Just In
Don't Miss!
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 17ರ ಚಿನ್ನ, ಬೆಳ್ಳಿ ದರ
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Movies
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರೇಸಿಂಗ್ ಸಿಕ್ಸ್ಟಿ ಪ್ರೀಮಿಯಂ ಸ್ಕೂಟರ್ ಬಿಡುಗಡೆ ಮಾಡಿದ ವೆಸ್ಪಾ
ಪಿಯಾಜಿಯೊ ಕಂಪನಿಯು ವೆಸ್ಪಾ ಬ್ರಾಂಡ್‌ನ ರೇಸಿಂಗ್ ಸಿಕ್ಸ್ಟಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಎರಡು ಪ್ರಮುಖ ವೆರಿಯೆಂಟ್‌ಗಳಲ್ಲಿ ಅಭಿವೃದ್ದಿಗೊಂಡಿರುವ ಹೊಸ ಸ್ಕೂಟರ್ ಮಾದರಿಯು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದೆ.

ರೇಸಿಂಗ್ ಸಿಕ್ಸ್ಟಿ ಸ್ಪೆಷಲ್ ಎಡಿಷನ್ ಅನ್ನು ಪ್ರಮುಖ ಎರಡು ಮಾದರಿಗಳಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ 125ಸಿಸಿ ಮತ್ತು 150 ಸಿಸಿ ಮಾದರಿಗಳಲ್ಲಿ ಖರೀದಿ ಮಾಡಬಹುದಾಗಿದೆ. ಹೊಸ ಸ್ಕೂಟರ್ ಬೆಲೆಯನ್ನು ಎಂಜಿನ್ ಆಯ್ಕೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 1.20 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ಎಕ್ಸ್‌ಶೋರೂಂ ಪ್ರಕಾರ ರೂ. 1.32 ಲಕ್ಷ ಬೆಲೆ ಹೊಂದಿದೆ.

ಸ್ಪೆಷಲ್ ಎಡಿಷನ್ ರೇಸಿಂಗ್ ಸಿಕ್ಸ್ಟಿ ಸ್ಕೂಟರ್ ಮಾದರಿಯು ವೆಸ್ಪಾ ಎಸ್ಎಲ್ಎಕ್ಸ್ 125 ಮತ್ತು ಎಸ್ಎಲ್ಎಕ್ಸ್ 150 ಸ್ಕೂಟರ್ ಮಾದರಿಯ ವಿನ್ಯಾಸವನ್ನು ಆಧರಿಸಿದ್ದು, ಹೊಸ ಸ್ಕೂಟರ್‌ಗಳನ್ನು 2020ರ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಲಾಗಿತ್ತು.

ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ ಬಳಿಕ ಕಳೆದ ಮಾರ್ಚ್ ಅವಧಿಯಲ್ಲೇ ಬಿಡುಗಡೆಯ ಯೋಜನೆಯಲ್ಲಿದ್ದ ಪಿಯಾಜಿಯೊ ಕಂಪನಿಗೆ ಕರೋನಾ ವೈರಸ್ ಹಿನ್ನಡೆ ಉಂಟು ಮಾಡಿದ್ದು, ಇದೀಗ ಮಾರುಕಟ್ಟೆ ಸಹಜ ಸ್ಥಿತಿ ಮರಳುತ್ತಿರುವುದರಿಂದ ಹೊಸ ಸ್ಕೂಟರ್ ಬಿಡುಗಡೆ ಮಾಡಿದೆ.

ಹೊಸ ರೇಸಿಂಗ್ ಸಿಕ್ಸ್ಟಿ ಸ್ಕೂಟರ್ ಮಾದರಿಯು 1960ರ ಅವಧಿಯಲ್ಲಿನ ಮೊನಾಕೊ ಮತ್ತು ಮೊಂಜಾ ಕ್ಲಾಸಿಕ್ ಸ್ಕೂಟರ್ ಮಾದರಿಗಳ ವಿನ್ಯಾಸಗಳ ಪ್ರೇರಣೆ ಹೊಂದಿದ್ದು, ಪ್ರೀಮಿಯಂ ಫೀಚರ್ಸ್‌ನೊಂದಿಗೆ ಸ್ಪೋಟಿ ವಿನ್ಯಾಸವು ಗ್ರಾಹಕರ ಪ್ರಮುಖ ಆಕರ್ಷಣೆಯಾಗಲಿದೆ.

ಬಿಳಿ ಬಣ್ಣಗಳ ಆಯ್ಕೆ ಹೊಂದಿರುವ ರೇಸಿಂಗ್ ಸಿಕ್ಸ್ಟಿ ಸ್ಕೂಟರ್ ಮಾದರಿಯು ಫ್ರಂಟ್ ಆಪ್ರಾನ್ ಮೇಲೆ ಡ್ಯುಯಲ್ ರೇಸಿಂಗ್ ಸ್ಟ್ಪೀಪ್ ಪಡೆದಿದ್ದು, ಸೈಡ್ ಲುಕ್ ಹೆಚ್ಚಿಸಲು ಫೆಂಡರ್ ಮತ್ತು ಹಿಂಭಾಗದಲ್ಲೂ ಕೂಡಾ ರೇಸಿಂಗ್ ಸ್ಟ್ಪೀಪ್ ನೀಡಲಾಗಿದೆ.

ಸ್ಕೂಟರ್ ಬಣ್ಣದ ಆಯ್ಕೆಗೆ ತಕ್ಕಂತೆ ಮತ್ತು ಲುಕ್ ಹೆಚ್ಚಿಸಲು ಗೋಲ್ಡ್ ಪೇಂಟ್ ಸ್ಕೀಮ್‌ನಲ್ಲಿರುವ 5-ಸ್ಪೀಕ್ ಪೆಟಲ್ ಅಲಾಯ್ ವೀಲ್ಹ್ ನೀಡಲಾಗಿದ್ದು, ಹೊಸ ಸ್ಕೂಟರ್‌ಗೆ ಇದು ಇನ್ನಷ್ಟು ಪ್ರೀಮಿಯಂ ಲುಕ್ ನೀಡುತ್ತದೆ.

ಹಾಗೆಯೇ ಹೊಸ ಸ್ಕೂಟರ್‌ನಲ್ಲಿ ಕ್ರಿಸ್ಟಲ್ ಎಲ್ಇಡಿ ಹೆಡ್‌ಲ್ಯಾಂಪ್, ಸೆಂಟ್ರಲ್ ಎಲ್ಇಡಿ ಡಿಆರ್‌ಎಲ್ಎಸ್, ಯುಎಸ್‌ಬಿ ಚಾರ್ಜಿಂಗ್ ಪೋರ್ಟ್, ಬೂಟ್ ಲೈಟ್ ನೀಡಲಾಗಿದ್ದು, ಸ್ಟೀಲ್ ಬಾಡಿಯೊಂದಿಗೆ ಟ್ವಿನ್-ಪಾಟ್ ಕ್ಯಾಲಿಪರ್, ಡಿಸ್ಕ್ ಬ್ರೇಕ್ ಸೌಲಭ್ಯಗಳಿವೆ.

ಎಂಜಿನ್ ವೈಶಿಷ್ಟ್ಯತೆ
ರೇಸಿಂಗ್ ಸಿಕ್ಸ್ಟಿ 125 ಸ್ಕೂಟರ್ ಮಾದರಿಯು ಬಿಎಸ್-6 ವೈಶಿಷ್ಟ್ಯತೆಯ 124 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 9.8-ಬಿಎಚ್‌ಪಿ ಮತ್ತು 9.6-ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ರೇಸಿಂಗ್ ಸಿಕ್ಸ್ಟಿ 150 ಮಾದರಿಯು 149 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 10.4-ಬಿಎಚ್‌ಪಿ ಮತ್ತು 10.3-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಸದ್ಯ ಬಿಡುಗಡೆಗೊಂಡಿರುವ ಹೊಸ ಸ್ಕೂಟರ್‌ಗಳು ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಕೈಸೇರಲಿದ್ದು, ರೂ. 1 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಿಸಲಾಗಿದೆ. ಆನ್‌ಲೈನ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ರೂ.2 ಸಾವಿರದವರೆಗೆ ಆಫರ್ ಘೋಷಣೆ ಮಾಡಲಾಗಿದ್ದು, ವಾಹನ ಖರೀದಿಯನ್ನು ಸುರಕ್ಷಿತಗೊಳಿಸಲು ಆಫರ್ ನೀಡಲಾಗುತ್ತಿದೆ.