ದ್ವಿಚಕ್ರ ವಾಹನಗಳಿಗೆ ಬೇಡಿಕೆ ಹೆಚ್ಚಳ ನೀರಿಕ್ಷೆ- ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಕರೋನಾ ವೈರಸ್ ಪರಿಣಾಮ ಲಾಕ್‌ಡೌನ್ ವಿಧಿಸಿದ್ದರಿಂದ ಆಟೋ ಉದ್ಯಮವು ಭಾರೀ ಪರಿಣಾಮ ನಷ್ಟ ಅನುಭವಿಸುತ್ತಿದ್ದು, ಇದೀಗ ಪರಿಸ್ಥಿತಿಗೆ ಅನುಗುಣವಾಗಿ ಹೊಸ ವಾಹನಗಳ ಮಾರಾಟವು ನಿಧಾನಗತಿಯಲ್ಲಿ ಚೇತರಿಕೆ ಕಾಣುತ್ತಿದೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಮೊದಲ ಹಂತದ ಲಾಕ್‌ಡೌನ್ ಸಡಿಲಿಕೆ ನಂತರ ಹೊಸ ವಾಹನಗಳ ಬೇಡಿಕೆಯು ನಿಧಾನಗತಿಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಮುಂಬರುವ ದಿನಗಳಲ್ಲಿ ಕಾರು ಮಾರಾಟ ಪ್ರಮಾಣಕ್ಕಿಂತಲೂ ದ್ವಿಚಕ್ರ ವಾಹನಗಳ ಬೇಡಿಕೆ ಪ್ರಮಾಣವು ಕೆಲವೇ ದಿನಗಳಲ್ಲಿ ಭಾರೀ ಬದಲಾವಣೆಯಾಗಿದೆ. ಮೇ 4ರ ನಂತರ ಲಾಕ್‌ಡೌನ್ ತೆರವುಗೊಳಿಸಿದ ನಂತರ ಮಂದಗತಿಯಲ್ಲಿದ್ದ ಹೊಸ ವಾಹನ ಮಾರಾಟವು ಜೂನ್ ಮತ್ತು ಜುಲೈ ನಂತರ ಸತತ ಏರಿಕೆಯಲ್ಲಿದ್ದು, ದ್ವಿಚಕ್ರ ವಾಹನಗಳ ಖರೀದಿಗಾಗಿ ಸಾಮಾನ್ಯ ದಿನಗಳಲ್ಲಿದ್ದ ಬೇಡಿಕೆಯ ಶೇ.70ರಷ್ಟು ಬುಕ್ಕಿಂಗ್ ಪ್ರಮಾಣವು ದಾಖಲಾಗುತ್ತಿದೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಮುಂಬರುವ ದಿನಗಳಲ್ಲಿ ಹೊಸ ವಾಹನ ಮಾರಾಟ ಪ್ರಮಾಣವು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಕರೋನಾ ವೈರಸ್ ಪರಿಣಾಮ ಬಹುತೇಕ ಗ್ರಾಹಕರು ಸಾರ್ವಜನಿಕ ಸಾರಿಗೆ ಬಳಕೆಯಿಂದ ಹಿಂದೆ ಸರಿದು ಸ್ವಂತ ವಾಹನ ಬಳಕೆಗೆ ಆದ್ಯತೆ ನೀಡುತ್ತಿದ್ದಾರೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಲಾಕ್‌ಡೌನ್ ಪರಿಣಾಮ ಆರ್ಥಿಕ ಸಂಕಷ್ಟ ಎದುರಾಗಿದ್ದರೂ ವೈರಸ್ ಭೀತಿಯಿಂದಾಗಿ ಸ್ವಂತ ವಾಹನಗಳ ಬಳಕೆ ಆದ್ಯತೆ ನೀಡಲಾಗುತ್ತಿದ್ದು, ಕಾರು ಮಾರಾಟ ಪ್ರಮಾಣಕ್ಕಿಂತಲೂ ಹೆಚ್ಚು ದ್ವಿಚಕ್ರ ವಾಹನಗಳ ಬೇಡಿಕೆಯು ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಲಾಕ್‌ಡೌನ್ ಸಡಿಲಿಕೆಯ ನಂತರ ಬಹುತೇಕ ವಾಹನ ಮಾದರಿಗಳ ಬೇಡಿಕೆ ಪ್ರಮಾಣವು ನಿಧಾನವಾಗಿ ಏರಿಕೆ ಕಾಣುತ್ತಿದ್ದು, ಮುಂಬರುವ ದಿನಗಳಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಗಣನೀಯವಾಗಿ ಹೆಚ್ಚಳವಾಗುವ ನೀರಿಕ್ಷೆಯಿದೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಈ ನಿಟ್ಟಿನಲ್ಲಿ ಮಾರುಕಟ್ಟೆ ಅಧ್ಯಯನ ನಡೆಸಿರುವ ರಾಯಲ್ ಎನ್‌ಫೀಲ್ಡ್ ಮಾತೃಸಂಸ್ಥೆಯಾದ ಐರಿಷ್ ಮೋಟಾರ್ಸ್ ಕಂಪನಿಯು ದ್ವಿಚಕ್ರ ವಾಹನ ಮಾರಾಟ ವ್ಯಾಪ್ತಿ ಹೆಚ್ಚಿಸಲು ಮುಂದಾಗಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಮಾರಾಟ ಮಳಿಗೆಗಳನ್ನು ತೆರೆಯಲು ಉತ್ಸುಕವಾಗಿದೆ.

MOST READ: ಎಲೆಕ್ಟ್ರಿಕ್ ಮಾದರಿಯಲ್ಲಿ ಬಿಡುಗಡೆಯಾಗಲಿವೆ ಯಜ್ಡಿ ಹೊಸ ಕ್ಲಾಸಿಕ್ ಬೈಕ್

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಜೊತೆಗೆ ಭಾರತದಿಂದಲೇ ವಿದೇಶಿ ಮಾರುಕಟ್ಟೆಗಳಿಗೂ ರಫ್ತು ಪ್ರಮಾಣವನ್ನು ಹೆಚ್ಚಿಸುವ ಕುರಿತ ಯೋಜನೆ ರೂಪಿಸಿರುವ ಐರಿಷ್ ಮೋಟಾರ್ಸ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಹೊಸ ಬೈಕ್ ಉತ್ಪನ್ನಗಳ ಮತ್ತಷ್ಟು ಹೂಡಿಕೆ ಮಾಡಲು ಸಿದ್ದವಾಗಿದೆ.

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಇನ್ನು ಸದ್ಯ ಪರಿಸ್ಥಿತಿಯಲ್ಲಿ ಹೊಸ ವಾಹನಗಳ ಬೇಡಿಕೆ ಹೆಚ್ಚಿಸಲು ವಾಹನ ಖರೀದಿದಾರರಿಗೆ ಇಎಂಐ ತಗ್ಗಿಸಿ ಅತಿ ಸುಲಭವಾದ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದ್ದರೂ ವಾಹನ ಮಾರಾಟವು ಮಂದಗತಿಯಲ್ಲಿ ಸಾಗಿದ್ದು, ಲಾಕ್‌ಡೌನ್‌ಗೂ ಮೊದಲು ಬುಕ್ಕಿಂಗ್ ಮಾಡಿ ವಾಹನ ಖರೀದಿಯ ಸಂಭ್ರಮದಲ್ಲಿದ್ದ ಗ್ರಾಹಕರು ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುತ್ತಿರುವುದು ಆಟೋ ಕಂಪನಿಗಳನ್ನು ಚಿಂತೆಗೀಡು ಮಾಡಿದೆ.

MOST READ: ದ್ವಿಚಕ್ರ ವಾಹನಗಳ ಖರೀದಿ ಮೇಲೆ ಹೊಸ ಲೋನ್ ಆಫರ್ ಘೋಷಿಸಿದ ಹೋಂಡಾ

ಹೊಸ ಯೋಜನೆಗೆ ಸಿದ್ದವಾದ ರಾಯಲ್ ಎನ್‌ಫೀಲ್ಡ್

ಆದರೆ ಹೊಸ ಅಧ್ಯಯನ ವರದಿಗಳ ಪ್ರಕಾರ ಮುಂಬರುವ ದಿನಗಳಲ್ಲಿ ಹೊಸ ವಾಹನ ಮಾರಾಟವು ತೀವ್ರವಾಗಲಿದೆ ಎನ್ನುವ ಅಂಶವು ಆಟೋ ಕಂಪನಿಗಳಿಗೆ ಧೈರ್ಯ ತುಂಬಿದ್ದು, ಗ್ರಾಹಕರನ್ನು ಆಕರ್ಷಣೆ ಮಾಡುವ ನಿಟ್ಟಿನಲ್ಲಿ ಆಟೋ ಕಂಪನಿಗಳು ವಿವಿಧ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿವೆ.

Most Read Articles

Kannada
English summary
Eicher Motors Predicts Demand For Two-Wheelers: Expanding Royal Enfield’s Dealer Network. Read in Kannada.
Story first published: Monday, July 20, 2020, 19:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X