ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಜಪಾನ್ ಮೂಲಕ ಬೈಕ್ ತಯಾರಕ ಕಂಪನಿಯಾದ ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್ ಬೈಕಿನ ಲೆಜೆಂಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಬೈಕ್ ಅನ್ನು ಏಳು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಈ ಬೈಕಿನಲ್ಲಿ ರೇಸ್ ಚಾಂಪಿಯನ್‌ಶಿಪ್ ಗೆದ್ದ ಬೈಕ್‌ಗಳ ನೋಟವನ್ನು ಸುಜುಕಿ ಕಂಪನಿಯು ನೀಡಿದೆ. ಸುಜುಕಿ ಕಂಪನಿಯು ಲೆಜೆಂಡ್ ಬೈಕಿನ ಏಳು ಬಣ್ಣದ ಬೈಕ್‌ಗಳಲ್ಲಿ ಚಾಂಪಿಯನ್‌ಶಿಪ್'ನ ನೋಟವನ್ನು ನೀಡಿದೆ. ಸುಜುಕಿ ಕಂಪನಿಯು 1976-77ರಲ್ಲಿ 500 ಜಿಪಿ ಬೈಕ್‌ಗಳನ್ನು ರೇಸಿಗಾಗಿ ಬಳಸುತ್ತಿತ್ತು. ಈ ಬೈಕ್‌ಗಳು ಬಿಳಿ ಹಾಗೂ ಕೆಂಪು ಬಣ್ಣವನ್ನು ಹೊಂದಿದ್ದವು.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಈಗ ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಆವೃತ್ತಿಯಲ್ಲಿಯೂ ಅದೇ ಬಣ್ಣವನ್ನು ಬಳಸಲಾಗಿದೆ. ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್ ನ ಏಳು ಬಣ್ಣಗಳು ಆಕರ್ಷಕ ಬಾಡಿ ಗ್ರಾಫಿಕ್ಸ್ ಅನ್ನು ಹೊಂದಿವೆ. ಬೈಕಿನ ರಿಮ್ ವೈಟ್, ಗೋಲ್ಡ್, ಹಾಗೂ ಬ್ರೌನ್ ಬಣ್ಣಗಳನ್ನು ಹೊಂದಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಬೈಕ್‌ನ ವಿನ್ಯಾಸವು ಅಗ್ರೆಸಿವ್ ಆಗಿದ್ದು, ಹಿಂಬದಿಯ ಸವಾರನ ಸೀಟಿನ ಮೇಲಿರುವ ಸೀಟ್ ಕೌಲ್, ಸೀಟ್ ಅನ್ನು ಮುಚ್ಚಿಡುತ್ತದೆ. ಸುಜುಕಿ ಜಿಎಸ್ಎಕ್ಸ್-ಆರ್ 1000 ಆರ್ ಬೈಕಿನಲ್ಲಿ 998 ಸಿಸಿಯ 4-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 199 ಬಿಹೆಚ್‌ಪಿ ಪವರ್ ಹಾಗೂ 117.6 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಈ ಬೈಕ್ ಸ್ಲಿಪ್ಪರ್ ಕ್ಲಚ್'ನೊಂದಿಗೆ 6-ಸ್ಪೀಡಿನ ಗೇರ್ ಬಾಕ್ಸ್ ಹೊಂದಿದೆ. ಈ ಬೈಕಿನಲ್ಲಿ ಎಲ್ಇಡಿ ಹೆಡ್ ಲೈಟ್ ಹಾಗೂ ಎಲ್ಇಡಿ ಟರ್ನ್ ಇಂಡಿಕೇಟರ್ ಗಳನ್ನು ನೀಡಲಾಗಿದೆ. ಈ ಬೈಕ್ ಪ್ರತಿ ಲೀಟರ್‌ ಪೆಟ್ರೋಲಿಗೆ 16 ಕಿ.ಮೀ ಮೈಲೇಜ್ ನೀಡುತ್ತದೆ. ಈ ಬೈಕಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 300 ಕಿ.ಮೀಗಳಾಗಿದೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಈ ಬೈಕಿನ ಮುಂಭಾಗದಲ್ಲಿ 320 ಎಂಎಂ ಡ್ಯುಯಲ್ ಡಿಸ್ಕ್ ಬ್ರೇಕ್ ಹಾಗೂ ಹಿಂಭಾಗದಲ್ಲಿ 220 ಎಂಎಂ ಸಿಂಗಲ್ ಡಿಸ್ಕ್ ಬ್ರೇಕ್ ನೀಡಲಾಗಿದೆ. ಸ್ಟ್ಯಾಂಡರ್ಡ್ ಎಬಿಎಸ್ ಹೊಂದಿರುವ ಈ ಬೈಕಿನ ಒಟ್ಟು ತೂಕ 203 ಕೆ.ಜಿಗಳಾಗಿದೆ. ಯೂರೋಪಿನಲ್ಲಿ ಅನಾವರಣಗೊಂಡಿರುವ ಜಿಎಸ್ಎಕ್ಸ್-ಆರ್ 1000 ಆರ್ ಬೈಕ್ ಅನ್ನು ಭಾರತದಲ್ಲಿಯೂ ಬಿಡುಗಡೆಗೊಳಿಸಲಾಗುವುದು.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಭಾರತದಲ್ಲಿ ನವೆಂಬರ್ 23ರಂದು ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬಿಎಸ್ 6 ಬೈಕ್ ಅನ್ನು ಬಿಡುಗಡೆಗೊಳಿಸಲಾಗಿದೆ. ಈ ಆಫ್ ರೋಡ್ ಬೈಕಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.8.84 ಲಕ್ಷಗಳಾಗಿದೆ. ಬಿಎಸ್ 6 ಮಾದರಿಯ ಬೆಲೆ ಬಿಎಸ್ 4 ಮಾದರಿಗಿಂತ ರೂ.1.38 ಲಕ್ಷಗಳಷ್ಟು ಹೆಚ್ಚಾಗಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿ ಬೈಕಿನಲ್ಲಿ ಅಳವಡಿಸಲಾಗಿರುವ 645 ಸಿಸಿ ವಿ-ಟ್ವಿನ್ ಎಂಜಿನ್ 8,800 ಆರ್‌ಪಿಎಂನಲ್ಲಿ 70 ಬಿಹೆಚ್‌ಪಿ ಪವರ್ ಹಾಗೂ 6,500 ಆರ್‌ಪಿಎಂನಲ್ಲಿ 62 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆರು ಸ್ಪೀಡಿನ ಗೇರ್‌ಬಾಕ್ಸ್ ಹೊಂದಿರುವ ಈ ಬೈಕ್ ಅನ್ನು ಆನ್ ಮಾಡಲು ಈಸಿ ಸ್ಟಾರ್ಟ್ ಸಿಸ್ಟಂ ಅನ್ನು ನೀಡಲಾಗಿದೆ.

ಜಿಎಸ್ಎಕ್ಸ್-ಆರ್ 1000 ಆರ್ ಲೆಜೆಂಡ್ ಎಡಿಷನ್ ಬೈಕ್ ಅನಾವರಣಗೊಳಿಸಿದ ಸುಜುಕಿ

ಸುಜುಕಿ ಕಂಪನಿಯು ತನ್ನ ಬರ್ಗ್‌ಮನ್ ಸ್ಟ್ರೀಟ್‌ ಮ್ಯಾಕ್ಸಿ ಸ್ಕೂಟರಿನ ಎಲೆಕ್ಟ್ರಿಕ್ ಮಾದರಿಯನ್ನು ಭಾರತದಲ್ಲಿ ಪರೀಕ್ಷಿಸುತ್ತಿದೆ. ಇತ್ತೀಚೆಗೆ ರೋಡ್ ಟೆಸ್ಟ್ ಮಾಡುವ ವೇಳೆಯಲ್ಲಿ ಈ ಸ್ಕೂಟರ್ ಕಣ್ಣಿಗೆ ಬಿದ್ದಿದೆ. ಕಂಪನಿಯು ಈ ಸ್ಕೂಟರ್ ಅನ್ನು ಸ್ಪರ್ಧಾತ್ಮಕ ಬೆಲೆಗೆ ಮಾರಾಟ ಮಾಡಲಿದ್ದು, ಬಿಡುಗಡೆಯಾದ ನಂತರ ಈ ಸ್ಕೂಟರ್ ಬಜಾಜ್ ಚೇತಕ್, ಎಥೆರ್ 450 ಎಕ್ಸ್, ಟಿವಿಎಸ್ ಐ ಕ್ಯೂಬ್‌ನಂತಹ ಸ್ಕೂಟರ್‌ಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Suzuki unveils GSX R1000R Legend Edition bike. Read in Kannada.
Story first published: Friday, December 25, 2020, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X