ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ಆಟೋ ಇಂಡಿಯಾ ತನ್ನ ಅಧಿಕೃತ ವೆಬ್‌ಸೈಟ್‌ನಿಂದ ಪಲ್ಸರ್ 180 ಎಫ್ ಸೆಮಿ-ಫೇರ್ಡ್ ಬೈಕಿನ ಹೆಸರನ್ನು ತೆಗೆದುಹಾಕಿದೆ. ಆದರೆ ಇದರ ಹಿಂದಿನ ಕಾರಣವನ್ನು ಬಜಾಜ್ ಕಂಪನಿಯು ಇನ್ನು ಬಹಿರಂಗಪಡಿಸಿಲ್ಲ.

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಬಜಾಜ್ ಆಟೋ ಕಂಪನಿಯು ನೇಕೆಡ್ ಪಲ್ಸರ್ 180 ಬೈಕನ್ನು ಇತ್ತೀಚೆಗೆ ಭಾರತದಲ್ಲಿ ಬಿಡುಗಡೆಗೊಳಿಸಿದೆ. ಇದರಿಂದ ಪಲ್ಸರ್ 180ಎಫ್ ಸೆಮಿ-ಫೇರ್ಡ್ ಬೈಕನ್ನು ಸ್ಥಗಿತಗೊಳಿಸಬಹುದು ಎಂಬ ಊಹಾಪೋಹ ಸುದ್ದಿಗಳು ಕೂಡ ಹರಿದಾಡುತ್ತಿದೆ. ಬಜಾಜ್ ಆಟೋ ಕಂಪನಿಯು ತನ್ನ ಬಿಎಸ್-6 ಪಲ್ಸರ್ 180ಎಫ್ ಬೈಕನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಳೆದ ವರ್ಷದಲ್ಲಿ ಬಿಡುಗಡೆಗೊಳಿಸಿತ್ತು.

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಬಿಎಸ್-6 ಬಜಾಜ್ ಪಲ್ಸರ್ 180ಎಫ್ ಬೈಕಿನಲ್ಲಿ ಕಾರ್ಬ್ಯುರೇಟರ್ ಬದಲಿಗೆ ಎಲೆಕ್ಟ್ರಾನಿಕ್ ಫ್ಯೂಯಲ್ ಇಂಜೆಕ್ಷನ್ ಸಿಸ್ಟಂ ಅನ್ನು ಅಳವಡಿಸಲಾಗಿದೆ. ಪಲ್ಸರ್ 180ಎಫ್ ಬೈಕಿನಲ್ಲಿ 178.6 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ.ಈ ಎಂಜಿನ್ 16.8 ಬಿಹೆಚ್‍ಪಿ ಪವರ್ ಮತ್ತು 14.52 ನ್ಯೂಟನ್-ಮೀಟರ್ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಈ ಎಂಜಿನ್ ನೊಂದಿಗೆ ಐದು ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಅಳವಡಿಸಲಾಗಿದೆ. ಹಿಂದಿನ ಬಿಎಸ್-4 ಮಾದರಿಗೆ ಹೋಲಿಸಿದರೆ ಬಿಹೆಚ್‍ಪಿ ಪವರ್ ಮತ್ತು ಟಾರ್ಕ್ ಅಂಕಿ ಅಂಶದಲ್ಲಿ ಯಾವುದೇ ಬದಲಾವಣೆಗಳು ಮಾಡಲಾಗಿತ್ತಿಲ್ಲ. ಹೊಸ ಬಜಾಜ್ 180ಎಫ್ ಬೈಕಿನಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ಮಾಡಲಾಗಿತ್ತಿಲ್ಲ.

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಈ ಬಜಾಜ್ ಪಲ್ಸರ್ 180ಎಫ್ ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಮತ್ತು ಹಿಂಭಾಗದಲ್ಲಿ ಐದು ಮಾದರಿಯ ನೈಟ್ರಾಕ್ಸ್ ಶಾಕ್ ಅಬ್ಸಾರ್ಬರ್ ಅನ್ನು ಅಳವಡಿಸಲಾಗಿದೆ.

MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಇನ್ನು ಈ ಬೈಕಿನಲ್ಲಿ ಸವಾರರ ಸುರಕ್ಷತೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಈ ಬೈಕಿನ ಮುಂಭಾಗದಲ್ಲಿ 260 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಇದರೊಂದಿಗೆ ಬಜಾಜ್ ಆಟೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ 2021ರ ಪಲ್ಸರ್ 180 ಬೈಕನ್ನು ಸದ್ದಿಲ್ಲದೇ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಬಜಾಜ್ ಪಲ್ಸರ್ 180 ಬೈಕಿನ ಬೆಲೆಯು ನವದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ.1.07 ಲಕ್ಷಗಳಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಈ ಪಲ್ಸರ್ 150 ಟ್ವಿನ್ ಡಿಸ್ಕ್ ರೂಪಾಂತರದಿಂದ ಸ್ಫೂರ್ತಿ ಪಡೆದ ವಿಭಿನ್ನ ಸ್ಟೈಲಿಂಗ್‌ನೊಂದಿಗೆ ಬಿಡುಗಡೆಗೊಂಡಿದೆ. ಹೊಸ ಪಲ್ಸರ್ 180 ಕ್ಲಾಸಿಕ್ ಫ್ಯಾಮಿಲಿ ಸ್ಟೈಲಿಂಗ್ ಅನ್ನು ಒಳಗೊಂಡಿದೆ. ಹೊಸ ಪಲ್ಸರ್ 180 ಬೈಕಿನಲ್ಲಿ ಇದು ಬಾಡಿ ಪ್ಯಾನೆಲ್‌ಗಳು, ಫೆಂಡರ್‌ಗಳು, ಫ್ಯೂಯಲ್ ಟ್ಯಾಂಕ್ ವಿಸ್ತರಣೆಗಳ ಮತ್ತು ಬೆಲ್ಲಿ ಪ್ಯಾನ್‌ನಲ್ಲಿ ಕಾಂಟ್ರಾಸ್ಟ್ ಗ್ರಾಫಿಕ್ ಮುಖ್ಯಾಂಶಗಳನ್ನು ಒಳಗೊಂಡಿದೆ.

ಬಜಾಜ್ ಆಟೋ ವೆಬ್‌ಸೈಟ್‌ನಿಂದ ಮರೆಯಾಯ್ತು ಪಲ್ಸರ್ 180ಎಫ್ ಬೈಕಿನ ಹೆಸರು

ಇನ್ನು ಮಾರುಕಟ್ಟೆಯಲ್ಲಿ ಬಜಾಜ್ 180ಎಫ್ ಬೈಕ್ ಬ್ಲ್ಯಾಕ್ ರೆಡ್ ಮತ್ತು ನಿಯಾನ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಆದರೆ ಪಲ್ಸರ್ 180ಎಫ್ ವೆಬ್‌ಸೈಟ್‌ನಿಂದ ಬೈಕಿನ ಹೆಸರನ್ನು ತೆಗೆದುಹಾಕಿರುವುದರಿಂದ ಇದನ್ನು ಸ್ಥಗಿತಗೊಳಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Most Read Articles

Kannada
English summary
Bajaj Pulsar 180F Removed From Official Website. Read In Kannada.
Story first published: Saturday, February 27, 2021, 18:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X