವ ಒಕಿನಾವ ಕಂಪನಿಯು ರಾಜಸ್ತಾನದಲ್ಲಿ ವಾರ್ಷಿಕವಾಗಿ 80 ಸಾವಿರ ಯುನಿಟ್ ಉತ್ಪಾದನಾ ಘಟಕದ ಸೌಲಭ್ಯ ಹೊಂದಿದ್ದು, ಬಿಡುಗಡೆಗೆ ಸಿದ್ದವಾಗಿರುವ ಮ್ಯಾಕ್ಸಿ ಎಲೆಕ್ಟ್ರಿಕ್ ಸ್ಕೂಟರ್ ಮತ್ತು ಒಕಿ100 ಎಲೆಕ್ಟಿಕ್ ಬೈಕ್ ಮಾದರಿಯು ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಸದ್ಯ ಕರೋನಾ ವೈರಸ್ ಪರಿಣಾಮ ಆಟೋ ಉತ್ಪಾದನಾ ವಿಭಾಗವು ತೀವ್ರ ಸಂಕಷ್ಟಕ್ಕೆ ಸಿಲುಕಿ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ವೈರಸ್ ಭೀತಿಯು ಹೊಸ ವಾಹನಗಳ ಖರೀದಿ ಹೆಚ್ಚಳಕ್ಕೆ ಪ್ರಮುಖ ಕಾರಣವಾಗುತ್ತಿರುವುದು ಆಟೋ ಉತ್ಪಾದನಾ ಕಂಪನಿಗಳಿಗೆ ಮತ್ತಷ್ಟು ಬಲಬಂದಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಕರೋನಾ ಸಂಕಷ್ಟದ ನಡುವೆಯೂ ಗ್ರಾಹಕರು ವೈರಸ್ ಭೀತಿಯಿಂದ ತಪ್ಪಿಸಿಕೊಳ್ಳಲು ಸ್ವಂತ ವಾಹನಗಳ ಬಳಕೆಯನ್ನು ಹೆಚ್ಚಿಸುತ್ತಿರುವುದು ಹೊಸ ವಾಹನಗಳ ಮಾರಾಟವು ಚೇತರಿಸಿಕೊಳ್ಳುತ್ತಿರುವುದಕ್ಕೆ ಪ್ರಮುಖ ಕಾರಣವಾಗಿದ್ದು, ಈ ಅವಕಾಶವನ್ನು ಬಳಸಿಕೊಳ್ಳುತ್ತಿರುವ ಆಟೋ ಕಂಪನಿಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹಲವಾರು ಹೊಸ ಮಾದರಿಯ ವಾಹನಗಳನ್ನು ಪರಿಚಯಿಸುತ್ತಿವೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಒಕಿನಾವ ಕೂಡಾ ಲಾಕ್‌ಡೌನ್ ಸಡಿಲಿಕೆ ನಂತರ ತಜ್ಞರ ಅಭಿಪ್ರಾಯದ ಮೇಲೆ ಶೋರೂಂಗಳ ಸಂಖ್ಯೆಯನ್ನು ಹೆಚ್ಚಿಸುವುದ ಜೊತೆಗೆ 2 ಸಾವಿರ ಯುನಿಟ್ ಮಾರಾಟ ಮಾಡಿದ್ದು, ಶೀಘ್ರದಲ್ಲೇ ಶೋರೂಂಗಳ ಸಂಖ್ಯೆಯನ್ನು 500ಕ್ಕೆ ಏರಿಕೆ ಮಾಡುವ ಯೋಜನೆಯಲ್ಲಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಸದ್ಯ ದೇಶಾದ್ಯಂತ 350ಕ್ಕೂ ಹೆಚ್ಚು ಅಧಿಕೃತ ಮಾರಾಟ ಮಳಿಗೆಗಳನ್ನು ಹೊಂದಿರುವ ಒಕಿನಾವ ಕಂಪನಿಯು 2020-21ರ ಆರ್ಥಿಕ ವರ್ಷದ ಅಂತ್ಯಕ್ಕೆ 500 ಶೋರೂಂ ತೆರೆಯುವ ಗುರಿಹೊಂದಿದ್ದು, ಬಹುತೇಕ ಶೋರೂಂಗಳು ಉತ್ತರ ಭಾರತದಲ್ಲೇ ನೆಲೆಗೊಂಡಿವೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಇತ್ತೀಚೆಗೆ ಕಳೆದ ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಮೊದಲ ಶೋರೂಂ ತೆರೆಯುವ ಮೂಲದ ದಕ್ಷಿಣ ಭಾರತದಲ್ಲಿ ಇವಿ ವಾಹನ ಮಾರಾಟದ ಮೇಲೆ ಹೆಚ್ಚಿನ ಗಮನಹರಿಸಿರುವ ಒಕಿನಾವ ಕಂಪನಿಯು ಕೋವಿಡ್19 ಭೀತಿ ನಡುವೆಯೂ ಹಲವು ಸುರಕ್ಷಾ ಕ್ರಮಗಳೊಂದಿಗೆ ವಾಹನ ಮಾರಾಟ ಪ್ರಕ್ರಿಯೆಯನ್ನು ಕೈಗೊಂಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ವೈರಸ್ ಭೀತಿ ಹಿನ್ನಲೆಯಲ್ಲಿ ಆನ್‌ಲೈನ್ ವಹಿವಾಟಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಒಕಿನಾವ ಕಂಪನಿಯು ಭವಿಷ್ಯದ ಎಲೆಕ್ಟ್ರಿಕ್ ವಾಹನ ಮಾದರಿಗಳಾದ ಮ್ಯಾಕ್ಸಿ ಸ್ಕೂಟರ್ ಮತ್ತು ಒಕಿ100 ಬೈಕ್ ಮಾದರಿಯನ್ನು 2021ರ ಆರಂಭದಲ್ಲಿ ಬಿಡುಗಡೆ ಮಾಡುವುದಾಗಿ ಸ್ಪಷ್ಟನೆ ನೀಡಿದೆ.

ಎಲೆಕ್ಟ್ರಿಕ್ ಸ್ಕೂಟರ್ ನಂತರ ಇವಿ ಬೈಕ್ ಬಿಡುಗಡೆಗೆ ಸಿದ್ದವಾದ ಒಕಿನಾವ

ಈ ಮೂಲಕ ಎಲೆಕ್ಟ್ರಿಕ್ ವಾಹನಗಳ ಮಾರಾಟದಲ್ಲಿ ಮತ್ತಷ್ಟು ಜನಪ್ರಿಯತೆ ಹೊಂದಲಿರುವ ಒಕಿನಾವ ಕಂಪನಿಯು ದಕ್ಷಿಣ ಭಾರತದ ರಾಜ್ಯಗಳಲ್ಲಿನ ಬೇಡಿಕೆ ಪೂರೈಸಲು ಮತ್ತೊಂದು ಹೊಸ ಉತ್ಪಾದನಾ ಘಟಕ ತೆರೆಯುವ ಯೋಜನೆಯಲ್ಲಿದ್ದು, ಒಕಿನಾವ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸದ್ಯ ರಿಡ್ಜ್ 30, ರಿಡ್ಜ್, ಪ್ರೈಸ್, ಆರ್30, ಲೈಟ್, ರಿಡ್ಜ್ ಪ್ಲಸ್, ಪ್ರೈಸ್ ಪ್ರೊ ಮತ್ತು ಐ-ಪ್ರೈಸ್ ಪ್ರೊ ಪ್ಲಸ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Interview: Jeetender Sharma, Founder & MD, Okinawa — Electric Bike Launch Timeline Confirmed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X