ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ಸುಜುಕಿ ಮೋಟಾರ್‌ಸೈಕಲ್ ಕಂಪನಿಯು 2020ರ ಜುಲೈ ತಿಂಗಳ ಮಾರಾಟ ವರದಿಯನ್ನು ಬಿಡುಗಡೆಗೊಳಿಸಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಜುಲೈ ತಿಂಗಳಿನಲ್ಲಿ ಮಾರಾಟ ಪ್ರಮಾಣವು 37%ನಷ್ಟು ಹೆಚ್ಚಳವಾಗಿದೆ ಎಂದು ಕಂಪನಿ ಹೇಳಿದೆ. ಕಂಪನಿಯು ಜುಲೈ ತಿಂಗಳಿನಲ್ಲಿ 34,412 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ದೇಶೀಯ ಮಾರುಕಟ್ಟೆಯಲ್ಲಿ 31,421 ವಾಹನಗಳನ್ನು ಮಾರಾಟ ಮಾಡಲಾಗಿದ್ದು, 2,991 ವಾಹನಗಳನ್ನು ರಫ್ತು ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ. ಮಾರಾಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಕೊಯಿಚಿರೋ ಹೀರಾ, ಅನ್‌ಲಾಕ್‌ ನಂತರ ವ್ಯವಹಾರವು ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ವಾಹನಗಳ ಉತ್ಪಾದನೆ, ಮಾರಾಟ ಅಥವಾ ಪೂರೈಕೆ ಸರಪಳಿಯನ್ನು ಸುಧಾರಿಸುವಲ್ಲಿ ಕಂಪನಿಯು ಯಶಸ್ವಿಯಾಗಿದೆ. ಕರೋನಾ ವೈರಸ್ ಹರಡದಂತೆ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ. ಜೊತೆಗೆ ಕಂಪನಿಯ ಉತ್ಪಾದನಾ ಘಟಕಗಳಲ್ಲಿಯೂ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಪಾಲಿಸಲಾಗುತ್ತಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ಗುರುಗ್ರಾಮ ಘಟಕದಲ್ಲಿ ಇತ್ತೀಚಿಗಷ್ಟೇ ಕಂಪನಿಯ 50 ಲಕ್ಷ ಯುನಿಟ್ ಅನ್ನು ಉತ್ಪಾದಿಸಲಾಯಿತು. ಬಿಎಸ್ 6 ನಿಯಮಗಳು ಜಾರಿಯಾದ ನಂತರ ಕಂಪನಿಯು ತನ್ನ ಎಲ್ಲಾ ಬಿಎಸ್ 6 ಬೈಕ್ ಹಾಗೂ ಸ್ಕೂಟರ್‌ಗಳ ಬೆಲೆಯನ್ನು ರೂ.4 ಸಾವಿರದಿಂದ ರೂ. 10 ಸಾವಿರಗಳವರೆಗೆ ಹೆಚ್ಚಿಸಿದೆ.

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ಜಿಕ್ಸರ್ 150, ಜಿಕ್ಸರ್ 250, ಬರ್ಗ್‌ಮನ್ ಸ್ಟ್ರೀಟ್, ಆಕ್ಸೆಸ್ 125 ಹಾಗೂ ಇಂಟ್ರೂಡರ್ 150 ಬಿಎಸ್ 6 ಮಾದರಿಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ಬಿಎಸ್ 6 ಎಂಜಿನ್ ನೊಂದಿಗೆ ಅಪ್ ಗ್ರೇಡ್ ಮಾಡಲಾದ ಕಾರಣಕ್ಕೆ ಈ ವಾಹನಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ಇತ್ತೀಚೆಗಷ್ಟೇ ಕಂಪನಿಯು ಇಂಟ್ರೂಡರ್ 250 ಸಿಸಿ ಮಾದರಿ ಬೈಕಿಗಾಗಿ ಪೇಟೆಂಟ್ ಅರ್ಜಿ ಸಲ್ಲಿಸಿದೆ. ಈ ಬೈಕ್‌ನ ಪೇಟೆಂಟ್ ಫೋಟೋಗಳನ್ನು ಇಂಟರ್‌ನೆಟ್‌ನಲ್ಲಿ ಬಿಡುಗಡೆಗೊಳಿಸಲಾಗಿದೆ. ಇಂಟ್ರೂಡರ್ 250 ಬೈಕಿನ ಉತ್ಪಾದನೆ ಹಾಗೂ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಜುಲೈ ತಿಂಗಳಿನಲ್ಲಿ ಏರಿಕೆಯಾದ ಸುಜುಕಿ ಮೋಟಾರ್‌ಸೈಕಲ್ ಮಾರಾಟ

ಈ ಬೈಕ್ ಭಾರತದಲ್ಲಿ ತಯಾರಾಗಲಿದ್ದು, ವಿದೇಶಗಳಿಗೂ ರಫ್ತು ಮಾಡಲಾಗುವುದು ಎಂದು ಹೇಳಲಾಗಿದೆ. ಸುಜುಕಿ ಮೋಟಾರ್‌ಸೈಕಲ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‌ಗಾಗಿಯೂ ಪೇಟೆಂಟ್ ಪಡೆದಿದೆ. ಈ ಸ್ಕೂಟರ್ ಅನ್ನು 2021ರಲ್ಲಿ ಬಿಡುಗಡೆಗೊಳಿಸಲಾಗುವುದೆಂದು ವರದಿಯಾಗಿದೆ.

Most Read Articles

Kannada
English summary
Suzuki Motorcycle sales increased in July month. Read in Kannada.
Story first published: Saturday, August 1, 2020, 20:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X