450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಎಥರ್ ಎನರ್ಜಿ ಕಂಪನಿಯು ಹೊಸ ಇವಿ ಸ್ಕೂಟರ್ ಖರೀದಿದಾರ ಜೊತೆ ಅಸ್ತಿತ್ವದಲ್ಲಿರುವ ತನ್ನ ಇವಿ ಸ್ಕೂಟರ್ ಮಾಲೀಕರಿಗೆ ಕನೆಕ್ಟೆಡ್ ಫೀಚರ್ಸ್ ಸೌಲಭ್ಯವನ್ನು ಉಚಿತವಾಗಿ ಘೋಷಣೆ ಮಾಡಿದ್ದು, ಇಂದಿನಿಂದ ಎಲ್ಲಾ ಎಥರ್ ಇವಿ ಸ್ಕೂಟರ್‌ಗಳನ್ನು ಕನೆಕ್ಟೆಡ್ ಫೀಚರ್ಸ್ ಅನ್ನು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದಾಗಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಇವಿ ಸ್ಕೂಟರ್‌ಗಳ ಕನೆಕ್ಟೆ ಫೀಚರ್ಸ್ ಸೌಲಭ್ಯಕ್ಕಾಗಿ ಪ್ರತ್ಯೇಕ ಚಂದಾದಾರಿಕೆ ವಿಧಿಸುವ ಎಥರ್ ಎನರ್ಜಿ ಕಂಪನಿಯು ಗ್ರಾಹಕರಲ್ಲಿ ಕನೆಕ್ಟೆಡ್ ಫೀಚರ್ಸ್ ಬಳಕೆಯ ಮಹತ್ವವನ್ನು ತಿಳಿಸಲು ಹೊಸ ಫೀಚರ್ಸ್ ಅನ್ನು ಕೆಲ ತಿಂಗಳುಗಳ ಕಾಲ ಉಚಿತವಾಗಿ ನೀಡಲು ನಿರ್ಧರಿಸಿದ್ದು, ಇಂದಿನಿಂದ ಎಥರ್ ಹೊಸ ಸ್ಕೂಟರ್ ಮಾಲೀಕರ ಜೊತೆ ಈಗಾಗಲೇ ಖರೀದಿ ಮಾಡಿರುವ ಮಾಲೀಕರು ಕೂಡಾ ಉಚಿತವಾಗಿ ಕನೆಕ್ಟೆಡ್ ಫೀಚರ್ಸ್ ಅಳವಡಿಸಿಕೊಳ್ಳಬಹುದಾಗಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಎಥರ್ ಎನರ್ಜಿ ಕಂಪನಿಯು ಪ್ರಸ್ತುತ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್‌ಗಳನ್ನು ಮಾರಾಟ ಮಾಡುತ್ತಿದ್ದು, ಇವಿ ಸ್ಕೂಟರ್ ಮಾದರಿಗಳಲ್ಲಿ ಕಂಪನಿಯು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕನೆಕ್ಟೆಡ್ ಫೀಚರ್ಸ್ ಸೌಲಭ್ಯವನ್ನು ಜೋಡಣೆ ಮಾಡುತ್ತಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಒಂದೇ ಸೂರಿನಡಿ ಹಲವಾರು ತಾಂತ್ರಿಕ ಸೌಲಭ್ಯಗಳ ಮಾಹಿತಿ ನೀಡುವ ಕನೆಕ್ಟೆಡ್ ಫೀಚರ್ಸ್ ಚಂದಾದಾರಿಕೆಯನ್ನು ಕಂಪನಿಯು ಮುಂದಿನ ಆರು ತಿಂಗಳು ಕಾಲ ಉಚಿತವಾಗಿ ಘೋಷಣೆ ಮಾಡಿದ್ದು, ಕನೆಕ್ಟೆಡ್ ಫೀಚರ್ಸ್ ಮಹತ್ವ ಮತ್ತು ಬಳಕೆಯನ್ನು ಜನಪ್ರಿಯಗೊಳಿಸಲು ಆರಂಭಿಕ ಹಂತವಾಗಿ ಉಚಿತವಾಗಿ ನೀಡಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಕನೆಕ್ಟೆಡ್ ಫೀಚರ್ಸ್ ಮೂಲಕ ನ್ಯಾವಿಗೇಷನ್, ಜಿಯೋ ಫೆನ್ಸ್, ಸರ್ವಿಸ್ ರಿಮೆಂಡರ್, ಆಂಟಿ ಥೆಪ್ಟ್ ಅಲಾರಾಂ, ಲಾಸ್ಟ್ ಪಾರ್ಕಿಂಗ್ ರಿಮೆಂಡರ್, ಟೈರ್ ಪ್ರೆಷರ್ ಮಾನಿಟರಿಂಗ್, ಮ್ಯೂಸಿಕ್, ರೈಡಿಂಗ್ ಹಿಸ್ಟರಿ ಜೊತೆ ಚಾರ್ಜಿಂಗ್ ಪಾಯಿಂಟ್ ಲಭ್ಯತೆ ಸೇರಿದಂತೆ ವಿವಿಧ ಮಾಹಿತಿಗಳನ್ನು ಆ್ಯಪ್ ಮೂಲಕವೇ ಪಡೆದುಕೊಳ್ಳುವುದ ಜೊತೆಗೆ ಹಲವು ತಾಂತ್ರಿಕ ಸೌಲಭ್ಯಗಳನ್ನು ನಿಯಂತ್ರಿಸಬಹುದಾಗಿದ್ದು, ಕನೆಕ್ಟೆಡ್ ಫೀಚರ್ಸ್ ಅಳವಡಿಕೆಗೆ ಬಳಕೆದಾರರು ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಇಂತಿಷ್ಟು ಚಂದಾದಾರಿಕೆ ಪಾವತಿ ಮಾಡಬೇಕಾಗುತ್ತದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಆದರೆ ಹೊಸ ಕನೆಕ್ಟೆಡ್ ಫೀಚರ್ಸ್ ಬಳಕೆಗೆ ಚಂದಾದಾರಿಕೆ ಪಾವತಿ ಅವಶ್ಯವಿರುವುದಿಂದ ಅನೇಕ ವಾಹನ ಮಾಲೀಕರು ಸ್ಕೂಟರ್‌ಗೆ ಅಗತ್ಯವಾಗಿರುವ ಫೀಚರ್ಸ್ ಅನ್ನು ಕೈಬಿಡುತ್ತಿರುವುದಿಂದ ಅದರ ಮಹತ್ವವನ್ನು ತಿಳಿಸಲು ಮುಂದಾಗಿರುವ ಎಥರ್ ಕಂಪನಿಯು ಉಚಿತವಾಗಿ ಆರು ತಿಂಗಳ ಕಾಲ ಕನೆಕ್ಟೆಡ್ ಫೀಚರ್ಸ್ ಬಳಕೆಗೆ ಅವಕಾಶ ನೀಡಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಹೊಸದಾಗಿ ಖರೀದಿ ಮಾಡುತ್ತಿರುವ ಇವಿ ಸ್ಕೂಟರ್ ಮಾಲೀಕರಿಗೆ ಮಾತ್ರವಲ್ಲ ಅಸ್ತಿತ್ವದಲ್ಲಿರುವ ಎಲ್ಲಾ ಸ್ಕೂಟರ್ ಮಾಲೀಕರಿಗೆ ಹೊಸ ಫೀಚರ್ಸ್ ಅನ್ನು ಉಚಿತವಾಗಿ ಅಳಡಿಕೆಗೆ ಅವಕಾಶ ನೀಡಿದ್ದು, ಆರು ತಿಂಗಳ ಕಾಲ ಕನೆಕ್ಟೆಡ್ ಫೀಚರ್ಸ್ ಬಳಕೆ ಮಾಡಿದ ನಂತರ ಹೊಸ ಫೀಚರ್ಸ್ ಮುಂದುವರಿಸುವ ಬಗೆಗೆ ಮಾಲೀಕರು ನಿರ್ಧರಿಸಬಹುದಾಗಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಇದರ ಜೊತೆಗೆ ಕಂಪನಿಯು ಇವಿ ವಾಹನ ಬಳಕೆಯನ್ನು ಹೆಚ್ಚಿಸಲು ಮತ್ತಷ್ಟು ಪ್ರೊತ್ಸಾಹ ಕ್ರಮಗಳನ್ನು ಪ್ರಕಟಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ತನ್ನ ಇವಿ ಸ್ಕೂಟರ್ ಮಾಲೀಕರಿಗೆ ವಿಶೇಷ ಆಫರ್ ಘೋಷಣೆ ಮಾಡಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ನಗರದ ಯಾವುದೇ ಭಾಗದಲ್ಲೂ ಮಕ್ತವಾಗಿ ಸಂಚರಿಸಲು ಹೆಚ್ಚಿನ ಸಂಖ್ಯೆಯ ಫಾಸ್ಟ್ ಚಾರ್ಜಿಂಗ್ ನಿಲ್ದಾಣಗಳನ್ನು ತೆರೆಯುತ್ತಿದ್ದು, ಇಲ್ಲಿ ಎಥರ್ ಗ್ರಾಹಕರಿಗೆ ಉಚಿತವಾಗಿ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಈಗಾಗಲೇ ಆಯ್ದ ನಗರಗಳಲ್ಲಿ ಎಥರ್ ಗ್ರಾಹಕರಿಗಾಗಿ ಕಂಪನಿಯು ಉಚಿತ ಚಾರ್ಜಿಂಗ್ ಸೌಲಭ್ಯವನ್ನು ಒದಗಿಸುತ್ತಿದ್ದು, ಇದೀಗ ಮಾರಾಟ ಲಭ್ಯವಿರುವ ಎಲ್ಲಾ ನಗರಗಳಲ್ಲೂ ಉಚಿತ ಫಾಸ್ಟ್ ಚಾರ್ಜಿಂಗ್ ಸೇವೆಗಳನ್ನು ಡಿಸೆಂಬರ್ ಕೊನೆಯ ತನಕ ಅನ್ವಯವಾಗುವಂತೆ ಘೋಷಣೆ ಮಾಡಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

2022ರ ವೇಳೆ ಒಟ್ಟು 400 ಫಾಸ್ಟ್ ಚಾರ್ಜಿಂಗ್ ಗ್ರಿಡ್‌ಗಳನ್ನು ಹೊಂದಿರುವುದಾಗಿ ಭರವಸೆ ನೀಡಿರುವ ಎಥರ್ ಕಂಪನಿಯು ಡಿಸೆಂಬರ್ ಕೊನೆಯ ತನಕ ಗ್ರಾಹಕರು ಅಸ್ತಿತ್ವದಲ್ಲಿ ಯಾವುದೇ ಚಾರ್ಜಿಂಗ್ ನಿಲ್ದಾಣ ಅನಿಯಮಿತವಾಗಿ ಚಾರ್ಜಿಂಗ್ ಮಾಡಿಕೊಳ್ಳಲು ಅವಕಾಶ ನೀಡಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಇವಿ ವಾಹನಗಳ ಹೆಚ್ಚಳಕ್ಕೆ ಇದೊಂದು ಉಪಕ್ರಮವೆಂದು ಭಾವಿಸಿರುವ ಎಥರ್ ಎನರ್ಜಿ ಕಂಪನಿಯು ಶೀಘ್ರದಲ್ಲೇ ಮತ್ತಷ್ಟು ಹೊಸ ನಗರಗಳಲ್ಲಿ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದು, ಪೆಟ್ರೋಲ್ ಬೆಲೆ ಏರಿಕೆ ಪರಿಣಾಮ ಹೊಸ ಇವಿ ಸ್ಕೂಟರ್‌ಗಳು ಉತ್ತಮ ಬೇಡಿಕೆ ಪಡದುಕೊಳ್ಳುತ್ತಿವೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾಲೀಕರಿಗೆ ಉಚಿತ ಕನೆಕ್ಟೆಡ್ ಫೀಚರ್ಸ್ ಪರಿಚಯಿಸಿದ ಎಥರ್

450 ಪ್ಲಸ್ ಮತ್ತು 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಆವೃತ್ತಿಗಳನ್ನು ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಮಾರಾಟ ಮಾಡಲಿರುವ ಎಥರ್ ಕಂಪನಿಯು ಬಜೆಟ್ ಬೆಲೆಯ ಇವಿ ಸ್ಕೂಟರ್‌ಗಳನ್ನು ಕೆಲವು ಸ್ಟ್ಯಾಂಡರ್ಡ್ ಫೀಚರ್ಸ್‌ಗಳೊಂದಿಗೆ ಉತ್ತಮ ಮೈಲೇಜ್ ಹೊಂದಿರುವ ಇವಿ ಸ್ಕೂಟರ್‌ಗಳನ್ನು ಬಿಡುಗಡೆ ಮಾಡಲಿದೆ.

Most Read Articles

Kannada
English summary
Ather energy announced connectivity features free all customers from today
Story first published: Tuesday, November 16, 2021, 16:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X