Just In
Don't Miss!
- News
ನೊಂದ ಮಹಿಳೆಯಿಂದ ಪೊಲೀಸ್ ಸ್ಟೇಷನ್ ನಿಂದಲೇ ಫೇಸ್ ಬುಕ್ ಲೈವ್ !
- Movies
ಉಪೇಂದ್ರ ನಟನೆಯ ಕಬ್ಜ ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕುರುಕ್ಷೇತ್ರ'ದ ಭೀಮ
- Sports
ಆರು ನಗರಗಳಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ಸಿದ್ಧತೆ: ಅಹ್ಮದಾಬಾದ್ನಲ್ಲಿ ಫೈನಲ್: ವರದಿ
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Lifestyle
ವಾರ ಭವಿಷ್ಯ: ಈ ವಾರ 12 ರಾಶಿಗಳ ರಾಶಿಫಲ ಹೇಗಿದೆ?
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್‌ಎಸ್‌ವಿ4 ಬೈಕುಗಳು
ಎಪ್ರಿಲಿಯಾ ಕಂಪನಿಯು 2021ರ ಆರ್‌ಎಸ್‌ವಿ4 ಮತ್ತು ಆರ್‌ಎಸ್‌ವಿ4 ಫ್ಯಾಕ್ಟರಿ ಎಂಬ ಎರಡು ಬೈಕುಗಳನ್ನು ಅನಾವರಣಗೊಳಿಸಿವೆ. ಈ ಹೊಸ ಎಪ್ರಿಲಿಯಾ ಆರ್‌ಎಸ್‌ವಿ4 ಮತ್ತು ಆರ್‌ಎಸ್‌ವಿ4 ಫ್ಯಾಕ್ಟರಿ ಎಂಬ ಎರಡು ಬೈಕುಗಳು ಸ್ಟೈಲಿಂಗ್ ಮತ್ತು ಇತರ ಅಪ್‌ಡೇಟ್ ಗಳನ್ನು ಪಡೆದುಕೊಂಡಿವೆ.

ಎಪ್ರಿಲಿಯಾ ಆರ್‌ಎಸ್‌ವಿ4 ಚಿಕ್ಕ ಮಿಡಲ್ ವೈಟ್ ಬೈಕ್ ತನ್ನ ಆರ್‌ಎಸ್ 660 ಮಾದರಿಯಿಂದ ವಿನ್ಯಾಸದ ಕೆಲವು ಅಂಶಗಳನ್ನು ಎರವಲು ಪಡೆದುಕೊಂಡಿದೆ. ಎಪ್ರಿಲಿಯಾ ಆರ್‌ಎಸ್‌ವಿ4 ಬೈಕ್ ಲೋ ಏರೋಡೈನಾಮಿಕ್ ರಿಸ್ಟೆನ್ಸ್ ಅನ್ನು ಹೊಂದಿದೆ. ಇದು ಏರ್‌ಬಾಕ್ಸ್‌ನಲ್ಲಿ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತದೆ. ಎಪ್ರಿಲಿಯಾ ಆರ್‌ಎಸ್‌ವಿ4 ಬೈಕ್ ಡಿಆರ್‌ಎಲ್‌ಗಳೊಂದಿಗೆ ಪೂರ್ಣ ಎಲ್‌ಇಡಿ ಹೆಡ್‌ಲೈಟ್‌ಗಳ ಯುನಿಟ್ ಅನ್ನು ಹೊಂದಿದೆ.

ಇದರೊಂದಿಗೆ ಕಾರ್ನರಿಂಗ್ ಲ್ಯಾಂಪ್ ಗಳನ್ನು ಸಹ ಒಳಗೊಂಡಿದೆ. ಇನ್ನು ಈ ಬೈಕ್ ಹೊಸ ಫ್ಯೂಯಲ್ ಟ್ಯಾಂಕ್ ಮತ್ತು ಸೀಟ್ ಅನ್ನು ಪಡೆಯುತ್ತದೆ. ಎಪ್ರಿಲಿಯಾ ಆರ್‌ಎಸ್‌ವಿ4 ಬೈಕಿನ ಎಂಜಿನ್‌ನ ಸಂಪೂರ್ಣ ವಿವರಗಳನ್ನು ಕಂಪನಿಯು ಬಹಿರಂಗಪಡಿಸಿಲ್ಲ.
MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ಆದರೆ ಯಾಂತ್ರಿಕವಾಗಿ, ಇದು ಯುರೋ 5 ಮಾನದಂಡಗಳನ್ನು ಪೂರೈಸುತ್ತದೆ ಎಂದು ಅವರು ಹೇಳಿದ್ದಾರೆ. ಹಿಂದಿನ ಮಾದರಿಯಲ್ಲಿದ್ದ 1077ಸಿಸಿ ಎಂಜಿನ್ ಅನ್ನು ಬದಲಾಯಿಸಿ 1099ಸಿಸಿ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಈ ಎಂಜಿನ್ 215 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುತ್ತದೆ.

ಎಪ್ರಿಲಿಯಾ ಆರ್‌ಎಸ್‌ವಿ4 ನವೀಕರಿಸಿದ ಎಲೆಕ್ಟ್ರಾನಿಕ್ ಪ್ಯಾಕೇಜ್ ಅನ್ನು ಸಹ ಪಡೆಯುತ್ತದೆ. ಇದು ಹೊಸ ಟಿಎಫ್‌ಟಿ ಡಿಸ್ ಪ್ಲೇಯನ್ನು ಪಡೆಯುತದೆ. ಹೊಸ ಇಸಿಯು ಮತ್ತು ಐಎಂಯು ಪ್ಲಾಟ್‌ಫಾರ್ಮ್ ಅನ್ನು ಪಡೆಯುತ್ತದೆ. ಅದು ಕಾರ್ಯಕ್ಷಮತೆಯನ್ನು ಸುಧಾರಿಸುತ್ತದೆ ಎಂದು ಹೇಳಲಾಗುತ್ತದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಇನ್ನು ಈ ಬೈಕ್ ಸುಧಾರಿತ ರೈಡ್-ಬೈ-ವೈರ್ ಥ್ರೊಟಲ್ ಮತ್ತು ಎಪಿಆರ್ಸಿ (ಏಪ್ರಿಲಿಯಾ ಪರ್ಫಾರ್ಮೆನ್ಸ್ ರೈಡ್ ಕಂಟ್ರೋಲ್) ಸಿಸ್ಟಂ ಅನ್ನು ಸಹ ಪಡೆಯುತ್ತದೆ. ಆರ್‌ಎಸ್‌ವಿ 4 ಮಲ್ಟಿ-ಲೆವೆಲ್ ಎಂಜಿನ್ ಬ್ರೇಕ್ ಕಂಟ್ರೋಲ್ ಅನ್ನು ಹೊಂದಿದೆ, ಇದರಲ್ಲಿ ಆರು ರೈಡಿಂಗ್ ಮೋಡ್‌ಗಳಿವೆ,

ಇದಲ್ಲದೆ, ಆರ್‌ಎಸ್‌ವಿ4 ಹೊಸ ಸ್ವಿಂಗಾರ್ಮ್ ಅನ್ನು ಹೊಂದಿದ್ದು, ಮೋಟೋ ಜಿಪಿಯಲ್ಲಿ ಬಳಸಲಾಗುವ ಏಪ್ರಿಲಿಯಾ ಆರ್ಎಸ್-ಜಿಪಿ ಯಿಂದ ಸ್ಫೂರ್ತಿ ಪಡೆದಿದೆ. ಆರ್‌ಎಸ್‌ವಿ4 ಮತ್ತು ಆರ್‌ಎಸ್‌ವಿ4 ಫ್ಯಾಕ್ಟರಿ ಎಂಬ ಎರಡು ಬೈಕುಗಳ ನಡುವೆ ಬಣ್ಣಗಳಲ್ಲಿ ಮಾತ್ರ ವ್ಯತ್ಯಾಸಗಳಿವೆ.
MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಸ್ಟ್ಯಾಂಡರ್ಡ್ ಆರ್‌ಎಸ್‌ವಿ4 ಲೋಸೈಲ್ ಬಣ್ಣದಲ್ಲಿ ಮಾತ್ರ ಲಭ್ಯವಿರುತ್ತದೆ. ಮತ್ತೊಂದೆಡೆ ಆರ್‌ಎಸ್‌ವಿ4 ಫ್ಯಾಕ್ಟರಿ ಮಾದರಿಯು ಬ್ಲ್ಯಾಕ್ ಮತ್ತು ಲಾವಾ ರೆಡ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿರುತ್ತದೆ.

ಹೊಸ ಎಪ್ರಿಲಿಯಾ ಆರ್‌ಎಸ್‌ವಿ4 ಬೈಕ್ ಮಾರುಕಟ್ಟೆಯಲ್ಲಿ ಬಿಎಂಡಬ್ಲ್ಯು ಎಸ್1000ಆರ್ಆರ್, ಡುಕಾಟಿ ಪಾನಿಗಲೆ, ಕವಾಸಕಿ ಝಎಕ್ಸ್ -10ಆರ್, ಸುಜುಕಿ ಜಿಎಸ್‌ಎಕ್ಸ್-ಆರ್1000 ಮತ್ತು 1000ಆರ್, ಹೋಂಡಾ ಸಿಬಿಆರ್1000ಆರ್ಆರ್ ಫೈರ್‌ಬ್ಲೇಡ್ ಮತ್ತು ಯಮಹಾ ವೈಜೆಡ್-ಆರ್1 ಬೈಕುಗಳಿಗೆ ಪೈಪೋಟಿ ನೀಡುತ್ತದೆ.