ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಮೊದಲನೇ ಹಾಗೂ ಎರಡನೇ ಮಹಾಯುದ್ಧಗಳಲ್ಲಿ ಸೈಡ್ ಕಾರ್ ಮಾದರಿಯ ಮೋಟಾರ್‌ಸೈಕಲ್‌ಗಳಿಗೆ ಹೆಚ್ಚಿನ ಬೇಡಿಕೆಯಿತ್ತು. ಈಗ ಅಂತಹ ವಾಹನಗಳನ್ನು ನೋಡುವುದು ತೀರಾ ಅಪರೂಪ. ಸೈಡ್ ಕಾರ್ ರೀತಿಯ ವಾಹನಗಳನ್ನು ನೋಡುವವರು, ಅವುಗಳನ್ನು ಆಶ್ಚರ್ಯದಿಂದ ನೋಡುತ್ತಾರೆ.

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಮಾಡಿಫೈ ಕಂಪನಿಯೊಂದು ರಾಯಲ್ ಎನ್‌ಫೀಲ್ಡ್ ಕಂಪನಿಯ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಸೈಡ್ ಕಾರ್ ಆಗಿ ಬದಲಿಸಿದ್ದಾರೆ. ಜನರ ಗಮನವನ್ನು ಸೆಳೆಯಲು ಈ ಬೈಕನ್ನು ಮರುವಿನ್ಯಾಸಗೊಳಿಸಲಾಗಿದೆ. ಈ ಮಾಡಿಫಿಕೇಶನ್ ನಡೆದಿರುವುದು ಭಾರತದಲ್ಲಲ್ಲ. ಬದಲಿಗೆ ಜರ್ಮನಿಯ ಕಾಕ್ಸ್ ಬಜಾರ್‌ನಲ್ಲಿ.

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಜನಪ್ರಿಯ ವಾಹನ ಮಾರ್ಪಾಡು ಕಂಪನಿಯಾದ ವಾಲ್ಟರ್ ಹ್ಯಾರಿಸ್ ಈ ಬೈಕ್ ಅನ್ನು ಮಾಡಿಫೈಗೊಳಿಸಿದೆ. ರಾಯಲ್ ಎನ್‌ಫೀಲ್ಡ್ ಜಿಟಿ 650 ಬೈಕನ್ನು ವಾಲ್ಟರ್ ಹ್ಯಾರಿಸ್ ಪುರಾತನ ಸೈಡ್ ಕಾರ್ ಆಗಿ ಬದಲಿಸಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಈ ಸೈಡ್ ಕಾರ್ ನ ಭಾಗಗಳನ್ನು ಬೇರೆ ಕಂಪನಿಯ ಬೈಕುಗಳಿಂದ ಪಡೆಯಲಾಗಿದೆ. ಪೈಪ್‌ಗಳನ್ನು ಟ್ರಯಂಫ್ 1200 ಬೈಕಿನಿಂದ, ವ್ಹೀಲ್ ಗಳನ್ನು ಹಾರ್ಲೆ ಡೇವಿಡ್ಸನ್ ಬೈಕಿನಿಂದ ಹಾಗೂ ಬ್ರೇಕ್‌ಗಳನ್ನು ಯಮಹಾ ಬೈಕ್‌ನಿಂದ ಪಡೆಯಲಾಗಿದೆ. ಈ ಬೈಕ್ ಅನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿದೆ.

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಈ ಸೈಡ್ ಕಾರಿನ ಸೀಟ್ ಎರಡು ಬಣ್ಣಗಳನ್ನು ಹೊಂದಿದ್ದರೂ, ಅದರ ಮುಖ್ಯ ಬಣ್ಣ ಕಪ್ಪು. ಈ ಸೈಡ್ ಕಾರಿನ ಬಹುತೇಕ ಭಾಗಗಳು ಕಪ್ಪುಬಣ್ಣವನ್ನು ಹೊಂದಿವೆ. ಈ ಸೈಡ್ ಕಾರಿಗೆ ವಿಮಾನದ ಮೂಗಿನ ಭಾಗದ ಆಕಾರವನ್ನು ನೀಡಲಾಗಿದೆ. ಇದರಿಂದ ಬೈಕಿನ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಬೈಕ್‌ ಅನ್ನು ಮತ್ತಷ್ಟು ಆಕರ್ಷಕವಾಗಿಸಲು ಗೋಲ್ಡ್ ಲೈನ್ ಗಳನ್ನು ನೀಡಲಾಗಿದೆ. ಈ ಸೈಡ್ ಕಾರ್ ಹೆಚ್ಚು ಆರಾಮದಾಯಕವಾದ ಸೀಟುಗಳನ್ನು ಹೊಂದಿದೆ. ಸೈಡ್ ಕಾರಿನಲ್ಲಿ ಕಾಲುಗಳನ್ನು ಆರಾಮವಾಗಿ ಚಾಚಬಹುದು.

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಈ ಸೈಡ್ ಕಾರಿನಲ್ಲಿ ಕೇವಲ ಒಬ್ಬರು ಮಾತ್ರ ಕುಳಿತುಕೊಳ್ಳಬಹುದು ಎಂಬುದು ಗಮನಿಸಬೇಕಾದ ಸಂಗತಿ. ಈ ಸೈಡ್ ಕಾರಿನ ನೋಟವು ರಾಯಲ್ ಎನ್‌ಫೀಲ್ಡ್ ಕಂಪನಿಯು ಹೊಸ ಬೈಕನ್ನು ಮಾರಾಟಕ್ಕೆ ಬಿಡುಗಡೆ ಮಾಡಿದಂತೆ ಕಾಣುತ್ತದೆ. ಈ ಎಲ್ಲಾ ಫೀಚರ್ ಗಳು ರಾಯಲ್ ಎನ್‌ಫೀಲ್ಡ್ ಜಿಟಿ 650 ಬೈಕಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಈ ಮಾಡಿಫಿಕೇಶನ್ ಬೈಕಿನ ಪರ್ಫಾಮೆನ್ಸ್ ಮೇಲೆ ಯಾವುದೇ ಬದಲಾವಣೆಯನ್ನು ಬೀರಿಲ್ಲ. ಈ ಮಾಡಿಫಿಕೇಶನ್ ನಂತರವೂ ಬೈಕು ಗಂಟೆಗೆ 140 ಕಿ.ಮೀ ವೇಗದಲ್ಲಿ ಸರಾಗವಾಗಿ ಸಾಗುತ್ತದೆ. ಈ ಸೈಡ್ ಕಾರ್ ಬೇಡದೇ ಇದ್ದಲ್ಲಿ ಅದನ್ನು ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಬಹುದು.

ಸೈಡ್ ಕಾರಿನೊಂದಿಗೆ ಮಾಡಿಫೈಗೊಂಡ ಕಾಂಟಿನೆಂಟಲ್ ಜಿಟಿ 650 ಬೈಕ್

ಕಾಂಟಿನೆಂಟಲ್ ಜಿಟಿ 650, ಕೆಫೆ ರೇಜರ್ ಬೈಕ್ ಆಗಿದೆ. ಈ ಬೈಕ್ ಹೊಸ 648 ಸಿಸಿಯ ಪ್ಯಾರಾಲಲ್ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿದೆ. ಈ ಎಂಜಿನ್ 47 ಬಿಹೆಚ್‌ಪಿ ಪವರ್ ಹಾಗೂ 52 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ನೊಂದಿಗೆ 6 ಸ್ಪೀಡಿನ ಗೇರ್‌ಬಾಕ್ಸ್‌ ಅಳವಡಿಸಲಾಗಿದೆ.

Most Read Articles

Kannada
English summary
Royal Enfield 650 GT bike modified with side car. Read in Kannada.
Story first published: Monday, September 14, 2020, 15:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X