ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ವೈರಸ್ ಭೀತಿಯು ಹೆಚ್ಚುತ್ತಿರುವ ಹಿನ್ನಲೆ ಆನ್‌ಲೈನ್ ಪ್ಲ್ಯಾರ್ಟ್‌ಫಾರ್ಮ್ ಮೂಲಕ ವಾಹನ ಮಾರಾಟವು ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿದ್ದು, ಪಿಯಾಜಿಯೊ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಪ್ರಿಲಿಯಾ ಮತ್ತು ವೆಸ್ಪಾ ಕೂಡಾ ಆನ್‌ಲೈನ್ ಬುಕ್ಕಿಂಗ್ ಮತ್ತು ಹೋಂ ಡೆಲಿವರಿ ಆರಂಭಿಸಿವೆ.

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ದೇಶಾದ್ಯಂತ ಬಹುತೇಕ ಆಟೋ ಉತ್ಪಾದನಾ ಕಂಪನಿಗಳು ಲಾಕ್‌ಡೌನ್ ವಿನಾಯ್ತಿ ನಂತರ ವಾಹನ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯನ್ನು ಪುನಾರಂಭಿಸಿದ್ದು, ಪಿಯಾಜಿಯೊ ಕೂಡಾ ತನ್ನ ಅಂಗ ಸಂಸ್ಥೆಗಳಾದ ವೆಸ್ಪಾ ಮತ್ತು ಎಪ್ರಿಲಿಯಾ ದ್ವಿಚಕ್ರ ವಾಹನ ಮಾರಾಟಕ್ಕೂ ಚಾಲನೆ ನೀಡಿದೆ. ಆದರೆ ಕರೋನಾ ವೈರಸ್ ಪ್ರಕರಣಗಳು ದಿನದಿಂದ ಏರಿಕೆಯಾಗುತ್ತಲೇ ಇರುವುದರಿಂದ ಆತಂಕ ಹೆಚ್ಚಾಗುತ್ತಿದ್ದು, ಸುರಕ್ಷಿತ ವ್ಯಾಪಾರ-ವಹಿವಾಟು ಇದೀಗ ಹೊಸ ಸವಾಲಾಗಿ ಪರಿಣಮಿಸಿದೆ.

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ಸದ್ಯ ಉತ್ಪಾದನೆ ಮತ್ತು ಮಾರಾಟ ಮಾಡುತ್ತಿರುವ ಆಟೋ ಕಂಪನಿಗಳು ಉದ್ಯೋಗ ಸ್ಥಳಗಳಲ್ಲಿ ಶೇ.50ಕ್ಕಿಂತಲೂ ಕಡಿಮೆ ಉದ್ಯೋಗಿಗಳೊಂದಿಗೆ ಕಾರ್ಯನಿರ್ವಹಣೆ ಮಾಡಲಾಗುತ್ತಿದ್ದು, ವೈರಸ್ ತಡೆಗಾಗಿ ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಕೈಗೊಂಡು ಗ್ರಾಹಕರ ಮನೆ ಬಾಗಿಲಿಗೆ ವಾಹನ ಉತ್ಪನ್ನಗಳನ್ನು ವಿತರಣೆ ಮಾಡುತ್ತಿದೆ.

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ಇನ್ನು ಮಹಾಮಾರಿ ಕರೋನಾ ವೈರಸ್‌ನಿಂದಾಗಿ ಜೀವನಶೈಲಿಯಲ್ಲಿ ಭಾರೀ ಬದಲಾವಣೆಯಾಗುತ್ತಿದ್ದು, ಆಟೋ ಉದ್ಯಮವು ಕೂಡಾ ಹಲವಾರು ಬದಲಾವಣೆಯೊಂದಿಗೆ ಉದ್ಯಮ ವ್ಯವಹಾರಗಳನ್ನು ಮುನ್ನಡೆಸುವುದು ಅನಿವಾರ್ಯವಾಗಿ ಪರಿಣಮಿಸಿದೆ.

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ಉತ್ಪಾದನಾ ಘಟಕಗಳಲ್ಲಿ ಮತ್ತು ಅಧಿಕೃತ ವಾಹನಗಳ ಮಾರಾಟ ಮಳಿಗೆಗಳಲ್ಲಿ ಹೆಚ್ಚಿನ ಮಟ್ಟದ ಸುರಕ್ಷಾ ಕ್ರಮಗಳನ್ನು ತೆಗದುಕೊಳ್ಳಲಾಗುತ್ತಿದ್ದು, ನಿಯಮಿತವಾಗಿ ಟೆಸ್ಟಿಂಗ್ ವಾಹನಗಳ ಸ್ವಚ್ಚತೆ, ಸಿಬ್ಬಂದಿಯ ಆರೋಗ್ಯ ತಪಾಸಣೆ, ಸಿಬ್ಬಂದಿ ನಡುವೆ ಸಾಮಾಜಿಕ ಅಂತರ, ಹ್ಯಾಂಡ್ ಸ್ಯಾನಿಟೈಜ್ ಮತ್ತು ಫೇಸ್ ಶೀಲ್ಡ್ ಬಳಕೆಯನ್ನು ಕಡ್ಡಾಯಗೊಳಿಸಿವೆ.

MOST READ: ಲಾಕ್‌ಡೌನ್ ಸಂಕಷ್ಟ: ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಉದ್ಯಮ ಆರಂಭಿಸಿದ ಫೋಕ್ಸ್‌ವ್ಯಾಗನ್

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ವಾಹನ ಮಾರಾಟ ಪ್ರಕ್ರಿಯೆಯನ್ನು ಈ ಹಿಂದೆ ನೇರವಾಗಿ ಶೋರೂಂಗಳಲ್ಲೇ ಪತ್ರವ್ಯವಹಾರ ಕೈಗೊಳ್ಳುತ್ತಿದ್ದ ಆಟೋ ಕಂಪನಿಗಳು ಇದೀಗ ಹೊಸ ಮಾರ್ಗ ಕಂಡುಕೊಂಡಿದ್ದು, ಆನ್‌ಲೈನ್ ಮೂಲಕವೇ ಪತ್ರ ವ್ಯವಹಾರ ಮುಗಿಸಿ ಗ್ರಾಹಕರ ಮನೆ ಬಾಗಿಲಿಗೆಯೇ ವಾಹನಗಳನ್ನು ವಿತರಣೆ ಮಾಡುತ್ತಿವೆ.

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ಈ ವೇಳೆಯೂ ಗ್ರಾಹಕರಿಗೆ ಗರಿಷ್ಠ ಸುರಕ್ಷತೆಯೊಂದಿಗೆ ವಾಹನಗಳನ್ನು ವಿತರಣೆ ಮಾಡಲಿರುವ ಆಟೋ ಕಂಪನಿಗಳು ವಿತರಣೆಗೂ ಮುನ್ನ ನಂಜು ನಿರೋಧಕ ರಸಾಯನಿಕಗಳಿಂದ ಸ್ವಚ್ಛಗೊಳಿಸಿದ ನಂತರವೇ ವಿತರಣೆ ಮಾಡುವುದನ್ನು ಕಡ್ಡಾಯಗೊಳಿಸಿವೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ವೈರಸ್ ಭೀತಿ: ಹೋಂ ಡೆಲಿವರಿ ಆರಂಭಿಸಿದ ಪಿಯಾಜಿಯೊ

ಇದರಿಂದ ಗ್ರಾಹಕರು ಆಟೋ ಕಂಪನಿಗಳ ಹೊಸ ಕ್ರಮ ಮಕ್ತವಾಗಿ ಸ್ವಾಗತಿಸುತ್ತಿದ್ದು, ಶೇ.70ಕ್ಕಿಂತಲೂ ಹೆಚ್ಚು ಗ್ರಾಹಕರು ಇದೀಗ ಆನ್‌ಲೈನ್ ಮೂಲಕವೇ ವಾಹನ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಇದಕ್ಕಾಗಿಯೇ ಹೊಸ ಪ್ಲ್ಯಾಟ್‌ಫಾರ್ಮ್ ತೆರಿದಿರುವ ಆಟೋ ಕಂಪನಿಗಳು ವಾಹನ ಖರೀದಿಯನ್ನು ಮತ್ತಷ್ಟು ಸರಳಗೊಳಿಸಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

Most Read Articles

Kannada
English summary
Piaggio India has introduced new online booking platforms for Vespa and Aprilia in the Indian market. Read in Kannada.
Story first published: Thursday, June 11, 2020, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X