ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಎಪ್ರಿಲಿಯಾ

ಖ್ಯಾತ ಬೈಕ್ ಹಾಗೂ ಸ್ಕೂಟರ್ ತಯಾರಕ ಕಂಪನಿಯಾದ ಎಪ್ರಿಲಿಯಾ ತನ್ನ ಹೊಸ ಏಪ್ರಿಲಿಯಾ ಟ್ಯೂನೋ 660 ಮಿಡಲ್ ವೇಟ್ ಬೈಕಿನ ಅಧಿಕೃತ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಎಪ್ರಿಲಿಯಾ ಟ್ಯೂನೋ 660 ಕಂಪನಿಯ ಎಪ್ರಿಲಿಯಾ ಆರ್‌ಎಸ್ 660 ಸೂಪರ್‌ಸ್ಪೋರ್ಟ್‌ನ ಫ್ಯಾಮಿಲಿ ಬೈಕ್ ಆಗಿದೆ. ಕಂಪನಿಯು ಈ ಬೈಕಿನಲ್ಲಿ ಒಂದು ರೀತಿಯ ಅರ್ಧ-ಫೇರಿಂಗ್ ಅನ್ನು ಬಳಸಿದೆ. ಇದರಿಂದಾಗಿ ಅದರ ಎಂಜಿನ್ ಅನ್ನು ಕಾಣಬಹುದು. ಬೈಕಿನ ಒಟ್ಟಾರೆ ಲುಕ್ ಹಾಗೂ ವಿನ್ಯಾಸದ ಕಲ್ಪನೆಯನ್ನು ಪ್ರದರ್ಶಿಸಲು ಕಂಪನಿಯು ಈ ಹೊಸ ವೀಡಿಯೊವನ್ನು ಬಿಡುಗಡೆಗೊಳಿಸಿದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಈ ವೀಡಿಯೊದಲ್ಲಿ ಈ ಸ್ಪೋರ್ಟ್ ಬೈಕಿನ ಐಷಾರಾಮಿ ಅಂಶಗಳನ್ನು ಕಾಣಬಹುದು. ಏಪ್ರಿಲಿಯಾ ಟ್ಯೂನೋ 660 ಬೈಕಿನ ಬೆಲೆ 9,700 ಬ್ರಿಟಿಷ್ ಪೌಂಡ್ ಅಂದರೆ ಅಂದರೆ ಭಾರತದ ರೂಪಾಯಿ ಮೌಲ್ಯದಲ್ಲಿ ರೂ.9.82 ಲಕ್ಷಗಳಾಗುವ ಸಾಧ್ಯತೆಗಳಿವೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಈ ಬೈಕ್ ಅನ್ನು ಆರ್‌ಎಸ್ 660 ಬೈಕಿನ ರೀತಿಯಲ್ಲಿಯೇ ಅತ್ಯಾಧುನಿಕ ಎಲೆಕ್ಟ್ರಾನಿಕ್ಸ್ ಸೂಟ್ ಹಾಗೂ ಅದೇ ರೀತಿಯ ಎಂಜಿನ್ ಪ್ಯಾಕ್'ನೊಂದಿಗೆ ನೀಡಲಾಗುವುದು. ಆದರೆ ಈ ಬೈಕಿನಲ್ಲಿರುವ ಎಂಜಿನ್ ಅನ್ನು ಡಿ-ಟ್ಯೂನ್ ಮಾಡಲಾಗುತ್ತದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಡಿ-ಟ್ಯೂನ್ ಮಾಡಿದ ನಂತರ ಈ ಎಂಜಿನ್ ಸುಮಾರು 95 ಬಿಹೆಚ್‌ಪಿ ಪವರ್ ಉತ್ಪಾದಿಸಲಿದೆ. ಇಟಲಿ ಮೂಲದ ಏಪ್ರಿಲಿಯಾ ಕಂಪನಿಯ ಇತರ ಟ್ಯೂನೋಬೈಕ್‌ಗಳಂತೆ, ಚಾಸಿಸ್ ಹಾಗೂ ರನ್ನಿಂಗ್ ಗೇರ್‌ಗಳನ್ನು ಅದರ ಸ್ಪೋರ್ಟಿ ಬೈಕಿನ ಆವೃತ್ತಿಯಿಂದ ಪಡೆಯುವ ನಿರೀಕ್ಷೆಗಳಿವೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಏಪ್ರಿಲಿಯಾ ಟ್ಯೂನೋ 660 ಬೈಕ್ ಸಸ್ಪೆಂಷನ್, ಚಾಸಿಸ್, ಬ್ರೇಕ್ ಹಾಗೂ ಸ್ವಿಂಗ್ ಆರ್ಮ್'ಗಳನ್ನು ಆರ್‌ಎಸ್ 660 ಬೈಕಿನಿಂದ ಪಡೆದುಕೊಳ್ಳಲಿದೆ. ಏಪ್ರಿಲಿಯಾ ಟ್ಯೂನೋ 660 ಬೈಕಿನ ಮುಂಭಾಗದ ಫೇರಿಂಗ್ ಆರ್‌ಎಸ್ 660 ಹಾಗೂ ಏಪ್ರಿಲಿಯಾ ಆರ್‌ಎಸ್‌ವಿ 4 ಗಳನ್ನು ಹೋಲುತ್ತದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಇನ್ನು ಈ ಬೈಕಿನಲ್ಲಿರುವ ಎಲೆಕ್ಟ್ರಾನಿಕ್ ಬಗ್ಗೆ ಹೇಳುವುದಾದರೆ, ಏಪ್ರಿಲಿಯಾ ಟ್ಯೂನೋ 660 ಬೈಕಿನಲ್ಲಿರುವ ಸಂಪೂರ್ಣ ಪ್ಯಾಕೇಜ್ ಅನ್ನು ಏಪ್ರಿಲಿಯಾ ಆರ್‌ಎಸ್ 660 ಬೈಕಿನಿಂದ ಪಡೆಯಲಾಗುವುದು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಈ ಎಲೆಕ್ಟ್ರಾನಿಕ್ ಸಿಸ್ಟಂ, ಮಧ್ಯಮ ಗಾತ್ರದ ಪರ್ಫಾಮೆನ್ಸ್ ಬೈಕ್‌ಗಳಲ್ಲಿಯೇ ಅತ್ಯಾಧುನಿಕ ವ್ಯವಸ್ಥೆಯಾಗಲಿದೆ. ಈ ಎಲೆಕ್ಟ್ರಾನಿಕ್ ಸಿಸ್ಟಂ ಕಾರ್ನರಿಂಗ್ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್, ವ್ಹೀಲಿ ಕಂಟ್ರೋಲ್, ಸ್ಟ್ಯಾಂಡರ್ಡ್ ಅಪ್ ಡೌನ್ ಕ್ವಿಕ್‌ಶಿಫ್ಟರ್, ಎಂಜಿನ್ ಬ್ರೇಕಿಂಗ್ ಕಂಟ್ರೋಲ್, ಮೂರು ರೋಡ್ ರೈಡಿಂಗ್ ಮೋಡ್‌, ಎರಡು ಟ್ರ್ಯಾಕ್ ಮೋಡ್‌ ಹಾಗೂ ಕ್ರೂಸ್ ಕಂಟ್ರೋಲ್ ಫೀಚರ್'ಗಳನ್ನು ಹೊಂದಿದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಮಾಹಿತಿಗಳ ಪ್ರಕಾರ, ಏಪ್ರಿಲಿಯಾ ಟ್ಯೂನೋ 660 ಬೈಕ್ ಅನ್ನು ಕಾನ್ಸೆಪ್ಟ್ ಬ್ಲ್ಯಾಕ್, ಇರಿಡಿಯಮ್ ಗ್ರೇ ಹಾಗೂ ಹೊಸ ಆಸಿಡ್ ಗೋಲ್ಡ್ ಸೇರಿದಂತೆ ಮೂರುಬಣ್ಣಗಳಲ್ಲಿ ಮಾರಾಟ ಮಾಡಲಾಗುವುದು.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಏಪ್ರಿಲಿಯಾ ಆರ್‌ಎಸ್ 660 ಬೈಕ್ ಸಹ ಈ ಬಣ್ಣಗಳನ್ನು ಹೊಂದಿದೆ. ಟ್ಯೂನೋ 660 ಏಪ್ರಿಲಿಯಾ ಕಂಪನಿಯ ಹೊಸ 660 ಸಿಸಿ ಟ್ವಿನ್ ಪ್ಲಾಟ್‌ಫಾರಂನ ಎರಡನೇಬೈಕ್ ಆಗಿದೆ.

ಟ್ಯೂನೋ 660 ಬೈಕಿನ ವೀಡಿಯೊ ಬಿಡುಗಡೆಗೊಳಿಸಿದ ಏಪ್ರಿಲಿಯಾ

ಈ ಪ್ಲಾಟ್‌ಫಾರಂ ಆಧಾರಿತ ಏಪ್ರಿಲಿಯಾ ಟ್ಯೂನೋ 660 ಬೈಕ್ ಅನ್ನು 2021ರಲ್ಲಿಯೇ ಬಿಡುಗಡೆಗೊಳಿಸಲಾಗುತ್ತದೆ. ಈ ಎರಡೂ ಬೈಕುಗಳನ್ನು 2021ರ ದ್ವಿತೀಯಾರ್ಧದಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

Most Read Articles

Kannada
English summary
Aprilia releases new video of Tuono 660 bike. Read in Kannada.
Story first published: Saturday, February 20, 2021, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X