ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಭಾರತದ ಖ್ಯಾತ ಕ್ಯಾಬ್ ಸೇವಾ ಕಂಪನಿಯಾದ ಉಬರ್ ಹೊಸ ಸೇವೆಯನ್ನು ಆರಂಭಿಸಿದೆ. ಈ ಸೇವೆಯಲ್ಲಿ ಗ್ರಾಹಕರು ಯಾವುದೇ ವಸ್ತುಗಳನ್ನು ಕಳುಹಿಸಬಹುದು ಇಲ್ಲವೇ ಸ್ವೀಕರಿಸಬಹುದು. ಕಂಪನಿಯು ತನ್ನ ಹೊಸ ಸೇವೆಗೆ ಉಬರ್ ಕನೆಕ್ಟ್ ಎಂದು ಹೆಸರಿಟ್ಟಿದೆ.

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಈ ಸೇವೆಯನ್ನು ಪಡೆಯಲು ಬಯಸುವ ಗ್ರಾಹಕರು ಉಬರ್‌ ಆಪ್‌ನಿಂದ ಡೆಲಿವರಿಯನ್ನು ಬುಕ್ಕಿಂಗ್ ಮಾಡಬೇಕಾಗುತ್ತದೆ. ನಂತರ ಕಂಪನಿಯ ಎಕ್ಸಿಕ್ಯೂಟಿವ್‌ಗಳು ಗ್ರಾಹಕರು ತಿಳಿಸಿರುವ ವಿಳಾಸದಿಂದ ಪ್ಯಾಕೇಜ್ ತೆಗೆದುಕೊಳ್ಳುತ್ತಾರೆ.

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಗ್ರಾಹಕರು ತಮ್ಮ ಪ್ಯಾಕೇಜ್ ಪಿಕಪ್, ಮಾರ್ಗ ಹಾಗೂ ಡ್ರಾಪ್-ಆಫ್‌ಗಳನ್ನು ಟ್ರ್ಯಾಕ್ ಮಾಡಬಹುದು. ಗ್ರಾಹಕರು ಟ್ರ್ಯಾಕ್ ಬಗ್ಗೆ ಡೆಲಿವರಿ ಸ್ವೀಕರಿಸುವವರಿಗೆ ಮಾಹಿತಿಯನ್ನು ನೀಡಬಹುದು. ಉಬರ್ ಕಂಪನಿಯು ಸದ್ಯಕ್ಕೆ ದೇಶದ ನಾಲ್ಕು ದೊಡ್ಡ ನಗರಗಳಲ್ಲಿ ಈ ಸೇವೆಯನ್ನು ಆರಂಭಿಸುತ್ತಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಕೋಲ್ಕತಾ, ಗುವಾಹಟಿ, ಜೈಪುರ ಹಾಗೂ ಗುರುಗ್ರಾಮಗಳಲ್ಲಿ ಈ ಸೇವೆಯನ್ನು ಆರಂಭಿಸಲಾಗಿದೆ. ಈ ಸೇವೆಯಲ್ಲಿ ನೀವು ಯಾವುದೇ ಪ್ಯಾಕೇಜ್ ಅನ್ನು ನಗರದೊಳಗೆ ಎಲ್ಲಿಗೆ ಬೇಕಾದರೂ ಕಳುಹಿಸಬಹುದು. ಈ ಸೇವೆಯನ್ನು ಬಳಸಲು ಕೆಲವು ಷರತ್ತುಗಳನ್ನು ಪಾಲಿಸಬೇಕಾಗುತ್ತದೆ.

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಎಲ್ಲಾ ಪ್ಯಾಕೇಜುಗಳನ್ನು ಕಂಪನಿಯ ದ್ವಿಚಕ್ರ ವಾಹನಗಳ ಮೂಲಕ ಡೆಲಿವರಿ ಮಾಡಲಾಗುವುದು. ಈ ಪ್ಯಾಕೇಜ್‌ಗಳ ತೂಕವು 5 ಕೆ.ಜಿಗಿಂತ ಕಡಿಮೆಯಿರಬೇಕು. ಪ್ಯಾಕೇಜ್‌ಗಳನ್ನು ಪೂರ್ತಿಯಾಗಿ ಪ್ಯಾಕ್ ಮಾಡಿರಬೇಕು. ಯಾವುದೇ ರೀತಿಯ ಹಾನಿಯಾಗಿರಬಾರದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಆಲ್ಕೋಹಾಲ್, ಮರುಬಳಕೆಯ ಔಷಧಿ, ಅಪಾಯಕಾರಿ ಹಾಗೂ ಅಕ್ರಮ ಸರಕುಗಳನ್ನು ಡೆಲಿವರಿ ಮಾಡಲಾಗುವುದಿಲ್ಲ. ಮುಂಬೈ ಹಾಗೂ ಪುಣೆ ನಗರಗಳಲ್ಲಿ ಉಬರ್ ಕಂಪನಿಯು ನೇಚರ್ ಬಾಸ್ಕೆಟ್‌ನೊಂದಿಗೆ ಸಹಭಾಗಿತ್ವವನ್ನು ಹೊಂದಿದೆ.

ಗ್ರಾಹಕರೇ ಗಮನಿಸಿ: ನಿಮ್ಮ ಮನೆ ಬಾಗಿಲಿಗೇ ಅಗತ್ಯ ವಸ್ತುಗಳನ್ನು ಪೂರೈಸಲಿದೆ ಉಬರ್

ಈ ಸಹಭಾಗಿತ್ವದ ಮೂಲಕ ಜನರು ದಿನನಿತ್ಯದ ಅಗತ್ಯ ವಸ್ತುಗಳನ್ನು ಹಾಗೂ ದಿನಸಿ ವಸ್ತುಗಳ ಡೆಲಿವರಿಯನ್ನು ಪಡೆಯುತ್ತಿದ್ದಾರೆ. ಈ ಸೇವೆಯನ್ನು ನೀಡುವವರು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಮಾಸ್ಕ್, ಗ್ಲೌಸ್, ಸ್ಯಾನಿಟೈಜರ್‌ಗಳನ್ನು ಕಡ್ಡಾಯವಾಗಿ ಧರಿಸಬೇಕಾಗುತ್ತದೆ.

Most Read Articles

Kannada
English summary
Uber introduces new package delivery service during lockdown. Read in Kannada.
Story first published: Thursday, May 14, 2020, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X