Just In
Don't Miss!
- News
ಖಾತೆ ಹಂಚಿಕೆ ಅಸಮಾಧಾನ: ಸಚಿವ ಸ್ಥಾನಕ್ಕೆ ಜೆ.ಸಿ. ಮಾಧುಸ್ವಾಮಿ ರಾಜೀನಾಮೆ?
- Movies
ಜನವರಿ 22ರಂದು ಐದು ಕನ್ನಡ ಸಿನಿಮಾ ಬಿಡುಗಡೆ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Sports
ತವರಿಗೆ ಮರಳಿದ ಟೀಮ್ ಇಂಡಿಯಾ: ಮುಂಬೈನಲ್ಲಿ ರಹಾನೆಗೆ ಅದ್ದೂರಿ ಸ್ವಾಗತ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಡಕಾರ್ ರ‍್ಯಾಲಿ 2021: ವಿಶ್ವದ ಅಪಾಯಕಾರಿ ಮೋಟಾರ್‌ಸ್ಪೋರ್ಟ್ ಸ್ಪರ್ಧೆಗೆ ಭರ್ಜರಿ ಚಾಲನೆ
ಕರೋನಾ ವೈರಸ್ ಅಬ್ಬರದ ನಡುವೆಯೂ ವಿಶ್ವದ ಜನಪ್ರಿಯ ಮೋಟಾರ್‌ಸ್ಪೋರ್ಟ್ ಡಕಾರ್ ರ‍್ಯಾಲಿಯ 43ನೇ ಆವೃತ್ತಿಗೆ ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ರ‍್ಯಾಲಿಯ ಮೊದಲ ಹಂತದ ಸ್ಪರ್ಧೆಯಲ್ಲಿ ಭಾರತೀಯ ರೈಡರ್‌ಗಳು ಉತ್ತಮ ಪ್ರದರ್ಶನ ತೋರಿದ್ದಾರೆ.

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯು ಇಂದಿನಿಂದ 15ರ ತನಕ ನಡೆಯಲಿದ್ದು, ಒಟ್ಟು 12 ಹಂತಗಳನ್ನು ಒಳಗೊಂಡಿರುವ ಡಕಾರ್ ರ‍್ಯಾಲಿಯಲ್ಲಿ ವಿವಿಧ ಮೋಟಾರ್‌ಸ್ಪೋರ್ಟ್ ತಂಡಗಳಿಂದ ನೂರಾರು ಸ್ಪರ್ಧಿಗಳು ಭಾಗಿಯಾಗಿದ್ದಾರೆ. 2021ರ ಡಕಾರ್ ರ‍್ಯಾಲಿಯು ಒಟ್ಟು 7,646 ಕಿ.ಮೀ ಅಂತರವನ್ನು ಒಳಗೊಂಡಿದ್ದು, ಇದರಲ್ಲಿ ಇಂದು ಮೊದಲ ಹಂತದ ಸ್ಪರ್ಧೆಗೆ ಚಾಲನೆ ನೀಡಲಾಗಿದೆ.

ಸೌದಿ ಅರೇಬಿಯಾದ ಜಿದ್ದಾದಿಂದ ಆರಂಭವಾದ ಮೊದಲ ಹಂತದ ರ‍್ಯಾಲಿಯು 623 ಕಿ.ಮೀ ಅಂತರದಲ್ಲಿರುವ ಬಿಷಾ ಪ್ರದೇಶವನ್ನು ತಲುಪಬೇಕಿತ್ತು. ಮೊದಲ ಹಂತದ ಮಾರ್ಗವು ಶೇ.48ರಷ್ಟು ಮಣ್ಣು ಮಿಶ್ರಿತ ಪ್ರದೇಶ, ಶೇ. 48ರಷ್ಟು ಮರಳುಗಾಡು ಮತ್ತು ಶೇ.4ರಷ್ಟು ಕಲ್ಲು ಮಿಶ್ರಿಣವನ್ನು ಒಳಗೊಂಡಿತ್ತು.

ಮೊದಲ ಹಂತದ ರ‍್ಯಾಲಿಯ ಕೊನೆಯಲ್ಲಿನ 277 ಕಿ.ಮೀ ವಿಶೇಷ ಮಾರ್ಗದಲ್ಲಿ ಕಠಿಣ ಸವಾಲುಗಳನ್ನು ಎದುರಿಸಿದ ರೈಡರ್‌ಗಳಲ್ಲಿ ಹಲವರು ಅತಿಯಾದ ಧೂಳಿನಿಂದ ರ‍್ಯಾಲಿಯನ್ನು ಅರ್ಧಕ್ಕೆ ಮೊಟಕುಗೊಳಿಸಿದರೆ ಇನ್ನು ಹಲವು ರೈಡರ್‌ಗಳು ಕಠಿಣ ಪರಿಸ್ಥಿತಿಯಲ್ಲೂ ಮುನ್ನುಗ್ಗುವಲ್ಲಿ ಯಶಸ್ವಿಯಾದರು.

ಮೊದಲ ಹಂತದ ಡಕಾರ್ ರ‍್ಯಾಲಿಯಲ್ಲಿ ಮೊದಲ 5 ಸ್ಥಾನಗಳಿಗೆ ಭಾರೀ ಪೈಪೋಟಿ ನಡೆಸಿದ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡ ಮತ್ತು ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್‌ಗಳಲ್ಲಿ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಆಸ್ಟ್ರೇಲಿಯಾ ರೇಸರ್ ಟೋಬಿ ಪ್ರೈಸ್ ಮೊದಲ ಸ್ಥಾನ ಪಡೆದುಕೊಂಡರು. ಈ ಹಿಂದೆ ಎರಡು ಬಾರಿ ಡಾಕರ್ ರ‍್ಯಾಲಿ ವಿಜೇತರಾಗಿರುವ ಟೋಬಿ ಪ್ರೈಸ್ ಅವರು 43ನೇ ಆವೃತ್ತಿಯ ಮೊದಲ ಹಂತವನ್ನು 03:18:26 ಸಮಯದೊಂದಿಗೆ 2020ರ ಡಕಾರ್ ರ‍್ಯಾಲಿ ವಿಜೇತ ರಿಕಿ ಬ್ರಾಬೆಕ್ ಅವರನ್ನು ಹಿಂದಿಕ್ಕಿದರು.

ಮಾನ್ಸ್ಟರ್ ಎನರ್ಜಿ ಹೋಂಡಾ ತಂಡದ ರೈಡರ್ ಕೆವಿನ್ ಬೆನವಿಡೆಸ್ ಕೇವಲ 31 ಸೇಕೆಂಡುಗಳ ಅಂತರದೊಂದಿಗೆ ಟೋಬಿ ಪ್ರೈಸ್ ನಂತರ ಎರಡನೇ ಸ್ಥಾನ ಪಡೆದುಕೊಂಡರೆ ರೆಡ್ ಬುಲ್ ಕೆಟಿಎಂ ಫ್ಯಾಕ್ಟರಿ ತಂಡದ ಮತ್ತೊಬ್ಬ ಆಟಗಾರ ಮಥಿಯಾಸ್ ವಾಕ್ನರ್ ಅವರು ಮೂರನೇ ಸ್ಥಾನಕ್ಕೆ ಪಡೆದುಕೊಂಡರು.

ಉತ್ತಮ ಪ್ರದರ್ಶನ ತೋರಿದ ಭಾರತೀಯ ರೈಡರ್‌ಗಳು
43ನೇ ಆವೃತ್ತಿಯ ಡಕಾರ್ ರ‍್ಯಾಲಿಯಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ಹೀರೋ ಮೋಟೋಸ್ಪೋರ್ಟ್, ಶೆರ್ಕೊ ಪ್ಯಾಕ್ಟರಿ ಮತ್ತು ಟಿವಿಎಸ್ ರೇಸಿಂಗ್ ತಂಡದಿಂದ ಪ್ರಾಯೋಜಕತ್ವ ಪಡೆದಿರುವ ರೈಡರ್‌ಗಳು ಮೊದಲ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಹೀರೋ ಮೋಟೋಸ್ಪೋರ್ಟ್ ಪ್ರತಿನಿಧಿಸುತ್ತಿರುವ ಕನ್ನಡಿಗ ಸಿಎಸ್ ಸಂತೋಷ್ 35ನೇ ಸ್ಥಾನದಲ್ಲಿ [04:08:21] ಮುನ್ನಡೆ ಕಾಯ್ದುಕೊಂಡರು.
MOST READ: ಪ್ರತಿ ಚಾರ್ಜ್‌ಗೆ ಬರೋಬ್ಬರಿ 240ಕಿ.ಮೀ ಮೈಲೇಜ್ ನೀಡುವ ಇವಿ ಸ್ಕೂಟರ್ ಬಿಡುಗಡೆ ಮಾಡಲಿದೆ ಓಲಾ

ಮೂವರು ರೈಡರ್‌ಗಳನ್ನು ಒಳಗೊಂಡಿರುವ ಹೀರೋ ಮೋಟೋಸ್ಪೋರ್ಟ್ ತಂಡದಲ್ಲಿ ಸಿಎಸ್ ಸಂತೋಷ್ ನಂತರ ಜೊಕ್ವಿಮ್ ರೋಡ್ರಿಗೊಸ್ 23ನೇ ಸ್ಥಾನಕ್ಕೆ ಮತ್ತು ಸ್ಟೆಬಾಸ್ಟಿನ್ ಬ್ರುಲೆರ್ 29 ಸ್ಥಾನವನ್ನು ಪಡೆದುಕೊಂಡರು.

ಶೆರ್ಕೊ ಫಾಕ್ಟರಿ ತಂಡವನ್ನು ಪ್ರತಿ ನಿಧಿಸುವ ಲೊರೆಂಜೊ ಸ್ಯಾಂಟೊಲಿನೊ ಅವರು ಮೊದಲ ಹಂತದಲ್ಲಿ ಸ್ಥಾನವನ್ನು ಪಡೆದುಕೊಂಡರೆ ಇನ್ನಿಬ್ಬರು ರೈಡರ್‌ಗಳಾದ ರುಯಿ ಗೊನ್ಕಾಲ್ವ್ಸ್ 27ನೇ ಸ್ಥಾನಕ್ಕೆ ಮತ್ತು ಹರಿತ್ ನೋವಾ 31ನೇ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.
MOST READ: ಅತಿ ಹೆಚ್ಚು ಮೈಲೇಜ್ ನೀಡುವ ಟಾಪ್ 10 ಬಜೆಟ್ ಬೆಲೆಯ ಬೈಕುಗಳಿವು..!

ಈ ಮೂಲಕ 43ನೇ ಆವೃತ್ತಿಯ ಡಕಾರ್ ರ‍್ಯಾಲಿಯ ಮೊದಲ ಹಂತವು ಪೂರ್ಣಗೊಂಡಿದ್ದು, ನಾಳೆ ಎರಡನೇ ಹಂತದ ರ‍್ಯಾಲಿಯು ಬಿಷಾದಿಂದ ಆರಂಭವಾಗಲಿದೆ. ಪ್ರತಿ ಹಂತವು ಕೂಡಾ ಹಲವಾರು ಕಠಿಣ ಸವಾಲುಗಳಿಂದ ಕೂಡಿರಲಿದ್ದು, 12ನೇ ಹಂತದ ರ‍್ಯಾಲಿ ಕೊನೆಗೆ ಜಿದ್ದಾದಲ್ಲಿಯೇ ಕೊನೆಗೊಳ್ಳಲಿದೆ.