ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಯಮಹಾ ಮೋಟರ್‍‍ಸೈಕಲ್ ಇಂಡಿಯಾ ತನ್ನ ಬಹುನಿರೀಕ್ಷಿತ ಬಿಎಸ್-6 ಎ‍‍ಫ್‍ಝಡ್-ಎಫ್ಐ ಮತ್ತು ಎಫ್‍‍ಝಡ್ಎಸ್-ಎಫ್ಐ ಬೈಕುಗಳನ್ನು ಕಳೆದ ವರ್ಷದಲ್ಲಿ ಬಿಡುಗಡೆಗೊಳಿಸಿದರು. ಇದೀಗ ಯಮಹಾ ಕಂಪನಿಯು ಈ ಎರಡು ಜನಪ್ರಿಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಯಮಹಾ ಕಂಪನಿಯು ಈ ವರ್ಷದ ಮೇ ತಿಂಗಳಲ್ಲಿ ಬಿಎಸ್-6 ಎ‍‍ಫ್‍ಝಡ್-ಎಫ್ಐ ಮತ್ತು ಎಫ್‍‍ಝಡ್ಎಸ್-ಎಫ್ಐ ಬೈಕುಗಳ ಬೆಲೆಯನ್ನು ರೂ.500 ಹೆಚ್ಚಿಸಿದ್ದರು. ಇದೀಗ ಈ ಬಿಎಸ್-6 ಎ‍‍ಫ್‍ಝಡ್-ಎಫ್ಐ ಮತ್ತು ಎಫ್‍‍ಝಡ್ಎಸ್-ಎಫ್ಐ ಬೈಕುಗಳ ಬೆಲೆಯನ್ನು ಸುಮಾರು ರೂ.2000 ಗಳವರೆಗೆ ಎರಡನೇ ಬಾರಿ ಹೆಚ್ಚಿಸಿದೆ. ಬೆಲೆ ಏರಿಕೆಯ ನಂತರ, ಬಿಎಸ್-6 ಎ‍‍ಫ್‍ಝಡ್-ಎಫ್ಐ ಬೈಕಿನ ಬೆಲೆಯು ರೂ.1,01,700 ಗಳಾದರೆ, ಬಿಎಸ್-6 ಎಫ್‍‍ಝಡ್ಎಸ್-ಎಫ್ಐ ಬೈಕಿಗೆ ರೂ.1,03,700 ಗಳಾಗಿದೆ. ಈ ಎಲ್ಲಾ ಬೆಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಬಿಎಸ್-6 ಯಮಹಾ ಎಫ್‍‍ಜೆಡ್ಎಸ್-ಎಫ್ಐ ಬೈಕನ್ನು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ. ಇದು ಡಾರ್ಕ್‍‍ನೈಟ್ ಮತ್ತು ಮೆಟಾಲಿಕ್ ರೆಡ್ ಬಣ್ಣವನ್ನು ಹೊಂದಿದೆ.

MOST READ: ಬಿಡುಗಡೆಯಾಯ್ತು ಬಹುನಿರೀಕ್ಷಿತ ಹೊಸ ಹೋಂಡಾ ಎಕ್ಸ್-ಬ್ಲೇಡ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಯಮಹಾ ಎಫ್‍ಝಡ್‍ಎಸ್‍-ಎಫ್ಐ ಬಿಎಸ್-6 ಬೈಕಿನಲ್ಲಿ ಡಾರ್ಕ್ ಮ್ಯಾಟ್ ಬ್ಲೂ, ಮ್ಯಾಟ್ ಬ್ಲಾಕ್, ಗ್ರೇ ಮತ್ತು ಸಯಾನ್ ಬ್ಲೂ ಬಣ್ಣಗಳ ಆಯ್ಕೆಯನ್ನು ಹೊಂದಿದೆ. ಇನ್ನೂ ಯಮಹಾ ಎಫ್‍‍ಜೆಡ್ ಬಿಎಸ್-6 ಬೈಕು ಮೆಟಾಲಿಕ್ ಬ್ಲ್ಯಾಕ್ ಮತ್ತು ರೇಸಿಂಗ್ ಬ್ಲೂ ಸೇರಿದಂತೆ ಎರಡು ಸ್ಟ್ಯಾಂಡರ್ಡ್ ಬಣ್ಣಗಳ ಆಯ್ಕೆಗಳನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಈ ಎರಡು ಬೈಕುಗಳಲ್ಲಿ 149 ಸಿಸಿ ಸಿಂಗಲ್ ಸಿಲಿಂಡರ್ ಬಿಎಸ್-6 ಎಂಜಿನ್‍ ಅನ್ನು ಹೊಂದಿದೆ. ಈ ಎಂಜಿನ್ 7,250 ಆರ್‍‍ಪಿಎಂನಲ್ಲಿ 12 ಬಿ‍ಎಚ್‍ಪಿ ಪವರ್ ಮತ್ತು 5,500 ಆರ್‍‍ಪಿಎಂನಲ್ಲಿ 13.6 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ಗಳೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

MOST READ: ಭಾರತಕ್ಕೆ ಲಗ್ಗೆ ಇಡಲಿದೆ ಜನಪ್ರಿಯ ಟ್ರಯಂಫ್ ಸ್ಟ್ರೀಟ್ ಟ್ರಿಪಲ್ ಆರ್ ಬೈಕ್

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಈ ಎರಡು ಬೈಕುಗಳಲ್ಲಿ ಎಲ್‍ಇಡಿ ಟೇಲ್ ಲೈಟ್‍, ಎಲ್‍ಇಡಿ ಹೆಡ್‍ಲ್ಯಾಂಪ್, ಎಲ್‍‍ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್ ಮತ್ತು ಸಿಂಗಲ್ ಪೀಸ್ ಸ್ಪ್ಲಿಟ್ ಸೀಟ್ ಅನ್ನು ಹೊಂದಿದೆ. ಯಮಹಾ ಎಫ್‍‍ಜೆಡ್-ಎಸ್ ಮತ್ತಷ್ಟು ಕ್ರೋಮ್‍ ಹೈಲೈಟ್ಸ್ ಮತ್ತು ಹೆಚ್ಚುವರಿ ಬಾಡಿ ಪ್ಯಾನೆಲ್ ಅನ್ನು ಹೊಂದಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಇನ್ನು ಈ ಬಿಎಸ್-6 ಎ‍‍ಫ್‍ಝಡ್-ಎಫ್ಐ ಮತ್ತು ಎಫ್‍‍ಝಡ್ಎಸ್-ಎಫ್ಐ ಬೈಕುಗಳಲ್ಲಿ ಸಸ್ಪೆಂಕ್ಷನ್ ಗಾಗಿ ಮುಂಭಾಗದಲ್ಲಿ ಟಿ‍‍ಲಿ‍ಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಅಳವಡಿಸಲಾಗಿದೆ.

MOST READ: ಬಿಡುಗಡೆಯ ಸನಿಹದಲ್ಲಿ ಬಹುನಿರೀಕ್ಷಿತ ಬಿಎಸ್-6 ಹೀರೋ ಬೈಕುಗಳು

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಇನ್ನು ಈ ಎರಡು ಬೈಕುಗಳ ಬ್ರೇಕಿಂಗ್ ಸಿಸ್ಟ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸ್ಟ್ಯಾಂಡರ್ಡ್ ಸಿಂಗಲ್ ಚಾನೆಲ್ ಎ‍ಬಿಎಸ್ ಅನ್ನು ಕೂಡ ನೀಡಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಬೈಕುಗಳು

ಯಮಹಾ ಎಎ‍‍ಫ್‍ಝಡ್ ಮತ್ತು ಎಫ್‍‍ಝಡ್ಎಸ್-ಎಫ್ ಬೈಕ್‍‍ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ 160 ಎನ್ಎಸ್, ಕೆಟಿಎಂ ಡ್ಯೂಕ್ 125, ಸುಜುಕಿ ಗಿಕ್ಸ್‌ಸರ್ 155 ಮತ್ತು ಟಿವಿಎಸ್ ಅಪಾಚೆ ಆರ್‌ಟಿಆರ್ 160 4 ವಿ ಬೈಕ್‍‍ಗಳಿಗೆ ಪೈಪೋಟಿ ನೀಡುತ್ತದೆ.

Most Read Articles

Kannada
Read more on ಯಮಹಾ yamaha
English summary
Yamaha Increases The Prices Of The BS6 FZ-Fi and FZS-Fi For The Second Time. Read In Kannada.
Story first published: Monday, August 10, 2020, 20:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X